AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಎಂಬಿಎ ಪದವಿ, ಕೈ ತುಂಬಾ ಸಂಬಳ, ಐಷಾರಾಮಿ ಬದುಕು ಕಂಡ  ವ್ಯಕ್ತಿ ಇಂದು ಬೀದಿ ಬದಿ ಭಿಕ್ಷುಕ

ಬದುಕು ಹೊಡೆತಗಳ ಮೇಲೆ ಹೊಡೆತಗಳನ್ನು ನೀಡುತ್ತದೆ. ಮೇಲೆದ್ದು ಸುಧಾರಿಸಿಕೊಳ್ಳಲು ಕೆಲವರಿಗೆ ಸಾಧ್ಯ ಆಗೋದೇ ಇಲ್ಲ. ನಮ್ಮ ಸುತ್ತಮುತ್ತಲಿನಲ್ಲಿರುವ ಕೆಲ ಜನರ ಜೀವನವನ್ನು ನೋಡಿದ್ರೆ ಕಣ್ಣಂಚಲಿ ನೀರು ಬರುತ್ತದೆ. ಡಬಲ್ ಡಿಗ್ರಿ ಪಡೆದು ತಿಂಗಳಿಗೆ ಒಂದು ಲಕ್ಷ ರೂ ಸಂಬಳ ಬರುವ ಉದ್ಯೋಗದಲ್ಲಿದ್ದ ವ್ಯಕ್ತಿ ಇಂದು ಬೀದಿ ಬದಿಯಲ್ಲಿ ಭಿಕ್ಷೆ ಬೇಡುತ್ತಾ ತುತ್ತು ಅನ್ನಕ್ಕಾಗಿ ಹೋರಾಟ ನಡೆಸುತ್ತಿದ್ದಾನೆ. ಕಣ್ಣಲ್ಲಿ ನೀರು ತರಿಸುವ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Video: ಎಂಬಿಎ ಪದವಿ, ಕೈ ತುಂಬಾ ಸಂಬಳ, ಐಷಾರಾಮಿ ಬದುಕು ಕಂಡ  ವ್ಯಕ್ತಿ ಇಂದು ಬೀದಿ ಬದಿ ಭಿಕ್ಷುಕ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on: Dec 03, 2025 | 12:53 PM

Share

ಬದುಕು (life) ಒಂದಲ್ಲ ಒಂದು ಹೊಡೆತಗಳನ್ನು ನೀಡಬಹುದು. ಕೈ ತುಂಬಾ ದುಡ್ಡು ಇದ್ದು, ಒಂದೊಳ್ಳೆ ಬದುಕು ಕಟ್ಟಿಕೊಂಡ ವ್ಯಕ್ತಿ ಬೀದಿಗೆ ಬೀಳಬಹುದು. ಇದಕ್ಕೆ ನೈಜ ಉದಾಹರಣೆನೇ ಈ ವ್ಯಕ್ತಿ. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ಈ ವ್ಯಕ್ತಿ ತನ್ನ ಜೀವನದ ಕಥೆಯನ್ನು (life story) ಬಿಚ್ಚಿಟ್ಟಿರುವ ವಿಡಿಯೋ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ.

ak.beats2 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಭಿಕ್ಷೆ ಬೇಡುತ್ತಿದ್ದವನನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ, ತಾನು ಎಂಬಿಎ ಸ್ಟೂಡೆಂಟ್ ಆಗಿದ್ದು, ತಿಂಗಳಿಗೆ 1 ಲಕ್ಷ ರೂ ಸಂಬಳ ಬರುವ ಉದ್ಯೋಗದಲ್ಲಿದ್ದೆ. ಆದರೆ ನನ್ನ ಹಣೆಬರಹ ಸರಿ ಇರಲಿಲ್ಲ. ನನ್ನ ಹೆಂಡ್ತಿ ಅನೈತಿಕ ಸಂಬಂಧ ಹೊಂದಿದ್ದಳು. ಆದರೆ ನನ್ನ ಮಗಳು ವಿಜಯವಾಡದಲ್ಲಿ ಎಂಬಿಬಿಎಸ್ ಡಾಕ್ಟರ್. ಆದರೆ ನಾನೀಗ ಭಿಕ್ಷುಕ ಎಂದು ಕಣ್ಣೀರು ಸುರಿಸಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಬದುಕು ಚಕ್ರದ ಹಾಗೆ, ಅಂದು ನಾನು 50 ಲಕ್ಷದ ಆಡಿ ಕಾರಿನಲ್ಲಿ ತಿರುಗಾಡುತ್ತಿದ್ದೆ, ಇಂದು ಫುಟ್ ಪಾತ್ ನಲ್ಲಿದ್ದೇನೆ. ನನಗೆ ತಿನ್ನಲು ಆಹಾರ ಇಲ್ಲ, ಬಟ್ಟೆಯಿಲ್ಲ, ದುಡ್ಡಿಲ್ಲ ಎಲ್ಲಾ ಹಣೆಬರಹ ಎನ್ನುವುದನ್ನು ಕಾಣಬಹುದು.

ಇದನ್ನೂ ಓದಿ:ಹಸಿವು ನೀಗಿಸಿ, ಬಟ್ಟೆ ಕೊಡಿಸಿ ವೃದ್ಧೆಯ ಪಾಲಿಗೆ ದೇವರಾದ ಯುವಕ

ಈ ವಿಡಿಯೋ ಇದುವೆರೆಗೆ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವಿದ್ಯೆ ಇದೆ, ದುಡಿದು ಒಂದೊಳ್ಳೆ ಬದುಕು ಕಟ್ಟಿಕೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ಬದುಕು ಎಲ್ಲರಿಗೂ ಒಂದೇ ರೀತಿ ಇರಲ್ಲ ಎಂದಿದ್ದಾರೆ. ಮತ್ತೊಬ್ಬರು, ಈ ವ್ಯಕ್ತಿ ಬದುಕಿನ ಕಥೆ ಕೇಳಿ ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್