AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾತುಕತೆಯಿಲ್ಲದೆ ಶಾಂತಿ ಸ್ಥಾಪನೆಯಾಗುವುದಿಲ್ಲ’; ಷಿ ಜಿನ್‌ಪಿಂಗ್, ಪುಟಿನ್ ಜೊತೆಗಿನ ಸಭೆ ಬಳಿಕ ಟ್ರಂಪ್ ಪ್ರತಿಪಾದನೆ

ಶೆನ್‌ಝೆನ್‌ನಲ್ಲಿ ಮುಕ್ತಾಯಗೊಂಡ ಟ್ರಂಪ್, ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಅವರ 90 ನಿಮಿಷಗಳ ಐತಿಹಾಸಿಕ ತ್ರಿಪಕ್ಷೀಯ ಸಭೆ ಭಾರೀ ಕುತೂಹಲ ಮೂಡಿಸಿದೆ. ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ನೇಪಥ್ಯದಲ್ಲಿ ಇಂದು ನಡೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್  ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವಿನ ಮೊದಲ ಐತಿಹಾಸಿಕ ತ್ರಿಪಕ್ಷೀಯ ಸಭೆಯು ಸುಮಾರು 90 ನಿಮಿಷಗಳ ಕಾಲ ನಡೆದು ಮುಕ್ತಾಯಗೊಂಡಿದೆ. ತ್ರಿಪಕ್ಷೀಯ ಸಭೆಯ ಆರಂಭದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ನಾವು ಮೂವರು ನಿಜವಾಗಿಯೂ ಇತಿಹಾಸ ನಿರ್ಮಿಸುತ್ತಿದ್ದೇವೆ ಮತ್ತು ಚರ್ಚಿಸಲು ನಮ್ಮ ಬಳಿ ಸಾಕಷ್ಟು ವಿಷಯಗಳಿವೆ" ಎಂದು ಬಣ್ಣಿಸಿದರು. ಈ ಸಭೆಯ ಕುರಿತು ಯಾವ ನಾಯಕರು ಏನು ಹೇಳಿದ್ದಾರೆ? ಎಂಬ ಮಾಹಿತಿ ಇಲ್ಲಿದೆ.

'ಮಾತುಕತೆಯಿಲ್ಲದೆ ಶಾಂತಿ ಸ್ಥಾಪನೆಯಾಗುವುದಿಲ್ಲ'; ಷಿ ಜಿನ್‌ಪಿಂಗ್, ಪುಟಿನ್ ಜೊತೆಗಿನ ಸಭೆ ಬಳಿಕ ಟ್ರಂಪ್ ಪ್ರತಿಪಾದನೆ
Putin, Xi Jinping, Trump
ಸುಷ್ಮಾ ಚಕ್ರೆ
|

