Daily Devotional: ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜನ್ಮ ದಿನಾಂಕ ಅಥವಾ ಜಾತಕ ಇಲ್ಲದವರು ತಮ್ಮ ಭವಿಷ್ಯದ ಬಗ್ಗೆ ಆತಂಕ ಪಡಬೇಕಾಗಿಲ್ಲ. ಅಂತಹವರಿಗೆ ಧರ್ಮಶಾಸ್ತ್ರಗಳಲ್ಲಿ ಹಲವು ಪರಿಹಾರಗಳನ್ನು ಸೂಚಿಸಲಾಗಿದೆ. ಸೂರ್ಯ ನಮಸ್ಕಾರ, ಆದಿತ್ಯ ಹೃದಯಂ, ಋಣ ವಿಮೋಚಕ ಅಂಗಾರಕ ಸ್ತೋತ್ರ, ವಿಷ್ಣು ಸಹಸ್ರನಾಮ ಮತ್ತು ಹನುಮಾನ್ ಚಾಲೀಸಾದಂತಹ ಆಚರಣೆಗಳು ಶುಭ ಫಲಗಳನ್ನು ತರಬಲ್ಲವು.
ಬೆಂಗಳೂರು, ಡಿಸೆಂಬರ್ 05: ಪ್ರತಿಯೊಬ್ಬರೂ ತಮ್ಮ ಭವಿಷ್ಯ ಮತ್ತು ವರ್ತಮಾನದ ಬಗ್ಗೆ ತಿಳಿಯಲು ಕಾತುರರಾಗಿರುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭವಿಷ್ಯ ತಿಳಿಯಲು ಜನ್ಮ ದಿನಾಂಕ, ಸಮಯ, ಸ್ಥಳ ಇತ್ಯಾದಿ ವಿವರಗಳು ಅಗತ್ಯ. ಈ ಮಾಹಿತಿ ಲಭ್ಯವಿಲ್ಲದವರಿಗೆ ಶುಭ ಫಲಗಳನ್ನು ಪಡೆಯಲು ಧರ್ಮಶಾಸ್ತ್ರಗಳು ಪರ್ಯಾಯ ಮಾರ್ಗಗಳನ್ನು ಸೂಚಿಸಿವೆ.
ಜಾತಕವಿಲ್ಲದವರು ಸೂರ್ಯ ನಮಸ್ಕಾರ ಮತ್ತು ಆದಿತ್ಯ ಹೃದಯಂ ಪಠಣ ಅಥವಾ ಶ್ರವಣ ಮಾಡುವುದರಿಂದ ಆಯುಷ್ಯ, ಆರೋಗ್ಯ ಮತ್ತು ಅಧಿಕಾರ ಪ್ರಾಪ್ತವಾಗುತ್ತದೆ. ನಮಸ್ಕಾರ ಪ್ರಿಯೋ ಭಾನು ಎಂಬಂತೆ ಸೂರ್ಯನ ಆರಾಧನೆಯಿಂದ ಗ್ರಹಗಳ ಕಾಟವೂ ನಿವಾರಣೆಯಾಗುತ್ತದೆ. ಅಲ್ಲದೆ, ಋಣ ವಿಮೋಚಕ ಅಂಗಾರಕ ಸ್ತೋತ್ರ (ಸುಬ್ರಹ್ಮಣ್ಯ ಅಥವಾ ಕುಜನ ಸ್ತೋತ್ರ) ಪಠಿಸುವುದು ಸಹ ಶುಭಕರ. ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.
ಚಿನ್ನದಂಗಡಿ ದೋಚಿ ಬಸ್ ಸ್ಟ್ಯಾಂಡ್ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ

