AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸಿಯಾ ಮೇಲೆ ಹಲ್ಲೆಗೆ ಮುಂದಾದ ಸೌಂದರ್ಯಾ, ತಪ್ಪು ಯಾರದ್ದು?

Bigg Boss Kannada season 13: ಬಿಗ್​​ಬಾಸ್ ಮನೆಯಲ್ಲಿ ಈಗ ‘ಸ್ನೇಹಿತರ ಸವಾಲ್’ ಸೀಸನ್ ಚಾಲ್ತಿಯಲ್ಲಿದೆ. 13ನೇ ಸೀಸನ್ ಆರಂಭ ಆದಾಗಿನಿಂದಲೂ ಬಲು ಆತ್ಮೀಯ ಗೆಳೆಯರಾಗಿದ್ದ ಗಗನ್ ಮತ್ತು ತಾಂಡವ್ ಕಳೆದ ವಾರ ಕೆಟ್ಟದಾಗಿ ಜಗಳ ಮಾಡಿಕೊಂಡರು. ಇಬ್ಬರೂ ಸಹ ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಆ ಬಳಿಕ ಅವರು ಸರಿ ಹೋಗಿದ್ದರು. ಅದೇ ಸಮಯದಲ್ಲಿ ಮತ್ತೊಂದು ಸ್ನೇಹಿತರ ಜೋಡಿ ಆಸಿಯಾ ಮತ್ತು ಸೌಂದರ್ಯಾ ನಡುವೆಯೂ ಬಿರುಕು ಮೂಡಿತ್ತು. ಅದೀಗ ಇನ್ನಷ್ಟು ದೊಡ್ಡದಾಗಿದೆ.

ಆಸಿಯಾ ಮೇಲೆ ಹಲ್ಲೆಗೆ ಮುಂದಾದ ಸೌಂದರ್ಯಾ, ತಪ್ಪು ಯಾರದ್ದು?
Bigg Boss Kannada 13
ಮಂಜುನಾಥ ಸಿ.
|

Updated on: Nov 19, 2026 | 10:40 PM

Share

ಬಿಗ್​​ಬಾಸ್ ಮನೆಯಲ್ಲಿ ಈಗ ‘ಸ್ನೇಹಿತರ ಸವಾಲ್’ ಸೀಸನ್ ಚಾಲ್ತಿಯಲ್ಲಿದೆ. 13ನೇ ಸೀಸನ್ ಆರಂಭ ಆದಾಗಿನಿಂದಲೂ ಬಲು ಆತ್ಮೀಯ ಗೆಳೆಯರಾಗಿದ್ದ ಗಗನ್ ಮತ್ತು ತಾಂಡವ್ ಕಳೆದ ವಾರ ಕೆಟ್ಟದಾಗಿ ಜಗಳ ಮಾಡಿಕೊಂಡರು. ಇಬ್ಬರೂ ಸಹ ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಆ ಬಳಿಕ ಅವರು ಸರಿ ಹೋಗಿದ್ದರು. ಅದೇ ಸಮಯದಲ್ಲಿ ಮತ್ತೊಂದು ಸ್ನೇಹಿತರ ಜೋಡಿ ಆಸಿಯಾ ಮತ್ತು ಸೌಂದರ್ಯಾ ನಡುವೆಯೂ ಬಿರುಕು ಮೂಡಿತ್ತು. ಅದೀಗ ಇನ್ನಷ್ಟು ದೊಡ್ಡದಾಗಿದೆ.

ಆಸಿಯಾ ಮತ್ತು ಸೌಂದರ್ಯಾ ಪರಸ್ಪರ ಕಳೆದ ವಾರದಿಂದಲೂ ಜಗಳ ಮಾಡಿಕೊಳ್ಳುತ್ತಲೇ ಬರುತ್ತಿದ್ದಾರೆ. ಆದರೆ ಈ ವಾರ ಆ ಜಗಳ ಇನ್ನೂ ಹೆಚ್ಚಾಗಿದೆ. ಗುರುವಾರದ ಎಪಿಸೋಡಿನಲ್ಲಂತೂ ತಾಳ್ಮೆ ಕಳೆದುಕೊಂಡ ಸೌಂದರ್ಯಾ ಬಕೆಟ್ ಹಿಡಿದುಕೊಂಡು ಆಸಿಯಾ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ‘ಹೊಡೆದು ಕೊಂದು ಬಿಡುತ್ತೇನೆ’ ಎಂದೆಲ್ಲ ಬೆದರಿಕೆಯನ್ನು ಸಹ ಸೌಂದರ್ಯಾ ಹಾಕಿದರು.

