AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಯದ ಅಭಾವವಿದ್ದರೆ ಮಂಗಳವಾರ ಹನುಮಾನ್ ಚಾಲೀಸಾ ಬದಲಿಗೆ ಈ 5 ಚೌಪಾಯಿಗಳನ್ನು ಪಠಿಸಿ

ಸಮಯದ ಅಭಾವದಿಂದ ಸಂಪೂರ್ಣ ಹನುಮಾನ್ ಚಾಲೀಸಾ ಪಠಿಸಲು ಸಾಧ್ಯವಾಗದಿದ್ದರೂ ಚಿಂತಿಸಬೇಡಿ. ಮಂಗಳವಾರದಂದು ಹನುಮಂತನ ಆಶೀರ್ವಾದ ಪಡೆಯಲು, ಚಾಲೀಸಾದ 5 ವಿಶೇಷ ಸಾಲುಗಳನ್ನು (ಚೌಪಾಯಿಗಳನ್ನು) ಭಕ್ತಿಯಿಂದ ಪಠಿಸಿ. ಅನಾರೋಗ್ಯ, ಭಯ ನಿವಾರಣೆ, ಯಶಸ್ಸು, ಬುದ್ಧಿಶಕ್ತಿ ಹಾಗೂ ಸುಖ-ಸಮೃದ್ಧಿಗಾಗಿ ಈ ಶಕ್ತಿಶಾಲಿ ಚೌಪಾಯಿಗಳು ಪೂರ್ಣ ಚಾಲೀಸಾ ಪಠಿಸಿ. ಆದರೆ ಪೂರ್ಣ ಹನುಮಾನ್ ಚಾಲೀಸಾವನ್ನು ಪಠಿಸಲು ಸಾಮಾನ್ಯವಾಗಿ 5ನಿಮಿಷ ಸಾಕಾಗುವುದರಿಂದ ಪೂರ್ಣವಾಗಿ ಪಠಿಸುವುದು ಶುಭ.

ಸಮಯದ ಅಭಾವವಿದ್ದರೆ ಮಂಗಳವಾರ ಹನುಮಾನ್ ಚಾಲೀಸಾ ಬದಲಿಗೆ ಈ 5 ಚೌಪಾಯಿಗಳನ್ನು ಪಠಿಸಿ
ಹನುಮಾನ್ ಚಾಲೀಸಾImage Credit source: Getty Images
ಅಕ್ಷತಾ ವರ್ಕಾಡಿ
|

Updated on:Nov 24, 2026 | 8:37 AM

Share

ಮಂಗಳವಾರವು ಸಂಕಟಮೋಚನ ಹನುಮಂತನ ಆರಾಧನೆಗೆ ಅತ್ಯಂತ ಶ್ರೇಷ್ಠವಾದ ದಿನವಾಗಿದೆ. ಈ ದಿನ ಭಕ್ತರು ಹನುಮಾನ್ ದೇವಸ್ಥಾನಗಳಿಗೆ ಭೇಟಿ ನೀಡಿ ತಮ್ಮ ಶಕ್ತ್ಯಾನುಸಾರ 1, 5, 7 ಅಥವಾ 11 ಬಾರಿ ಹನುಮಾನ್ ಚಾಲೀಸಾ ಪಠಿಸುತ್ತಾರೆ. ಆದರೆ ಇಂದಿನ ಒತ್ತಡದ ಜೀವನಶೈಲಿ ಮತ್ತು ಕೆಲಸದ ವ್ಯಸ್ತತೆಯ ನಡುವೆ ಹಲವರಿಗೆ ಪೂರ್ಣ ಹನುಮಾನ್ ಚಾಲೀಸಾವನ್ನು ಪಠಿಸಲು ಸಮಯ ಸಿಗುವುದಿಲ್ಲ. ನೀವು ಕೂಡ ಆಂಜನೇಯನ ಪರಮ ಭಕ್ತರಾಗಿದ್ದು, ಸಮಯದ ಅಭಾವದಿಂದ ಪೂರ್ಣ ಚಾಲೀಸಾ ಪಠಿಸಲು ಸಾಧ್ಯವಾಗದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಸಂಪೂರ್ಣ ಹನುಮಾನ್ ಚಾಲೀಸಾ ಪಠಣಕ್ಕೆ ತನ್ನದೇ ಆದ ಧಾರ್ಮಿಕ ಮಹತ್ವವಿದ್ದರೂ, ಚಾಲೀಸಾದಲ್ಲಿರುವ ಕೆಲವು ವಿಶೇಷ ಸಾಲುಗಳನ್ನು (ಚೌಪಾಯಿಗಳನ್ನು) ಭಕ್ತಿಯಿಂದ ಪಠಿಸುವುದರಿಂದ ಪೂರ್ಣ ಚಾಲೀಸಾ ಪಠಿಸಿದಷ್ಟೇ ಫಲ ಮತ್ತು ಆಶೀರ್ವಾದ ದೊರೆಯುತ್ತದೆ. ಆರೋಗ್ಯ, ಸಂಪತ್ತು ಮತ್ತು ಯಶಸ್ಸಿಗಾಗಿ ಮಂಗಳವಾರ ಪಠಿಸಬಹುದಾದ ಹನುಮಾನ್ ಚಾಲೀಸಾದ 5 ಅತ್ಯಂತ ಶಕ್ತಿಶಾಲಿ ಚೌಪಾಯಿಗಳು ಇಲ್ಲಿವೆ:

