AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲಿನಿಂದ ಬಿದ್ದು ಬಿಜೆಪಿ MLC ಶಶೀಲ್ ನಮೋಶಿ ಆಪ್ತ ಸಹಾಯಕ ಸಾವು: ಸಾವಿನ ಸುತ್ತ ಅನುಮಾನಗಳ ಹುತ್ತ

ಇತ್ತೀಚೆಗೆ ನಡೆದ ಕಲಬುರಗಿ ವಿಭಾಗದ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಶಶೀಲ್ ಜಿ. ನಮೋಶಿ ಭರ್ಜರಿ ಜಯ ಸಾಧಿಸಿದ್ದಾರೆ. 3,296 ಮತಗಳ ಅಂತರದಿಂದ ಗೆಲ್ಲುವ ಮೂಲಕ ಅವರು 5ನೇ ಬಾರಿಗೆ ಮೇಲ್ಮನೆ ಪ್ರವೇಶಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದು, ಮೊನ್ನೆ ಅಷ್ಟೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದ್ರೆ, ಪ್ರಮಾನವಚನ ಕಾರ್ಯಕ್ರಮ ಮುಗಿಸಿ ಬರುವಾಗ ನಮೋಶಿಯವರ ಪಿಎ ರೈಲಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ರೈಲಿನಿಂದ ಬಿದ್ದು ಬಿಜೆಪಿ MLC ಶಶೀಲ್ ನಮೋಶಿ ಆಪ್ತ ಸಹಾಯಕ ಸಾವು: ಸಾವಿನ ಸುತ್ತ ಅನುಮಾನಗಳ ಹುತ್ತ
Rajkumar
ಅಮೀನ್​ ಸಾಬ್​
| Edited By: |

Updated on: Nov 19, 2026 | 4:53 PM

Share

ಯಾದಗಿರಿ, (ನವೆಂಬರ್ 19): ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರ ಆಪ್ತ ಸಹಾಯಕ ಸಾವನ್ನಪ್ಪಿರುವ ಘಟನೆ ಯಾದಗಿರಿ ತಾಲೂಕಿನ ಮುಷ್ಟೂರ್ ಬಳಿ ನಡೆದಿದೆ. ರಾಜಕುಮಾರ(54) ಮೃತರು. ನಮೋಶಿ ಅವರ ಪ್ರಮಾಣವಚನ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿನಿಂದ ಕಲಬುರಗಿಗೆ ವಾಪಸ್ ಆಗುತ್ತಿದ್ದ ವೇಳೆ ಯಾದಗಿರಿ ತಾಲೂಕಿನ ಮುಷ್ಟೂರ್ ಬಳಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ಕಳೆದ 20 ವರ್ಷಗಳಿಂದ ನಮೋಶಿ ಅವರ ಆಪ್ತ ಸಹಾಯಕರಾಗಿದ್ದ ರಾಜಕುಮಾರ ಅವರು ಮೊನ್ನೆ ಅಷ್ಟೇ ಗೆಲುವು ಸಾಧಿಸಿರುವ ಶಶೀಲ್ ನಮೋಶಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ತೆರಳಿದ್ದು, ಕಾರ್ಯಕ್ರಮ ಮುಗಿಸಿಕೊಂಡು ಕಲಬುರಗಿಗೆ ವಾಪಸ್ ಆಗುತ್ತಿದ್ದ ವೇಳೆ ಯಾದಗಿರಿ ಬಳಿ ರೈಲಿನಿಂದ ಬಿದ್ದಿದ್ದಾರೆ. ಆಕಸ್ಮಿಕವಾಗಿ ಬಿದ್ದಿದ್ದಾರೋ ಅಥವಾ ತಾವೇ ರೈಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎನ್ನುವುದು ಇನ್ನೂ ನಿಖರ ಮಾಹಿತಿ ತಿಳಿದುಬಂದಿಲ್ಲ.

ಹೀಗಾಗಿ ಈ ಸಾವಿನ ಸುತ್ತ ಅನುಮಾನಗಳು ಉದ್ಭವಿಸಿವೆ. ಇನ್ನು ಈ ಬಗ್ಗೆ ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.

ಇದನ್ನೂ ಓದಿ: ಗೃಹ ಪ್ರವೇಶದ ಸಂಭ್ರಮ ಮಾಸುವ ಮುನ್ನವೇ ಕುಟುಂಬಕ್ಕೆ ಆಘಾತ: ಆನೆ ದಾಳಿಗೆ ರೈತ ಬಲಿ; ರಸ್ತೆ ತಡೆದು ಪ್ರತಿಭಟನೆ

ಕಲಬುರಗಿ ವಿಭಾಗದ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಗೆದ್ದು 5ನೇ ಬಾರಿಗೆ ಮೇಲ್ಮನೆ ಪ್ರವೇಶಿಸಿದ್ದು, ಸೋಮವಾರ (ನವೆಂಬರ್ 16) ಪ್ರಮಾಣ ವಚನ ಸ್ವೀಕರಿಸಿದ್ದರು. ಇನ್ನು ಈ ಪ್ರಮಾಣವಚನ ಕಾರ್ಯಕ್ರಮಕ್ಕೆ ಕಲಬುರಗಿಯಿಂದ ಮೃತ ರಾಜಕುಮಾರ ಸೇರಿದಂತೆ ನಮೋಶಿ ಅವರ ಬೆಂಬಲಿಗರು ಸಹ ಹೋಗಿದ್ದರು. ಆದ್ರೆ, ಕಾರ್ಯಕ್ರಮ ಮುಗಿಸಿ ಎಲ್ಲರೂ ಒಟ್ಟಿಗೆ ಕಲಬುರಗಿಗೆ ವಾಪಸ್ ಆಗುವ ವೇಳೆ ದುರ್ಘಟನೆ ಸಂಭವಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಮೀನ್​ ಸಾಬ್​
ಅಮೀನ್​ ಸಾಬ್​

ಅಮೀನ್​ ಸಾಬ್​ ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದಾರೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿಸಿದ್ದಾರೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಹವ್ಯಾಸ ಕ್ರಿಕೆಟ್ ಆಡುವುದು, ಮಾನವೀಯ ಮೌಲ್ಯಗಳುಳ್ಳ ಸುದ್ದಿಗಳನ್ನ ವರದಿ ಮಾಡುವುದು.

Read More
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ
ಆರತಕ್ಷತೆ ದಿನವೇ ಮದುವೆಗೆ ನಿರಾಕರಿಸಿ ಮಾತ್ರೆ ನುಂಗಿದ ವರ; ಮುಂದೇನಾಯ್ತು
ಆರತಕ್ಷತೆ ದಿನವೇ ಮದುವೆಗೆ ನಿರಾಕರಿಸಿ ಮಾತ್ರೆ ನುಂಗಿದ ವರ; ಮುಂದೇನಾಯ್ತು
ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು
ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು