AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್‌ಗೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ; ಪಿಎಸ್‌ಎಲ್ ತಂಡವನ್ನೇ ಮಾರಾಟ ಮಾಡಲು ಮುಂದಾದ ಮಾಲೀಕ

ಐಪಿಎಲ್‌ನ ವಾಣಿಜ್ಯ ಯಶಸ್ಸಿನ ಎದುರು ನಿಲ್ಲಲಾಗದೆ ಪಾಕಿಸ್ತಾನ್ ಸೂಪರ್ ಲೀಗ್‌ನ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಮಾಲೀಕ ನದೀಮ್ ಓಮರ್ ತಮ್ಮ ತಂಡವನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಐಪಿಎಲ್‌ಗೆ ಹೋಲಿಸಿದರೆ ಪಿಎಸ್‌ಎಲ್‌ನ ಮಾರುಕಟ್ಟೆ ಮತ್ತು ಆದಾಯ ಬಹಳ ಕಡಿಮೆ ಎಂದಿರುವ ಅವರು, ಪ್ರಾಯೋಜಕರು ಹಾಗೂ ಜೆರ್ಸಿ ಮಾರಾಟದ ಆದಾಯದ ಕೊರತೆಯಿಂದ ಏಳು ವರ್ಷಗಳಿಂದ ನಷ್ಟ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ. ಇದು ಪಿಎಸ್‌ಎಲ್-ಐಪಿಎಲ್ ವಾಣಿಜ್ಯ ಪೈಪೋಟಿಯ ಸ್ಪಷ್ಟ ಚಿತ್ರಣ ನೀಡುತ್ತದೆ.

ಐಪಿಎಲ್‌ಗೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ; ಪಿಎಸ್‌ಎಲ್ ತಂಡವನ್ನೇ ಮಾರಾಟ ಮಾಡಲು ಮುಂದಾದ ಮಾಲೀಕ
Ipl Vs Psl
ಪೃಥ್ವಿಶಂಕರ
|

Updated on: Nov 19, 2026 | 10:43 PM

Share

ಪಾಕಿಸ್ತಾನ್ ಸೂಪರ್ ಲೀಗ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ನಡುವಿನ ವಾಣಿಜ್ಯ ಪೈಪೋಟಿ ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಐಪಿಎಲ್‌ಗೆ ಹೋಲಿಸಿದರೆ ಪಿಎಸ್‌ಎಲ್‌ನ ಮಾರುಕಟ್ಟೆ ಹಾಗೂ ಆದಾಯ ಬಹಳ ಕಡಿಮೆ ಎಂದು ಒಪ್ಪಿಕೊಂಡಿರುವ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಮಾಲೀಕ ನದೀಮ್ ಓಮರ್, ಇದೀಗ ತಮ್ಮ ತಂಡವನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. 2025ರಿಂದ ಪಿಎಸ್‌ಎಲ್ ಪಂದ್ಯಾವಳಿಗಳು ಮಾರ್ಚ್‌ನಿಂದ ಮೇ ತಿಂಗಳವರೆಗೆ ನಡೆಯುವ ಐಪಿಎಲ್ ವೇಳಾಪಟ್ಟಿಯ ಸಮಯದಲ್ಲೇ ಆಯೋಜನೆಯಾಗುತ್ತಿವೆ. ಆದರೆ ಐಪಿಎಲ್‌ನಷ್ಟು ವಾಣಿಜ್ಯ ಯಶಸ್ಸು ಗಳಿಸಲು ಪಾಕಿಸ್ತಾನದ ಟಿ20 ಲೀಗ್‌ಗೆ ಸಾಧ್ಯವಾಗುತ್ತಿಲ್ಲ ಎಂದು ನದೀಮ್ ಓಮರ್ ಹೇಳಿದ್ದಾರೆ.

ಐಪಿಎಲ್ ಜೊತೆ ಸ್ಪರ್ಧಿಸಲು ಸಾಧ್ಯವಿಲ್ಲ

ತಂಡವನ್ನು ಮಾರಾಟ ಮಾಡುವ ಕುರಿತು ಮಾತನಾಡಿರುವ ಅವರು, ‘ಪಿಎಸ್‌ಎಲ್‌ಗೆ ವಿದಾಯ ಹೇಳಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ. ನಮಗೆ ಉತ್ತಮ ಮೊತ್ತದ ಆಫರ್ ಸಿಕ್ಕಿ, ನಮ್ಮ ಕೆಲವು ಷರತ್ತುಗಳು ಈಡೇರಿದರೆ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವನ್ನು ಮಾರಾಟ ಮಾಡಲು ಸಿದ್ಧರಿದ್ದೇವೆ. ನಾವು ಐಪಿಎಲ್ ಅಥವಾ ಅದರ ಮಾರುಕಟ್ಟೆಯೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಅದಕ್ಕೆ ಹೋಲಿಸಿದರೆ ನಮ್ಮ ಮಾರುಕಟ್ಟೆ ಬಹಳ ಚಿಕ್ಕದಾಗಿದೆ. ದುರದೃಷ್ಟವಶಾತ್, ಐಪಿಎಲ್‌ಗೆ ಸಿಗುವ ರೀತಿಯಲ್ಲಿ ಪಿಎಸ್‌ಎಲ್‌ಗೆ ಪ್ರಾಯೋಜಕರು ಹಾಗೂ ವಾಣಿಜ್ಯ ಸಂಸ್ಥೆಗಳಿಂದ ಹಣಕಾಸಿನ ನೆರವು ಸಿಗುತ್ತಿಲ್ಲ.

