AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಕ್ಸೋ ಕೇಸ್​​:ತಲೆಮರೆಸಿಕೊಂಡಿರುವ ಮಲ್ಲಿಕಾರ್ಜುನ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್

ಪೋಕ್ಸೋ ಕೇಸ್​​:ತಲೆಮರೆಸಿಕೊಂಡಿರುವ ಮಲ್ಲಿಕಾರ್ಜುನ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್

ಅಮೀನ್​ ಸಾಬ್​
| Edited By: |

Updated on: Feb 26, 2026 | 3:51 PM

Share

ಮಲ್ಲಿಕಾರ್ಜುನ ಮುತ್ಯಾ.. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಠ ಮಾಡ್ಕೊಂಡಿರೋ ಮುತ್ಯಾ ಉತ್ತರ ಕರ್ನಾಟಕ ಭಾಗದಲ್ಲಿ ಹೆಸರುವಾಸಿ. ಯಾದಗಿರಿ, ಕಲಬರುಗಿ, ರಾಯಚೂರು, ವಿಜಯಪುರ, ಪಕ್ಕದ ತೆಲಂಗಾಣದ ಎರಡ್ಮೂರು ಜಿಲ್ಲೆಯಲ್ಲೂ ಈ ಸ್ವಯಂಘೋಷಿತ ದೇವಮಾನವ ಫುಲ್ ಫೇಮಸ್. ಮುತ್ಯಾನ ಅದೆಷ್ಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ. ಆದ್ರೆ, ಇದೊಂದು ವಿಡಿಯೋ ಈಗ ಮುತ್ಯಾನಿಗೆ ಕಂಟಕ ತಂದೊಡ್ಡಿದೆ. ಸೋಷಿಯಲ್ ಮೀಡಿಯಾದಿಂದಲೇ ಖ್ಯಾತಿ ಗಳಿಸಿದ್ದ ಮುತ್ಯಾನಿಗೆ ಸೋಷಿಯಲ್ ಮೀಡಿಯಾನೇ ಮುಳುವಾಗಿದೆ. ಬಾಲಕಿ ಜೊತೆ ಅನುಚಿತ ವರ್ತಿಸಿರೋ ಇದೇ ವಿಡಿಯೋ ವೈರಲ್ ಆಗ್ತಿದ್ದಂತೆ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.

ಯಾದಗಿರಿ, (ಫೆಬ್ರವರಿ 26): ಮಲ್ಲಿಕಾರ್ಜುನ ಮುತ್ಯಾ (Mallikarjun Mutya ). ಯಾದಗಿರಿ (Yadagir) ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಠ ಮಾಡ್ಕೊಂಡಿರೋ ಮುತ್ಯಾ ಉತ್ತರ ಕರ್ನಾಟಕ ಭಾಗದಲ್ಲಿ ಹೆಸರುವಾಸಿ. ಯಾದಗಿರಿ, ಕಲಬರುಗಿ, ರಾಯಚೂರು, ವಿಜಯಪುರ, ಪಕ್ಕದ ತೆಲಂಗಾಣದ ಎರಡ್ಮೂರು ಜಿಲ್ಲೆಯಲ್ಲೂ ಈ ಸ್ವಯಂಘೋಷಿತ ದೇವಮಾನವ ಫುಲ್ ಫೇಮಸ್. ಮುತ್ಯಾನ ಅದೆಷ್ಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ. ಆದ್ರೆ, ಇದೊಂದು ವಿಡಿಯೋ ಈಗ ಮುತ್ಯಾನಿಗೆ ಕಂಟಕ ತಂದೊಡ್ಡಿದೆ. ಸೋಷಿಯಲ್ ಮೀಡಿಯಾದಿಂದಲೇ ಖ್ಯಾತಿ ಗಳಿಸಿದ್ದ ಮುತ್ಯಾನಿಗೆ ಸೋಷಿಯಲ್ ಮೀಡಿಯಾನೇ ಮುಳುವಾಗಿದೆ. ಬಾಲಕಿ ಜೊತೆ ಅನುಚಿತ ವರ್ತಿಸಿರೋ ಇದೇ ವಿಡಿಯೋ ವೈರಲ್ ಆಗ್ತಿದ್ದಂತೆ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.

ಮಕ್ಕಳ ಹಕ್ಕುಗಳ ಆಯೋಗ ದೂರು ದಾಖಲಿಸಿಕೊಂಡು ಯಾದಗಿರಿ ಎಸ್‌ಪಿಗೆ ಸೂಚನೆ ನೀಡಿದೆ. ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಕೂಡಲೇ ಅಲರ್ಟ್ ಆದ ಪೊಲೀಸರು, ಪೋಕ್ಸೋ ಕೇಸ್ (POCSO case) ದಾಖಲಿಸಿಕೊಂಡು, ಸ್ಥಳ ಮಹಜರು ನಡೆಸಿದ್ದಾರೆ. ಆದ್ರೆ, ಕೇಸ್ ದಾಖಲಾಗುತ್ತಿದ್ದಂತೆಯೇ ಮುತ್ಯಾ ಪರಾರಿಯಾಗಿದ್ದಾನೆ. ಇನ್ನು ಮಠದತ್ತ ಭಕ್ತರು ದೌಡಾಯಿಸುತ್ತಿದ್ದು, ಮುತ್ಯನ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಅಜ್ಞಾತ ಸ್ಥಳದಿಂದಲೇ ಮುತ್ಯಾ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ತಾನು ಎಲ್ಲಿಗೆ ಹೋಗಿದ್ದೇನೆ ಎನ್ನುವುದನ್ನು ತಿಳಿಸಿದ್ದಾರೆ. ಹಾಗಾದ್ರೆ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

ಇದನ್ನೂ ಓದಿ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು

Follow Us