ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.
ಬಸ್ ಸೌಲಭ್ಯವಿಲ್ಲದೇ ಶಾಲೆಗೆ ಹೋಗಲು ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಯಾದಗಿರಿ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್ ಸೌಲಭ್ಯದ ಕೊರತೆಯಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಅಪಾಯಕಾರಿ ಖಾಸಗಿ ಗೂಡ್ಸ್ ಮತ್ತು ಟಂಟಂ ವಾಹನಗಳಲ್ಲಿ ಪ್ರಯಾಣಿಸುವ ಅನಿವಾರ್ಯತೆ ಉಂಟಾಗಿದೆ. ಸೈದಾಪುರ ಸುತ್ತಮುತ್ತಲ 20ಕ್ಕೂ ಹೆಚ್ಚು ಹಳ್ಳಿಗಳ ಮಕ್ಕಳು ಜೀವವನ್ನು ಪಣಕ್ಕಿಟ್ಟು ಶಿಕ್ಷಣಕ್ಕಾಗಿ ಪ್ರತಿದಿನ ಸಂಚರಿಸುತ್ತಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
- Ameen Sab
- Updated on: Sep 28, 2026
- 10:36 pm
ಭೀಮಾ ನದಿ ಸೇರುತ್ತಿದೆ ವಿಷಕಾರಿ ನೀರು, ತ್ಯಾಜ್ಯ: ಜನ-ಜಾನುವಾರುಗಳ ಜೀವಕ್ಕೇ ಕುತ್ತು
ಯಾದಗಿರಿಯ ಕಡೇಚೂರ್-ಬಾಡಿಯಾಳ್ ಕೈಗಾರಿಕಾ ಪ್ರದೇಶದಿಂದ ಹೊರಬರುವ ಕೆಮಿಕಲ್ ಮಿಶ್ರಿತ ತ್ಯಾಜ್ಯ ನೀರು ಚರಂಡಿ ಮೂಲಕ ಹಳ್ಳ ಸೇರಿ ಭೀಮಾ ನದಿಗೆ ಸೇರುತ್ತಿದೆ ಎಂಬ ಆರೋಪ ಕೇಳಿಬಂದಿದೆ. 50ಕ್ಕೂ ಅಧಿಕ ಕೆಮಿಕಲ್ ಕಾರ್ಖಾನೆಗಳಿರುವ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು, ಜನ-ಜಾನುವಾರು ಹಾಗೂ ಜಲಚರಗಳ ಸುರಕ್ಷತೆಗಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
- Ameen Sab
- Updated on: Sep 28, 2026
- 8:14 am
PSI ಹುದ್ದೆ ಕೊಡಿಸುವುದಾಗಿ 60 ಲಕ್ಷ ವಂಚನೆ: ಬೆಂಗಳೂರು ಮೂಲದ 8 ಜನರ ವಿರುದ್ಧ FIR ದಾಖಲು
ಯಾದಗಿರಿಯ ಕೆಂಭಾವಿಯಲ್ಲಿ ಪಿಎಸ್‌ಐ ಹುದ್ದೆ ಕೊಡಿಸುವುದಾಗಿ 60 ಲಕ್ಷ ರೂ. ವಂಚನೆ ಆರೋಪದಡಿ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪರಿಚಿತ ವ್ಯಕ್ತಿಯೊಬ್ಬ ಪಿಎಸ್‌ಐ ಹುದ್ದೆ ಕೊಡಿಸುವ ಆಮಿಷವೊಡ್ಡಿ ಹಂತ ಹಂತವಾಗಿ 60 ಲಕ್ಷ ರೂ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಸದ್ಯ ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Ameen Sab
- Updated on: Sep 21, 2026
- 8:22 pm
ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ರೈಲ್ವೆ ಪೊಲೀಸರು ಸೇರಿ 6 ಜನರ ವಿರುದ್ಧ ಕೇಸ್
ಯಾದಗಿರಿಯ ರೈಲ್ವೆ ಸ್ಟೇಷನ್ ಏರಿಯಾದಲ್ಲಿ 22 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ರೈಲ್ವೆ ಪೊಲೀಸರು ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಲ್ಲಿಕಾರ್ಜುನ ಮತ್ತು ಮಹೇಶ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿದಿದೆ.
