AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 05 December: ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಕೃಷ್ಣ ಪಕ್ಷದ ಪ್ರತಿಪತ್ ತಿಥಿ ಶುಕ್ರವಾರ ಗೆಲುವು, ದುರಭ್ಯಾಸ, ಸಮ್ಮಾನ, ದುರಸ್ತಿ, ಅನಾರೋಗ್ಯ, ದೂರಪ್ರಯಾಣ, ನಿದ್ರಾಹೀನತೆ, ನಿರುದ್ಯೋಗ, ಮನಶ್ಚಾಂಚಲ್ಯ ಎಲ್ಲವೂ ಇಂದಿನ ಭವಿಷ್ಯ. ಇಂದು ನೀವು ಎದುರಿಸಬಹುದಾದ ಸವಾಲುಗಳು ಮತ್ತು ಅದಕ್ಕೆ ಪರಿಹಾರಗಳ ಬಗ್ಗೆ ಜ್ಯೋತಿಷ್ಯ ಸಲಹೆಗಳನ್ನು ಪಡೆಯಿರಿ.

Horoscope Today 05 December: ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷತಾ ವರ್ಕಾಡಿ|

Updated on: Dec 05, 2025 | 12:42 AM

Share

ಮೇಷ ರಾಶಿ:

ಕಾರ್ಯಗಳಲ್ಲಿ ವೇಗ, ಆದಾಯದಲ್ಲಿ ಸುಧಾರಣೆ ಹಾಗೂ ಹೊಸ ಅವಕಾಶಗಳು ಕಾಣಿಸುವ ಸೂಚನೆ. ಹಿರಿಯರ ಮಾತು ಗೌರವಿಸಿದರೆ ಯಶಸ್ಸು ನಿಮ್ಮದಾಗುತ್ತದೆ. ನಿಮ್ಮ ವಸ್ತುಗಳು ಕಾಣೆಯಾಗಬಹುದು. ಮಾತಿನ ಬಿರುಸು ಅಧಿಕವಾಗಿ ಇರುವುದು. ಇಂದಿನ ಖರ್ಚು ನಿಮ್ಮ ಜೇಬಿಗೆ ಭಾರವಾದೀತು. ನಿಮ್ಮ ಆದಾಯವನ್ನು ಇತರರು ಲೆಕ್ಕ ಹಾಕಬಹುದು. ಶತ್ರುಗಳ ತೊಂದರೆಯಿಂದ ನಿರ್ಮಾಣ ಕಾರ್ಯವು ನಿಧಾನವಾಗಲಿದೆ. ನೌಕರರ ವರ್ತನೆಯ ಮೇಲೆ ನಿಮ್ಮ ಕಣ್ಣಿಡಿ. ಬಂಧುಗಳ ಜೊತೆ ಕಲಹವಾಗುವುದು. ಸಂಗಾತಿಯ ನೆರವನ್ನು ನೀವು ನಿರೀಕ್ಷಿಸುವಿರಿ. ಆದ್ಯತೆಯ ಮೇಲೆ ನಿಮ್ಮ ಕಾರ್ಯಗಳು ಇರಬಹುದು. ಅಧಿಕಾರಿಗಳ ಮನವನ್ನು ಒಲಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಕುಟುಂಬದಲ್ಲಿ ಸಮನ್ವಯ, ವೈಯಕ್ತಿಕ ವಿಚಾರಗಳಲ್ಲಿ ಸ್ಪಷ್ಟತೆ. ಶುಭಚಿಂತಕರ ಸಹಕಾರ ದೊರೆಯುತ್ತದೆ. ಔದಾರ್ಯದಿಂದ ನಡೆದುಕೊಂಡರೆ ದಿನ ಫಲಪ್ರದ. ಆಯ್ಕೆಯನ್ನು ವಿಳಂಬವಾಗಿ ಮಾಡುವಿರಿ. ಮಾತು ನೇರವಾಗಿದ್ದರೂ ಮೃದುವಾಗಿ ಬಳಸಿಕೊಳ್ಳುವಿರಿ.

ವೃಷಭ ರಾಶಿ:

ಆರ್ಥಿಕತೆ ಸಣ್ಣದಾದರೂ ನಿರಂತರವಾಗಿರಲಿದೆ. ಕೆಲಸದಲ್ಲಿ ಒತ್ತಡ ಕಡಿಮೆಯಾಗುತ್ತದೆ. ಕುಟುಂಬದಲ್ಲಿ ಮಮತೆ, ಸಮಾಧಾನ ತಾನಾಗಿಯೇ ಬರುವುದು. ಉಪಾಯದಿಂದ ಮಾಡುವುದನ್ನು ಹಾಗೆಯೇ ಮಡುವುದು ಸೂಕ್ತ. ಇರುವ ಹಣವನ್ನು ಬೇಕಾದ ಸಮಯಕ್ಕೆ ಪಡೆಯಲು ಕಷ್ಟವಾಗಬಹುದು. ಆರೋಗ್ಯದಲ್ಲಿ ಅಸಮಾಧಾನವು ಇರಲಿದೆ. ಸಮರದ ರೀತಿಯಲ್ಲಿ ಇಂದಿನ ದಿನ ಕಳೆದಂತಾಗುವುದು. ಮಾತಾನಾಡುವ ಭರದಲ್ಲಿ ಏನಾದರೂ ಹೇಳಬಹುದು. ಕೇವಲ ಬಾಯಿ ಮಾತಿನಲ್ಲಿ ವ್ಯವಹಾರವನ್ನು ಮಾಡಿ ಮುಂದುವರಿಸುವುದು ಬೇಡ. ನಿಮ್ಮ ರಹಸ್ಯವನ್ನು ಯಾರಾದರೂ ತಿಳಿದುಕೊಳ್ಳಲು ಬಯಸುವರು. ಅವರಸದಲ್ಲಿ ಏನನ್ನೂ ಖರೀದಿ ಮಾಡುವುದು ಬೇಡ. ನಿಮ್ಮ ಸಲಹೆಯನ್ನು ಅಧಿಕಾರಿಗಳು ಸ್ವೀಕರಿಸದೇ ಇರಬಹುದು. ನೀವು ಇಂದು ಎಲ್ಲರ ಜೊತೆ ಅಲ್ಪವಾಗಿ ಮಾತನಾಡುವಿರಿ. ಆತ್ಮವಿಶ್ವಾಸದೊಂದಿಗೆ ಕೈಗೊಂಡ ಕಾರ್ಯಗಳು ಯಶಸ್ವಿ. ಗೌರವವನ್ನು ಕಾಪಾಡಿಕೊಳ್ಳಲು ಗಂಭೀರವಾಗಿ ಇರುವಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ.

ಮಿಥುನ ರಾಶಿ:

ಕೆಲಸದಲ್ಲಿ ಹೊಸ ಆವಿಷ್ಕಾರಗಳಿಗೆ ಮೆಚ್ಚುಗೆ. ಹಣಕಾಸನ್ನು ಸಮತೋಲನದಿಂದ ಬಳಸಿ. ಅಧಿಕಾರವು ನಿಮ್ಮದಾದ ಕಾರಣ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ. ವಿವಿಧ ಕಡೆಗಳಿಂದ ಧನಾಗಮನವಾಗಬಹುದು. ನಿಮ್ಮ ಹಳೆಯ ವಾಹನವನ್ನು ಮಾರಾಟ ಮಾಡಿ ನೂತನ ವಾಹನವನ್ನು ಖರೀದಿ ಮಾಡುವಿರಿ. ದೇವರಲ್ಲಿ ಭಕ್ತಿಯು ಅಧಿಕವಾದೀತು. ಮಕ್ಕಳಿಗೆ ಶಿಸ್ತನ್ನು ಹೇಳುವಿರಿ. ನಿಮ್ಮ ಕಲ್ಪನೆಗೆ ಒಂದು ಚೌಕಟ್ಟು ಇರಲಿ. ನಿಮ್ಮ ಮನಸ್ಸನ್ನು ಬಹಳ ವಿಚಲಿತವಾಗಿದ್ದು ಸ್ಥಿರತ್ವವನ್ನು ತಂದುಕೊಳ್ಳುವುದು ಕಷ್ಟವಾದೀತು. ನಿಮ್ಮ‌ಅಲ್ಪ ಜ್ಞಾನವನ್ನು ಎಲ್ಲರೆದುರು ತೋರಿಸುವುದು ಬೇಡ. ನಿಮ್ಮ ಆಸ್ತಿಯನ್ನು ಇನ್ನೊಬ್ಬರು ಪಡೆಯಲು ಕಾನೂನು ರೀತಿಯಲ್ಲಿ ಹೋಗುವರು. ಮನೆಗೆ ದಂಪತಿಗಳನ್ನು ಕರೆದು ಸತ್ಕಾರ ಮಾಡಿ. ಮನೆಯಲ್ಲಿ ಒಳ್ಳೆಯ ನಿರ್ಧಾರಗಳು ಬೇಗ ಫಲಕಾರಿಯಾಗಲಿವೆ. ಹೊಸ ಯೋಜನೆಗಳಿಗೆ ಅಶೀರ್ವಾದದ ದಿನ. ಆತ್ಮವಿಶ್ವಾಸ ಹೆಚ್ಚುತ್ತದೆ. ಸುಮ್ಮನೆ ಕುಳಿತಿರುವುದು ನಿಮಗೆ ಕಷ್ಟ.

