AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರದ ಕೊಂಬೆಗಳನ್ನೂ ಬಿಟ್ಟಿಲ್ಲ ಈ ಜನ, ಇದು ‘ಡೈಪರ್ ಮರ’

ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ್ ಕನಸನ್ನು ಕೆಲವರ ಬೇಜವಾಬ್ದಾರಿಯುತ ಕಸ ವಿಲೇವಾರಿ ಹಾಳು ಮಾಡುತ್ತಿದೆ. ನಗರಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ವಾರಣಾಸಿಯಲ್ಲಿ ಮರಗಳ ಮೇಲೆ ನೇತಾಡುತ್ತಿರುವ ಡೈಪರ್‌ಗಳು ಮತ್ತು ಖಾಲಿ ಜಾಗದಲ್ಲಿ ಕಸ ಸುರಿಯುತ್ತಿರುವ ವೈರಲ್ ವಿಡಿಯೋ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ವಚ್ಛ ಭಾರತ ಮಿಷನ್‌ ಯಶಸ್ಸಿಗೆ ನಾಗರಿಕ ಪ್ರಜ್ಞೆ ಅಗತ್ಯ ಎಂಬುದನ್ನು ಇದು ಎತ್ತಿ ತೋರಿಸುತ್ತದೆ.

ಮರದ ಕೊಂಬೆಗಳನ್ನೂ ಬಿಟ್ಟಿಲ್ಲ ಈ ಜನ, ಇದು 'ಡೈಪರ್ ಮರ'
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on:Dec 03, 2025 | 5:27 PM

Share

ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ್​​​​ ಕನಸು ( Waste disposal India) ಇಂತಹ ಜನರಿಂದ ಹಾಳಾಗುತ್ತಿದೆ ನೋಡಿ. ಭಾರತದಲ್ಲಿ ಸ್ವಚ್ಛ ಭಾರತ್ ಮಿಷನ್​​ ಮೂಲಕ ಸ್ವಚ್ಛತೆಯ ಕಾಂತ್ರಿಯನ್ನು ದೇಶದ ಪ್ರಧಾನಿ ಮೋದಿ ಮಾಡಿದ್ರು, ಅದಕ್ಕಾಗಿ ದೊಡ್ಡ ಅಭಿಯಾನವನ್ನು ಕೂಡ ಪ್ರಾರಂಭಿಸಿದ್ದರು. ಆದ್ರೂ ಈ ಜನರಿಗೆ ಬುದ್ಧಿ ಬಂದಿಲ್ಲ. ಇನ್ನು ಈ ಕಸದ ರಾಶಿಯ ಹಳ್ಳಿಗಿಂತ, ನಗರದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದೀಗ ಇಲ್ಲೊಂದು ವಿಡಿಯೋ ಭಾರೀ ವೈರಲ್​​​ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಪ್ರಜ್ಞಾವಂತ ನಾಗರಿಕರು ಮಾಡಿರುವ ಕೆಲಸದ ಬಗ್ಗೆ ವಿಡಿಯೋವೊಂದನ್ನು ಶ್ವೇತಾ ಕಟಾರಿಯಾ ಎಂಬುವವರು ಹಂಚಿಕೊಂಡಿದ್ದಾರೆ. ಮನೆಯ ಹೊರಗಿನ ಮರದ ಮೇಲೆ ಬಟ್ಟೆ, ಕಸಗಳು ನೇತಾಡುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿ ಈ ದೃಶ್ಯ ಕಂಡು ಬಂದಿದೆ.

