“ಬೆಂಗಳೂರಿನಲ್ಲಿ ಹೊಸ ಫ್ಲಾಟ್ ಬಾಡಿಗೆ ಹಗರಣ”: 15 ಸಾವಿರ ರೂ.ಗೆ 2BHK ಅಪಾರ್ಟ್‌ಮೆಂಟ್, ಇದು ನಂಬಲು ಸಾಧ್ಯವೇ?
ಬೆಂಗಳೂರಿನಲ್ಲಿ ಇತ್ತೀಚೆಗೆ ಬಾಡಿಗೆ ಫ್ಲಾಟ್‌ಗಳ ಹೆಸರಿನಲ್ಲಿ ದೊಡ್ಡ ಹಗರಣಗಳು ನಡೆಯುತ್ತಿವೆ. ಅತಿ ಕಡಿಮೆ ಬಾಡಿಗೆಗೆ ಐಷಾರಾಮಿ 2BHK ಅಪಾರ್ಟ್‌ಮೆಂಟ್‌ಗಳನ್ನು ತೋರಿಸಿ, ಆಧಾರ್ ಕಾರ್ಡ್ ಅಥವಾ ಇತರ ದಾಖಲೆಗಳನ್ನು ಮತ್ತು 2,500 ರೂ. 'ಪ್ರವೇಶ ಪಾಸ್' ಶುಲ್ಕ ಕೇಳಿ ಜನರನ್ನು ವಂಚಿಸಲಾಗುತ್ತಿದೆ. ಈ ಹಗರಣಗಳಲ್ಲಿ ಸಿಲುಕಿ ಹಣ ಕಳೆದುಕೊಳ್ಳದಂತೆ ಎಚ್ಚರ ವಹಿಸಿ ಎಂದು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಬೆಂಗಳೂರು, ಡಿ.3: ಬೆಂಗಳೂರಿನಲ್ಲಿ (Bengaluru) ಒಂದಲ್ಲ ಒಂದು ಹಗರಣಗಳು ನಡೆಯುತ್ತಿರುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗಿದೆ. ಅದರಲ್ಲೂ ಬಾಡಿಗೆ ವಿಚಾರದಲ್ಲಿ ದೊಡ್ಡ ಸ್ಕ್ಯಾಮ್ಗಳು ನಡೆಯುತ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಬಾಡಿಗೆದಾರರೊಬ್ಬರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಸ್ಕ್ಯಾಮ್ನಲ್ಲಿ ನಗರದಲ್ಲಿ ಕೈಗೆಟುಕುವ ಬೆಲೆಯಲ್ಲಿ ಮನೆಗಳನ್ನು ಹುಡುಕುತ್ತಿರುವವರನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ವೈರಲ್ ಪೋಸ್ಟ್ಗೆ ” ಬೆಂಗಳೂರು ಹೊಸ ಫ್ಲಾಟ್ ಬಾಡಿಗೆ ಹಗರಣ ” ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಹೊಸ ಮನೆಗಳನ್ನು ತೋರಿಸಿ, ಹಣ ಬಂದ ಮೇಲೆ ಏನು? ಮಾಡುತ್ತಾರೆ ಎಂಬುದನ್ನು ಈ ಪೋಸ್ಟ್ನಲ್ಲಿ ವಿವರಿಸಿದ್ದಾರೆ.
ಈ ಹಗರಣವು ಜೆಪಿ ನಗರದಂತಹ ಪ್ರದೇಶಗಳಲ್ಲಿ ಕಂಡು ಬಂದಿದೆ. ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಪ್ರಕಾರ, “2BHK ಅಪಾರ್ಟ್ಮೆಂಟ್ಗೆ 15 ಸಾವಿರ ರೂ. ಬಾಡಿಗೆ ಹೇಳಿದ್ದಾರೆ. ಸುಸಜ್ಜಿತವಾದ, ಎಲ್ಲ ಸೌಕರ್ಯಗಳು ಇರುವ 2BHK ಅಪಾರ್ಟ್ಮೆಂಟ್ಗೆ ಕೇವಲ 15 ಸಾವಿರ ರೂ. ಅಂದರೆ ನಂಬಲು ಸಾಧ್ಯವಿಲ್ಲ. ಅದು ಕೂಡ ಬೆಂಗಳೂರಿನ ಇಂತಹ ದೊಡ್ಡ ನಗರದಲ್ಲಿ. ಈ ಬಗ್ಗೆ ಅನುಮಾನ ಬಂದು ಇದರ ಬಗ್ಗೆ ವಿಚಾರಿಸಿದೆ. ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಸ್ವಿಮ್ಮಿಂಗ್ ಪೂಲ್ ಎಲ್ಲವೂ ಇದರಲ್ಲಿ ಬರುತ್ತದೆ ಎಂದರೆ ಯಾರಿಗಾದರೂ ಡೌಟ್ ಬರುವುದು ಸಹಜ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
Bengaluru New Flat Rental Scam byu/souravworks inbangalorerentals
ಈ ಬಾಡಿಗೆ ಹಗರಣಗಳು ಹೇಗೆ ಕೆಲಸ ಮಾಡುತ್ತವೆ?
