AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳಾಗಿ ಬಂದೆ, ಸೊಸೆಯಾಗಿದ್ದೀನಿ: ಪ್ರಶಸ್ತಿ ಸ್ವೀಕರಿಸಿ ಭಾವುಕರಾದ ರಶ್ಮಿಕಾ

Rashmika Mandanna: ಮದುವೆ ಆದ ಬಳಿಕ ರಶ್ಮಿಕಾ ಅವರಿಗೆ ಮೊದಲ ಹಬ್ಬ ಯುಗಾದಿ. ಆದರೆ ಈ ಯುಗಾದಿ ಹಬ್ಬ ಅವರಿಗೆ ಬಹು ವಿಶೇಷವೂ ಹೌದು. ರಶ್ಮಿಕಾ ಮಂದಣ್ಣ ಅವರು ನಟನೆಗೆ ಮೊಟ್ಟ ಮೊದಲ ಬಾರಿಗೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ರಶ್ಮಿಕಾ ಅವರಿಗೆ ತೆಲಂಗಾಣ ಸರ್ಕಾರ ನೀಡುವ ಗದರ್ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ್ದಾರೆ.

ಮಗಳಾಗಿ ಬಂದೆ, ಸೊಸೆಯಾಗಿದ್ದೀನಿ: ಪ್ರಶಸ್ತಿ ಸ್ವೀಕರಿಸಿ ಭಾವುಕರಾದ ರಶ್ಮಿಕಾ
Rashmika Mandanna
ಮಂಜುನಾಥ ಸಿ.
|

Updated on: Mar 19, 2026 | 10:56 PM

Share

ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗಷ್ಟೆ ವಿಜಯ್ ದೇವರಕೊಂಡ ಅವರೊಟ್ಟಿಗೆ ಬಲು ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಮದುವೆ ಆದ ಬಳಿಕ ಇದು ಅವರಿಗೆ ಮೊದಲ ಹಬ್ಬ. ಆದರೆ ಈ ಯುಗಾದಿ ಹಬ್ಬ ಅವರಿಗೆ ಬಹು ವಿಶೇಷವೂ ಹೌದು. ರಶ್ಮಿಕಾ ಮಂದಣ್ಣ ಅವರು ನಟನೆಗೆ ಮೊಟ್ಟ ಮೊದಲ ಬಾರಿಗೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ರಶ್ಮಿಕಾ ಅವರಿಗೆ ತೆಲಂಗಾಣ ಸರ್ಕಾರ ನೀಡುವ ಗದರ್ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ್ದಾರೆ.

ಸಿಎಂ ರೇವಂತ್ ರೆಡ್ಡಿ ಮತ್ತು ರಾಮ್ ಚರಣ್ ಅವರು ಜಂಟಿಯಾಗಿ ರಶ್ಮಿಕಾ ಅವರಿಗೆ ಗದರ್ ಅವಾರ್ಡ್ ಅನ್ನು ನೀಡಿದರು. ಪ್ರಶಸ್ತಿ ಸ್ವೀಕರಿಸುವ ವೇಳೆ ಖುದ್ದು ಸಿಎಂ ರೇವಂತ್ ರೆಡ್ಡಿ ಅವರು ರಶ್ಮಿಕಾರನ್ನು ತಮ್ಮ ಊರಿನ ಸೊಸೆ ಎಂದರು. ಇದು ರಶ್ಮಿಕಾಗೆ ಸಖತ್ ಖುಷಿ ಕೊಟ್ಟಿತು. ಬಳಿಕ ಮಾತನಾಡಿದ ರಶ್ಮಿಕಾ ಮಂದಣ್ಣ, ‘ಒಂದು ಸಮಯದಲ್ಲಿ ನನ್ನ ನಟನೆಯನ್ನು ಟ್ರೋಲ್ ಮಾಡಿದ್ದರು ಆದರೆ ಈಗ ಸರ್ಕಾರವೊಂದು ನನ್ನ ನಟನೆ ಮೆಚ್ಚಿ ಪ್ರಶಸ್ತಿ ನೀಡಿದೆ’ ಎಂದರು.