ಈ ವಿಡಿಯೋದಲ್ಲಿ ಎರಡು ಅಂತಸ್ತಿನ ಮನೆಯ ಹೊರಗೆ ದೊಡ್ಡ ಮರವೊಂದನ್ನು ತೋರಿಸಿದ್ದಾರೆ. ಈ ಪ್ಲಾಟ್​​​ನ ಒಂದರಲ್ಲಿ ಮಗು ಇರಬೇಕು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಏಕೆಂದರೆ ಈ ಮರದಲ್ಲಿ ಡೈಪರ್​​​ಗಳೇ ಹೆಚ್ಚು ನೇತಾಡುತ್ತಿರುವ ಕಾಣಬಹುದು. ಈ ಬಗ್ಗೆ ವಿಡಿಯೋದಲ್ಲಿ ಶ್ವೇತಾ ಕಟಾರಿಯಾ ವಿವರಿಸುತ್ತಾರೆ. ಈ ಮರದ ಕೊಂಬೆಗಳಲ್ಲಿ ಡಜನ್‌ಗಟ್ಟಲೆ ಡೈಪರ್‌ಗಳ ನೇತಾಡುತ್ತಿದೆ ನೋಡಿ. ಡೈಪರ್‌ಗಳನ್ನು ಸರಿಯಾಗಿ ವಿಲೇವಾರಿ ಮಾಡುವ ಬದಲು ಈ ಮರದ ಮೇಲೆ ಎಸೆದಿದ್ದಾರೆ ಎಂದು ಹೇಳಿದ್ದಾರೆ. ಇದೇ ವಿಡಿಯೋದಲ್ಲಿ ಮತ್ತೊಂದು ಕಡೆ ವ್ಯಕ್ತಿಯೊಬ್ಬರು ಖಾಲಿ ಜಾಗದಲ್ಲಿ ಕಸ ಸುರಿಯುತ್ತಿರುವುದನ್ನು ನೋಡಬಹುದು. ಹಳೆ ಬಟ್ಟೆಗಳನ್ನು ಹೇಗೆ ಉಪಯೋಗಿಸಬೇಕು. ಡೈಪರ್​​ಗಳನ್ನು ಹೇಗೆ ವಿಲೇವರಿ ಮಾಡಬೇಕು ಎಂಬ ಬಗ್ಗೆಯೂ ಈ ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ರೂ ಮತ್ತೆ ಕಾಣಿಸಿಕೊಂಡ ನೋವು, ಸ್ಕ್ಯಾನಿಂಗ್‌ ವೇಳೆ ತಿಳಿಯಿತು ವೈದ್ಯರ ಎಡವಟ್ಟು

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ನೆಟ್ಟಿಗರ ಆಕ್ರೋಶ:

ಮರದ ಮೇಲೆ ನೇತಾಡುವ ಡೈಪರ್‌ಗಳ ವೀಡಿಯೊವನ್ನು ನೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬರು, ನೀವು ನಾಗರಿಕ ಪ್ರಜ್ಞೆಗೆ ಬದ್ಧರಾಗಿರಬೇಕು. ಶ್ವೇತಾ ಕಟಾರಿಯಾ ಅವರು ಮಾಡಿದ ವಿಡಿಯೋದಲ್ಲಿ ಒಳ್ಳೆಯ ವಿಚಾರಗಳು ಇದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಮರಗಳ ಮೇಲೆ ನೇತಾಡುವ ಬಳಸಿದ ಡೈಪರ್‌ಗಳು ಮತ್ತು ಮನೆಯ ಹೊರಗೆ ಕಸ ಎಸೆಯುವುದು ಇದಕ್ಕೆ ನಾಗರಿಕರು ಮಾತ್ರವಲ್ಲ ಸರ್ಕಾರ ಕೂಡ ಹೊಣೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಇದು ನಿಜಕ್ಕೂ ಬೇಸರದ ಸಂಗತಿ, ನನ್ನ ಅವಳಿ ಮಕ್ಕಳಿಗೆ 3 ವರ್ಷದವರೆಗೆ ಬಟ್ಟೆಯಿಂದ ಡೈಪರ್ ಹಾಕುತ್ತಿದ್ದೆ, ಆದರೆ ಇದನ್ನು ಯಾಕೆ ಜನ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Wed, 3 December 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