1. ಅನಾರೋಗ್ಯ ಮತ್ತು ನೋವು ನಿವಾರಣೆಗಾಗಿ:

“ನಾಸೈ ರೋಗ ಹರೈ ಸಬ ಪೀರಾ | ಜಪತ ನಿರಂತರ ಹನುಮತ ಬೀರಾ ||”

ಅರ್ಥ ಮತ್ತು ಫಲ: ಈ ಸಾಲು ಹನುಮಂತನ ನಿರಂತರ ಸ್ಮರಣೆ ಮತ್ತು ಆತನ ಕೃಪೆಗಾಗಿ ಪ್ರಾರ್ಥಿಸುವುದನ್ನು ಸೂಚಿಸುತ್ತದೆ. ಭಕ್ತರು ಈ ಸಾಲನ್ನು ಸ್ಥಿರವಾದ ಮನಸ್ಸು ಮತ್ತು ಅಚಲ ಭಕ್ತಿಯಿಂದ ಪಠಿಸುವುದರಿಂದ ದೈಹಿಕ ಹಾಗೂ ಮಾನಸಿಕ ನೋವುಗಳಿಂದ ಮುಕ್ತಿ ಪಡೆಯಬಹುದು.

2. ಭಯ ಮತ್ತು ನಕಾರಾತ್ಮಕತೆ ದೂರ ಮಾಡಲು:

“ಭೂತ ಪಿಸಾಚ ನಿಕಟ ನಹಿಂ ಆವೈ | ಮಹಾಬೀರ ಜಬ ನಾಮ ಸುನಾವೈ ||”

ಅರ್ಥ ಮತ್ತು ಫಲ: ಮಹಾವೀರ ಹನುಮಂತನ ನಾಮಸ್ಮರಣೆಯಿಂದ ದೊರೆಯುವ ಧೈರ್ಯ ಮತ್ತು ನಿರ್ಭಯತೆಯನ್ನು ಈ ಚೌಪಾಯಿ ವಿವರಿಸುತ್ತದೆ. ಮನಸ್ಸಿನಲ್ಲಿ ಅನಗತ್ಯ ಭಯ, ಆತಂಕ ಅಥವಾ ನಕಾರಾತ್ಮಕ ಆಲೋಚನೆಗಳು ಕಾಡುತ್ತಿರುವಾಗ ಈ ಸಾಲು ಜಪಿಸುವುದು ಅತ್ಯಂತ ಶ್ರೇಷ್ಠ.

3. ಕಠಿಣ ಕಾರ್ಯಗಳಲ್ಲಿ ಯಶಸ್ಸು ಪಡೆಯಲು:

“ದುರ್ಗಮ ಕಾಜ ಜಗತ ಕೇ ಜೇತೇ | ಸುಗಮ ಅನುಗ್ರಹ ತುಮ್ಹರೇ ತೇತೇ ||”

ಅರ್ಥ ಮತ್ತು ಫಲ: ಜಗತ್ತಿನ ಎಷ್ಟೇ ಕಠಿಣವಾದ ಕೆಲಸಗಳಾಗಿದ್ದರೂ ಆಂಜನೇಯನ ಅನುಗ್ರಹವಿದ್ದರೆ ಅವು ಸುಲಭವಾಗಿ ನೆರವೇರುತ್ತವೆ ಎಂಬುದು ಇದರ ಭಾವಾರ್ಥ. ಜೀವನದಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸಿ, ಹಿಡಿದ ಕೆಲಸದಲ್ಲಿ ಯಶಸ್ಸು ಸಾಧಿಸಲು ಭಕ್ತರು ಇದನ್ನು ಶ್ರದ್ಧೆಯಿಂದ ಪಠಿಸುತ್ತಾರೆ.