Updated on: Nov 19, 2026 | 5:10 PM

Share

ಶೆನ್‌ಝೆನ್, ನವೆಂಬರ್ 19: ಜಾಗತಿಕ ಮಟ್ಟದಲ್ಲಿ ಇಂದು ಬಹು ಮುಖ್ಯವಾದ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಚೀನಾದ ತಂತ್ರಜ್ಞಾನ ಕೇಂದ್ರವಾದ ಶೆನ್‌ಝೆನ್‌ನಲ್ಲಿ ಮೊದಲ ಜಂಟಿ ಮಾತುಕತೆಗಾಗಿ ಮುಖಾಮುಖಿಯಾಗಿದ್ದಾರೆ. 3 ಬಲಿಷ್ಠ ರಾಷ್ಟ್ರಗಳಾಗಿರುವ ಈ ದೇಶಗಳ ನಾಯಕರ ನಡುವಿನ ತ್ರಿಪಕ್ಷೀಯ ಮಾತುಕತೆ ಭಾರೀ ಕುತೂಹಲ ಮತ್ತು ನಿರೀಕ್ಷೆಯನ್ನು ಮೂಡಿಸಿತ್ತು. ಟ್ರಂಪ್, ಪುಟಿನ್ ಜೊತೆ ಇಂದು ನಡೆದ ಈ ಸಭೆಯನ್ನು “ಮೈಲಿಗಲ್ಲು” ಎಂದು ಬಣ್ಣಿಸಿದ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಚೀನಾ, ರಷ್ಯಾ ಮತ್ತು ಅಮೆರಿಕದ ರಾಷ್ಟ್ರಾಧ್ಯಕ್ಷರು ಮಾತುಕತೆಗಾಗಿ ಒಟ್ಟಿಗೆ ಸೇರಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಅಮೆರಿಕ ಯಾವ ದೇಶಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿದೆಯೋ ಆ ದೇಶಗಳ ನಾಯಕರೊಂದಿಗೆ ನೇರವಾಗಿ ಮಾತುಕತೆ ನಡೆಸುವ ಮೂಲಕ ತಾವು ಅಮೆರಿಕದ ವಿದೇಶಾಂಗ ನೀತಿಯಲ್ಲಿ ವಿಭಿನ್ನ ಹಾದಿಯನ್ನು ತುಳಿಯುತ್ತಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. “ವಿಶ್ವದ 3 ಅತಿದೊಡ್ಡ ದೇಶಗಳ ಅಧ್ಯಕ್ಷರಾಗಿ, ನಮ್ಮ ಜನರ ಮೇಲೆ ಮಾತ್ರವಲ್ಲದೆ ಇಡೀ ಭೂಮಿಯ ಮೇಲೆ ಪರಿಣಾಮ ಬೀರುವ ವಿಷಯಗಳ ಕುರಿತು ಮುಕ್ತ, ಗೌರವಯುತ ಮತ್ತು ಫಲಪ್ರದ ಸಂವಾದವನ್ನು ಕಾಯ್ದುಕೊಳ್ಳುವ ವಿಶೇಷ ಜವಾಬ್ದಾರಿ ನಮ್ಮ ಮೇಲಿದೆ” ಎಂದು ಟ್ರಂಪ್ ಸಭೆಯ ಆರಂಭದಲ್ಲಿ ಹೇಳಿದ್ದಾರೆ.

“ಹಿಂದಿನ ನಾಯಕರು ತಮಗೆ ಭಿನ್ನಾಭಿಪ್ರಾಯವಿದ್ದ ರಾಷ್ಟ್ರಗಳೊಂದಿಗೆ ಮಾತನಾಡುವುದನ್ನು ಹಲವು ಬಾರಿ ತಪ್ಪಿಸಿಕೊಂಡಿದ್ದರು. ಆದರೆ ನಾವು ಅದಕ್ಕೆ ವಿರುದ್ಧವಾದ ನಿಲುವು ಹೊಂದಿದ್ದೇವೆ ಮತ್ತು ಈ ನಡೆಯ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ” ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಟ್ರಂಪ್, ಷಿ ಜಿನ್‌ಪಿಂಗ್, ಪುಟಿನ್: ಜಾಗತಿಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ

ಮಾತುಕತೆಯಿಲ್ಲದೆ ಪರಿಹಾರ ಅಸಾಧ್ಯ ಎಂದ ಟ್ರಂಪ್:

ವಿರೋಧಿಗಳೊಂದಿಗೆ ಮಾತುಕತೆ ನಡೆಸಲು ನಿರಾಕರಿಸುವುದರಿಂದ ಸಂಘರ್ಷಗಳನ್ನು ಬಗೆಹರಿಸಲು ಎಂದಿಗೂ ಸಾಧ್ಯವಾಗಿಲ್ಲ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಭಿನ್ನಾಭಿಪ್ರಾಯಗಳಿರುವ ನಾಯಕರೊಂದಿಗೆ ಸಂಭಾಷಣೆ ನಡೆಸುವುದನ್ನು ತಪ್ಪಿಸುವುದರಿಂದ ಯಾವುದೇ ಸಮಸ್ಯೆಗಳು ಎಂದಿಗೂ ಬಗೆಹರಿದಿಲ್ಲ. ಆದ್ದರಿಂದ, ಒಟ್ಟಿಗೆ ಸೇರಿ ಮಾತನಾಡುವ ಮತ್ತು ತೊಡಗಿಸಿಕೊಳ್ಳುವ ಅವಕಾಶಗಳನ್ನು ನಿರಾಕರಿಸುವುದರಿಂದ ಎಂದಿಗೂ ಶಾಂತಿ ಸ್ಥಾಪನೆಯಾಗಿಲ್ಲ. ನಾವು ವಿಭಿನ್ನ ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದೇವೆ” ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಚೀನಾ ಅಧ್ಯಕ್ಷ ಹೇಳಿದ್ದೇನು?:

