AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ಗುಣಗಳಿರುವ ಗಂಡ್ಮಕ್ಳು ತಮ್ಮ ತಂದೆ-ತಾಯಿ ಹೆಮ್ಮೆ ಪಡುವಂತೆ ಮಾಡುತ್ತಾರೆ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಗಂಡುಮಕ್ಕಳು ತಮ್ಮ ಹೆತ್ತವರನ್ನು ಖುಷಿ ಪಡಿಸುವ ಮತ್ತು ಅವರ ಹೆಸರಿಗೆ ಕೀರ್ತಿ ತರುವ ಗುಣಗಳನ್ನು ಹೊಂದಿರಬೇಕು ಎಂದು ಹೇಳಿದ್ದಾರೆ. ಇಂತಹ ಗಂಡು ಮಕ್ಕಳು ತಮ್ಮ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುವುದು ಮಾತ್ರವಲ್ಲ, ಮನೆಯ ಗೌರವವನ್ನು ಕೂಡ ಹೆಚ್ಚು ಮಾಡ್ತಾರಂತೆ. ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಗನನಲ್ಲಿ ಇದನ್ನೇ ಬಯಸೋದಂತೆ. ಹಾಗಿದ್ದರೆ ಹೆತ್ತವರು ಪೋಷಕರು ಯಾವೆಲ್ಲಾ ಗುಣಗಳಿರಬೇಕು ಎಂದು ಬಯಸುತ್ತಾರೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ಗುಣಗಳಿರುವ ಗಂಡ್ಮಕ್ಳು ತಮ್ಮ ತಂದೆ-ತಾಯಿ ಹೆಮ್ಮೆ ಪಡುವಂತೆ ಮಾಡುತ್ತಾರೆ
ಸಾಂದರ್ಭಿಕ ಚಿತ್ರ Image Credit source: Pexels
ಮಾಲಾಶ್ರೀ ಅಂಚನ್​
|

Updated on: Nov 19, 2026 | 5:02 PM

Share

ಚಾಣಕ್ಯರ  ಪ್ರಕಾರ, ಮಗನ (son) ಅಭ್ಯಾಸಗಳು ಮತ್ತು ನಡವಳಿಕೆಯು ಇಡೀ ಕುಟುಂಬದ ಮೇಲೆ ನೇರ ಪರಿಣಾಮ ಬೀರುತ್ತದೆ. ಅತ್ಯುತ್ತಮ ನೈತಿಕತೆ, ತಿಳುವಳಿಕೆ ಮತ್ತು ಸದ್ಗುಣಶೀಲ ನಡವಳಿಕೆಯನ್ನು ಹೊಂದಿರುವ ಮಗ ತನ್ನ ಜೀವನದಲ್ಲಿ ಪ್ರಗತಿ ಸಾಧಿಸುವುದಲ್ಲದೆ, ಇಡೀ ಕುಟುಂಬದ ಗೌರವ ಮತ್ತು ಗೌರವವನ್ನು ಹೆಚ್ಚಿಸುತ್ತಾನೆ. ಇದಕ್ಕೆ ವಿರುದ್ಧವಾಗಿ, ಕೆಟ್ಟ ಅಭ್ಯಾಸಗಳು ಮತ್ತು ಅನುಚಿತ ನಡವಳಿಕೆಯು ಕುಟುಂಬಕ್ಕೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಪ್ರತಿಯೊಬ್ಬ ಪೋಷಕರು ತಮ್ಮ ಮಗ ಕುಟುಂಬಕ್ಕೆ ಕೀರ್ತಿ ತರುವ ವ್ಯಕ್ತಿಯಾಗಬೇಕೆಂದು ಬಯಸುತ್ತಾರೆ. ಆದರೆ ಒಳ್ಳೆಯ ಮಗನಿಗೆ ಯಾವ ಗುಣಗಳು ಇರಬೇಕು ಎಂದು ನಿಮಗೆ ತಿಳಿದಿದೆಯೇ? ಚಾಣಕ್ಯರ ಪ್ರಕಾರ ಆದರ್ಶ ಮಗನಿಗೆ  ಯಾವ ಗುಣಗಳು ಇರಲೇಬೇಕು ಎಂಬುದನ್ನು ನೋಡೋಣ ಬನ್ನಿ.

