AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಮನೆಗೆ ಮಹರಾಣಿಯಾದ ಗಾನವಿಗೆ ವಿಶೇಷ ಅಧಿಕಾರ

ಆಸಿಯಾ, ಸೌಂದರ್ಯಾ ಮತ್ತು ಗಾನವಿ, ಮೂವರು ಯುವರಾಣಿಯರು ಮಹಾರಾಣಿ ಆಗಲು ಸ್ಪರ್ಧೆ ಮಾಡಬೇಕಿತ್ತು. ನಡುವೆ ಹಲವು ಬೇರೆ ಬೇರೆ ರೀತಿಯ ಟಾಸ್ಕುಗಳನ್ನು ಬಿಗ್​​ಬಾಸ್ ನೀಡಿದರು. ಆರಂಭದಿಂದಲೇ ಮನೆಯ ಸದಸ್ಯರ ಸಾಕಷ್ಟು ವಿರೋಧ ಇದ್ದರೂ ಸಹ ಅಂತಿಮವಾಗಿ ಗಾನವಿ ವಿಜೇತರಾಗಿದ್ದು ಗಾನವಿ ಈಗ ಬಿಗ್​​ಬಾಸ್ ಮನೆಯ ಮಹಾರಾಣಿ ಆಗಿದ್ದಾರೆ.

ಬಿಗ್​​ಬಾಸ್ ಮನೆಗೆ ಮಹರಾಣಿಯಾದ ಗಾನವಿಗೆ ವಿಶೇಷ ಅಧಿಕಾರ
Bigg Boss
ಮಂಜುನಾಥ ಸಿ.
|

Updated on: Nov 19, 2026 | 11:15 PM

Share

ಬಿಗ್​​ಬಾಸ್ ಮನೆಯಲ್ಲಿ ಈ ವಾರ ಆಸಕ್ತಿಕರ ಟಾಸ್ಕುಗಳಿದ್ದವು. ವಾರದ ಆರಂಭದಲ್ಲಿಯೇ ಮೂವರು ಯುವರಾಣಿಯರನ್ನು ಆಯ್ಕೆ ಮಾಡಲಾಗಿತ್ತು. ಆಸಿಯಾ, ಸೌಂದರ್ಯಾ ಮತ್ತು ಗಾನವಿ, ಮೂವರು ಯುವರಾಣಿಯರು ಮಹಾರಾಣಿ ಆಗಲು ಸ್ಪರ್ಧೆ ಮಾಡಬೇಕಿತ್ತು. ನಡುವೆ ಹಲವು ಬೇರೆ ಬೇರೆ ರೀತಿಯ ಟಾಸ್ಕುಗಳನ್ನು ಬಿಗ್​​ಬಾಸ್ ನೀಡಿದರು. ಆರಂಭದಿಂದಲೇ ಮನೆಯ ಸದಸ್ಯರ ಸಾಕಷ್ಟು ವಿರೋಧ ಇದ್ದರೂ ಸಹ ಅಂತಿಮವಾಗಿ ಗಾನವಿ ವಿಜೇತರಾಗಿದ್ದು ಗಾನವಿ ಈಗ ಬಿಗ್​​ಬಾಸ್ ಮನೆಯ ಮಹಾರಾಣಿ ಆಗಿದ್ದಾರೆ.