ಟ್ರಂಪ್ ಅವರ ಮಾತಿಗೆ ಧ್ವನಿಗೂಡಿಸಿದ ಚೀನಾ ಅಧ್ಯಕ್ಷ ಷಿ  ಜಿನ್‌ಪಿಂಗ್, 3 ರಾಷ್ಟ್ರಗಳ ನಡುವೆ ಹೆಚ್ಚಿನ ಸಹಕಾರಕ್ಕೆ ಕರೆ ನೀಡಿದ್ದಾರೆ. ಪರಸ್ಪರ ಸಂಪರ್ಕ ಹೊಂದಿರುವ ಈ ಜಗತ್ತಿನಲ್ಲಿ ರಚನಾತ್ಮಕ ಸಂವಾದ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ. “ಪ್ರಮುಖ ಶಕ್ತಿಗಳ ನಡುವಿನ ಸಕಾರಾತ್ಮಕ ಸಂವಾದವು ಆಯ್ಕೆಯ ವಿಷಯವಲ್ಲ, ಅದು ಅನಿವಾರ್ಯ ಅಗತ್ಯವಾಗಿದೆ” ಎಂದಿದ್ದಾರೆ. ದೇಶಗಳ ನಡುವೆ ಹೆಚ್ಚುತ್ತಿರುವ ಪರಸ್ಪರ ಅವಲಂಬನೆಯನ್ನು ಉಲ್ಲೇಖಿಸಿದ ಷಿ ಜಿನ್​ಪಿಂಗ್, “ಜಗತ್ತನ್ನು ಇನ್ನು ಮುಂದೆ ಪ್ರತ್ಯೇಕ ಮತ್ತು ಸಂಪರ್ಕವಿಲ್ಲದ ಘಟಕಗಳಾಗಿ ನೋಡಲು ಸಾಧ್ಯವಿಲ್ಲ. ಮಾನವಕುಲವು ಒಂದೇ ‘ಜಾಗತಿಕ ಗ್ರಾಮ’ದಲ್ಲಿ ವಾಸಿಸುತ್ತಿದ್ದು, ಇಲ್ಲಿ ಪ್ರತಿಯೊಬ್ಬರ ಭವಿಷ್ಯವೂ ಪರಸ್ಪರ ಬೆಸೆದುಕೊಂಡಿದೆ” ಎಂದಿದ್ದಾರೆ.

ಇದನ್ನೂ ಓದಿ: ಸಂಪ್ರದಾಯ ಮುರಿದು ತಾವೇ ಖುದ್ದಾಗಿ ತೆರಳಿ ಟ್ರಂಪ್​ಗೆ ಅದ್ದೂರಿ ಸ್ವಾಗತ ಕೋರಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

“ಶಾಂತಿಯುತ ಸಹಬಾಳ್ವೆ, ಒಟ್ಟಾರೆ ಸ್ಥಿರತೆ ಮತ್ತು ಸಮತೋಲಿತ ಅಭಿವೃದ್ಧಿ”ಯ ಸುತ್ತ ನಿರ್ಮಿಸಲಾದ ಪ್ರಮುಖ ಶಕ್ತಿಗಳ ನಡುವಿನ ಸಂಬಂಧದ ಮಾದರಿಯನ್ನು ಚೀನಾ ಪ್ರತಿಪಾದಿಸುತ್ತಿದ್ದು, ಇದರ ಪ್ರಯೋಜನಗಳು ನೇರವಾಗಿ ಭಾಗಿಯಾಗಿರುವ ದೇಶಗಳನ್ನು ಮೀರಿ ವಿಸ್ತರಿಸುತ್ತವೆ ಎಂದು ಷಿ ಜಿನ್​ಪಿಂಗ್ ತಿಳಿಸಿದ್ದಾರೆ.

