AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಐದು ವರ್ಷಗಳ ಬಳಿಕ ಕೆನಾಡದಿಂದ ಭಾರತಕ್ಕೆ ಮರಳುವ ನಿರ್ಧಾರ; ಅಸಲಿ ಕಾರಣ ಬಿಚ್ಚಿಟ್ಟ ಅನಿವಾಸಿ ಭಾರತೀಯ

ಓದು ಮುಗಿಯುತ್ತಿದ್ದಂತೆ ಉದ್ಯೋಗಕ್ಕಾಗಿ ಹೆಚ್ಚಿನವರು ವಿದೇಶಕ್ಕೆ ತೆರಳುತ್ತಾರೆ. ಆದರೆ ಕೆನಡಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಐದು ವರ್ಷಗಳ ಬಳಿಕ ಭಾರತಕ್ಕೆ ಮರಳುವ ನಿರ್ಧಾರ ಮಾಡಿದ್ದಾರೆ. ತಮ್ಮ ಈ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗ ಪಡಿಸಿದ್ದು, ಈ ಪೋಸ್ಟ್ ಸದ್ಯ ವೈರಲ್ ಆಗುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಐದು ವರ್ಷಗಳ ಬಳಿಕ ಕೆನಾಡದಿಂದ ಭಾರತಕ್ಕೆ ಮರಳುವ ನಿರ್ಧಾರ; ಅಸಲಿ ಕಾರಣ ಬಿಚ್ಚಿಟ್ಟ ಅನಿವಾಸಿ ಭಾರತೀಯ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on: Dec 04, 2025 | 3:25 PM

Share

ಹೆಚ್ಚಿನವರು ವಿದೇಶಿ ಜೀವನವನ್ನು (foreign life) ಇಷ್ಟ ಪಡ್ತಾರೆ. ಹೀಗಾಗಿ ಓದು ಮುಗಿಯುತ್ತಿದ್ದಂತೆ ವಿದೇಶಕ್ಕೆ ಹಾರುತ್ತಾರೆ. ವಿದೇಶದಲ್ಲಿ ಉದ್ಯೋಗ ಸಿಕ್ಕರೆ ಲೈಫ್ ಸೆಟ್ಲ್ ಆದಂತೆ ಅಂದುಕೊಳ್ತಾರೆ. ಆದರೆ ಅಲ್ಲಿಂದವರಿಗೆ ಮಾತ್ರ ಅಲ್ಲಿನ ಕಷ್ಟ ಗೊತ್ತಿರುತ್ತದೆ. ಕೆನಾಡದಲ್ಲಿ (Canada) ನೆಲೆಸಿರುವ ಅನಿವಾಸಿ ಭಾರತಿಯರೊಬ್ಬರು ಇಲ್ಲಿ ಬದುಕೋಕೆ ಆಗಲ್ಲ, ಹೀಗಾಗಿ ತಮ್ಮ ಐದು ವರ್ಷಗಳ ವಿದೇಶಿ ಜೀವನಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. ಹೌದು, ಸಾಮಾಜಿಕ ಪ್ರತ್ಯೇಕತೆ, ರಚನಾತ್ಮಕ ವಿದೇಶಿ ಜೀವನಶೈಲಿಯಲ್ಲಿ ಸ್ವಾತಂತ್ರ್ಯದ ಕೊರತೆಯನ್ನು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ತಾಯ್ನಾಡು ನಮಗೆ ಚಂದ ಎಂದಿದ್ದಾರೆ.

r/returnToIndia ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ, ಕೆನಡಾದಲ್ಲಿ 5 ವರ್ಷ ವಾಸಿಸಿದ ನಂತರ ನನಗೆ ಇಲ್ಲಿ ಎಲ್ಲವನ್ನು ಸಹಿಸಲು ಸಾಧ್ಯವಾಗಲಿಲ್ಲ. ಸಾಮಾಜಿಕ ಪ್ರತ್ಯೇಕತೆಯಿದೆ. ನನಗೆ ಇಲ್ಲಿ ಸ್ನೇಹಿತರಿದ್ದು, ಆದರೆ ವಿದೇಶದಲ್ಲಿ ಜೀವನವು ರೋಬೋಟಿಕ್ ಅನಿಸಿತು. ಡ್ರೈವಿಂಗ್ ಕೂಡ ತುಂಬಾ ರಚನಾತ್ಮಕ ಮತ್ತು ರೋಬೋಟಿಕ್ ಆಗಿದೆ. ಹೀಗಾಗಿ ನಾನು ಮನುಷ್ಯ ಎಂದು ಭಾವಿಸುವುದನ್ನು ನಿಲ್ಲಿಸಿದೆ. ಇಲ್ಲಿ ಎಲ್ಲವನ್ನೂ ಯೋಜಿಸಬೇಕು. ಮತ್ತೊಂದೆಡೆ, ಭಾರತದಲ್ಲಿ ಸಂಘಟಿತ ಅವ್ಯವಸ್ಥೆ ಇದೆ, ಅದನ್ನು ನಾನು ತುಂಬಾ ಮಿಸ್ ಮಾಡಿಕೊಳ್ತೇನೆ. ಇಡೀ ದಿನವನ್ನು ಖರ್ಚು ಮಾಡದ ಯಾದೃಚ್ಛಿಕ ಮುಖಾಮುಖಿಗಳು ಮತ್ತು ಸ್ವಯಂಪ್ರೇರಿತ ಯೋಜನೆಗಳಿಂದ ನಾನು ತಪ್ಪಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

I did it. I quit my job today and booked my flight to be back home next Sunday byu/Automatic-Funny-8842 inreturnToIndia

ಡೇಟಿಂಗ್ ಜೀವನ ಇಲ್ಲಿಯೂ ಸಹ ನೀರಸವಾಗಿದೆ. ಎಲ್ಲರೂ ಮನೆಯೊಳಗೆ ಸಮಯ ಕಳೆಯುತ್ತಿರುವಾಗ ಈ ಚಳಿಗಾಲದಲ್ಲಿ ಯಾರನ್ನಾದರೂ ಕಂಡುಕೊಳ್ಳುವುದು ಅದೃಷ್ಟ. ನಾನು ಭವಿಷ್ಯದ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ. ಕೊಳಕು ಮತ್ತು ನಾಗರಿಕ ಪ್ರಜ್ಞೆ ಇಲ್ಲದ ಭಾರತವನ್ನು ನಾನು ದ್ವೇಷಿಸುತ್ತೇನೆ, ಆದರೆ ಅದರ ಎಲ್ಲಾ ನ್ಯೂನತೆಗಳನ್ನು ನಾನು ಸಹಿಸಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಸೀರೆಯುಟ್ಟ ಭಾರತೀಯ ನಾರಿಯೊಂದಿಗೆ ಸೆಲ್ಫಿ ಕ್ಲಿಕಿಸಿಕೊಂಡ ವಿದೇಶಿಗರು

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ, ನಿಮಗೆ ಎಲ್ಲಿ ಸಂತೋಷವಾಗುತ್ತದೆಯೋ ಅಲ್ಲಿಯೇ ಇರಿ ಎಂದಿದ್ದಾರೆ. ಇನ್ನೊಬ್ಬರು, ನೀವು ಧೈರ್ಯಶಾಲಿಯಾಗಿ ಏನು ಮಾಡಲು ಮುಂದಾಗಿದ್ದೀರಿ ಅದನ್ನೇ ಮುಂದುವರಿಸಿ. ನಿಮ್ಮ ನಿರ್ಧಾರ ನಿಮಗೆ ಖುಷಿ ಕೊಟ್ಟರೆ ಸಾಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?