4. ಬುದ್ಧಿಶಕ್ತಿ ಮತ್ತು ಸರಿಯಾದ ಮಾರ್ಗದರ್ಶನಕ್ಕಾಗಿ:

“ವಿದ್ಯಾವಾನ ಗುನೀ ಅತಿ ಚಾತುರ | ರಾಮ ಕಾಜ ಕರಿಬೇ ಕೋ ಆತುರ ||”

ಅರ್ಥ ಮತ್ತು ಫಲ: ಹನುಮಂತನು ಜ್ಞಾನ, ಸದ್ಗುಣ, ಬುದ್ಧಿವಂತಿಕೆ ಮತ್ತು ಕರ್ಮನಿಷ್ಠೆಯ ಪ್ರತೀಕ. ಈ ಚೌಪಾಯಿಯ ಪಠಣವು ನಮಗೆ ಪ್ರತಿಯೊಂದು ಕೆಲಸವನ್ನು ಬುದ್ಧಿವಂತಿಕೆ, ಸಮರ್ಪಣಾ ಭಾವ ಮತ್ತು ಉತ್ಸಾಹದಿಂದ ಮಾಡುವ ಪ್ರೇರಣೆ ನೀಡುತ್ತದೆ. ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಇದು ಬಹಳ ಉಪಯುಕ್ತ.

ಇದನ್ನೂ ಓದಿ: ನೀವು ಕಾಲಿಗೆ ಕಪ್ಪು ದಾರ ಕಟ್ಟುತ್ತೀರಾ? ಹಾಗಾದರೆ ಈ 9 ಗಂಟುಗಳ ನಿಯಮ ಮತ್ತು ಶುಭ ಸಮಯದ ಬಗ್ಗೆ ತಪ್ಪದೇ ತಿಳಿದುಕೊಳ್ಳಿ

5. ಸುಖ-ಸಮೃದ್ಧಿ ಮತ್ತು ಐಶ್ವರ್ಯ ಪ್ರಾಪ್ತಿಗಾಗಿ:

“ಅಷ್ಟ ಸಿದ್ಧಿ ನೌ ನಿಧಿ ಕೇ ದಾತಾ | ಅಸ ಬರ ದೀನ ಜಾನಕೀ ಮಾತಾ ||”

ಅರ್ಥ ಮತ್ತು ಫಲ: ಸೀತಾಮಾತೆಯ ವರದಂತೆ ಹನುಮಂತನು ಅಷ್ಟ ಸಿದ್ಧಿಗಳು ಮತ್ತು ನವ ನಿಧಿಗಳನ್ನು ನೀಡುವ ದಾತನಾಗಿದ್ದಾನೆ ಎಂಬುದನ್ನು ಈ ಸಾಲು ಸ್ಮರಿಸುತ್ತದೆ. ಆಂಜನೇಯನ ಕೃಪೆ, ಸಾಮರ್ಥ್ಯ ಮತ್ತು ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಲಿ ಎಂಬ ಭಾವದಿಂದ ಈ ಚೌಪಾಯಿಯನ್ನು ಪಠಿಸಲಾಗುತ್ತದೆ.

