AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್; ಚೀನಾದಲ್ಲಿ ಮೂವರು ನಾಯಕರ ಮುಖಾಮುಖಿ

ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್; ಚೀನಾದಲ್ಲಿ ಮೂವರು ನಾಯಕರ ಮುಖಾಮುಖಿ

ಸುಷ್ಮಾ ಚಕ್ರೆ
|

Updated on: Nov 18, 2026 | 9:51 PM

Share

ಚೀನಾದ ಶೆನ್‌ಝೆನ್‌ನಲ್ಲಿ ಇಂದು ನಡೆದ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ಔತಣಕೂಟದ ಗ್ರೂಪ್ ಫೋಟೋಗೂ ಮುನ್ನ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬಳಿ ಬಂದು ಶೇಕ್​ಹ್ಯಾಂಡ್ ಮಾಡಿ ಮಾತನಾಡಿದ್ದಾರೆ. ಟ್ರಂಪ್ ಮತ್ತು ಪುಟಿನ್ ಪರಸ್ಪರ ಹಸ್ತಲಾಘವ ಮಾಡಿ, ಉಭಯಕುಶಲೋಪರಿ ವಿಚಾರಿಸಿ, ಪರಸ್ಪರ ಭುಜ ತಟ್ಟಿಕೊಂಡು ಆತ್ಮೀಯತೆ ಪ್ರದರ್ಶಿಸಿದ್ದಾರೆ. 2025ರ ಆಗಸ್ಟ್‌ನಲ್ಲಿ ಅಲಾಸ್ಕಾದಲ್ಲಿ ನಡೆದ ಶೃಂಗಸಭೆಯ ನಂತರ ಟ್ರಂಪ್ ಮತ್ತು ಪುಟಿನ್ ನಡುವಿನ ಮೊದಲ ಮುಖಾಮುಖಿ ಭೇಟಿ ಇದಾಗಿದೆ. ಪುಟಿನ್ ಅವರು ಟ್ರಂಪ್‌ಗಿಂತ ಕೆಲವು ಗಂಟೆಗಳ ಮೊದಲೇ ಶೆನ್‌ಝೆನ್ ತಲುಪಿ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದರು. ಮಾಸ್ಕೋ ಮತ್ತು ಬೀಜಿಂಗ್‌ನ ವಿದೇಶಾಂಗ ನೀತಿ ಕಾರ್ಯತಂತ್ರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪುಟಿನ್ ಈ ವೇಳೆ ಹೇಳಿದ್ದಾರೆ.

ನವದೆಹಲಿ, ನವೆಂಬರ್ 18: ಚೀನಾದ ಶೆನ್‌ಝೆನ್‌ನಲ್ಲಿ ಇಂದು ನಡೆದ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ಔತಣಕೂಟದ ಗ್ರೂಪ್ ಫೋಟೋಗೂ ಮುನ್ನ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬಳಿ ಬಂದು ಶೇಕ್​ಹ್ಯಾಂಡ್ ಮಾಡಿ ಮಾತನಾಡಿದ್ದಾರೆ. ಟ್ರಂಪ್ ಮತ್ತು ಪುಟಿನ್ ಪರಸ್ಪರ ಹಸ್ತಲಾಘವ ಮಾಡಿ, ಉಭಯಕುಶಲೋಪರಿ ವಿಚಾರಿಸಿ, ಪರಸ್ಪರ ಭುಜ ತಟ್ಟಿಕೊಂಡು ಆತ್ಮೀಯತೆ ಪ್ರದರ್ಶಿಸಿದ್ದಾರೆ. 2025ರ ಆಗಸ್ಟ್‌ನಲ್ಲಿ ಅಲಾಸ್ಕಾದಲ್ಲಿ ನಡೆದ ಶೃಂಗಸಭೆಯ ನಂತರ ಟ್ರಂಪ್ ಮತ್ತು ಪುಟಿನ್ ನಡುವಿನ ಮೊದಲ ಮುಖಾಮುಖಿ ಭೇಟಿ ಇದಾಗಿದೆ. ಪುಟಿನ್ ಅವರು ಟ್ರಂಪ್‌ಗಿಂತ ಕೆಲವು ಗಂಟೆಗಳ ಮೊದಲೇ ಶೆನ್‌ಝೆನ್ ತಲುಪಿ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದರು. ಮಾಸ್ಕೋ ಮತ್ತು ಬೀಜಿಂಗ್‌ನ ವಿದೇಶಾಂಗ ನೀತಿ ಕಾರ್ಯತಂತ್ರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪುಟಿನ್ ಈ ವೇಳೆ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More