AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಟಿಆರ್ ಸಲ್ಲಿಸಿ ತಿಂಗಳುಗಳಾದರೂ ರೀಫಂಡ್ ಬಂದಿಲ್ಲವಾ? ಇಲ್ಲಿ ಪರಿಶೀಲಿಸಿ…

Income Tax Returns Refund Status: ಈ ಬಾರಿ ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸಿದ ಹೆಚ್ಚಿನವರಿಗೆ ರೀಫಂಡ್ ವಿಳಂಬವಾಗಬಹುದು. ರೀಫಂಡ್​ಗಳಿಗೆ ಮಾಡಲಾದ ಕ್ಲೇಮ್​ಗಳನ್ನು ಆದಾಯ ತೆರಿಗೆ ಇಲಾಖೆ ಪರಿಶೀಲನೆ ಮಾಡುತ್ತಿದೆ. ಹೀಗಾಗಿ, ವಿಳಂಬವಾಗುತ್ತಿದೆ. ಆದಾಯ ತೆರಿಗೆ ಇಲಾಖೆ ಡಿಸೆಂಬರ್​ನೊಳಗೆ ರೀಫಂಡ್ ಕೊಡಲಾಗುವುದು ಎಂದು ಹೇಳಿದೆ.

ಐಟಿಆರ್ ಸಲ್ಲಿಸಿ ತಿಂಗಳುಗಳಾದರೂ ರೀಫಂಡ್ ಬಂದಿಲ್ಲವಾ? ಇಲ್ಲಿ ಪರಿಶೀಲಿಸಿ...
ಇನ್ಕಮ್ ಟ್ಯಾಕ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 27, 2025 | 7:19 PM

Share

2024-25ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (Income Tax Returns) ಅನ್ನು ಸಲ್ಲಿಸಿರುವ ಹೆಚ್ಚಿನವರಿಗೆ ರೀಫಂಡ್ ಸಿಕ್ಕಿದೆ. ಹಲವರಿಗೆ ಇನ್ನೂ ರೀಫಂಡ್​ಗಳು ಬಂದಿಲ್ಲ. ಈ ಬಾರಿ ರೀಫಂಡ್​ಗಳು ನಿರೀಕ್ಷೆಗಿಂತ ಹೆಚ್ಚು ವಿಳಂಬಗೊಳ್ಳುತ್ತಿವೆ. ರೀಫಂಡ್ ಕ್ಲೇಮ್ ಮಾಡಿದ ಸಲ್ಲಿಸಿರುವ ಅರ್ಜಿಗಳನ್ನು ಆದಾಯ ತೆರಿಗೆ ಇಲಾಖೆ ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಹೀಗಾಗಿ, ರೀಫಂಡ್​ಗಳು ಬಿಡುಗಡೆ ಆಗುವುದು ವಿಳಂಬವಾಗುತ್ತಿದೆ. ಸಿಬಿಡಿಟಿ ಪ್ರಕಾರ 2025ರೊಳಗೆ ಎಲ್ಲಾ ನ್ಯಾಯಸಮ್ಮತವಾದ ರೀಫಂಡ್​ಗಳನ್ನು ತೆರಿಗೆ ಪಾವತಿದಾರರಿಗೆ ಮರಳಿಸಲಾಗುವುದು ಎಂದಿದೆ.

ಹಿಂದಿನ ವರ್ಷಗಳಲ್ಲಿ ಬಹಳ ತೆರಿಗೆ ಪಾವತಿದಾರರು ನೂರಕ್ಕೆ ನೂರು ಟ್ಯಾಕ್ಸ್ ರೀಫಂಡ್ ಪಡೆದಿದ್ದಾರೆ. ಹಲವರು ಆದಾಯ ಮರೆಮಾಚುವುದು, ಡಿಡಕ್ಷನ್​ಗಳನ್ನು ಸುಮ್ಮನೆ ಕ್ಲೇಮ್ ಮಾಡಿರುವುದು ಇತ್ಯಾದಿ ತಂತ್ರದ ಮೂಲಕ ರೀಫಂಡ್ ಹೆಚ್ಚಿಸಿಕೊಳ್ಳುತ್ತಿದ್ದುದು ಇಲಾಖೆಯ ಗಮನಕ್ಕೆ ಬಂದಿದೆ. ಹೀಗಾಗಿ, ಈ ವರ್ಷ ಎಚ್ಚರಿಕೆಯಿಂದ ಕ್ಲೇಮ್​ಗಳನ್ನು ಪರಿಶೀಲಿಸುತ್ತಿದೆ.

