AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು

ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿದೆ. ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯಾದಗಿರಿ ಎಸ್‌ಪಿಗೆ ಪತ್ರ ಬರೆದಿರುವ ಆಯೋಗ, ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದೆ.

ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು
ಮಲ್ಲಿಕಾರ್ಜುನ ಮುತ್ಯಾImage Credit source: Tv9 Kannada
ಅಮೀನ್​ ಸಾಬ್​
| Edited By: |

Updated on:Feb 25, 2026 | 6:33 PM

Share

ಯಾದಗಿರಿ, ಫೆಬ್ರವರಿ 25: ಅಪ್ರಾಪ್ತ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಹಿನ್ನೆಲೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದೆ. ಪ್ರಕರಣ ದಾಖಲು ಮಾಡಿಕೊಂಡ ಬಳಿಕ ಯಾದಗಿರಿ ಎಸ್​ಪಿಗೆ ಪತ್ರ ಬರೆದಿರುವ ಆಯೋಗ, ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೋರಿದೆ. ಪೊಲೀಸ್​​ ಇಲಾಖೆ ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳೋದಾಗಿ ಆಯೊಗದ ಅಧ್ಯಕ್ಷ ಶಶಿಧರ್ ಕೋಸುಂಬೆ ತಿಳಿಸಿದ್ದಾರೆ.

ವೈರಲ್​ ವಿಡಿಯೋದಲ್ಲಿ ಏನಿದೆ?

ಅಪ್ರಾಪ್ತ ಬಾಲಕಿಯೋರ್ವಳ ಕುತ್ತಿಗೆ ಹಿಡಿದು ಎತ್ತಿ ಮಂಚದ ಮೇಲೆ ನಿಲ್ಲಿಸುವುದು ಸೇರಿದಂತೆ ಆಕೆಗೆ ಚಿವುಟುವದರ ಜೊತೆಗೆ ಅಸಭ್ಯವಾಗಿ ವರ್ತಿಸಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಈ ಕ್ಲಿಪ್​​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದ್ದೇ ತಡ ಮುತ್ಯಾ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಘಟನೆ ಬಗ್ಗೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಅಭಿಪ್ರಾಯಗಳು ಕೇಳಿಬಂದಿದ್ದವು. ಆ ಬೆನ್ನಲ್ಲೇ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿದೆ.

ಇದನ್ನೂ ಓದಿ: ಗಾಂಧಿ, ನೆಹರು ಬಗ್ಗೆ ವಿವಾದಾತ್ಮಕ ಭಾಷಣ; ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ಗೆ ಶಾಕ್​​ ಕೊಟ್ಟ ಖಾಕಿ

ಯಾರೀ ಮಲ್ಲಿಕಾರ್ಜುನ ಮುತ್ಯಾ?

ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ರೋಜಾ ಮಹೆಲ್ ಗ್ರಾಮದಲ್ಲಿ ವಾಸವಿರುವ 26 ವರ್ಷ ಆಸುಪಾಸಿನ ಈ ವ್ಯಕ್ತಿ ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಬಹಳ ಪ್ರಸಿದ್ಧಿ ಪಡೆದಿದ್ದಾರೆ. ಉತ್ತರ ಕರ್ನಾಟಕದ ಅನೇಕ ಭಕ್ತರು ಇವರನ್ನು ಅಪ್ಪಾಜಿ ಅಥವಾ ನಡೆದಾಡುವ ದೇವರು ಎಂದು ನಂಬಿ ಗೌರವಿಸುತ್ತಾರೆ. ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮುತ್ಯಾ, ಅಪಾರ ಅನುಯಾಯಿಗಳನ್ನು ಹೊಂದಿದ್ದಾರೆ. ಸ್ವಯಂ ಘೋಷಿತ ಈ ದೇವಮಾನವನ ವಿಡಿಯೋಗಳು ಆಗಾಗ ವೈರಲ್​​ ಆಗುತ್ತಲೇ ಇರುತ್ತವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:32 pm, Wed, 25 February 26

