AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

PM Narendra Modi Speech highlights: ಆದಾಯ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಜಿಎಸ್​ಟಿಯಿಂದ ಸಾಕಷ್ಟು ತೆರಿಗೆ ಕಡಿಮೆ ಆಗಿದೆ. ಇದರಿಂದ ಜನರಿಗೆ ಸಾಕಷ್ಟು ಹಣ ಉಳಿತಾಯವಾಗಲಿದೆ. ನಾಳೆಯಿಂದ (ಸೆ. 22) ದೇಶದ ಜನರಿಗೆ ಉಳಿತಾಯದ ಉತ್ಸವವಾಗಲಿದೆ ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟಿದ್ದಾರೆ. ನರೇಂದ್ರ ಮೋದಿ ಅವರು ಭಾನುವಾರ ದೇಶ ಜನರನ್ನುದ್ದೇಶಿಸಿ 20 ನಿಮಿಷ ಕಾಲ ಭಾಷಣ ಮಾಡಿದರು.

PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 21, 2025 | 5:48 PM

Share

ನವದೆಹಲಿ, ಸೆಪ್ಟೆಂಬರ್ 21: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಭಾಷಣ ಶುರು ಮಾಡಿದ ಮೊದಲಿಗೆ ದೇಶದ ಜನರಿಗೆ ದೇಶದ ಜನರಿಗೆ ನವರಾತ್ರಿ ಹಬ್ಬದ ಶುಭಾಶಯಗಳು ತಿಳಿಸಿದರು. ನಾಳೆ ನವರಾತ್ರಿ ಹಬ್ಬದ ಮೊದಲ ದಿನ ಆರಂಭವಾಗಲಿದ್ದು, ನವರಾತ್ರಿ ಮೊದಲ ದಿನದಿಂದ ಜಿಎಸ್​ಟಿ ಉತ್ಸವ (GST) ಆರಂಭವಾಗಲಿದೆ. ಜಿಎಸ್​ಟಿಯಿಂದ ನಿಮ್ಮೆಲ್ಲರ ಉಳಿತಾಯ ಶುರುವಾಗಲಿದೆ. ಎಲ್ಲ ವರ್ಗದ ಜನರಿಗೂ ಉಳಿತಾಯದ ಉತ್ಸವ ಪ್ರಾರಂಭವಾಗಲಿದೆ ಎಂದರು.

GST ಸುಧಾರಣೆಯಿಂದ ದೇಶದ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ತುಂಬಲಿದೆ. 2017ರಲ್ಲಿ ಭಾರತದಲ್ಲಿ ಜಿಎಸ್​ಟಿ ಸುಧಾರಣೆ ಆರಂಭಿಸಲಾಗಿತ್ತು. ದಶಕಗಳಿಂದ ಜನ ಬೇರೆ ಬೇರೆ ರೀತಿಯ ತೆರಿಗೆಯಿಂದ ಬಳಲುತ್ತಿದ್ದರು. ಪ್ರತಿಯೊಂದು ಜಾಗದಲ್ಲಿ ವಿವಿಧ ರೀತಿಯ ತೆರಿಗೆ ಜಾರಿಯಲ್ಲಿತ್ತು. ಇದರಿಂದ ಬೆಂಗಳೂರು-ಹೈದರಾಬಾದ್​ಗೆ ಉತ್ಪನ್ನ ಕಳಿಸಲು ಕಷ್ಟವಾಗುತ್ತಿತ್ತು. ತೆರಿಗೆ ಮತ್ತು ಟೋಲ್​ನಿಂದ ಜನರಿಗೆ ಬಹಳ ತೊಂದರೆ ಆಗಿತ್ತು. ದೇಶದ ಜನರು ವಿವಿಧ ರೀತಿಯ ತೆರಿಗೆ ಜಾಲದಲ್ಲಿ ಸಿಲುಕಿದ್ದರು. ನಾಳೆಯಿಂದ ಪ್ರತಿ ಮನೆಯಲ್ಲೂ ಖುಷಿ ಹೆಚ್ಚುತ್ತದೆ ಎಂದರು.

ಇದನ್ನೂ ಓದಿ: States Debt: ಗಗನಕ್ಕೇರಿತು ರಾಜ್ಯಗಳ ಸಾಲ; ಮಿತಿಮೀರಿದ ಪಂಜಾಬ್ ಸಾಲ; ಕರ್ನಾಟಕದ್ದು ಎಷ್ಟು?