ಪಠಿಸುವ ವಿಧಾನ: ಮಂಗಳವಾರ ಬೆಳಿಗ್ಗೆ ಅಥವಾ ಸಂಜೆ ಶುಚಿಯಾಗಿ, ಹನುಮಂತನ ಫೋಟೋ ಅಥವಾ ವಿಗ್ರಹದ ಮುಂದೆ ದೀಪ ಹಚ್ಚಿ, ನಿಮಗೆ ಅಗತ್ಯವಿರುವ ಸಾಲುಗಳನ್ನು ಕನಿಷ್ಠ 11, 21 ಅಥವಾ 108 ಬಾರಿ ಭಕ್ತಿಯಿಂದ ಜಪಿಸಿ. ಆದರೆ ಆದಷ್ಟು ಪೂರ್ಣ ಹನುಮಾನ್​​ ಚಾಲೀಸಾವನ್ನು ಪಠಿಸಲು ಪ್ರಯತ್ನಿಸಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:37 am, Tue, 24 November 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಸತ್ರೂ ಸರಿ, ಸರ್ಕಾರ ಸ್ಪಂದಿಸುವ ವರೆಗೂ ಪಟ್ಟುಬಿಡಲ್ಲ: ಆಶಾಗಳ ಖಡಕ್ ನುಡಿ
ಸತ್ರೂ ಸರಿ, ಸರ್ಕಾರ ಸ್ಪಂದಿಸುವ ವರೆಗೂ ಪಟ್ಟುಬಿಡಲ್ಲ: ಆಶಾಗಳ ಖಡಕ್ ನುಡಿ
ಇಂದು ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ಉತ್ತಮ
ಇಂದು ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ಉತ್ತಮ
ಚಿನ್ನದ ಬೆಲೆ ಭಾರೀ ಕುಸಿತ; ಗೋಲ್ಡ್ ಲೋನ್ ತೆಗೆದುಕೊಂಡವರು ಏನು ಮಾಡಬೇಕು?
ಚಿನ್ನದ ಬೆಲೆ ಭಾರೀ ಕುಸಿತ; ಗೋಲ್ಡ್ ಲೋನ್ ತೆಗೆದುಕೊಂಡವರು ಏನು ಮಾಡಬೇಕು?
ಚಿನ್ನದ ದರ ಇನ್ನಷ್ಟು ಇಳಿಕೆಯಾಗುತ್ತಾ?ಈಗ ಹೂಡಿಕೆ ಮಾಡಬಹುದಾ?
ಚಿನ್ನದ ದರ ಇನ್ನಷ್ಟು ಇಳಿಕೆಯಾಗುತ್ತಾ?ಈಗ ಹೂಡಿಕೆ ಮಾಡಬಹುದಾ?
ಬಂಗಾರದ ಬೆಲೆ ಪಾತಾಳಕ್ಕೆ ಕುಸಿದಿರುವುದ್ಯಾಕೆ? ಇಲ್ಲಿವೆ ಅಸಲಿ ಕಾರಣಗಳು
ಬಂಗಾರದ ಬೆಲೆ ಪಾತಾಳಕ್ಕೆ ಕುಸಿದಿರುವುದ್ಯಾಕೆ? ಇಲ್ಲಿವೆ ಅಸಲಿ ಕಾರಣಗಳು
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಾಟಾಳ್ ನಾಗರಾಜ್ ಬೆಂಬಲ
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಾಟಾಳ್ ನಾಗರಾಜ್ ಬೆಂಬಲ
ಆರ್ಥಿಕ ಸಂಕಷ್ಟದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ
ಆರ್ಥಿಕ ಸಂಕಷ್ಟದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ
ಎಲ್ಲದಕ್ಕೂ ಪರಿಹಾರ ಕೊಟ್ರೇ ಸರ್ಕಾರ ನಡೆಸುವುದ್ಹೇಗೆ? ಸಚಿವ ಶಿವಲಿಂಗೇಗೌಡ
ಎಲ್ಲದಕ್ಕೂ ಪರಿಹಾರ ಕೊಟ್ರೇ ಸರ್ಕಾರ ನಡೆಸುವುದ್ಹೇಗೆ? ಸಚಿವ ಶಿವಲಿಂಗೇಗೌಡ
ಕೊಪ್ಪಳದ ಗವಿಮಠದ ಕಾರ್ಯಕ್ಕೆ ನಿವೃತ್ತ ನ್ಯಾಯಮೂರ್ತಿ ದೀಕ್ಷಿತ್ ಮೆಚ್ಚುಗೆ
ಕೊಪ್ಪಳದ ಗವಿಮಠದ ಕಾರ್ಯಕ್ಕೆ ನಿವೃತ್ತ ನ್ಯಾಯಮೂರ್ತಿ ದೀಕ್ಷಿತ್ ಮೆಚ್ಚುಗೆ
ಬಿಗ್ ಬಾಸ್ ಕನ್ನಡ 13: ಯಶಸ್ ಆಟಕ್ಕೆ ದೊಡ್ಡ ಕಂಟಕವಾದ ಗಗನ್ ಚಿನ್ನಪ್ಪ
ಬಿಗ್ ಬಾಸ್ ಕನ್ನಡ 13: ಯಶಸ್ ಆಟಕ್ಕೆ ದೊಡ್ಡ ಕಂಟಕವಾದ ಗಗನ್ ಚಿನ್ನಪ್ಪ