AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೃತೀಯ ಜಗತ್ತಿನ ದೇಶಗಳಿಂದ ವಲಸೆ ಬಂದ್ ಮಾಡುತ್ತೇವೆ: ಟ್ರಂಪ್ ಬೆದರಿಕೆ; ಯಾವುದಿದು ಥರ್ಡ್ ವರ್ಲ್ಡ್?

Donald trump threatens to permanently pause immigration from third world countries: ಅಮೆರಿಕದ ವೈಟ್​ಹೌಸ್ ಭದ್ರತಾ ಸಿಬ್ಬಂದಿ ಮೇಲೆ ಅಫ್ಗಾನ್ ವ್ಯಕ್ತಿ ಗುಂಡಿನ ದಾಳಿ ಎಸಗಿದ ಘಟನೆಗೆ ಡೊನಾಲ್ಡ್ ಟ್ರಂಪ್ ಆಕ್ರೋಶಗೊಂಡಿದ್ದಾರೆ. ಥರ್ಡ್ ವರ್ಲ್ಡ್ ದೇಶಗಳಿಂದ ವಲಸೆ ನಿಲ್ಲಿಸುವುದಾಗಿ ಅವರು ಬೆದರಿಕೆ ಹಾಕಿದ್ದಾರೆ. ಈ ತೃತೀಯ ಜಗತ್ತು ಎಂದರೆ ಏನು? ಇಲ್ಲಿಯ ದೇಶಗಳ್ಯಾವುವು? ಟ್ರಂಪ್ ಹೇಳುತ್ತಿರುವುದು ಏನು? ಇಲ್ಲಿದೆ ಡೀಟೇಲ್ಸ್.

ತೃತೀಯ ಜಗತ್ತಿನ ದೇಶಗಳಿಂದ ವಲಸೆ ಬಂದ್ ಮಾಡುತ್ತೇವೆ: ಟ್ರಂಪ್ ಬೆದರಿಕೆ; ಯಾವುದಿದು ಥರ್ಡ್ ವರ್ಲ್ಡ್?
ಡೊನಾಲ್ಡ್ ಟ್ರಂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 28, 2025 | 1:04 PM

Share

ವಾಷಿಂಗ್ಟನ್, ನವೆಂಬರ್ 28: ಅಮೆರಿಕ ಅಧ್ಯಕ್ಷರ ಗೃಹ ಕಚೇರಿಯಾದ ಶ್ವೇತಭವನದ (White House) ಬಳಿ ನ್ಯಾಷನಲ್ ಗಾರ್ಡ್ ಭದ್ರತಾ ಸಿಬ್ಬಂದಿ ಮೇಲೆ ಅಫ್ಗಾನ್ ವ್ಯಕ್ತಿಯೊಬ್ಬ ಗುರುವಾರ ಗುಂಡಿನ ದಾಳಿ ಎಸಗಿದ ಘಟನೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ರೊಚ್ಚಿಗೆಬ್ಬಿಸಿದೆ. 19 ದೇಶಗಳ ಜನರ ಗ್ರೀನ್ ಕಾರ್ಡ್​ಗಳನ್ನು (US Green Card) ರದ್ದು ಮಾಡುವುದಾಗಿ ಹೇಳಿರುವ ಅವರು, ತೃತೀಯ ವಿಶ್ವದ ದೇಶಗಳಿಂದ (Third World Countries) ವಲಸೆಯನ್ನು ಖಾಯಂ ಆಗಿ ನಿಲ್ಲಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ.

