AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಳಪತಿ ವಿಜಯ್​​ಗೆ ಮತ್ತೆ ಹೆಚ್ಚಿತು ಸಂಕಷ್ಟ; ಎದುರಿಸಬೇಕಿದೆ ವಿಚಾರಣೆ

ದಳಪತಿ ವಿಜಯ್​​ಗೆ ಮತ್ತೆ ಹೆಚ್ಚಿತು ಸಂಕಷ್ಟ; ಎದುರಿಸಬೇಕಿದೆ ವಿಚಾರಣೆ

ರಾಜೇಶ್ ದುಗ್ಗುಮನೆ
|

Updated on: Mar 09, 2026 | 3:13 PM

Share

ದಳಪತಿ ವಿಜಯ್ ಅವರು ಈಗ ತೊಂದರೆ ಮೇಲೆ ತೊಂದರೆ ಎದುರಿಸುತ್ತಿದ್ದಾರೆ. ಅವರ ನಟನೆಯ ‘ಜನ ನಾಯಗನ್’ ರಿಲೀಸ್ ಆಗಿಲ್ಲ. ಈ ಬೆನ್ನಲ್ಲೇ ಕರೂರು ಪ್ರಕರಣದಲ್ಲಿ ಅವರು ತೊಂದರೆ ಅನುಭವಿಸುವಂತೆ ಆಗಿದೆ. ಈ ಪ್ರಕರಣದಲ್ಲಿ ಅವರು ವಿವಾರಣೆ ಎದುರಿಸುತ್ತಿದ್ದಾರೆ. ಈಗ ಅವರಿಗೆ ವಿಚಾರಣೆಗೆ ಹಾಜರಿ ಹಾಕುವಂತೆ ಮತ್ತೆ ನೊಟಿಸ್ ಬಂದಿದೆ.

ಟಿವಿಕೆ ಸಂಸ್ಥಾಪಕ, ನಟ ವಿಜಯ್​ಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ. ಮಾರ್ಚ್ 10ರಂದು ವಿಚಾರಣೆಗೆ ಹಾಜರಾಗುವಂತೆ ವಿಜಯ್​ಗೆ ಸೂಚಿಸಲಾಗಿದೆ. ವಿಜಯ್ ಅವರ ಟಿವಿಕೆ ಪಕ್ಷ ಕರೂರಿನಲ್ಲಿ ನಡೆಸಿದ ಚುನಾವಣೆ ರ್ಯಾಲಿ ವೇಳೆ 41 ಜನರ ಸಾವನ್ನಪ್ಪಿದ್ದರು. ಈ ಕಾಲ್ತುಳಿತ ದುರಂತಕ್ಕೆ ಟಿವಿಕೆ ಹೊಣೆ ಅಲ್ಲ ಎಂದು ನಟ ವಿಜಯ್ ಹೇಳಿದ್ದಾರೆ. ಅಲ್ಲದೆ, ಡಿಎಂಕೆ ಸರ್ಕಾರದ ವೈಫಲ್ಯದಿಂದ ದುರಂತ ಸಂಭವಿಸಿತ್ತು ಎಂದು ಆರೋಪಿಸಿದ್ದಾರೆ. 41 ಜನರ ಸಾವಿಗೆ ಯಾರು ಹೊಣೆ ಎಂದು ಸಿಬಿಐನಿಂದ ವಿಚಾರಣೆ ನಡೆಯುತ್ತಿದೆ. ಅವರು ಈಗಾಗಲೇ ಹಲವು ಬಾರಿ ವಿಚಾರಣೆಯನ್ನು ಎದುರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More