AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಜಿಡಿಪಿದರ ಈ ವರ್ಷದ ಮೊದಲಾರ್ಧದಲ್ಲಿ ಶೇ. 7.6; ಐಸಿಐಸಿಐ ವರದಿಯಲ್ಲಿ ನಿರೀಕ್ಷೆ

ICICI report predicts Indian GDP growth upto next year: ಭಾರತದ ಆರ್ಥಿಕತೆಯು ಈ ಹಣಕಾಸು ವರ್ಷದಲ್ಲಿ ಶೇ 7ರಷ್ಟು ಹೆಚ್ಚಬಹುದು ಎಂದು ಐಸಿಐಸಿಐ ವರದಿಯೊಂದರಲ್ಲಿ ನಿರೀಕ್ಷಿಸಲಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.5ರಷ್ಟು ಮಾತ್ರ ಬೆಳೆಯಬಹುದು ಎಂದೂ ಇದು ಹೇಳಿದೆ. ಈ ವರ್ಷದ ಮೊದಲಾರ್ಧದಲ್ಲಿ ಜಿಡಿಪಿ ಬೆಳವಣಿಗೆ ಶೇ. 7.6ರಷ್ಟು ದಾಖಲಿಸಬಹುದು ಎಂದೆನ್ನಲಾಗಿದೆ.

ಭಾರತದ ಜಿಡಿಪಿದರ ಈ ವರ್ಷದ ಮೊದಲಾರ್ಧದಲ್ಲಿ ಶೇ. 7.6; ಐಸಿಐಸಿಐ ವರದಿಯಲ್ಲಿ ನಿರೀಕ್ಷೆ
ಭಾರತದ ಆರ್ಥಿಕತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 26, 2025 | 12:59 PM

Share

ನವದೆಹಲಿ, ನವೆಂಬರ್ 26: ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ (2025ರ ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ) ಭಾರತದ ಜಿಡಿಪಿ ಬೆಳವಣಿಗೆ (GDP) ಶೇ. 7.6ರ ದರದಲ್ಲಿ ಆಗಿರಬಹುದು ಎಂದು ಐಸಿಐಸಿಐ ಬ್ಯಾಂಕ್​ನ ವರದಿಯೊಂದರಲ್ಲಿ ನಿರೀಕ್ಷೆ ಮಾಡಲಾಗಿದೆ. ಮೊದಲ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.8ರಷ್ಟು ಬೆಳವಣಿಗೆ ದಾಖಲಿಸಿದೆ. ಐಸಿಐಸಿಐ ವರದಿಯಲ್ಲಿ ಮಾಡಲಾದ ಅಂದಾಜು ಪ್ರಕಾರ ಎರಡನೇ ಕ್ವಾರ್ಟರ್​ನಲ್ಲಿ ಶೇ. 7.5ರಷ್ಟು ಜಿಡಿಪಿ ಬೆಳೆಯುವ ಸಾಧ್ಯತೆ ಇದೆ.

ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಜಿಡಿಪಿ ಬೆಳವಣಿಗೆ ಮಂದಗತಿಯಲ್ಲಿ ಇರಬಹುದು ಎಂದು ಹೇಳಿರುವ ಈ ವರದಿಯ ಪ್ರಕಾರ ಕೊನೆಯ ಎರಡು ಕ್ವಾರ್ಟರ್​ನಲ್ಲಿ ಶೇ. 6.4ರಷ್ಟು ಮಾತ್ರ ಹೆಚ್ಚಬಹುದು. ಟ್ಯಾರಿಫ್ ಕಾರಣದಿಂದ ರಫ್ತು ಕುಂಠಿತಗೊಂಡಿರುವುದು, ಟ್ಯಾಕ್ಸ್ ಸಂಗ್ರಹ ಕಡಿಮೆ ಇರುವ ಕಾರಣ ಸರ್ಕಾರದ ಬಂಡವಾಳ ವೆಚ್ಚ ಕಡಿಮೆ ಆಗಲಿರುವುದು ದ್ವಿತೀಯಾರ್ಧದ ಆರ್ಥಿಕ ಬೆಳವಣಿಗೆಗೆ ಸ್ವಲ್ಪ ಹಿನ್ನಡೆ ತರಬಹುದು ಎಂದು ಹೇಳಲಾಗಿದೆ. ಆದರೆ, ಅನುಭೋಗ ಪ್ರಮಾಣ ಉತ್ತಮವಾಗಿರುವುದು ಆರ್ಥಿಕತೆಗೆ ಸಕಾರಾತ್ಮಕವಾಗಿರುವ ಸಂಗತಿ ಎನಿಸಿದೆ.

ಇದನ್ನೂ ಓದಿ: ಮುಂದಿನ ವರ್ಷ 5,000 ರೂ ಡಾಲರ್​ಗೆ ಏರಲಿದೆ ಚಿನ್ನದ ಬೆಲೆ; ಭಾರತದಲ್ಲಿ ಎಷ್ಟು ಹೆಚ್ಚಬಹುದು ಇದರ ಬೆಲೆ?

ಐಸಿಐಸಿಐ ವರದಿಯು ಈ ಹಣಕಾಸು ವರ್ಷಕ್ಕೆ ಜಿಡಿಪಿ ಬೆಳವಣಿಗೆ ಸಾಧ್ಯತೆ ಶೇ. 7.0 ಎಂದು ನಿರೀಕ್ಷಿಸಿದೆ. ಹಾಗೆಯೇ, ಮುಂದಿನ ಹಣಕಾಸು ವರ್ಷದಲ್ಲಿ (2026-27) ಆರ್ಥಿಕತೆ ಶೇ 6.5ರಷ್ಟು ಹೆಚ್ಚಬಹುದು.

ಜಿಎಸ್​ಟಿ ಹಾಗೂ ಆದಾಯ ತೆರಿಗೆ ಕಡಿತದಿಂದ ಸರ್ಕಾರಕ್ಕೆ ಆದಾಯ ಕಡಿಮೆ ಆಗಿ, ಸರ್ಕಾರದ ಬಂಡವಾಳ ವೆಚ್ಚಕ್ಕೆ ಹೆಚ್ಚು ಹಣ ಇಲ್ಲದಂತಾಗಿದೆ. ಆದರೆ, ಟ್ಯಾಕ್ಸ್ ಇಳಿಸಿರುವುದರಿಂದ ಅನುಭೋಗ ಹೆಚ್ಚುತ್ತಿರುವುದನ್ನು ತಜ್ಞರು ಗುರುತಿಸಿದ್ದಾರೆ. ಐಸಿಐಸಿಐ ವರದಿಯಲ್ಲೂ ಈ ಅಂಶವನ್ನು ಗುರುತಿಸಲಾಗಿದೆ. ಜಿಎಸ್​ಟಿ ದರ ಇಳಿಕೆಯ ಪರಿಣಾಮವು ಮೂರನೇ ಕ್ವಾರ್ಟರ್​ನಲ್ಲಿ ಅನುಭೋಗದ ಮೇಲೆ ಆಗುತ್ತಿದೆ ಎಂದು ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