ಪರಮಾಣು ಶಸ್ತ್ರಾಸ್ತ್ರಗಳ ನಿಷೇಧಕ್ಕೆ ಕರೆ:

ಪರಮಾಣು ಶಸ್ತ್ರಾಸ್ತ್ರಗಳನ್ನು ಮಾನವಕುಲದ ತಲೆಯ ಮೇಲೆ ತೂಗಾಡುತ್ತಿರುವ “ಡಮೋಕ್ಲಿಸ್‌ನ ಕತ್ತಿ” ಎಂದು ಬಣ್ಣಿಸಿದ ಚೀನಾ ಅಧ್ಯಕ್ಷ ಜಿನ್​ಪಿಂಗ್ ಅವುಗಳನ್ನು ಕೊನೆಗೊಳಿಸಲು ಕರೆ ನೀಡಿದರು. ಪರಮಾಣು ಯುದ್ಧವನ್ನು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ ಮತ್ತು ಅದನ್ನು ಎಂದಿಗೂ ನಡೆಸಬಾರದು ಎಂದು ಒತ್ತಿ ಹೇಳಿದ ಅವರು, ಅಂತಹ ಯುದ್ಧವನ್ನು ತಡೆಯಲು ದೇಶಗಳು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ದೇಶಗಳು ತಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಮನವೊಲಿಸುವುದು ಕಷ್ಟಕರ ಎಂದು ಒಪ್ಪಿಕೊಂಡರು. “ಒಮ್ಮೆ ನಿಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳು ಇದ್ದರೆ, ಅವುಗಳನ್ನು ಬಿಟ್ಟುಬಿಡುವುದು ತುಂಬಾ ಕಷ್ಟ. ಜೀವನ ನಡೆಯುವುದೇ ಹಾಗೆ” ಎಂದು ಟ್ರಂಪ್ ಹೇಳಿದರು.

ಉಕ್ರೇನ್ ಬಿಕ್ಕಟ್ಟು ಪರಿಹಾರದಲ್ಲಿ ಸಾಮಾನ್ಯ ಹಿತಾಸಕ್ತಿ ಇದೆ ಎಂದ ಪುಟಿನ್:

3 ದೇಶಗಳು ರಚನಾತ್ಮಕವಾಗಿ ಒಟ್ಟಾಗಿ ಕೆಲಸ ಮಾಡಿದರೆ, ರಷ್ಯಾ, ಚೀನಾ ಮತ್ತು ಅಮೆರಿಕ ನಡುವಿನ ನಿಕಟ ಸಹಕಾರವು ಜಾಗತಿಕ ಭದ್ರತೆ ಮತ್ತು ಸ್ಥಿರತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದರು. “ಉಕ್ರೇನ್ ಸಂಘರ್ಷವೂ ಸೇರಿದಂತೆ ಪ್ರಾದೇಶಿಕ ಸಂಘರ್ಷಗಳ ಪರಿಹಾರಕ್ಕೆ ಸಂಬಂಧಿಸಿದಂತೆ ನಮ್ಮ ರಾಷ್ಟ್ರಗಳು ಅನೇಕ ಸಾಮಾನ್ಯ ಹಿತಾಸಕ್ತಿಗಳನ್ನು ಹಂಚಿಕೊಂಡಿವೆ” ಎಂದು ಅವರು ತಿಳಿಸಿದರು. ಟ್ರಂಪ್ ಅವರ ಉಪಕ್ರಮದ ಮೇರೆಗೆ ನಡೆದ ಚರ್ಚೆಗಳಲ್ಲಿ ಉಕ್ರೇನ್ ಯುದ್ಧವು ಪ್ರಮುಖವಾಗಿ ಪ್ರಸ್ತಾಪವಾಗಿದ್ದು, ಪರಿಹಾರ ಕಂಡುಕೊಳ್ಳುವಲ್ಲಿ ಮೂರೂ ದೇಶಗಳು ಆಸಕ್ತಿ ಹೊಂದಿವೆ ಎಂದು ಅವರು ಹೇಳಿದರು.

ಐದನೇ ವರ್ಷಕ್ಕೆ ಕಾಲಿಟ್ಟಿರುವ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಸಾಧ್ಯತೆಯ ಬಗ್ಗೆ ಟ್ರಂಪ್ ಸಹ ಆಶಾವಾದ ವ್ಯಕ್ತಪಡಿಸಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ
ಆರತಕ್ಷತೆ ದಿನವೇ ಮದುವೆಗೆ ನಿರಾಕರಿಸಿ ಮಾತ್ರೆ ನುಂಗಿದ ವರ; ಮುಂದೇನಾಯ್ತು
ಆರತಕ್ಷತೆ ದಿನವೇ ಮದುವೆಗೆ ನಿರಾಕರಿಸಿ ಮಾತ್ರೆ ನುಂಗಿದ ವರ; ಮುಂದೇನಾಯ್ತು