AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಚೀನಾದಲ್ಲಿ ಸುಮಾರು 1500 ವರ್ಷಗಳಷ್ಟು ಹಳೆಯ ದೇವಾಲಯಕ್ಕೆ ಬೆಂಕಿ

Video: ಚೀನಾದಲ್ಲಿ ಸುಮಾರು 1500 ವರ್ಷಗಳಷ್ಟು ಹಳೆಯ ದೇವಾಲಯಕ್ಕೆ ಬೆಂಕಿ

ನಯನಾ ರಾಜೀವ್
|

Updated on: Nov 13, 2025 | 1:19 PM

Share

ಚೀನಾದ ಜಿಯಾಂಗ್ಸು ಪ್ರಾಂತ್ಯದ ಜಾಂಗ್ಜಿಯಾಗ್ಯಾಂಗ್‌ನಲ್ಲಿರುವ 1,500 ವರ್ಷಗಳಷ್ಟು ಹಳೆಯದಾದ ಯೋಂಗ್‌ಕಿಂಗ್ ದೇವಾಲಯದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಶತಮಾನಗಳಷ್ಟು ಹಳೆಯದಾದ ಬೌದ್ಧ ವಾಸ್ತುಶಿಲ್ಪ ಮತ್ತು ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾದ ಈ ಪ್ರಾಚೀನ ದೇವಾಲಯದ, ಸಂಕೀರ್ಣದೊಳಗಿನ ಬಹುಮಹಡಿ ಮಂಟಪಗಳು ಸುಟ್ಟುಹೋಗಿವೆ.

ಚೀನಾ, ನವೆಂಬರ್ 13: ಚೀನಾದ ಜಿಯಾಂಗ್ಸು ಪ್ರಾಂತ್ಯದ ಜಾಂಗ್ಜಿಯಾಗ್ಯಾಂಗ್‌ನಲ್ಲಿರುವ 1,500 ವರ್ಷಗಳಷ್ಟು ಹಳೆಯದಾದ ಯೋಂಗ್‌ಕಿಂಗ್ ದೇವಾಲಯದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಶತಮಾನಗಳಷ್ಟು ಹಳೆಯದಾದ ಬೌದ್ಧ ವಾಸ್ತುಶಿಲ್ಪ ಮತ್ತು ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾದ ಈ ಪ್ರಾಚೀನ ದೇವಾಲಯದ, ಸಂಕೀರ್ಣದೊಳಗಿನ ಬಹುಮಹಡಿ ಮಂಟಪಗಳು ಸುಟ್ಟುಹೋಗಿವೆ.

ಸ್ಥಳೀಯ ಅಧಿಕಾರಿಗಳ ಪ್ರಕಾರ, ಬೆಂಕಿಯನ್ನು ಬಹುತೇಕ ನಿಯಂತ್ರಣಕ್ಕೆ ತರಲಾಗಿದ್ದು, ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ದಳ ಮತ್ತು ತುರ್ತು ತಂಡಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿಯ ಕಾರಣವನ್ನು ಪ್ರಸ್ತುತ ತನಿಖೆ ನಡೆಸಲಾಗುತ್ತಿದ್ದು, ದೋಷಪೂರಿತ ವೈರಿಂಗ್, ಧೂಪದ್ರವ್ಯ ಬಳಕೆ ಏನು ಕಾರಣ ಎನ್ನುವ ತನಿಖೆ ನಡೆಸಲಾಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