ಇಡೀ ಕುಟುಂಬಕ್ಕೆ ಕೀರ್ತಿ ತರುವ ಯಾವ ಗುಣಗಳು ಮಗನಿಗಿರುತ್ತವೆ?

ಪೋಷಕರು ಮತ್ತು ಹಿರಿಯರನ್ನು ಯಾವಾಗಲೂ ಗೌರವಿಸುವ ಗುಣ:

ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಹೆತ್ತವರನ್ನು ಮತ್ತು ಹಿರಿಯರನ್ನು ಯಾವಾಗಲೂ ಗೌರವಿಸಬೇಕು. ಉತ್ತಮ ಮೌಲ್ಯಗಳನ್ನು ಹೊಂದಿರುವ ಮಗ ಬೆಳೆದ ನಂತರವೂ ಅವರನ್ನು ಗೌರವಿಸಲು ಎಂದಿಗೂ ಮರೆಯುವುದಿಲ್ಲ. ಹೆತ್ತವರನ್ನು ಕಡೆಗಣಿಸುವುದು ಕೂಡ ಇಲ್ಲ. ಮುಖ್ಯವಾಗಿ ಅಂತಹ ಮಕ್ಕಳು ಹೆತ್ತವರ ಭಾವನೆಗಳಿಗೆ ಬೆಲೆ ಕೊಡುತ್ತಾನೆ. ಮುಖ್ಯವಾಗಿ ಇಂತಹ ಗಂಡು ಮಕ್ಕಳು ಎಲ್ಲರನ್ನೂ ಗೌರವದಿಂದ ನಡೆಸಿಕೊಳ್ಳುವ ಮೂಲಕ ಹೆತ್ತವರು ಹೆಮ್ಮೆ ಪಡುವಂತೆ ಬಾಳುತ್ತಾರೆ.

ಜವಾಬ್ದಾರಿಗಳನ್ನು ನಿಭಾಯಿಸುವ ಗುಣ:

ಚಾಣಕ್ಯರ ಪ್ರಕಾರ,  ಒಬ್ಬ ಒಳ್ಳೆಯ ಮಗನು ಕುಟುಂಬದ ಬಗ್ಗೆ ತನ್ನ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ಅವುಗಳನ್ನು ಪೂರೈಸಲು ಪ್ರಯತ್ನಿಸುತ್ತಾರೆ. ಬೇಜವಾಬ್ದಾರಿಯನ್ನು ತೋರದೆ ಕುಟುಂಬವನ್ನು ಉತ್ತಮ ರೀತಿಯಲ್ಲಿ ನಿಭಾಯಿಸುತ್ತಾ ಜವಾಬ್ದಾರಿಯಿಂದ ನಡೆದುಕೊಳ್ಳುವ ಗುಣ ತಮ್ಮ ಮಗನಲ್ಲಿರಬೇಕು ಎಂದು ಪ್ರತಿಯೊಬ್ಬ ಪೋಷಕರು ಸಹ ಬಯಸುತ್ತಾರೆ. ಇಂತಹ ಜವಾಬ್ದಾರಿಯುತ ಮಗ ಹೆತ್ತವರನ್ನು ಹೆಮ್ಮೆ ಪಡುವಂತೆ ಮಾಡುವಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ ಚಾಣಕ್ಯ.

