ಪೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಪರ ಭಕ್ತರ ಸಭೆ, ಜಿಲ್ಲಾಡಳಿತಕ್ಕೆ 2 ದಿನ ಡೆಡ್ಲೈನ್
ಪೋಕ್ಸೋ ಕೇಸ್ ರದ್ದು ಕೋರಿ ಮುತ್ಯಾ ಹೈಕೋರ್ಟ್ ಮೊರೆ ಹೋಗಿದ್ದಾನೆ. ಹೈಕೋರ್ಟ್ ಕಲಬುರಗಿ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದು, ಸೋಮವಾರ ವಿಚಾರಣೆ ನಡೆಯಲಿದೆ.ಪೋಷಕರೇ ದೂರು ನೀಡಿಲ್ಲ, ಆದ್ರೂ ಎಫ್ಐಆರ್ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಂದೆಡೆ ಸ್ವಯಂ ಘೋಷಿತ ದೇವಮಾನ ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೋಕ್ಸೋ ಕೇಸ್ ದಾಖಲಿಸಿರೋದು ಭಕ್ತರನ್ನು ಕೆರಳಿಸಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಹಲ್ ರೋಜಾ ಮಠದ ಆವರಣದಲ್ಲಿ ಭಕ್ತರು ಮಹತ್ವದ ಸಭೆ ನಡೆಸಿದ್ದು, ಮುಂದಿನ ಕಾನೂನು ಹೋರಾಟ ಸೇರಿ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿದರು.
ಯಾದಗಿರಿ, (ಫೆಬ್ರವರಿ 27): ಬಾಲಕಿ ಜೊತೆ ಅನುಚಿತ ವರ್ತನೆ ತೋರಿದ ಪ್ರಕರಣದಲ್ಲಿ ಯಾದಗಿರಿಯ (Yadgir) ಮಹಲ್ ರೋಜಾ ಮಠದ ಸ್ವಯಂ ಘೋಷಿತ ದೇವಮಾನ ಮಲ್ಲಿಕಾರ್ಜುನ ಮುತ್ಯಾಗೆ (mallikarjun mutya) ಬಂಧನ ಭೀತಿ ಎದುರಾಗಿದೆ. ವಿಚಾರಣೆಗೆ ಹಾಜರಾಗುವಂತೆ ಯಾದಗಿರಿ ಪೊಲೀಸರು ನೋಟಿಸ್ ನೀಡಿದರೂ ಮುತ್ಯಾನ ಸುಳಿವಿಲ್ಲ. ಇಂದು (ಫೆಬ್ರವರಿ 27) ಬೆಳಗ್ಗೆಮುತ್ಯಾ ಹಾಜರಾಗಲಿದ್ದಾನೆ ಎಂದು ಹೇಳಲಾಗಿತ್ತು. ಆದರೆ, ಮುತ್ಯಾ ಮಾತ್ರ ಪತ್ತೆ ಇಲ್ಲ. ಬದಲಾಗಿ ಪೋಕ್ಸೋ ಕೇಸ್ ರದ್ದು ಕೋರಿ ಮುತ್ಯಾ ಹೈಕೋರ್ಟ್ ಮೊರೆ ಹೋಗಿದ್ದಾನೆ. ಹೈಕೋರ್ಟ್ ಕಲಬುರಗಿ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದು, ಸೋಮವಾರ ವಿಚಾರಣೆ ನಡೆಯಲಿದೆ.ಪೋಷಕರೇ ದೂರು ನೀಡಿಲ್ಲ, ಆದ್ರೂ ಎಫ್ಐಆರ್ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಂದೆಡೆ ಸ್ವಯಂ ಘೋಷಿತ ದೇವಮಾನ ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೋಕ್ಸೋ ಕೇಸ್ ದಾಖಲಿಸಿರೋದು ಭಕ್ತರನ್ನು ಕೆರಳಿಸಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಹಲ್ ರೋಜಾ ಮಠದ ಆವರಣದಲ್ಲಿ ಭಕ್ತರು ಮಹತ್ವದ ಸಭೆ ನಡೆಸಿದ್ದು, ಮುಂದಿನ ಕಾನೂನು ಹೋರಾಟ ಸೇರಿ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿದರು. ಅಲ್ಲದೇ ಇದೇ ವೇಳೆ ಕೇಸ್ ವಾಪಸ್ ತೆಗೆದುಕೊಳ್ಳಲು ಯಾದಗಿರಿ ಜಿಲ್ಲಾಡಳಿತಕ್ಕೆ ಎರಡು ದಿನಗಳ ಗಡುವು ನೀಡಿದ್ದಾರೆ.
ಸಭೆ ಬಳಿಕ ಮಾತನಾಡಿದ ಬಿಜೆಪಿ ನಾಯಕಿ ಲಲಿತಾ, ಆ ಅಪ್ರಾಪ್ತೆ ಮತ್ತು ಪೋಷಕರು ದೂರು ನೀಡದೇ ಇದ್ದರೂ ಎಫ್ ಐ ಆರ್ ದಾಖಲಿಸಿದ್ದಾರೆ. ಕೂಡಲೆ ಪ್ರಕರಣವನ್ನ ರದ್ದು ಮಾಡಬೇಕು. ಇಲ್ಲದೇ ಜಿಲ್ಲೆಯಾಧ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತೆ. ಎಸ್ಪಿ,ಡಿಸಿ ಕಚೇರಿ ಎದುರು ದೊಡ್ಡ ಮಟ್ಟದ ಹೋರಾಟ ಮಾಡುತ್ತೆವೆ. ಮೊದಲು ಕೌನ್ಸಲಿಂಗ್ ಮಾಡಬೇಕಿತ್ತು. ಆ ಅಪ್ರಾಪ್ತೆಯ ಹೇಳಿಕೆ ಪಡೆಯದೇ ಎಫ್ ಐ ಆರ್ ದಾಖಲಿಸಿದ್ದಾರೆ. ಜಿಲ್ಲಾಡಳಿತ ಈ ಕೇಸ್ ನಲ್ಲಿ ಎಡವಿದೆ. ಹೀಗಾಗಿ ತಕ್ಷಣವೇ ಮಲ್ಲಿಕಾರ್ಜುನ ಮುತ್ಯಾ ಮೇಲೆ ದಾಖಲಾಗಿರೋ ಕೇಸ್ ಅನ್ನು ರದ್ದು ಮಾಡಬೇಕು. ಜಿಲ್ಲಾಡಳಿತಕ್ಕೆ ಎರಡು ದಿನಗಳ ಗಡುವು ನೀಡುತ್ತೆವೆ. ಎರಡೂ ದಿನಗಳಲ್ಲಿ ಕೇಸ್ ರದ್ದು ಮಾಡದೇ ಹೋದ್ರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