‘ಒನ್​ ನೇಷನ್, ಒನ್​ ಟ್ಯಾಕ್ಸ್​’ ಕನಸು ಈಡೇರಿದೆ. ಸಮಯ ಬದಲಾದಂತೆ ದೇಶದ ಅಗತ್ಯತೆ ಸಹ ಬದಲಾಗುತ್ತದೆ. ದೇಶದ ಭವಿಷ್ಯದ ದೃಷ್ಟಿಯಿಂದ ಜಿಎಸ್​ಟಿಯಲ್ಲಿ ಸುಧಾರಣೆ ಮಾಡಲಾಗಿದ್ದು, ಇದು ಹೊಸ ಪೀಳಿಗೆಗೆ ಸಹಕಾರಿಯಾಗಲಿದೆ. ಮಧ್ಯಮ ವರ್ಗದವರಿಗೆ ಸಹಕಾರ ಆಗಲಿದೆ. ರಾಜ್ಯದ ಅಭಿವೃದ್ಧಿಗೆ ಸಹಕಾರವಾಗಲಿದೆ. ಜಿಎಸ್​ಟಿ ಯಿಂದ ಹೊಸ ಇತಿಹಾಸ ಸೃಷ್ಟಿಯಾಗಿದೆ. ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳನ್ನು ನಾಳೆಯಿಂದ ಜಾರಿಗೆ ತರಲಾಗುವುದು. ಇದರಿಂದ ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳು ಭಾರತದ ಬೆಳವಣಿಗೆಯ ವೇಗಗೊಳಿಸುತ್ತವೆ’ ಎಂದು ಜಿಎಸ್‌ಟಿ ಸುಧಾರಣೆಯನ್ನ ಪ್ರಧಾನಿ ಮೋದಿ ಶ್ಲಾಘಸಿದರು.

ಜಿಎಸ್‌ಟಿ ಸುಧಾರಣೆ ಬಡವರು, ಮಧ್ಯಮ ವರ್ಗ ಸೇರಿದಂತೆ ಎಲ್ಲಾ ಭಾರತೀಯರಿಗೆ ವ್ಯವಹಾರವನ್ನ ಸುಲಭಗೊಳಿಸುತ್ತದೆ. ಹೂಡಿಕೆಗಳನ್ನು ಆಕರ್ಷಕವಾಗಿಸಲಿದೆ. ಕಳೆದ 11 ವರ್ಷಗಳಲ್ಲಿ ತಮ್ಮ ಸರ್ಕಾರದ ಅಡಿಯಲ್ಲಿ ಸುಮಾರು 25 ಕೋಟಿ ಜನರನ್ನು ಬಡತನದಿಂದ ಹೊರತರಲಾಗಿದೆ ಎಂದರು.

ಇದನ್ನೂ ಓದಿ: ಚ್ಯಾಟ್​ಜಿಪಿಟಿ, ಡೀಪ್​ಸೀಕ್​ಗೆ ಸಮನಾದ ಎಲ್​ಎಲ್​ಎಂ ನಿರ್ಮಿಸಲಿರುವ ಭಾರತ; ಮಹತ್ವಾಕಾಂಕ್ಷಿ ಎಐ ಮಿಷನ್​ಗೆ 8 ಸಂಸ್ಥೆಗಳ ಆಯ್ಕೆ

ದೇಶದ ಜನರಿಗೆ ಉಳಿತಾಯ ಹಬ್ಬ: ಮೋದಿ

ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿರುವ ಹೊಸ ಜಿಎಸ್​ಟಿ ತೆರಿಗೆ ವ್ಯವಸ್ಥೆಯು ದೇಶದ ಜನರಿಗೆ ಸಂತೋಷ ತರಲಿದೆ. ಒಂದು ರಾಷ್ಟ್ರ ಒಂದು ತೆರಿಗೆ ಆಶಯವು ಜಿಎಸ್​ಟಿಯಿಂದ ಸಾಕಾರಗೊಂಡಿದೆ. ಪ್ರತೀ ಕುಟುಂಬಕ್ಕೂ ಜಿಎಸ್​ಟಿ ಸುಧಾರಣೆ ಒಳಿತು ಮಾಡಲಿದೆ. ಭಾರತದ ಪ್ರಗತಿಯನ್ನು ಹೆಚ್ಚಿಸಲಿದೆ ಎಂದು ನರೇಂದ್ರ ಮೋದಿ ಹೇಳಿದರು.

ಆದಾಯ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಜಿಎಸ್​ಟಿಯಿಂದ ಸಾಕಷ್ಟು ತೆರಿಗೆ ಕಡಿಮೆ ಆಗಿದೆ. ಇದರಿಂದ ಜನರಿಗೆ ಸಾಕಷ್ಟು ಹಣ ಉಳಿತಾಯವಾಗಲಿದೆ. ನಾಳೆಯಿಂದ (ಸೆ. 22) ದೇಶದ ಜನರಿಗೆ ಉಳಿತಾಯದ ಉತ್ಸವವಾಗಲಿದೆ. ದೇಶದ ಜನರಿಗೆ ಜಿಎಸ್​ಟಿ ಮತ್ತು ಆದಾಯ ತೆರಿಗೆ ಇಳಿಕೆಯಿಂದ ಒಂದು ವರ್ಷದಲ್ಲಿ 2.5 ಲಕ್ಷ ಕೋಟಿ ರೂ ಉಳಿತಾಯವಾಗಲಿದೆ ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:34 pm, Sun, 21 September 25

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?