- Ameen Sab
- Updated on: Sep 18, 2026
- 11:01 pm
ಸುಪ್ರಸಿದ್ಧ ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಐತಿಹಾಸಿಕ ಗಾಣಗಾಪುರ ದತ್ತಾತ್ರೇಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದತ್ತಾತ್ರೇಯ ದೇವರ ದರ್ಶನ ಪಡೆದ ಮುಖ್ಯಮಂತ್ರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಹಲವು ಗಣ್ಯರು ಸಾಥ್ ನೀಡಿದ್ದರು.
- Ameen Sab
- Updated on: Sep 17, 2026
- 2:02 pm
ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ
ಯಾದಗಿರಿಯ ಗುರುಸಣಗಿ ಸಿದ್ದಲಿಂಗೇಶ್ವರ ದೇವಸ್ಥಾನದ ಜಾತ್ರೆ ವೇಳೆ ದಲಿತ ಕುಟುಂಬಗಳ ಮೇಲೆ ಸವರ್ಣೀಯರಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಸಣ್ಣ ವಿಚಾರಕ್ಕೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿ ಬಳಿಕ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಸದ್ಯ ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರು ಜನರನ್ನು ಬಂಧಿಸಿಲಾಗಿದೆ.
- Ameen Sab
- Updated on: Sep 14, 2026
- 3:59 pm
ಯಾದಗಿರಿ: ನವಿಲುಗಳನ್ನ ಬೇಟೆಯಾಡಿದ್ದ 7 ಜನರ ಬಂಧನ; 6 ನಾಡ ಬಂದೂಕು ವಶಕ್ಕೆ
ಯಾದಗಿರಿ ತಾಲೂಕಿನ ಮೋಟನಹಳ್ಳಿ ಬಳಿ ಎರಡು ನವಿಲುಗಳನ್ನು ಬೇಟೆಯಾಡಿದ 7 ಆರೋಪಿಗಳನ್ನು ಪ್ರಾದೇಶಿಕ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಆರೋಪಿಗಳಿಂದ 6 ನಾಡ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
- Ameen Sab
- Updated on: Sep 13, 2026
- 3:15 pm
ರಾಯಚೂರು ಆಯ್ತು ಈಗ ಯಾದಗಿರಿ ಸರದಿ: 300ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಯಲ್ಲಿ ಇಬ್ಬರೇ ಖಾಯಂ ಶಿಕ್ಷಕರು!
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರ ಸರ್ಕಾರಿ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಬ್ಬರೇ ಖಾಯಂ ಶಿಕ್ಷಕರಿದ್ದಾರೆ. ವಿಷಯವಾರು ಶಿಕ್ಷಕರ ಕೊರತೆಯಿಂದ ಅತಿಥಿ ಶಿಕ್ಷಕರನ್ನೇ ಅವಲಂಬಿಸಿದ್ದು, ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯ ಬಗ್ಗೆಯೇ ಸರ್ಕಾರ ಅಸಡ್ಡೆ ತೋರುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.
- Ameen Sab
- Updated on: Sep 11, 2026
- 7:02 am
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಅರ್ಜಿ ಹಾಕಲಾಗದೆ ಆಕಾಂಕ್ಷಿಗಳ ಪರದಾಟ
ಕರ್ನಾಟಕದಲ್ಲಿ 15,000 ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಯಾದಗಿರಿಯಲ್ಲಿ ತೀವ್ರ ಸರ್ವರ್ ಸಮಸ್ಯೆ ಎದುರಿಸುತ್ತಿದ್ದಾರೆ. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಸಮೀಪಿಸುತ್ತಿದ್ದು, ಹಗಲು, ರಾತ್ರಿ ಸೈಬರ್ ಸೆಂಟರ್‌ಗಳ ಮುಂದೆ ಕಾದು ಕುಳಿತಿದ್ದಾರೆ. ತಾಂತ್ರಿಕ ಅಡಚಣೆಯಿಂದ ಸಾವಿರಾರು ಮಂದಿಯ ಭವಿಷ್ಯ ಅತಂತ್ರವಾಗಿದೆ.