ಸೌಂದರ್ಯಾರನ್ನು ಆಸಿಯಾ ನಾಮಿನೇಟ್ ಮಾಡುವ ಮೂಲಕ ಅವರನ್ನು ಮಹಾರಾಣಿ ರೇಸಿನಿಂದ ಹೊರಗೆ ಹಾಕಿದರು. ಉಳಿದಿದ್ದು ಆಸಿಯಾ ಮತ್ತು ಗಾನವಿ. ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು, ಗಾನವಿಯ ಮಹಾರಾಣಿ ಅನ್ನಾಗಿಸಲು ಗಗನ್ ಮತ್ತು ಆಸಿಯಾ ಪರವಾಗಿ ಪ್ರಶಾಂತ್ ಟಾಸ್ಕ್ ಆಡಿದರು. ಮರಗಳ ದಿಮ್ಮೆಗಳನ್ನು ಹುಡುಕಿ ತಂದು ಅದನ್ನು ಜೋಡಿಸುವ ಟಾಸ್ಕ್​​ನಲ್ಲಿ ಗಗನ್, ಪ್ರಶಾಂತ್​​ಗೆ ಸಿಗಬೇಕಿದ್ದ ಮರದ ತುಂಡನ್ನು ಬಚ್ಚಿಟ್ಟರು. ಈ ಕಾರಣದಿಂದಾಗಿ ಆಸಿಯಾ ಟಾಸ್ಕ್​​ನಲ್ಲಿ ಸೋತು, ಗಾನವಿ ವಿಜೇತರಾಗಿ ಮಹಾರಾಣಿ ಆದರು. ಆಸಿಯಾ ಹಲವು ಬಾರಿ ಫೈನಲ್ ವರೆಗೆ ಬಂದು ಸೋತರು. ಈಗ ಮತ್ತೊಮ್ಮೆ ಅವರಿಗೆ ಸೋಲು ಎದುರಾಯ್ತು.

ಮಹಾರಾಣಿ ಆದ ಗಾನವಿಯನ್ನು ಮನೆ ಸದಸ್ಯರು ಹೂವನ್ನು ಚೆಲ್ಲುತ್ತಾ ಮೆರವಣಿಗೆ ಮಾಡಿ ಅವರನ್ನು ಮಹಾರಾಣಿಯ ಸಿಂಹಾಸನದ ಮೇಲೆ ಕೂರಿಸಿದರು. ಮಹಾರಾಣಿ ಪರವಾಗಿ ಆಡಿದ ಗಗನ್, ಮಹಾರಾಣಿಗೆ ಪಟ್ಟಾಭಿಷೇಕ ಮಾಡಿದರು. ಬಳಿಕ ಬಿಗ್​​ಬಾಸ್​​, ಗಾನವಿಯನ್ನು ಮನೆಯ ಕ್ಯಾಪ್ಟನ್ ಆಗಿ ಘೋಷಿಸಿದರು. ಮಹಾರಾಣಿ ಪರವಾಗಿ ಆಡಿದ ಗಗನ್​ ಅನ್ನೂ ಸಹ ಕ್ಯಾಪ್ಟನ್ ಮಾಡಿದರು. ಆ ಮೂಲಕ ಈ ವಾರ ಬಿಗ್​​ಬಾಸ್ ಮನೆಗೆ ಇಬ್ಬರು ಕ್ಯಾಪ್ಟನ್​​ಗಳಾದರು. ಇಬ್ಬರೂ ಒಟ್ಟಿಗೆ ಸೇರಿ ಮನೆಯನ್ನು ನಡೆಸಬೇಕಿದೆ.

ಇದನ್ನೂ ಓದಿ:ಇದೇ ಮೊದಲು: ಬಿಗ್​​ಬಾಸ್ ಮನೆಯಲ್ಲಿ ನಡೆಯಿತು ಮದುವೆ ನಿಶ್ಚಿತಾರ್ಥ

ಅಸಲಿಗೆ ವಾರದ ಆರಂಭದಲ್ಲಿ ಗಾನವಿ ಮಹಾರಾಣಿ ಆಗಬಾರದೆಂದು ಮನೆಯ ಹಲವಾರು ಮಂದಿ ಮತ ಚಲಾಯಿಸಿದ್ದರು. ಆದರೆ ಅಂತಿಮವಾಗಿ ಗಾನವಿಯೇ ಮನೆಯ ಮಹಾರಾಣಿ ಹಾಗೂ ಕ್ಯಾಪ್ಟನ್ ಆಗಿದ್ದಾರೆ. ಗಾನವಿ ಈ ವಾರ ಮನೆಯನ್ನು ಹೇಗೆ ನಿಭಾಯಿಸುತ್ತಾರೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