Video: ಮಧ್ಯರಾತ್ರಿ ಎಚ್ಚರಗೊಂಡು ಅಮ್ಮನನ್ನು ಅರಸುತ್ತಾ ರಸ್ತೆ ರಸ್ತೆಗಳಲ್ಲಿ ಅಲೆದಾಡಿದ ಮಗು
ಮೂರು ವರ್ಷದ ಬಾಲಕನೊಬ್ಬ ಮಧ್ಯರಾತ್ರಿ ಬೀದಿಗಳಲ್ಲಿ ಅಲೆದಾಡಿರುವ ಘಟನೆ ಚೀನಾ(China)ದಲ್ಲಿ ನಡೆದಿದೆ. ತಣ್ಣನೆಯ ಗಾಳಿ, ಸುತ್ತಲೂ ನೂರಾರು ವಾಹನಗಳು ಬಾಲಕ ಅಲ್ಲಿಂದಿಲ್ಲಿ ಇಲ್ಲಿಂದಲ್ಲಿಗೆ ದಿಕ್ಕು ತೋಚದೆ ಓಡಾಡುತ್ತಿದ್ದ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಳಿಯ ವಾತಾವರಣದಲ್ಲಿ ನಡುಗುತ್ತಿದ್ದ ಮಗು, ಕೇವಲ ತಿಳಿ ಬಟ್ಟೆ ಮತ್ತು ಬರಿಗಾಲಿನಲ್ಲಿತ್ತು. ಆಹಾರ ಡೆಲಿವರಿ ಮಾಡುವ ವ್ಯಕ್ತಿಯೊಬ್ಬರು ಆ ಮಗುವನ್ನು ಕಂಡು ಕೂಡಲೇ ಬೈಕ್ ನಿಲ್ಲಿಸಿದ್ದಾರೆ. ಮಗುವಿನ ಸುರಕ್ಷತೆಯ ಬಗ್ಗೆ ಕಳವಳಗೊಂಡು, ಅವರು ಬಾಲಕನನ್ನು ಬೆಚ್ಚಗಿನ ಸ್ಥಳಕ್ಕೆ ಕರೆದೊಯ್ದಿದ್ದಾರೆ

ಚೀನಾ, ಡಿಸೆಂಬರ್ 04: ಮೂರು ವರ್ಷದ ಬಾಲಕನೊಬ್ಬ ಮಧ್ಯರಾತ್ರಿ ಬೀದಿಗಳಲ್ಲಿ ಅಲೆದಾಡಿರುವ ಘಟನೆ ಚೀನಾ(China)ದಲ್ಲಿ ನಡೆದಿದೆ. ತಣ್ಣನೆಯ ಗಾಳಿ, ಸುತ್ತಲೂ ನೂರಾರು ವಾಹನಗಳು ಬಾಲಕ ಅಲ್ಲಿಂದಿಲ್ಲಿ ಇಲ್ಲಿಂದಲ್ಲಿಗೆ ದಿಕ್ಕು ತೋಚದೆ ಓಡಾಡುತ್ತಿದ್ದ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಳಿಯ ವಾತಾವರಣದಲ್ಲಿ ನಡುಗುತ್ತಿದ್ದ ಮಗು, ಕೇವಲ ತಿಳಿ ಬಟ್ಟೆ ಮತ್ತು ಬರಿಗಾಲಿನಲ್ಲಿತ್ತು.
ಆಹಾರ ಡೆಲಿವರಿ ಮಾಡುವ ವ್ಯಕ್ತಿಯೊಬ್ಬರು ಆ ಮಗುವನ್ನು ಕಂಡು ಕೂಡಲೇ ಬೈಕ್ ನಿಲ್ಲಿಸಿದ್ದಾರೆ. ಮಗುವಿನ ಸುರಕ್ಷತೆಯ ಬಗ್ಗೆ ಕಳವಳಗೊಂಡು, ಅವರು ಬಾಲಕನನ್ನು ಬೆಚ್ಚಗಿನ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಸ್ವಲ್ಪ ಸಮಯದ ನಂತರ, ಅಲ್ಲೇ ಹಾದುಹೋಗುತ್ತಿದ್ದ ಚಾಲಕರೊಬ್ಬರು ಮಗುವನ್ನು ತನ್ನ ಕಾರಿನೊಳಗೆ ಕೂರಿಸಲು ಅವಕಾಶ ಮಾಡಿಕೊಟ್ಟರು.ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು, ಮತ್ತು ಪೊಲೀಸರು ಶೀಘ್ರದಲ್ಲೇ ಮಗುವಿನ ಮನೆಯನ್ನು ಪತ್ತೆಹಚ್ಚಿದ್ದಾರೆ.
ತನಿಖೆಯಲ್ಲಿ ಬಾಲಕನ ತಾಯಿ ಓವರ್‌ಟೈಮ್ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಮಗು ಒಂಟಿಯಾಗಿ ಮಲಗಿತ್ತು ಅದಕ್ಕೆ ಎಚ್ಚರವಾದಾಗ ಮಗು ಗಾಬರಿಗೊಂಡು ಅವಳನ್ನು ಹುಡುಕುತ್ತಾ ಹೊರಗೆ ಓಡಿಹೋಗಿದೆ. ಪೋಷಕರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಪೊಲೀಸರು ಡೆಲಿವರಿ ಬಾಯ್ ಹಾಗೂ ಚಾಲಕನ ಶ್ಲಾಘನೀಯ ಕ್ರಮಗಳನ್ನು ಗುರುತಿಸಿ ಅವರಿಗೆ ಗೌರವ ಪ್ರಮಾಣಪತ್ರ ನೀಡಿದ್ದಾರೆ.
ಮತ್ತಷ್ಟು ಓದಿ: Video: ಚೀನಾದಲ್ಲಿ ಸುಮಾರು 1500 ವರ್ಷಗಳಷ್ಟು ಹಳೆಯ ದೇವಾಲಯಕ್ಕೆ ಬೆಂಕಿ
ವಿಡಿಯೋ ಇಲ್ಲಿದೆ
At around 3 a.m., a 3-year-old boy wearing only light clothes ran barefoot onto a cold street. He was shivering badly from the freezing weather. A food delivery worker saw him, stopped his work, and took the child to a warm place. A driver also helped by letting the boy sit in… pic.twitter.com/ko3HL5zAgz
— China Perspective (@China_Fact) December 3, 2025
ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಈ ಘಟನೆ ನೆನಪಿಸುತ್ತದೆ ಎಂದು ಬರೆದಿದ್ದಾರೆ. ಇದು ಅಮೆರಿಕದಲ್ಲಿ ನಡೆದಿದ್ದರೆ, ಪೋಷಕರನ್ನು ಜೈಲಿಗೆ ಕಳುಹಿಸಲಾಗುತ್ತಿತ್ತು ಮತ್ತು ಮಗುವನ್ನು ಅನಾಥಾಲಯಕ್ಕೆ ಕಳುಹಿಸಲಾಗುತ್ತಿತ್ತು ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.ಬೇರೆ ದೇಶದಲ್ಲಿ, ಸತ್ಯ ಮತ್ತು ದೃಶ್ಯಗಳನ್ನು ಪರಿಶೀಲಿಸದೆಯೇ ಅವರ ಮೇಲೆ ಅಪಹರಣದ ಆರೋಪವನ್ನು ಸುಲಭವಾಗಿ ಹೊರಿಸುತ್ತಿದ್ದರು” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:31 am, Thu, 4 December 25