- Ameen Sab
- Updated on: Sep 4, 2026
- 12:54 pm
ಉಚಿತ ಬಸ್ ಇದ್ದರೂ ಮರೀಚಿಕೆಯಾದ ಸೇವೆ: ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಯಾದಗಿರಿಯ ಈ ಗ್ರಾಮಕ್ಕೆ ಬರಲೇ ಇಲ್ಲ ಬಸ್
ಯಾದಗಿರಿ ಜಿಲ್ಲೆಯ ಮಲಕಪ್ಪನಹಳ್ಳಿ ಗ್ರಾಮಕ್ಕೆ ಸ್ವಾತಂತ್ರ್ಯ ಬಂದು 80 ವರ್ಷ ಕಳೆದರೂ ಇನ್ನೂ ಬಸ್ ವ್ಯವಸ್ಥೆ ಇಲ್ಲ. ಶಾಲೆ, ಕಾಲೇಜು, ಆಸ್ಪತ್ರೆ ಹಾಗೂ ಕೆಲಸ ಕಾರ್ಯಗಳಿಗಾಗಿ ಗ್ರಾಮಸ್ಥರು, ಅದರಲ್ಲೂ ವಿದ್ಯಾರ್ಥಿಗಳು ಖಾಸಗಿ ವಾಹನಗಳನ್ನೇ ಅವಲಂಬಿಸಿದ್ದು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಉಚಿತ ಬಸ್ ಸೌಲಭ್ಯವಿದ್ದರೂ ಬಸ್ ಇಲ್ಲದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
- Ameen Sab
- Updated on: Sep 2, 2026
- 5:24 pm
RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಇಬ್ಬರು ಸರ್ಕಾರಿ ಶಿಕ್ಷಕರು ಅಮಾನತು: 9 ತಿಂಗಳ ಬಳಿಕ DDPI ಆಕ್ಷನ್
ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರನ್ನು RSS ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ 9 ತಿಂಗಳ ನಂತರ ಅಮಾನತುಗೊಳಿಸಲಾಗಿದೆ. ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ದೂರಿನ ಆಧಾರದ ಮೇಲೆ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು. ಇದರ ಅನ್ವಯ ಯಾದಗಿರಿ ಡಿಡಿಪಿಐ ಶಿಕ್ಷಕರಾದ ಗುರುರಾಜ್ ಜೋಶಿ ಮತ್ತು ಅಣ್ಣಾಸಾಹೇಬ್ ದೇಶಮುಖ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
- Ameen Sab
- Updated on: Aug 27, 2026
- 9:13 am
ಗಗನಕ್ಕೇರಿದ ಈರುಳ್ಳಿ ದರ: ಬೆಲೆ ಏರಿಕೆಯ ನಡುವೆಯೂ ಸಿಗದ ರೈತರಿಗೆ ಲಾಭ
ರಾಜ್ಯದಲ್ಲಿ ಈರುಳ್ಳಿ ಬೆಲೆ ₹70-80ಕ್ಕೆ ಏರಿಕೆಯಾಗಿದ್ದು, ಶೀಘ್ರವೇ ₹100 ತಲುಪುವ ಸಾಧ್ಯತೆಯಿದೆ. ಯಾದಗಿರಿಯಲ್ಲಿ ಮುಂಗಾರು ಮಳೆ ವೈಫಲ್ಯದಿಂದ ಈರುಳ್ಳಿ ಬೆಳೆ ಸಂಪೂರ್ಣ ಕುಸಿದಿದೆ. ಗ್ರಾಹಕರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದರೆ, ರೈತರಿಗೆ ಬೆಳೆ ಇಲ್ಲದ ಕಾರಣ ಲಾಭ ಸಿಗದೆ ಸಂಕಷ್ಟದಲ್ಲಿದ್ದಾರೆ. ದಲ್ಲಾಳಿಗಳು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
- Ameen Sab
- Updated on: Aug 27, 2026
- 6:13 am