AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WITT Summit 2026: WITT ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯಿಂದ ಭಾರತದ ಅಭಿವೃದ್ಧಿಯ ದಿಕ್ಕಿನ ಕುರಿತು ಮಹತ್ವದ ಚರ್ಚೆ

ಟಿವಿ9 ನೆಟ್‌ವರ್ಕ್‌ನ "ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026" ಮಾರ್ಚ್ 23-24 ರಂದು ದೆಹಲಿಯಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು "ಭಾರತ ಮತ್ತು ವಿಶ್ವ" ವಿಷಯದ ಕುರಿತು ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲಿದ್ದಾರೆ. ಈ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸತತ ಮೂರನೇ ಬಾರಿ ಭಾಗವಹಿಸುತ್ತಿದ್ದಾರೆ. ಹಲವಾರು ಕೇಂದ್ರ ಸಚಿವರು, ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಜಾಗತಿಕ ನಾಯಕರು ಭಾರತದ ಅಭಿವೃದ್ಧಿ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಗುರಿಯ ಕುರಿತು ಪ್ರಮುಖ ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ.

WITT Summit 2026: WITT ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯಿಂದ ಭಾರತದ ಅಭಿವೃದ್ಧಿಯ ದಿಕ್ಕಿನ ಕುರಿತು ಮಹತ್ವದ ಚರ್ಚೆ
PM Modi Image Credit source: PTI
ಸುಷ್ಮಾ ಚಕ್ರೆ
|

Updated on: Mar 19, 2026 | 10:24 PM

Share

ನವದೆಹಲಿ, ಮಾರ್ಚ್ 19: ಟಿವಿ9 ನೆಟ್​ವರ್ಕ್ ಆಯೋಜಿಸುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT Summit 2026) ಶೃಂಗಸಭೆ ತನ್ನ ನಾಲ್ಕನೇ ಆವೃತ್ತಿಯೊಂದಿಗೆ ಶೀಘ್ರದಲ್ಲೇ ಶುರುವಾಗಲು ಸಜ್ಜಾಗಿದೆ. ಮಾರ್ಚ್ 23 ಮತ್ತು 24ರಂದು ದೆಹಲಿಯಲ್ಲಿ ಈ ಶೃಂಗಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮುಖ್ಯ ಭಾಷಣ ಮಾಡಲಿದ್ದಾರೆ. ಸತತ ಮೂರನೇ ಬಾರಿಗೆ ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಪ್ರಧಾನಿ ಮೋದಿ ಭಾರತದ ಅಭಿವೃದ್ಧಿಯ ದಿಕ್ಕಿನ ಕುರಿತು ಮಾತನಾಡಲಿದ್ದಾರೆ.

ಈ ಶೃಂಗಸಭೆಯು ದೇಶದ ಪ್ರಮುಖ ಸಮಸ್ಯೆಗಳು ಮತ್ತು ಅವಕಾಶಗಳ ಕುರಿತು ಉನ್ನತ ಮಟ್ಟದ ಚರ್ಚೆಗಳಿಗೆ ವೇದಿಕೆಯಾಗಲಿದೆ. “ಭಾರತ ಮತ್ತು ವಿಶ್ವ” ಎಂಬ ವಿಷಯವಿರುವ ಈ ಕಾರ್ಯಕ್ರಮವು ಆರ್ಥಿಕ ಗುರಿಗಳು, ರಾಜಕೀಯ ಬದಲಾವಣೆಗಳು, ತಾಂತ್ರಿಕ ಪ್ರಗತಿಗಳ ಬಗ್ಗೆ ಬೆಳಕು ಚೆಲ್ಲಲಿದೆ.

ಇದನ್ನೂ ಓದಿ: WITT Summit: 2025ರ ಅಂತ್ಯದೊಳಗೆ ಸ್ವದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ; WITT ಶೃಂಗಸಭೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಈ ಶೃಂಗಸಭೆಯ ಮೂಲಕ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಅಗತ್ಯವಾದ ಮಾರ್ಗಸೂಚಿಗಳನ್ನು ರೂಪಿಸಲು ಪ್ರಮುಖ ಚಿಂತಕರು, ಉದ್ಯಮಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಒಂದೇ ವೇದಿಕೆಯಲ್ಲಿ ಒಟ್ಟುಗೂಡಲಿದ್ದಾರೆ. ಕಳೆದ ಆವೃತ್ತಿಯಲ್ಲಿ “ಹೊಸ ವಿಶ್ವ ಕ್ರಮದಲ್ಲಿ ಭಾರತ” ಎಂಬ ವಿಷಯದ ಕುರಿತು ಚರ್ಚೆಗಳು ನಡೆದಿದ್ದರೆ, ಈ ವರ್ಷ ಚರ್ಚೆಗಳು 2047ರಲ್ಲಿ ಭಾರತ ಹೇಗಿರುತ್ತದೆ ಎಂಬುದರ ಮೇಲೆ ಕೇಂದ್ರೀಕರಿಸುತ್ತವೆ.