‘ಅಮೆರಿಕದ ವ್ಯವಸ್ಥೆ ಪೂರ್ಣವಾಗಿ ಚೇತರಿಸಿಕೊಳ್ಳುವಂತೆ ತೃತೀಯ ವಿಶ್ವದ ಎಲ್ಲಾ ದೇಶಗಳಿಂದ ಖಾಯಂ ಆಗಿ ವಲಸೆ ನಿಲ್ಲಿಸುತ್ತೇನೆ. ನಿದ್ರಾಮಂಪರಿನ ಜೋ ಬೈಡನ್​ರ ಆಟೊಪೆನ್​ನಿಂದ ಸಹಿ ಹಾಕಲಾದ ಎಲ್ಲಾ ಕೋಟ್ಯಂತರ ಅಕ್ರಮ ದಾಖಲಾತಿಗಳನ್ನು (ವಲಸಿಗರು) ರದ್ದು ಮಾಡುತ್ತೇನೆ. ಅಮೆರಿಕಕ್ಕೆ ಮೌಲ್ಯ ತರದವರು, ಅಮೆರಿಕವನ್ನು ಪ್ರೀತಿಸಲು ಸಾಧ್ಯವಾಗದವರು ಎಲ್ಲರನ್ನೂ ಹೊರಗೆ ಕಳುಹಿಸುತ್ತೇನೆ. ನಮ್ಮ ದೇಶದ ನಾಗರಿಕರಲ್ಲದವರಿಗೆ ನೀಡುತ್ತಿದ್ದ ಎಲ್ಲಾ ಸಬ್ಸಿಡಿ, ಸರ್ಕಾರಿ ಸವಲತ್ತುಗಳನ್ನು ನಿಲ್ಲಿಸುತ್ತೇನೆ. ಅಮೆರಿಕದ ಶಾಂತಿ ಕದಡುವ ವಲಸಿಗರನ್ನು ಮತ್ತು ಭದ್ರತೆಗೆ ಅಪಾಯವಾಗಿರುವ ಮತ್ತು ಪಾಶ್ಚಿಮಾತ್ಯ ನಾಗರಿಕತೆಗೆ ಹೊಂದಿಕೊಳ್ಳದ ಯಾವುದೇ ವಿದೇಶೀ ನಾಗರಿಕನನ್ನು ಹೊರಗಟ್ಟುತ್ತೇನೆ’ ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್​ನಲ್ಲಿ ಎಚ್ಚರಿಕೆಯ ಮೆಸೇಜ್ ಬರೆದಿದ್ದಾರೆ.

‘ಈ ಪರಿಸ್ಥಿತಿಗೆ ಏಕೈಕ ಪರಿಹಾರ ಎಂದರೆ ಅದು ಹಿಮ್ಮುಖ ವಲಸೆ. ದ್ವೇಷಿಸುವ, ಕದಿಯುವ, ಕೊಲೆ ಮಾಡುವ, ಮತ್ತು ಅಮೆರಿಕದ ನಂಬಿಕೆಯನ್ನು ಒಡೆಯುವವರೆ ನೀವು ಇಲ್ಲಿ ಹೆಚ್ಚು ದಿನ ಇರಲಾರಿರಿ’ ಎಂದು ಅಮೆರಿಕ ಅಧ್ಯಕ್ಷರು ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಅಮೆರಿಕದ ಶ್ವೇತ ಭವನದ ಬಳಿ ಗುಂಡಿನ ದಾಳಿ, ಇಬ್ಬರು ನ್ಯಾಷನಲ್​ ಗಾರ್ಡ್​​ಗಳಿಗೆ ಗಾಯ

ತೃತೀಯ ಜಗತ್ತಿನ ದೇಶಗಳೆಂದರೆ ಯಾವುವು?

ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳನ್ನು ಸಾಮಾನ್ಯವಾಗಿ ತೃತೀಯ ಜಗತ್ತು ಎಂದು ಪರಿಗಣಿಸಲಾಗುತ್ತದೆ. ಗ್ಲೋಬಲ್ ಸೌತ್, ಥರ್ಡ್ ವರ್ಲ್ಡ್ ಇತ್ಯಾದಿ ಪದಗಳೂ ಕೂಡ ಈ ದೇಶಗಳನ್ನು ಸೂಚಿಸಲು ಬಳಸಲಾಗುತ್ತದೆ.

ಎರಡನೇ ವಿಶ್ವ ಮಹಾಯುದ್ಧದ ಬಳಿಕ ಅಮೆರಿಕ ಮತ್ತು ಸೋವಿಯಲ್ ರಷ್ಯಾ ಮಧ್ಯೆ ಶುರುವಾದ ಶೀತಲ ಸಮರ ಅಥವಾ ಕೋರ್ಡ್ ವಾರ್ ಸಂದರ್ಭದಲ್ಲಿ ಥರ್ಡ್ ವರ್ಲ್ಡ್ ಪದಬಳಕೆ ಆರಂಭವಾಯಿತು. ಅಮೆರಿಕ ಹಾಗೂ ಅದರೊಂದಿಗೆ ಮೈತ್ರಿ ಮಾಡಿಕೊಂಡ ದೇಶಗಳನ್ನು ಫಸ್ಟ್ ವರ್ಲ್ಡ್ ಎಂದು ಕರೆಯಲಾಯಿತು. ಸೋಷಿಯತ್ ರಷ್ಯಾದೊಂದಿಗೆ ಜೋಡಿತವಾದ ಕಮ್ಯೂನಿಸ್ಟ್ ದೇಶಗಳನ್ನು ಸೆಕೆಂಡ್ ವರ್ಲ್ಡ್ ಎಂದು ಕರೆಯಲಾಯಿತು. ಆಲಿಪ್ತ ನೀತಿ, ಹಾಗೂ ಅಮೆರಿಕ ಮತ್ತು ರಷ್ಯಾ ಗುಂಪುಗಳಿಗೆ ಸೇರದ ಇತರ ದೇಶಗಳನ್ನು ಥರ್ಡ್ ವರ್ಲ್ಡ್ ಎಂದು ಸಂಬೋಧಿಸುವ ಪರಿಪಾಟ ಶುರುವಾಯಿತು.