Follow Us
ಭಾವೈಕ್ಯತೆ ಸಾರಿದ ವಿನೋದ್ ರಾಜ್: ಮಸೀದಿಗಳಲ್ಲಿ ಹಣ್ಣು ವಿತರಣೆ: ವಿಡಿಯೋ
ಭಾವೈಕ್ಯತೆ ಸಾರಿದ ವಿನೋದ್ ರಾಜ್: ಮಸೀದಿಗಳಲ್ಲಿ ಹಣ್ಣು ವಿತರಣೆ: ವಿಡಿಯೋ
ರಾಹುಲ್ ಗಾಂಧಿಯನ್ನು ಟಪೋರಿ ಎಂದು ಕರೆದ ಕಂಗನಾ ರಣಾವತ್
ರಾಹುಲ್ ಗಾಂಧಿಯನ್ನು ಟಪೋರಿ ಎಂದು ಕರೆದ ಕಂಗನಾ ರಣಾವತ್
ಗಾಳಿ ಮಳೆಗೆ ಹಾರಿ ಹೋದ ಶಾಲಾ ಮೇಲ್ಚಾವಣಿ: ಮಕ್ಕಳು ಗ್ರೇಟ್​​ ಎಸ್ಕೇಪ್​​
ಗಾಳಿ ಮಳೆಗೆ ಹಾರಿ ಹೋದ ಶಾಲಾ ಮೇಲ್ಚಾವಣಿ: ಮಕ್ಕಳು ಗ್ರೇಟ್​​ ಎಸ್ಕೇಪ್​​
ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ
ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ
ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ
ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ
ಕೋಗಿಲು ನಿರಾಶ್ರಿತರಿಗೆ ಯುಗಾದಿ, ರಂಜಾನ್ ಗಿಫ್ಟ್: ಹಕ್ಕುಪತ್ರ ವಿತರಣೆ
ಕೋಗಿಲು ನಿರಾಶ್ರಿತರಿಗೆ ಯುಗಾದಿ, ರಂಜಾನ್ ಗಿಫ್ಟ್: ಹಕ್ಕುಪತ್ರ ವಿತರಣೆ
ಎಂಥಾ ಕಾಲ ಬಂತಪ್ಪ: ಪೊಲೀಸ್​​ ಭದ್ರತೆಯಲ್ಲಿ LPG ಸಿಲಿಂಡರ್​​ಗಳ ವಿತರಣೆ!
ಎಂಥಾ ಕಾಲ ಬಂತಪ್ಪ: ಪೊಲೀಸ್​​ ಭದ್ರತೆಯಲ್ಲಿ LPG ಸಿಲಿಂಡರ್​​ಗಳ ವಿತರಣೆ!
ಡಿಜೆ ನಿಷೇಧಿಸುವಂತೆ ಲಾಡ್ ಆಗ್ರಹ: ಆಝಾನ್ ಬ್ಯಾನ್ ಮಾಡಿ ಎಂದು ಬಿಜೆಪಿ ಶಾಸಕ!
ಡಿಜೆ ನಿಷೇಧಿಸುವಂತೆ ಲಾಡ್ ಆಗ್ರಹ: ಆಝಾನ್ ಬ್ಯಾನ್ ಮಾಡಿ ಎಂದು ಬಿಜೆಪಿ ಶಾಸಕ!
ಐಪಿಎಲ್ ಟಿಕೆಟ್ ವಂಚನೆ ನಡೆಯುತ್ತಿದೆ ಎಚ್ಚರ
ಐಪಿಎಲ್ ಟಿಕೆಟ್ ವಂಚನೆ ನಡೆಯುತ್ತಿದೆ ಎಚ್ಚರ
ಪ್ರಜ್ವಲ್ ರೇವಣ್ಣ ಪ್ರಕರಣ: ಪ್ರೀತಂ ಗೌಡ, ಶ್ರೇಯಸ್ ಪಟೇಲ್ ಆಪ್ತರಿಗೆ ರಿಲೀಫ್
ಪ್ರಜ್ವಲ್ ರೇವಣ್ಣ ಪ್ರಕರಣ: ಪ್ರೀತಂ ಗೌಡ, ಶ್ರೇಯಸ್ ಪಟೇಲ್ ಆಪ್ತರಿಗೆ ರಿಲೀಫ್