ಇದನ್ನೂ ಓದಿ: ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ; WITT ಶೃಂಗಸಭೆಯಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಈ ಶೃಂಗಸಭೆಯಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಶ್ವಿನಿ ವೈಷ್ಣವ್ ಭಾಗವಹಿಸುವ ನಿರೀಕ್ಷೆಯಿದೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ಮೋಹನ್ ಯಾದವ್, ಪುಷ್ಕರ್ ಸಿಂಗ್ ಧಾಮಿ, ಭಜನ್ ಲಾಲ್ ಶರ್ಮಾ, ನಯಾಬ್ ಸಿಂಗ್ ಸೈನಿ, ಭಗವಂತ್ ಮಾನ್ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಜಕೀಯ ನಾಯಕರಾದ ಸ್ಮೃತಿ ಇರಾನಿ, ಅಖಿಲೇಶ್ ಯಾದವ್ ಮತ್ತು ಅಸಾದುದ್ದೀನ್ ಓವೈಸಿ ಕೂಡ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ
ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ
ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌ ಅಭ್ಯಾಸ; ವಿಡಿಯೋ ನೋಡಿ
ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌ ಅಭ್ಯಾಸ; ವಿಡಿಯೋ ನೋಡಿ
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!
'ಕೈ' ಟಿಕೆಟ್​​ ಸಿಗದಿದ್ರೆ BJPಯಿಂದ ಶಾಮನೂರು ಮೊಮ್ಮಗ ಸ್ಪರ್ಧೆ!: ಯತ್ನಾಳ್​
'ಕೈ' ಟಿಕೆಟ್​​ ಸಿಗದಿದ್ರೆ BJPಯಿಂದ ಶಾಮನೂರು ಮೊಮ್ಮಗ ಸ್ಪರ್ಧೆ!: ಯತ್ನಾಳ್​
ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್​ನ ಅತಿದೊಡ್ಡ ಎಲ್​ಎನ್​ಜಿ ಸ್ಥಾವರ
ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್​ನ ಅತಿದೊಡ್ಡ ಎಲ್​ಎನ್​ಜಿ ಸ್ಥಾವರ
ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್​​ ಹೇಳಿಕೆಗೆ ಡಿಕೆಶಿ ಉತ್ತರ ನೋಡಿ
ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್​​ ಹೇಳಿಕೆಗೆ ಡಿಕೆಶಿ ಉತ್ತರ ನೋಡಿ
ಸೊಸೆ ಕೈ ಮುರಿದಿದೆ ಕಷ್ಟವಾಗುತ್ತೆಂದು ರೊಟ್ಟಿ ಲಟ್ಟಿಸಿಕೊಟ್ಟ ಮಾವ
ಸೊಸೆ ಕೈ ಮುರಿದಿದೆ ಕಷ್ಟವಾಗುತ್ತೆಂದು ರೊಟ್ಟಿ ಲಟ್ಟಿಸಿಕೊಟ್ಟ ಮಾವ
ಯುಗಾದಿ ವರ್ಷ ಭವಿಷ್ಯ; ಈ ವರ್ಷ ಮೀನ ರಾಶಿಯವರಿಗೆ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ವರ್ಷ ಮೀನ ರಾಶಿಯವರಿಗೆ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ವರ್ಷ ಕುಂಭ ರಾಶಿಯವರಿಗೆ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ವರ್ಷ ಕುಂಭ ರಾಶಿಯವರಿಗೆ ಹೇಗಿರಲಿದೆ?
ರಂಜಾನ್ ಉಪವಾಸದ ಲಾಂಗ್ ಡ್ರೈವ್ ಹೆಸರಲ್ಲಿ ಬಂದು ಅಪಾಯಕಾರಿ ವ್ಹೀಲಿಂಗ್
ರಂಜಾನ್ ಉಪವಾಸದ ಲಾಂಗ್ ಡ್ರೈವ್ ಹೆಸರಲ್ಲಿ ಬಂದು ಅಪಾಯಕಾರಿ ವ್ಹೀಲಿಂಗ್