AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ರಾತ್ರಿ ಉಳಿಯಲು ಇಬ್ಬರೂ ಯುವತಿಯರಿಗೆ ಅವಕಾಶ ಕೊಟ್ಟ ವ್ಯಕ್ತಿಗೆ 5000 ರೂ ದಂಡ ವಿಧಿಸಿದ ಹೌಸಿಂಗ್ ಸೊಸೈಟಿ

ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ತಾವು ಮಾಡಿದ ಸಹಾಯ ತಮಗೆ ಹೇಗೆ ಮುಳುವಾಯಿತು ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಇಬ್ಬರೂ ಹುಡುಗಿಯರು ತಮ್ಮ ಫ್ಲಾಟ್‌ನಲ್ಲಿ ರಾತ್ರಿಯಿಡೀ ಉಳಿದುಕೊಂಡರು ಎಂಬ ಕಾರಣಕ್ಕಾಗಿ ತನಗೆ ಹಾಗೂ ತನ್ನ ಫ್ಲಾಟ್‌ಮೇಟ್‌ಗೆ ವಸತಿ ಸಂಘವು 5,000 ರೂ ದಂಡ ವಿಧಿಸಿದೆ ಎನ್ನುವ ಬಗ್ಗೆ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದು, ಕುರಿತಾದ ಪೋಸ್ಟ್ ಸದ್ಯ ವೈರಲ್ ಆಗಿದೆ.

Viral: ರಾತ್ರಿ ಉಳಿಯಲು ಇಬ್ಬರೂ ಯುವತಿಯರಿಗೆ ಅವಕಾಶ ಕೊಟ್ಟ ವ್ಯಕ್ತಿಗೆ 5000 ರೂ ದಂಡ ವಿಧಿಸಿದ ಹೌಸಿಂಗ್ ಸೊಸೈಟಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on:Dec 04, 2025 | 10:25 AM

Share

ಬೆಂಗಳೂರು, ಡಿಸೆಂಬರ್ 04: ಕೆಲವೊಮ್ಮೆ ನಾವು ಯಾವುದನ್ನು ಅಪೇಕ್ಷಿಸದೇ ಮಾಡುವ ಸಹಾಯವು ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಇಂತಹದ್ದೇ ಅನುಭವ ಈ ವ್ಯಕ್ತಿಗೂ ಆಗಿದೆ. ಬೆಂಗಳೂರಿನ (Bengaluru) ವ್ಯಕ್ತಿಯೊಬ್ಬರು ತಮ್ಮ ಫ್ಲಾಟ್‌ನಲ್ಲಿ ಇಬ್ಬರೂ ಯುವತಿಯರಿಗೆ ರಾತ್ರಿ ಉಳಿಯಲು ಅವಕಾಶ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಈ ವ್ಯಕ್ತಿ ಹಾಗೂ ಫ್ಲಾಟ್‌ಮೇಟ್‌ಗೆ ಹೌಸಿಂಗ್ ಸೊಸೈಟಿ 5,000 ರೂ ದಂಡ ವಿಧಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

r/bengaluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಬೆಂಗಳೂರಿನ ವ್ಯಕ್ತಿ ಹೌಸಿಂಗ್ ಸೊಸೈಟಿ ಸಂಗ್ರಹಿಸಿದ ಬಿಲ್‌ನ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಂಡಿದ್ದಾರೆ. ಜತೆಗೆ ಈ ಪೋಸ್ಟ್‌ನಲ್ಲಿ ಮೂಲತಃ ನಮ್ಮ ಸೊಸೈಟಿಯಲ್ಲಿ ಬ್ಯಾಚುಲರ್‌ಗಳು ರಾತ್ರಿಯಿಡೀ ಅತಿಥಿಗಳನ್ನು ಸ್ವೀಕರಿಸಬಾರದು ಎಂಬ ನಿಯಮವಿದೆ. ಆದರೆ ಕುಟುಂಬಕ್ಕೆ ಯಾವುದೇ ನಿರ್ಬಂಧವಿಲ್ಲ. ನಾವು ಕೂಡ ಎಲ್ಲಾ ಮೊತ್ತವನ್ನು ಪಾವತಿಸುತ್ತೇವೆ. ಇದು ಮೊದಲ  ನಿಯಮ ಉಲ್ಲಂಘನೆಯಂತಿದೆ. ಆದರೆ ನನಗೆ ಈ ಬಗ್ಗೆ ಸಣ್ಣ ಎಚ್ಚರಿಕೆ ಕೂಡ ಸಿಗಲಿಲ್ಲ. ಇದು ತುಂಬಾ ಸಣ್ಣ ಸಮಸ್ಯೆ ಎಂದು ನನಗೆ ತಿಳಿದಿದೆ, ಆದರೆ ಕೀಳಾಗಿ ನಡೆಸಿಕೊಳ್ಳುವುದು ಒಳ್ಳೆಯದಲ್ಲ. ನಾನು ಯಾವುದೇ ದೊಡ್ಡ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೂ, ಅವರು ಇದನ್ನು ಮರುಪರಿಶೀಲಿಸುವಂತೆ ಏನನ್ನಾದರೂ ಮಾಡಬಹುದೇ ಎಂದು ಕೇಳಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

Unfair Treatment of Bachelors in Society. Is there anything we can do to get fair treatment? byu/_NoGod_ inbangalore

ಇದನ್ನೂ ಓದಿ:ಬೆಂಗಳೂರಿನಲ್ಲಿ ಹೊಸ ಫ್ಲಾಟ್ ಬಾಡಿಗೆ ಹಗರಣ”: 15 ಸಾವಿರ ರೂ.ಗೆ 2BHK ಅಪಾರ್ಟ್‌ಮೆಂಟ್​​, ಇದು ನಂಬಲು ಸಾಧ್ಯವೇ?

ಈ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದು ಒಬ್ಬ ಬಳಕೆದಾರ ನಿಮ್ಮ ಬಳಿ ಸಾಕಷ್ಟು ಹಣ ಹಾಗೂ ಸಮಯವಿದ್ದರೆ, ನೀವು ನ್ಯಾಯಾಲಯಕ್ಕೆ ಹೋಗಬಹುದು ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ರೀತಿ ದಂಡ ವಿಧಿಸುವುದರಲ್ಲಿ ಅರ್ಥವಿಲ್ಲ. ಹೌಸಿಂಗ್ ಸೊಸೈಟಿಯೂ ತಮ್ಮನ್ನು ತಾವು ಓಯೋ ಹೋಟೆಲ್‌ನಂತೆ ನಡೆಸಿಕೊಂಡಂತೆ ಎಂದು ಹೇಳಿದ್ದಾರೆ. ಮತ್ತೊಬ್ಬರು ನಿಮ್ಮ ಸಮಯ ಹಾಗೂ ಹಣ ಎರಡು ವ್ಯರ್ಥ, ಹೀಗಾಗಿ ನೀವು ಸುಮ್ಮನೆ ಇರುವುದು ಒಳ್ಳೆಯದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 am, Thu, 4 December 25

ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​