Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಅಡುಗೆ ಮನೆಯಲ್ಲಿರುವ ಐಸ್ ಕ್ಯೂಬ್‌ನ್ನು ಕಂಡುಹಿಡಿಯುವಿರಾ
ಆಪ್ಟಿಕಲ್ ಇಲ್ಯೂಷನ್ ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳನ್ನು ಬಿಡಿಸುವುದೆಂದರೆ ಬಹುತೇಕರಿಗೆ ಇಷ್ಟ. ಹೀಗಾಗಿ ಬಿಡುವು ಸಿಕ್ಕಾಗಲೆಲ್ಲಾ ಇಂತಹ ಒಗಟಿನ ಚಿತ್ರಗಳತ್ತ ಕಣ್ಣಾಯಿಸುತ್ತಾರೆ. ಇದೀಗ ಈ ಒಗಟಿನ ಚಿತ್ರ ಬಿಡಿಸುವ ಸವಾಲು ನಿಮ್ಮ ಮುಂದಿದೆ. ಈ ಚಿತ್ರದಲ್ಲಿ ಐಸ್ ಕ್ಯೂಬ್ ಎಲ್ಲಿದೆ ಎಂದು ಹತ್ತು ಸೆಕೆಂಡುಗಳಲ್ಲಿ ಹುಡುಕಬೇಕು. ಈ ಒಗಟು ಬಿಡಿಸಲು ನೀವು ಸಿದ್ದವಿದ್ದೀರಾ ಅಂತಾದ್ರೆ ಈ ಚಿತ್ರದತ್ತ ಒಮ್ಮೆ ಕಣ್ಣಾಯಿಸಿ.

ಒಗಟುಗಳನ್ನು ಬಿಡಿಸುವುದೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹೆಚ್ಚಿನವರು ಇಂತಹ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಸುತ್ತಾರೆ.ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಹಾಗೂ ಬ್ರೈನ್ ಟೀಸರ್‌ನಂತಹ (brain teaser) ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಈ ಅಡುಗೆ ಮನೆಯಲ್ಲಿ ಐಸ್ ಕ್ಯೂಬ್ ಎಲ್ಲಿದೆ ಎಂದು ಕಂಡು ಹಿಡಿಯಬೇಕು.ನೀವು ಬುದ್ದಿವಂತರೇ ಎಂದು ಪರೀಕ್ಷಿಸಿಕೊಳ್ಳಲು ಈ ಚಿತ್ರವು ಸಹಾಯ ಮಾಡುತ್ತದೆ. ಈ ಸವಾಲನ್ನು ಸ್ವೀಕರಿಸಿ ಉತ್ತರ ಕಂಡುಕೊಳ್ಳಲು ಸಾಧ್ಯವಾದರೆ ನೀವು ಜಾಣರು ಎನ್ನುವುದು ಖಚಿತವಾಗುತ್ತದೆ.
ಈ ಒಗಟಿನ ಚಿತ್ರದಲ್ಲಿ ಏನಿದೆ?

r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ಗೊಂದಲಕ್ಕೀಡು ಮಾಡುವುದು ಸಹಜ. ಮೊದಲಿಗೆ, ಈ ಒಗಟು ಭೇದಿಸುವುದು ಸುಲಭ ಎಂದು ತೋರುತ್ತದೆ. ಈ ಚಿತ್ರದಲ್ಲಿ ನೀವು ಅಡುಗೆ ಮನೆಯನ್ನು ಕಾಣಬಹುದು. ಇಲ್ಲಿ ಬಾಗಿಲುಗಳನ್ನು ಹೊಂದಿರುವ ಟೇಬಲ್, ಓವನ್ ಮತ್ತು ನೆಲದ ಮೇಲೆ ಉದ್ದನೆಯ ಕಾರ್ಪೆಟ್ ಹಾಗೂ ಇತರ ವಸ್ತುಗಳನ್ನು ಒಳಗೊಂಡಿದೆ.ಇದೆಲ್ಲರದ ನಡುವೆ ಐಸ್ ಕ್ಯೂಬ್ ಎಲ್ಲಿದೆ ಎಂದು ಹುಡುಕುವ ಸವಾಲು ಈ ಚಿತ್ರದಲ್ಲಿ ನೀಡಲಾಗಿದೆ. ಹತ್ತು ಸೆಕೆಂಡುಗಳೊಳಗೆ ಒಗಟು ಬಿಡಿಸಲು ಪ್ರಯತ್ನಿಸಿ.
ಇದನ್ನೂ ಓದಿ:ಕಾಡಿನಲ್ಲಿ ಅಡಗಿ ಕುಳಿತಿರುವ ಜಿಂಕೆಯನ್ನು 10 ಸೆಕೆಂಡುಗಳಲ್ಲಿ ಗುರುತಿಸಿ
ಈ ಒಗಟಿನ ಆಟಗಳು ಟೈಮ್ ಪಾಸ್ ಮಾತ್ರವಲ್ಲದೆ ಮೆದುಳಿಗೆ ವ್ಯಾಯಾಮ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಚಿತ್ರವು ಹಾಗೆಯೇ ಇದ್ದು, ಈ ಅಡುಗೆ ಕೋಣೆಯಲ್ಲಿ ಐಸ್ ಕ್ಯೂಬ್ ಎಲ್ಲಿದೆ ಎಂದು ಹೇಳಬೇಕು. ಎಷ್ಟೇ ಪ್ರಯತ್ನ ಪಟ್ಟರೂ ಐಸ್ ಕ್ಯೂಬ್ ಹುಡುಕಲು ಸಾಧ್ಯವಾಗುತ್ತಿಲ್ಲವೇ. ನಾವು ನಿಮಗೆ ಸುಳಿವು ನೀಡುತ್ತೇವೆ. ನೆಲದ ಮೇಲೆ ಹಾಸಲಾದ ಬಿಳಿ ಕಾರ್ಪೆಟ್ ಮೇಲೆ ಐಸ್ ಕ್ಯೂಬ್ ಇದೆ. ಇದು ತನ್ನ ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಸಂಪೂರ್ಣವಾಗಿ ಬೆರೆತು ಹೋಗಿದೆ. ಕಣ್ಣು ಅಗಲಿಸಿ ಈ ಚಿತ್ರ ನೋಡಿ ಕ್ಯೂಬ್ ಎಲ್ಲಿದೆ ಎಂದು ಹೇಳಿ ನೋಡೋಣ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