ಮುಂದುವರೆದು ಮಾತನಾಡಿ, ‘ಗರ್ಲ್​​ಫ್ರೆಂಡ್’ ಸಿನಿಮಾಕ್ಕೆ ಈ ಪ್ರಶಸ್ತಿ ಸಿಕ್ಕಿರುವುದು ಹೆಚ್ಚು ಖುಷಿ ಕೊಟ್ಟಿದೆ. ‘ಗರ್ಲ್​​ಫ್ರೆಂಡ್’ ಸಿನಿಮಾ ನನ್ನ ಪಾಲಿಗೆ ಬಹಳ ವಿಶೇಷ ಸಿನಿಮಾ. ಈ ಸಿನಿಮಾಕ್ಕೆ ಪ್ರಶಸ್ತಿ ನೀಡಿರುವುದು ಇಂಥಹಾ ಇನ್ನೂ ಹಲವು ಸಿನಿಮಾಗಳನ್ನು ಮಾಡಲು, ಪ್ರಯೋಗಗಳನ್ನು ಮಾಡಲು ಸ್ಪೂರ್ತಿ ನೀಡಿದೆ. ದಿಲ್ ರಾಜು ಸೇರಿದಂತೆ ಈ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿರುವ ಎಲ್ಲರಿಗೂ ನನ್ನ ಧನ್ಯವಾದಗಳು ಎಂದರು. ‘ಗರ್ಲ್​​ಫ್ರೆಂಡ್’ ಸಿನಿಮಾದ ನಿರ್ದೇಶಕ ರಾಹುಲ್ ರವೀಂದ್ರನ್, ಸಹ ನಟ ದೀಕ್ಷಿತ್, ನಿರ್ಮಾಪಕರಾದ ವಿದ್ಯಾ ಮತ್ತು ಧೀರಜ್ ಇನ್ನೂ ಹಲವರಿಗೆ ಧನ್ಯವಾದ ಹೇಳಿದರು ರಶ್ಮಿಕಾ.

ಇದನ್ನೂ ಓದಿ:ಮದುವೆ ಮುಗಿಸಿ ಕೆಲವೇ ದಿನಗಳಲ್ಲಿ ಕೆಲಸಕ್ಕೆ ಮರಳಿದ ರಶ್ಮಿಕಾ ಮಂದಣ್ಣ

ಬಳಿಕ ತುಸು ಭಾವುಕರಾದ ನಟಿ ರಶ್ಮಿಕಾ, ‘ನಾನು ಕೆಲವು ವರ್ಷಗಳ ಹಿಂದೆ ಮಗಳಾಗಿ ಬಂದಿದ್ದೆ, ಈಗ ಸೊಸೆಯಾಗಿ ಎದುರಿಗೆ ನಿಂತಿದ್ದೀನಿ, ಆ ಬಗ್ಗೆ ನನಗೆ ಹೆಮ್ಮೆಯಿದೆ, ನನ್ನನ್ನು ಸ್ವೀಕರಿಸಿದ್ದಕ್ಕೆ ಬಹಳ ಧನ್ಯವಾದಗಳು. ನನಗೆ ಈಗ ಇರುವ ಆಸೆಯೆಂದರೆ ನನ್ನ ಕುಟುಂಬಕ್ಕೆ ಇದೇ ಪ್ರೀತಿ ಕೊಡಿ, ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದರು ನಟಿ ರಶ್ಮಿಕಾ ಮಂದಣ್ಣ. ರಶ್ಮಿಕಾ ಅವರು ಪ್ರಶಸ್ತಿ ಸ್ವೀಕರಿಸುವಾಗ ಅವರ ಅತ್ತೆ ಸಮಾರಂಭದಲ್ಲಿ ಹಾಜರಿದ್ದರು. ಜೋರಾಗಿ ಚಪ್ಪಾಳೆ ತಟ್ಟುತ್ತಾ ಸೊಸೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ: ಈ ಬಾರಿ ದಾಖಲೆ ಫಲಿತಾಂಶ
ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ: ಈ ಬಾರಿ ದಾಖಲೆ ಫಲಿತಾಂಶ