ನಂತರ, ಬಡ ಹಾಗೂ ಅಭಿವೃದ್ಧಿಶೀಲ ದೇಶಗಳನ್ನು ಥರ್ಡ್ ವರ್​ಲ್ಡ್ ದೇಶಗಳೆಂದು ಪರಿಗಣಿಸುವುದು ರೂಢಿಗೆ ಬಂದಿದೆ. ಈ ಥರ್ಡ್ ವರ್ಲ್ಡ್ ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಈಗ ಡೊನಾಲ್ಡ್ ಟ್ರಂಪ್ ಅವರು ಥರ್ಡ್ ವರ್ಲ್ಡ್ ಎಂದು ಹೇಳಿದ್ದು ಯಾವ್ಯಾವ ದೇಶಗಳನ್ನು ಉದ್ದೇಶಿಸಿ ಎಂಬುದು ಸ್ಪಷ್ಟವಾಗಿಲ್ಲ. ಒಂದು ವೇಳೆ ವಲಸೆ ನಿಲ್ಲಿಸುವ ದೇಶಗಳ ಪಟ್ಟಿಗೆ ಭಾರತವನ್ನೂ ಸೇರಿಸುವುದು ಟ್ರಂಪ್ ಉದ್ದೇಶವಾಗಿದ್ದರೆ, ಜಾಗತಿಕ ರಾಜಕೀಯ ರಚನೆಯ ಸ್ವರೂಪವೇ ಬದಲಾವಣೆ ಆಗುವ ಸಾಧ್ಯತೆಯಂತೂ ಇದೆ.

ಇದನ್ನೂ ಓದಿ: ನ್ಯಾಷನಲ್​ ಗಾರ್ಡ್​​ ಮೇಲೆ ದಾಳಿ, 19 ದೇಶಗಳ ಜನರ ಗ್ರೀನ್ ಕಾರ್ಡ್‌ಗಳ ಮೇಲೆ ಟ್ರಂಪ್ ಕಣ್ಣು, ಭಾರತದ ಮೇಲೂ ಪರಿಣಾಮ ಬೀರುತ್ತಾ?

ಭಾರತಕ್ಕೆ ಹಿನ್ನಡೆಯಾಗುತ್ತದಾ?

ಹಲವು ದಶಕಗಳಿಂದ ಭಾರತದ ಬುದ್ಧಿಶಾಲಿ ವ್ಯಕ್ತಿಗಳು ಬಣ್ಣಬಣ್ಣದ ಕನಸು ಹೊತ್ತು ಅಮೆರಿಕಕ್ಕೆ ತೆರಳಿ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲಿಯ ದೇಶವನ್ನೂ ಕಟ್ಟಿದ್ದಾರೆ. ಈಗಲೂ ಕೂಡ ಅಮೆರಿಕದಲ್ಲಿ ಓದಬೇಕು, ಬದುಕು ಕಟ್ಟಬೇಕು ಎಂದು ತವಕಿಸುವ ಭಾರತೀಯರ ಸಂಖ್ಯೆ ತೀರಾ ಕಡಿಮೆ ಆಗಿಲ್ಲ. ಅಮೆರಿಕವೇನಾದರೂ ಭಾರತವನ್ನು ಗುರಿ ಮಾಡುತ್ತದೆಯಾದರೆ ದೇಶದಿಂದ ಟ್ಯಾಲೆಂಟ್ ಮೈಗ್ರೇಶನ್ ನಿಲ್ಲುತ್ತದೆ. ಬೆಳೆಯುತ್ತಿರುವ ಆರ್ಥಿಕತೆಗೆ ಬುದ್ಧಿಶಾಲಿ ವ್ಯಕ್ತಿಗಳ ಅಗತ್ಯ ಇರುವ ಹಿನ್ನೆಲೆಯಲ್ಲಿ ಭಾರತಕ್ಕೆ ಅನುಕೂಲವೇ ಹೆಚ್ಚು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