ದೊಡ್ಡ ಮೊತ್ತದ ಆದಾಯ ಬರುತ್ತದೆ

ಐಪಿಎಲ್‌ನಲ್ಲಿ ತಂಡಗಳ ಜೆರ್ಸಿ ಮತ್ತು ಇತರ ವಸ್ತುಗಳ ಮಾರಾಟದಿಂದ ದೊಡ್ಡ ಮೊತ್ತದ ಆದಾಯ ಬರುತ್ತದೆ. ತವರು ಹಾಗೂ ಎದುರಾಳಿ ತಂಡಗಳ ಮೈದಾನಗಳಲ್ಲಿ ನಡೆಯುವ ಪಂದ್ಯಗಳ ಟಿಕೆಟ್ ಮಾರಾಟದಿಂದಲೂ ಫ್ರಾಂಚೈಸಿಗಳಿಗೆ ಉತ್ತಮ ಹಣ ಸಿಗುತ್ತದೆ. ಇದರ ಜೊತೆಗೆ ಪ್ರಸಾರ ಹಕ್ಕುಗಳ ಪಾಲೂ ದೊರೆಯುತ್ತದೆ. ನಾವು ಪಿಎಸ್‌ಎಲ್‌ನ ಅಧಿಕೃತ ಜೆರ್ಸಿಯನ್ನು 1,000 ಪಾಕಿಸ್ತಾನಿ ರೂಪಾಯಿಗೆ ಮಾರಾಟ ಮಾಡುತ್ತೇವೆ. ಆದರೆ ಅದೇ ಜೆರ್ಸಿಯನ್ನು ನಕಲು ಮಾಡಿ ಮಾರುಕಟ್ಟೆಯಲ್ಲಿ 200 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಇದರಿಂದ ನಮಗೆ ಬರಬೇಕಾದ ದೊಡ್ಡ ಪ್ರಮಾಣದ ಆದಾಯ ಕೈತಪ್ಪುತ್ತಿದೆ. ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಮೂಲಕ ನಾವು ಸಾಧಿಸಬೇಕೆಂದುಕೊಂಡಿದ್ದ ಯಶಸ್ಸನ್ನು ಸಂಪೂರ್ಣವಾಗಿ ಪಡೆಯಲು ಸಾಧ್ಯವಾಗಲಿಲ್ಲ. ಸತತ ಏಳು ವರ್ಷಗಳ ಕಾಲ ನಾವು ನಷ್ಟದಲ್ಲಿದ್ದೆವು. ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೆ. ಆದರೆ ಅವುಗಳಲ್ಲಿ ಎಲ್ಲವನ್ನೂ ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ.

ಹಳೆಯ ಲೆಕ್ಕಾಚಾರ ಬಿಟ್ಟು, ಐಪಿಎಲ್‌ಗೆ ಹೊಸ ವೇಳಾಪಟ್ಟಿ ರೂಪಿಸಿ: ಲಲಿತ್ ಮೋದಿ

ನಮ್ಮ ಸಾಮರ್ಥ್ಯವನ್ನು ಮೀರಿದೆ

‘ನಾನು ಈ ತಂಡವನ್ನು ಕೇವಲ ವ್ಯವಹಾರದ ಉದ್ದೇಶದಿಂದ ಖರೀದಿಸಿರಲಿಲ್ಲ. ಪಾಕಿಸ್ತಾನ ಕ್ರಿಕೆಟ್‌ಗೆ ಏನಾದರೂ ಕೊಡುಗೆ ನೀಡಬೇಕೆಂಬ ಆಸೆಯೂ ಇತ್ತು. ಕ್ವೆಟ್ಟಾದಲ್ಲಿ ಪಂದ್ಯಗಳನ್ನು ಆಯೋಜಿಸಬೇಕು ಮತ್ತು ಬಲೂಚಿಸ್ತಾನದ ಆಟಗಾರರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ಬಯಸಿದ್ದೆ. ಆದರೆ ಹಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ದುರದೃಷ್ಟವಶಾತ್, ಲೀಗ್ ಹಲವು ವಿಚಾರಗಳಲ್ಲಿ ನಮ್ಮ ಸಾಮರ್ಥ್ಯವನ್ನು ಮೀರಿದೆ. ಪಿಎಸ್‌ಎಲ್ ಒಂದು ನಿರ್ದಿಷ್ಟ ಮಟ್ಟದಲ್ಲಿಯೇ ಉಳಿಯಬೇಕಿತ್ತು ಎಂದು ನನಗನಿಸುತ್ತದೆ. ಈಗ ತಂಡಗಳ ಮೇಲೆ ಖರ್ಚು ಮಾಡಲಾಗುತ್ತಿರುವ ಹಣದ ಪ್ರಮಾಣವನ್ನು ನೋಡಿದರೆ ನನಗೆ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ’ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
‘ಮಹಾರಾಣಿ ಆಗಬಾರದು’ ಮಂಜಿಗೆ ನೇರವಾಗಿ ಹೇಳಿದ ಮಂಜ: ವಿಡಿಯೋ
‘ಮಹಾರಾಣಿ ಆಗಬಾರದು’ ಮಂಜಿಗೆ ನೇರವಾಗಿ ಹೇಳಿದ ಮಂಜ: ವಿಡಿಯೋ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