AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನನ್ನಮ್ಮನಿಗೆ ಫೋನ್ ಮಾಡಿ, ನನ್ನ ಅಮ್ಮನ ಹೆಸರು ಮಮ್ಮಾ; ಶಾಲೆಯಲ್ಲಿ ಕಣ್ಣೀರಿಟ್ಟ ಪುಟಾಣಿ

ಸಣ್ಣ ಮಕ್ಕಳೇ ಹಾಗೆ, ಶಾಲೆಗೆ ಹೋಗಲ್ಲ ಎಂದು ಹಠ ಹಿಡಿಯುವುದನ್ನು ನೋಡಿರುತ್ತೀರಿ. ಆದರೆ ಈಗಿನ ಶಿಕ್ಷಣವು ಮಕ್ಕಳ ಬಾಲ್ಯವನ್ನು ಕಸಿದುಕೊಂಡಿದೆ. ಎರಡರಿಂದ ಮೂರು ವರ್ಷದ ಪುಟ್ಟ ಮಕ್ಕಳ ಕಿಟಕಿಯಲ್ಲಿ ಇಣುಕುತ್ತಾ ಅಮ್ಮನಿಗಾಗಿ ಗೊಗರೆಯುತ್ತಿದ್ದಾರೆ. ಕರುಳು ಚುರ್ ಎನ್ನುವ ಈ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Video: ನನ್ನಮ್ಮನಿಗೆ ಫೋನ್ ಮಾಡಿ, ನನ್ನ ಅಮ್ಮನ ಹೆಸರು ಮಮ್ಮಾ; ಶಾಲೆಯಲ್ಲಿ ಕಣ್ಣೀರಿಟ್ಟ ಪುಟಾಣಿ
ವೈರಲ್ ವಿಡಿಯೋImage Credit source: Twitter
ಸಾಯಿನಂದಾ
|

Updated on:Dec 04, 2025 | 12:37 PM

Share

ನಮ್ಮ ಬಾಲ್ಯವೇ (childhood) ಚೆನ್ನಾಗಿತ್ತು. ಶಾಲೆ ಮೆಟ್ಟಿಲೇರಿದರೂ ಬಾಲ್ಯವನ್ನು ಖುಷಿಯಿಂದಲೇ ಕಳೆಯುತ್ತಿದ್ದೆವು. ಆದರೆ ಈಗ ಆಗಿಲ್ಲ, ವರ್ಷ ಎರಡು ಮೂರು ಆಗುತ್ತಿದ್ದಂತೆ ನರ್ಸರಿ ಎಂದು ಪುಟಾಣಿಗಳನ್ನು ಶಾಲೆಗೆ ಸೇರಿಸಿಯಾಗಿರುತ್ತದೆ. ಮಕ್ಕಳ (children) ಬಾಲ್ಯವನ್ನು ಕಸಿಯುತ್ತಿರುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಪುಟ್ಟ ಮಕ್ಕಳು ತರಗತಿಯ ಕಿಟಕಿಯಿಂದ ಹೊರ ನೋಡುತ್ತಾ ಅಮ್ಮನಿಗಾಗಿ ಕಣ್ಣೀರು ಸುರಿಸುತ್ತಿರುವ ದೃಶ್ಯ ಇದಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ.

ಸುರಾಜ್ ಕುಮಾರ್ ಬೌದ್‌ (Suraj kumar Bauddh) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ಶಾಲೆಯಲ್ಲಿ ಮಕ್ಕಳು ತಮ್ಮ ತಾಯಿಯ ಮಡಿಲಲ್ಲಿ ಮಲಗಿ ಹಾಲು ಕುಡಿಯಲು ಬಯಸುತ್ತಾರೆ. ಎಲ್‌ಕೆಜಿ ಹೆಸರಿನಲ್ಲಿ 2-3 ವರ್ಷದ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಶಿಕ್ಷಣವಲ್ಲ. ಇದು ಬಾಲ್ಯವನ್ನೇ ಕಸಿಯುತ್ತಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ಪುಟಾಣಿಗಳು ತರಗತಿಯ ಕಿಟಕಿಯಲ್ಲಿ ನಿಂತುಕೊಂಡು ಹೊರಗಡೆ ನೋಡುತ್ತಾ ಅಳುತ್ತಿರುವುದನ್ನು ನೋಡಬಹುದು. ಮಗುವೊಂದು ಅಳುತ್ತಾ ನನ್ನಮ್ಮನಿಗೆ ಫೋನ್ ಮಾಡಿ… ನನ್ನಮ್ಮನ ಹೆಸರು ಮಮ್ಮಾ ಎಂದು ಹೇಳುತ್ತಿದೆ. ಮತ್ತೊಂದು ಮಗು ಭಯ ಹಾಗೂ ಅಮ್ಮ ತನ್ನನ್ನು ಕರೆದುಕೊಂಡು ಹೋಗಲು ಬರುತ್ತಾಳೆ ಎಂದು ನಿರೀಕ್ಷೆಯಿಂದ ಹೊರಗೆ ನೋಡುವುದನ್ನು ನೀವಿಲ್ಲಿ ನೋಡಬಹುದು.  ಪುಟಾಣಿಗಳ ಈ ಮಾತುಗಳು ಕರುಳು ಹಿಂಡುವಂತೆ ಮಾಡಿದೆ.

ಇದನ್ನೂ ಓದಿ:ಮಧ್ಯರಾತ್ರಿ ಎಚ್ಚರಗೊಂಡು ಅಮ್ಮನನ್ನು ಅರಸುತ್ತಾ ರಸ್ತೆ ರಸ್ತೆಗಳಲ್ಲಿ ಅಲೆದಾಡಿದ ಮಗು

ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ ಶಿಕ್ಷಣದ ಹೆಸರಿನಲ್ಲಿ ತಾಯಿ ಮಗುವನ್ನು ದೂರ ಮಾಡುವುದು ಸರಿಯಲ್ಲ ಎಂದಿದ್ದಾರೆ. ಇನ್ನೊಬ್ಬರು, ಪುಟಾಣಿಗಳ ಮಾತು ಕೇಳಿದ್ರೆ ಕರುಳು ಚುರ್ ಅನ್ನುತ್ತೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ವಯಸ್ಸಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ತುಂಬಾ ಆಘಾತಕಾರಿ, ಅವರು ನಿಜವಾಗಿಯೂ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿರಬೇಕಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:36 pm, Thu, 4 December 25

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?