ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ರೂ ಮತ್ತೆ ಕಾಣಿಸಿಕೊಂಡ ನೋವು, ಸ್ಕ್ಯಾನಿಂಗ್ ವೇಳೆ ತಿಳಿಯಿತು ವೈದ್ಯರ ಎಡವಟ್ಟು
ಆಂಧ್ರದ ಕಾಕಿನಾಡದಲ್ಲಿ ಆಘಾತಕಾರಿ ವೈದ್ಯಕೀಯ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ವೈದ್ಯರು ರೋಗಿಯ ಕಾಲಿನಲ್ಲಿ ಒಂದುವರೆ ವರ್ಷಗಳ ಹಿಂದೆ ನಡೆಸಿದ ಶಸ್ತ್ರಚಿಕಿತ್ಸೆ ವೇಳೆ ಶಸ್ತ್ರಚಿಕಿತ್ಸಾ ಉಪಕರಣ ಮರೆತುಬಿಟ್ಟಿದ್ದಾರೆ. ನೋವು ಕಾಣಿಸಿಕೊಂಡಾಗ ಬ್ಲೇಡ್ ಪತ್ತೆಯಾಗಿದ್ದು, ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವೈದ್ಯರು ತಪ್ಪೊಪ್ಪಿಕೊಳ್ಳಲು ನಿರಾಕರಿಸಿದ್ದು, ಸರ್ಕಾರಿ ಆಸ್ಪತ್ರೆಗಳ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ.

ವೈದ್ಯರನ್ನು ರೋಗಿಗಳು ದೇವರ ರೂಪ ಎಂದು ಕರೆಯುತ್ತಾರೆ. ಭಾರತದಲ್ಲಿ “ವೈದ್ಯೋ ನಾರಾಯಣೋ ಹರಿ” (medical negligence) ಎಂಬ ಮಾತಿದೆ. ಆದರೆ ಇಂದಿನ ಕಾಲದಲ್ಲಿ ಅದೆಷ್ಟೋ ವೈದ್ಯರು ರೋಗಿಗಳ ಪ್ರಾಣಕ್ಕೆ ಕಂಟಕವಾಗಿದ್ದಾರೆ. ವೈದ್ಯರು ಮಾಡುವ ಎಡವಟ್ಟಿನಿಂದ ಜನರು ಆಸ್ಪತ್ರೆಗಳಿಗೆ ಹೋಗಲು ಭಯಪಡುವ ಪರಿಸ್ಥಿತಿ ಬಂದಿದೆ. ಇದೀಗ ಇಲ್ಲೊಂದು ಅಂತಹದೇ ಘಟನೆಯೊಂದು ನಡೆದಿದೆ. ಆಂಧ್ರದ ಕಾಕಿನಾಡ ಜಿಲ್ಲೆಯ ಟುನಿ ಮಂಡಲದ ಎಸ್. ಅನ್ನಾವರಂ ಪಂಚಾಯತ್‌ನ ರಾಮಕೃಷ್ಣ ನಗರದ ಚಿನ್ನ (25) ಎಂಬ ಯುವಕನಿಗೆ ಒಂದೂವರೆ ವರ್ಷದ ಹಿಂದೆ ವೈಜಾಗ್‌ನಲ್ಲಿ ಕಾಲಿಗೆ ಆದ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ಸಮಯದಲ್ಲಿ, ಅವರ ಕಾಲಿಗೆ ತೀವ್ರ ಗಾಯಗಳಾಗಿತ್ತು. ಕಾಲಿನ ಒಳಗೆ ರಾಡ್ ಸೇರಿಸಿ, ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದನ್ನು ಮಾಡಿಸಿ ಒಂದು ವರ್ಷದ ನಂತರ ಮತ್ತೆ ನೋವು ಶುರುವಾಗಿತ್ತು. ವೈದ್ಯರು ಕಾಲಿಗೆ ಹಾಕಿರುವ ಬೋಲ್ಟ್ ತೆಗೆದರೆ ಅದು ಬೇಗನೆ ಸರಿಯಾಗುತ್ತದೆ ಎಂದು ಹೇಳಿದ್ದರು.
ಬೋಲ್ಟ್ ತೆಗೆಯಲು ಟುನಿ ಸರ್ಕಾರಿ ಆಸ್ಪತ್ರೆ ವೈದ್ಯರು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದ ವೇಳೆ, ಅವರಿಗೆ ಮತ್ತೊಂದು ಅಚ್ಚರಿಯ ವಸ್ತುವೊಂದು ಕಾಲಿನಲ್ಲಿ ಕಂಡಿದೆ. ಒಂದು ವರ್ಷದ ಹಿಂದೆ ಮಾಡಿದ ಶಸ್ತ್ರಚಿಕಿತ್ಸೆ ವೇಳೆ, ವೈದ್ಯರು ಶಸ್ತ್ರಚಿಕಿತ್ಸಾ ಬ್ಲೇಡ್ನ್ನು ಕಾಲಿನ ಒಳಗೆಯೇ ಬಿಟ್ಟಿದ್ದಾರೆ. ಇದೀಗ ಅದನ್ನು ತೆಗೆದು ಮತ್ತೆ ಹೊಲಿಗೆ ಹಾಕಿದ್ದಾರೆ. ಇದರಿಂದ ಆಸ್ಪತ್ರೆ ಸಿಬ್ಬಂದಿ ಎಷ್ಟು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂಬುದು ಕಾಣುತ್ತಿದೆ ಎಂದು ರೋಗಿಯ ಮನೆಯವರು ಹೇಳಿದ್ದಾರೆ. ಇನ್ನು ವಿಚಾರ ತಿಳಿದು ರೋಗಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವೈದ್ಯರು ಬಳಿ ಕೇಳಿದಾಗ, ವೈದ್ಯರು ರೋಗಿಯ ವಿರುದ್ಧವೇ ಮಾತನಾಡಿದ್ದಾರೆ.
ಇದನ್ನೂ ಓದಿ: “ಬೆಂಗಳೂರಿನಲ್ಲಿ ಹೊಸ ಫ್ಲಾಟ್ ಬಾಡಿಗೆ ಹಗರಣ”: 15 ಸಾವಿರ ರೂ.ಗೆ 2BHK ಅಪಾರ್ಟ್‌ಮೆಂಟ್, ಇದು ನಂಬಲು ಸಾಧ್ಯವೇ?
ವೈರಲ್ ಪೋಸ್ಟ್ :

ನೀವು ನಮ್ಮನ್ನು ಪ್ರಶ್ನೆ ಮಾಡಬೇಡಿ, ಈ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ರೋಗಿಯ ಕಾಲಿನಿಂದ ಶಸ್ತ್ರಚಿಕಿತ್ಸಾ ಬ್ಲೇಡ್ನ್ನು ಹೊರ ತೆಗೆದು ಹೊಲಿಗೆ ಹಾಕಿರುವುದು, ಭಾರೀ ಚರ್ಚೆ ಕಾರಣವಾಗಿದೆ. ಅದರೂ ವೈದ್ಯರ ಕಡೆಯಿಂದ ತಪ್ಪಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಸರ್ಕಾರಿ ಆಸ್ಪತ್ರೆಗಳ ವೈದ್ಯರ ಕಾರ್ಯಕ್ಷಮತೆಯ ಬಗ್ಗೆ ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ಕಾರಣಕ್ಕೆ ಜನ ಸರ್ಕಾರಿ ಆಸ್ಪತ್ರೆಗಳಿಗೆ ಬರಲು ಎದರುತ್ತಿದ್ದಾರೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