ಆಗಿದ್ದಿಷ್ಟು, ಆಸಿಯಾ, ಗಾನವಿ ಮತ್ತು ಸೌಂದರ್ಯಾ ಅವರುಗಳು ಯುವರಾಣಿಗಳಾಗಿದ್ದರು, ಮಹಾರಾಣಿ ರೇಸಿನಲ್ಲಿದ್ದರು. ಟಾಸ್ಕ್​​​ನಲ್ಲಿ ಗೆದ್ದ ಆಸಿಯಾ, ಸೌಂದರ್ಯಾ ಅವರನ್ನು ಯುವರಾಣಿ ಸ್ಥಾನದಿಂದ ಕೆಳಗಿಳಿಸಿ ಅವರನ್ನು ನಾಮಿನೇಟ್ ಮಾಡಿದರು. ಈ ವಾರದ ನಾಮಿನೇಷನ್ ನಿಯಮದ ಅನುಸಾರ ನಾಮಿನೇಟ್ ಆದವರ ಮೇಲೆ ನಾಮಿನೇಟ್ ಮಾಡಿದವರು ಸಗಣಿ ನೀರು ಸುರಿಯಬೇಕಿತ್ತು. ಆದರೆ ನಾಮಿನೇಷನ್​​ಗೆ ಕಾರಣ ಕೊಡುವ ಸಮಯದಲ್ಲಿ ಆಸಿಯಾ ಮತ್ತು ಸೌಂದರ್ಯಾ ನಡುವೆ ಬಹಳ ಜಗಳ ನಡೆಯಿತು. ಸೌಂದರ್ಯಾ ಅಂತೂ, ‘ಬಿಗ್​​ಬಾಸ್ ಒಂದು ಅವಕಾಶ ಕೊಡಿ, ನಾನು ಇವಳನ್ನು ಮಣ್ಣು ಮುಕ್ಕಿಸುತ್ತೇನೆ’ ಎಂದು ಹೇಳಿದರು.

ಇದನ್ನೂ ಓದಿ:ಇದೇ ಮೊದಲು: ಬಿಗ್​​ಬಾಸ್ ಮನೆಯಲ್ಲಿ ನಡೆಯಿತು ಮದುವೆ ನಿಶ್ಚಿತಾರ್ಥ

ಸೌಂದರ್ಯಾ, ಆಸಿಯಾ ಮಾತ್ರವಲ್ಲದೆ ಧನುಶ್ ವಿರುದ್ಧವೂ ಜಗಳ ಮಾಡಿದರು. ಧನುಶ್ ಅನ್ನು ಕಪಿ, ಮಂಗ ಎಂದೆಲ್ಲ ಕರೆದರೆ, ಧನುಶ್, ಸೌಂದರ್ಯಾ ಅನ್ನು ಪೆದ್ದುಗುಂಡಿ ಎಂದು ಕರೆದರು. ಬಳಿಕ ಆಸಿಯಾ, ಸೌಂದರ್ಯಾ ಮೇಲೆ ಸಗಣಿ ನೀರು ಸುರಿದರು, ಈ ವೇಳೆ ಆಸಿಯಾ ಮೇಲೆ ನೀರು ಬೀಳುವಂತೆ ಸೌಂದರ್ಯಾ ಕೈಗಳ ಮೂಲಕ ನೀರನ್ನು ಆಸಿಯಾ ಕಡೆ ಚಿಮ್ಮಿಸಿದರು. ಆದರೆ ನೀರು ಸುರಿಯುವಾಗ ಆಸಿಯಾರ ಕೈಯಲ್ಲಿದ್ದ ಬಜೆಟ್ ಸೌಂದರ್ಯಾ ತಲೆಗೆ ತುಸು ತಾಗಿತು.

ಸೌಂದರ್ಯಾಗೆ ಇದು ಬಹಳ ಸಿಟ್ಟು ತರಿಸಿತು. ಅಲ್ಲಿಯೇ ಇದ್ದ ಖಾಲಿ ಬಜೆಟ್ ಕೈಗೆತ್ತಿಕೊಂಡ ಸೌಂದರ್ಯಾ, ಆಸಿಯಾರ ಮೇಲೆರಗಿ ಹೋದರು. ‘ಬಾರಿಸಿಬಿಡುತ್ತೇನೆ’ ಎಂದರು. ಬಾ ಅಖಾಡಕ್ಕೆ ಎಂದು ಪಂಥಾಹ್ವಾನ ಮಾಡಿದರು. ಆಸಿಯಾ, ‘ನಾನು ಹೊಡೆದಿಲ್ಲ, ನನಗೆ ಗೊತ್ತಿಲ್ಲದಂತೆ ತಾಗಿತು’ ಎಂದರು. ಆದರೂ ಸೌಂದರ್ಯಾ ಸಿಟ್ಟು ಕಡಿಮೆ ಆಗಲಿಲ್ಲ. ಆ ಬಳಿಕವೂ ಸಹ ಆಸಿಯಾ ಪಕ್ಕ ಹೋಗಿ ಕುಣಿಯುತ್ತಾ, ಆಸಿಯಾಗೆ ಸಗಣಿ ನೀರು ಬೀಳುವಂತೆ ಮಾಡಿದರು. ಸೌಂದರ್ಯಾ ನಾಮಿನೇಟ್ ಆಗುವ ಮೂಲಕ ಈ ವಾರದ ನಾಮಿನೇಷನ್ ಟಾಸ್ಕ್ ಮುಗಿಯಿತು. ಈ ವಾರ ಜಗದೀಶ್, ಮಂಜು, ಕಿರಣ್, ಯಶಸ್, ಸೌಂದರ್ಯಾ. ನಾಮಿನೇಟ್ ಆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