ಬಾಡಿಗೆ ಇದೆ ಎಂದು ಹಂಚಿಕೊಂಡ ಪೋಸ್ಟರ್ನಲ್ಲಿರುವ ನಂಬರ್ಗೆ ಫೋನ್ ಮಾಡಿದ್ರೆ, ಮನೆ ಮಾಲೀಕ ಪೋನ್ ತೆಗೆದುಕೊಳ್ಳುವುದಿಲ್ಲ. ಅಲ್ಲಿ ಒಬ್ಬರು ಬಾಡಿಗೆ ನಿಯಮಗಳನ್ನು ಹೇಳುತ್ತಾರೆ. ಮನೆ ನೋಡುವ ಮೊದಲು ಪ್ರವೇಶ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಆಧಾರ್ ಕಾರ್ಡ್ನಂತ ಸರ್ಕಾರಿ ದಾಖಲೆಗಳನ್ನು ಕೇಳುತ್ತಾರೆ. ಆದರೆ ಯಾರು ಕೂಡ ಇಂತಹ ದಾಖಲೆಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ಫೋಟೋ ಅಥವಾ ದಾಖಲೆಗಳನ್ನು ಬಳಸಿಕೊಂಡು. ಬೇರೆ ಕೆಲಸಗಳನ್ನು ಮಾಡುವಂತೆ ಬೆದರಿಕೆ ಹಾಕಬಹುದು. ನಂತರ ಸ್ಕ್ಯಾಮರ್ ಪ್ರವೇಶ ಪಾಸ್ಗಾಗಿ 2,500 ರೂ ನೀಡುವಂತೆ ಹೇಳುತ್ತಾರೆ. ಇದು ವಂಚನೆ ಮೊದಲ ಹಂತ ಎಂದು ರೆಡ್ಡಿಟ್‌ನಲ್ಲಿ ಹೇಳಿದ್ದಾರೆ. ಹಣ ನೀಡಿದ ನಂತರ, ಅವರು ನಾಪತ್ತೆಯಾಗುತ್ತಾರೆ. ಯಾರು ಕೂಡ ಇಂತಹ ವಂಚನೆಗೆ ಒಳಾಗಾಗಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕುಂದದ ಜೀವನೋತ್ಸಾಹ; 76 ರ ಹರೆಯದಲ್ಲೂ ವಾಚ್ ರಿಪೇರಿ ಮಾಡಿ ನೆಮ್ಮದಿ ಜೀವನ ಸಾಗಿಸುತ್ತಿರುವ ವ್ಯಕ್ತಿ
ನೆಟ್ಟಿಗರು ಹೇಳಿದ್ದೇನು?
ಈ ಪೋಸ್ಟ್ ನೋಡಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು, ಆಕರ್ಷಕ ಮೂಲಸೌಕರ್ಯಗಳನ್ನು ತೋರಿಸಿ ಜನರನ್ನು ಮೋಸ ಮಾಡುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಕೆಲವು ನೆಟ್ಟಿಗರು ತಮ್ಮ ಅನುಭವವನ್ನು ಕೂಡ ಇಲ್ಲಿ ಹಂಚಿಕೊಂಡಿದ್ದಾರೆ. ನಾನೂ ಕಷ್ಟಪಟ್ಟು ದುಡಿಯುವ ವ್ಯಕ್ತಿ, ಈ ವಂಚನೆಯಿಂದ 2 ಸಾವಿರ ಕಳೆದುಕೊಂಡಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ನಾನು ಕೂಡ ಇಂತಹ ಮೋಸದಲ್ಲಿ ಸಿಲುಕಿ ಹಣ ಕಳೆದುಕೊಂಡೆ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