ಇದನ್ನೂ ಓದಿ: ಅತ್ತೆ-ಸೊಸೆ ಹೀಗಿದ್ದರೆ ಮನೆಯಲ್ಲಿ ಯಾವುದೇ ಜಗಳಗಳು ನಡೆಯೋಲ್ಲ ಎಂದಿದ್ದಾರೆ ಚಾಣಕ್ಯ

ಕೆಟ್ಟ ಸಹವಾಸದಿಂದ ದೂರವಿರುವ ಗುಣ:

ನಾವು ಸಹವಾಸ ಮಾಡುವವರು ಸಹ ನಮ್ಮ ಆಲೋಚನೆಗಳು ಮತ್ತು ಅಭ್ಯಾಸಗಳ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲೂ ಗಂಡು ಮಕ್ಕಳು ಕೆಟ್ಟ ಚಟಗಳಿಗೆ ಆಕರ್ಷಿತರಾಗುವ ಸಾಧ್ಯತೆ ತುಸು ಹೆಚ್ಚೇ ಇರುತ್ತದೆ. ಇದೇ ಕಾರಣಕ್ಕೆ ಗಂಡು ಹೆತ್ತವರು ಯಾವುದೇ ಕಾರಣಕ್ಕೂ ನಮ್ಮ ಮಗನಿಗೆ ಕೆಟ್ಟ ಚಟ, ಕೆಟ್ಟವರ ಸಹವಾಸ ಎರಡೂ ಇರಲೇಬಾರದು ಎಂದು ಬಯಸುತ್ತಾರೆ. ಕೆಟ್ಟವರ ಸಹವಾಸದಲ್ಲಿದ್ದರೆ, ಆ ಯುವಕನ ಉತ್ತಮ ಭವಿಷ್ಯವೂ ಹಾಳಾಗುತ್ತದೆ, ಆತನಿಂದ ಹೆತ್ತವರು ಮತ್ತು ಕುಟುಂಬದ ಮರ್ಯಾದೆಯೂ ಹಾಳಾಗುತ್ತದೆ. ಅದೇ ಕೆಟ್ಟವರ ಸಹವಾಸದಿಂದ ದೂರವಿದ್ದು, ಸಭ್ಯಸ್ತನಾಗಿರುವ ಮಗ ಸಮಾಜದಲ್ಲಿ ಗೌರವಯುತವಾಗಿ ಬಾಳ್ವೆ ನಡೆಸುತ್ತಾನೆ. ಜೊತೆಗೆ ತಂದೆ ತಾಯಿಯನ್ನೂ ಹೆಮ್ಮೆ ಪಡುವಂತೆ ಮಾಡುತ್ತಾನೆ.

ಬುದ್ಧಿವಂತಿಕೆ:

ಯಾವುದೇ ವ್ಯಕ್ತಿಯ ಜೀವನದಲ್ಲಿ ಪ್ರಗತಿಗೆ ಬುದ್ಧಿವಂತಿಕೆಯೂ ಅತ್ಯಗತ್ಯ. ಬುದ್ಧಿವಂತ ಮಕ್ಕಳಿರುವ ಪೋಷಕರು ತಮ್ಮ ಜೀವನದುದ್ದಕ್ಕೂ ಸಂತೋಷ ಮತ್ತು ಶಾಂತಿಯನ್ನು ಅನುಭವಿಸುತ್ತಾರೆ. ತಮ್ಮ ಮಕ್ಕಳು ಸಹ ಬುದ್ಧಿವಂತನಾಗಿರಬೇಕು ಎಂದು ಬಯಸುತ್ತಾರೆ. ಜೊತೆಗೆ ಯಾವುದೇ ದುರಹಂಕಾರವಿರದೆ ಉತ್ತಮ ನಡವಳಿಕೆ, ಸಂಸ್ಕಾಯ, ವಿನಯತೆ, ಸಹಾಯ ಮನೋಭಾವ ಹೊಂದಿರುವ ಮಗನು ಸಹ ಹೆತ್ತವರನ್ನು ಹೆಮ್ಮೆ ಪಡುವಂತೆ ಮಾಡುತ್ತಾನೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ
ಆರತಕ್ಷತೆ ದಿನವೇ ಮದುವೆಗೆ ನಿರಾಕರಿಸಿ ಮಾತ್ರೆ ನುಂಗಿದ ವರ; ಮುಂದೇನಾಯ್ತು
ಆರತಕ್ಷತೆ ದಿನವೇ ಮದುವೆಗೆ ನಿರಾಕರಿಸಿ ಮಾತ್ರೆ ನುಂಗಿದ ವರ; ಮುಂದೇನಾಯ್ತು
ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು
ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು