ಅಮೆರಿಕದ ಶ್ವೇತ ಭವನದ ಬಳಿ ಗುಂಡಿನ ದಾಳಿ, ಇಬ್ಬರು ನ್ಯಾಷನಲ್ ಗಾರ್ಡ್ಗಳಿಗೆ ಗಾಯ
ಅಮೆರಿಕದಲ್ಲಿ ಗುಂಡಿನ ದಾಳಿ ಮುಂದುವರೆದಿದೆ. ಶ್ವೇತಭವನದ ಬಳಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ನ್ಯಾಷನಲ್ ಗಾರ್ಡ್ಗಳಿಗೆ ಗಾಯಗಳಾಗಿವೆ. ಮೆಟ್ರೋಪಾಲಿಟನ್ ಪೊಲೀಸ್ ಜೆಫ್ ಕ್ಯಾರೊಲ್ ಮಾತನಾಡಿ, ನ್ಯಾಷನಲ್ ಗಾರ್ಡ್ ಪಡೆಗಳು ಗಸ್ತು ತಿರುಗುತ್ತಿದ್ದಾಗ ದಾಳಿಕೋರ ಒಂದು ಮೂಲೆಯಲ್ಲಿ ಬಂದು ಹೊಂಚು ಹಾಕಿ ಕುಳಿತಿದ್ದ. ಗುಂಡಿನ ದಾಳಿಯ ನಂತರ, ಇತರ ಗಾರ್ಡ್ ಸದಸ್ಯರು ಸುತ್ತುವರೆದು ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಾಷಿಂಗ್ಟನ್, ನವೆಂಬರ್ 27: ಅಮೆರಿಕದಲ್ಲಿ ಗುಂಡಿನ ದಾಳಿ ಮುಂದುವರೆದಿದೆ. ಶ್ವೇತಭವನದ ಬಳಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ನ್ಯಾಷನಲ್ ಗಾರ್ಡ್ಗಳಿಗೆ ಗಾಯಗಳಾಗಿವೆ. ಮೆಟ್ರೋಪಾಲಿಟನ್ ಪೊಲೀಸ್ ಜೆಫ್ ಕ್ಯಾರೊಲ್ ಮಾತನಾಡಿ, ನ್ಯಾಷನಲ್ ಗಾರ್ಡ್ ಪಡೆಗಳು ಗಸ್ತು ತಿರುಗುತ್ತಿದ್ದಾಗ ದಾಳಿಕೋರ ಒಂದು ಮೂಲೆಯಲ್ಲಿ ಬಂದು ಹೊಂಚು ಹಾಕಿ ಕುಳಿತಿದ್ದ. ಗುಂಡಿನ ದಾಳಿಯ ನಂತರ, ಇತರ ಗಾರ್ಡ್ ಸದಸ್ಯರು ಸುತ್ತುವರೆದು ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಗಾರ್ಡ್ಗಳು ಗಂಭೀರ ಸ್ಥಿತಿಯಲ್ಲಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಮತ್ತು ವಾಷಿಂಗ್ಟನ್ ಮೇಯರ್ ಮುರಿಯಲ್ ಬೌಸರ್ ತಿಳಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಕೂಡ ಗುಂಡಿನ ದಾಳಿಯ ಕುರಿತು ಹೇಳಿಕೆ ನೀಡಿದ್ದು, ದಾಳಿಕೋರನನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