ಇದನ್ನೂ ಓದಿ: ಇದೇ ಮೊದಲ ಬಾರಿಗೆ 86,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಷೇರು ಮಾರುಕಟ್ಟೆಯ ಪಾಸಿಟಿವ್ ಓಟಕ್ಕೆ ಕಾರಣಗಳಿವು

ರೀಫಂಡ್ ಬಂದಿದೆಯಾ ಇಲ್ಲವಾ ಪರಿಶೀಲಿಸಲು ಹೀಗೆ ಮಾಡಿ…

ನೀವು ಈಗಾಗಲೇ ಐಟಿಆರ್ ಸಲ್ಲಿಸಿದ್ದು ಇನ್ನೂ ರೀಫಂಡ್ ಬರದೇ ಇದ್ದಾಗ ಆನ್​ಲೈನ್​ನಲ್ಲಿ ಪರಿಶೀಲನೆಗೆ ಅವಕಾಶ ಇದೆ. ಆದಾಯ ತೆರಿಗೆ ಇಲಾಖೆಯ ಇಫೈಲಿಂಗ್ ಪೋರ್ಟಲ್ ಮತ್ತು ಎನ್​ಎಸ್​ಡಿಎಲ್ ಟಿಐಎನ್ ವೆಬ್​ಸೈಟ್​ಗಳ ಮೂಲಕ ಪರಿಶೀಲಿಸಬಹುದು.

ಪೋರ್ಟಲ್​ಗೆ ಹೋಗಿ ಪ್ಯಾನ್ ನಂಬರ್ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಆದರೆ, ನೀವು ವಿವಿಧ ವರ್ಷಗಳಲ್ಲಿ ಫೈಲ್ ಮಾಡಿದ ರಿಟರ್ನ್​ಗಳನ್ನು ಕಾಣಬಹುದು. ಬೇಕಾದ ಅಸೆಸ್ಮೆಂಟ್ ವರ್ಷಕ್ಕೆ ಹೋಗಿ ನೋಡಿದರೆ ರೀಫಂಡ್ ಸ್ಟೇಟಸ್ ತಿಳಿಯಬಹುದು. ರೀಫಂಡ್ ಹಣ ಬಿಡುಗಡೆಯಾಗಿದೆಯಾ, ಪ್ರೋಸಸ್ ಹಂತದಲ್ಲಿದೆಯಾ ಅಥವಾ ಪರಿಶೀಲನೆಯಾಗುತ್ತಿದೆಯಾ ಎಂಬುದು ಗೊತ್ತಾಗುತ್ತದೆ.

ಇದನ್ನೂ ಓದಿ: ಭಾರತದ ಜಿಡಿಪಿದರ ಈ ವರ್ಷದ ಮೊದಲಾರ್ಧದಲ್ಲಿ ಶೇ. 7.6; ಐಸಿಐಸಿಐ ವರದಿಯಲ್ಲಿ ನಿರೀಕ್ಷೆ

ರೀಫಂಡ್ ಪ್ರೋಸಸ್ ಆಗಿದ್ದರೆ, ಹಣವು ನಿಮ್ಮ ಬ್ಯಾಂಕ್ ಅಕೌಂಟ್​ನಲ್ಲಿ ಕ್ರೆಡಿಟ್ ಆಗುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್ ಪ್ರೀ ವ್ಯಾಲಿಡೇಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಹಣ ಕ್ರೆಡಿಟ್ ಆಗದೇ ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