Optical Illusion: ಈ ಚಿತ್ರದಲ್ಲಿ ಅಡಗಿರುವ ಕಳ್ಳ ಬೆಕ್ಕನ್ನು ಹುಡುಕಬಲ್ಲಿರಾ?
ಆಪ್ಟಿಕಲ್ ಇಲ್ಯೂಷನ್ ನಮ್ಮ ಮೆದುಳಿನ ಚುರುಕುತನ ಹಾಗೂ ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷೆ ಮಾಡುವ ಮೋಜಿನ ಆಟವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಂತಹ ಹತ್ತಾರು ಒಗಟಿನ ಆಟಗಳು ಪ್ರತಿನಿತ್ಯ ವೈರಲ್ ಆಗುವುದನ್ನು ನೀವು ನೋಡಿರುತ್ತೀರಿ. ಇಲ್ಲೊಂದು ಅಂತಹದ್ದೇ ಒಗಟೊಂದು ವೈರಲ್ ಆಗಿದ್ದು, ಇಲ್ಲಿ ಅಡಗಿ ಕುಳಿತಿರುವ ಕಳ್ಳ ಬೆಕ್ಕನ್ನು ಕಂಡು ಹಿಡಿಯುವ ಸವಾಲು ನಿಮಗಿದೆ.

ನಿಮ್ಮ ಬುದ್ಧಿವಂತಿಕೆ ಮತ್ತು ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸುವ ಈ ಆಪ್ಟಿಕಲ್ ಇಲ್ಯೂಷನ್ (Optical Illusion) ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನಪ್ರಿಯವಾಗುತ್ತಿದೆ. ಈ ಮೋಜಿನ ಆಟಗಳ ಮೂಲಕ ಕಣ್ಣುಗಳು ಮತ್ತು ಬುದ್ಧಿ ಎಷ್ಟು ಚುರುಕಾಗಿದೆ ಎಂದು ಪರೀಕ್ಷಿಸಿಕೊಳ್ಳಬಹುದು. ಅಂತಹದ್ದೇ ಚಿತ್ರವೊಂದು ಇದೀಗ ವೈರಲ್ ಆಗಿದ್ದು, ಆ ಚಿತ್ರದಲ್ಲಿ ಬೆಕ್ಕೊಂದು ಅಡಗಿ ಕುಳಿತಿದೆ. ಮನೆಯ ಸಾಕು ಪ್ರಾಣಿಯನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ನಿಮ್ಮ ವೀಕ್ಷಣಾ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆ ಬಳಸಿಕೊಂಡು ಈ ಬೆಕ್ಕನ್ನು 9 ಸೆಕೆಂಡುಗಳಲ್ಲಿ ಕಂಡು ಹಿಡಿಯಲು ಪ್ರಯತ್ನಿಸಿ.
ಈ ಚಿತ್ರವು ಏನು ಹೇಳುತ್ತದೆ?

ಮೊದಲ ನೋಟಕ್ಕೆ ಈ ಚಿತ್ರದಲ್ಲಿ ಒಣ ಮಣ್ಣಿನ ಭೂಪ್ರದೇಶದಂತೆ ಕಾಣುತ್ತದೆ. ಕಂದು ಮಣ್ಣು ಹಾಗೂ ಅಲ್ಲಲ್ಲಿ ಒಣಗಿದ ಹುಲ್ಲು ಇದೆ. ಸಣ್ಣದಾದ ಕಾಲು ದಾರಿಯಿದ್ದು, ಸಣ್ಣ ಸಣ್ಣ ಬಂಡೆ ಕಲ್ಲುಗಳನ್ನು ಗೋಡೆಯಂತೆ ಜೋಡಿಸಲಾಗಿದೆ. ಗೋಡೆಯ ಹಿಂಭಾಗದಲ್ಲಿ ತಿಳಿ ಕಂದು ಹಿನ್ನೆಲೆಯಲ್ಲಿ ಹಸಿರು ಸಸ್ಯಗಳನ್ನು ನೋಡಬಹುದು. ಇನ್ನು ಒಣಗಿದ ಸಸ್ಯದ ಅವಶೇಷಗಳು ಮತ್ತು ಮಸುಕಾದ ಹಸಿರು ಎಲೆಗಳು ನಿಮ್ಮ ಕಣ್ಣಿಗೆ ಕಾಣಿಸುತ್ತದೆ. ಈ ನಡುವೆ ಬೆಕ್ಕೊಂದು ಅಡಗಿ ಕುಳಿತಿದೆ. ಆ ಬೆಕ್ಕನ್ನು ನೀವು ಕೇವಲ 9 ಸೆಕೆಂಡುಗಳ ಒಳಗೆ ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.
ಇದನ್ನೂ ಓದಿ:ನಿಮ್ಮ ಕಣ್ಣಿಗೊಂದು ಸವಾಲ್; ಈ ಅಡುಗೆ ಮನೆಯಲ್ಲಿರುವ ಐಸ್ ಕ್ಯೂಬ್‌ನ್ನು ಕಂಡುಹಿಡಿಯುವಿರಾ
ಕಳ್ಳ ಬೆಕ್ಕು ನಿಮ್ಮ ಕಣ್ಣಿಗೆ ಬಿದ್ದಿತೇ?

ಎಷ್ಟೇ ಸೂಕ್ಷ್ಮವಾಗಿ ಗಮನಿಸಿದರೂ 9 ಸೆಕೆಂಡುಗಳ ಒಳಗೆ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲವೇ. ಈ ಒಗಟನ್ನು ನೂರರಲ್ಲಿ ಮೂವರು ಮಾತ್ರ ಬಿಡಿಸಲು ಸಾಧ್ಯ. ಹೀಗಾಗಿ ನೀವು ಮೊದಲು, ಈ ಚಿತ್ರವನ್ನು ಎಚ್ಚರಿಕೆಯಿಂದ ನೋಡಿ. ಮಧ್ಯಭಾಗದಲ್ಲಿ ಬೆಕ್ಕು ಕುಳಿತಿದೆ. ಸುಳಿವು ನೀಡಿದರೂ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿಲ್ಲ ಎಂದಾದರೆ ಈ ಮೇಲಿನ ಚಿತ್ರದಲ್ಲಿ ಬೆಕ್ಕನ್ನು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