ಕರ್ಕಾಟಕ ರಾಶಿ:

ಕುಟುಂಬದಲ್ಲಿ ಚಿಕ್ಕ ಉದ್ವಿಗ್ನತೆಯಾದರೂ ಕೊನೆಯಲ್ಲಿ ಶಾಂತಿ. ಕೆಲಸದಲ್ಲಿ ಆಯ್ದ ವ್ಯಕ್ತಿಗಳ ಸಹಕಾರ ಪ್ರಾಪ್ತಿಯಾಗುವುದು. ಆರೋಗ್ಯಕ್ಕೆ ಸ್ವಲ್ಪ ಜಾಗರೂಕತೆಯನ್ನು ಇಟ್ಟುಕೊಳ್ಳಿ. ಹೊಸ ಕಲಿಕೆಯ ಕಡೆ ಮನಸು ಸೆಳೆಯುತ್ತದೆ. ಉನ್ನತ ವಿದ್ಯಾಭ್ಯಾಸಕ್ಕೆ ಸಾಲವನ್ನು ಮಾಡಬೇಕಾಗುವುದು. ಕಾರಣಾಂತರದಿಂದ ನಿಮ್ಮ ಪ್ರಯಾಣವು ಸ್ಥಗಿತವಾಗಬಹುದು. ಯಂತ್ರಗಳ‌ ಮಾರಾಟದಿಂದ ನಿಮಗೆ ಆದಾಯವು ಹೆಚ್ಚಾಗುವುದು. ಮಕ್ಕಳನ್ನು ಖುಷಿಯಿಂದ ಇಡಲು ನಾನಾ ಪ್ರಯತ್ನವನ್ನು ಮಾಡುವಿರಿ. ಹಿರಿಯರ ಮಾತನ್ನು ಪಾಲಿಸುವಿರಿ. ನಿಮಗೆ ಇಂದು ಕೈ ಹಾಕಿದ ಕಾರ್ಯದಲ್ಲಿ ಜಯ ಸಿಗುವುದು. ಪೂರ್ವಜನ್ಮದ ಪುಣ್ಯವು ರಕ್ಷಿಸುವುದು. ಸ್ವಂತ ಉದ್ಯೋಗದಿಂದ ಒತ್ತಡವು ಅಧಿಕವಾಗಿ ಬರಬಹುದು. ಮನೆಯ ಕೆಲಸವನ್ನು ಮಾಡಿಕೊಳ್ಳಲು ನಿಮಗೆ ಸಮಯ ಸಾಕಾಗದು. ನಿಮ್ಮ ಮಾತುಗಳಿಂದ ಅನರ್ಥವಾಗಬಹುದು. ಇನ್ನೊಬ್ಬರಿಂದ ನಿಮಗೆ ಉತ್ತೇಜನ ಸಿಗಲಿದೆ. ಇಂದು ಸಹೋದ್ಯೋಗಿಗಳ ಬಗ್ಗೆ ನಿಮಗೆ ಅನಾದರ ಬರಬಹುದು.

ಸಿಂಹ ರಾಶಿ:

ಧಾರ್ಮಿಕ ಚಟುವಟಿಕೆಗಳಿಗೆ ಆಸಕ್ತಿ. ದೂರದಲಗಲಿರುವ ಪ್ರಯೋಜನಕಾರಿಯಾದ ವಿಚಾರಗಳು ಮನಸ್ಸಿಗೆ ಬರುತ್ತವೆ. ನಿಮ್ಮ ಪ್ರೇಮದ ವಿಚಾರವನ್ನು ತಾಯಿಯ ಬಳಿ ಹೇಳಿಕೊಳ್ಳುವಿರಿ. ನಿಮಗೆ ಇಂದು ಸಮಯವು ವ್ಯರ್ಥವಾದಂತೆ ತೋರುವುದು. ಅನುಕಂಪವನ್ನು ಪಡಯುವ ನಾಟಕ ನಡೆಯಬಹುದು. ಆರೋಪವನ್ನು ತಡಡದುಕೊಳ್ಳುವ ಶಕ್ತಿ ಇರದು. ಆಸ್ತಿಯನ್ನು ಮಾರಾಟ ಮಾಡಿ ಸಾಲವನ್ನು ತೀರಿಸಬೇಕಾಗಬಹುದು. ಹಿಂದೆ ಮುಂದೆ ಆಲೋಚಿಸದೇ ಧೈರ್ಯವನ್ನು ಮಾಡುವುದು ಬೇಡ. ಪ್ರಯಾಣದ ವಿಚಾರದಲ್ಲಿ ಇಂದು ಮನೆಯವರ ಮಾತಿನಂತೆ ನಡೆದುಕೊಳ್ಳಿ. ನಿಮ್ಮ ಜೊತೆ ವೃತ್ತಿಯನ್ನು ನಿರ್ವಹಿಸುವವರು ನಿಮ್ಮ ಮಾತನ್ನು ಸಹಿಸಲಾರರು. ಬಾಕಿ ಕೆಲಸಗಳು ಸುಲಭವಾಗಿ ನೆರವೇರುವ ದಿನ. ವ್ಯಾಪಾರದಲ್ಲಿ ಹೊಸ ಅವಕಾಶ. ಆರೋಗ್ಯ ಉತ್ತಮ. ಭಾವನಾತ್ಮಕವಾಗಿ ಸ್ಥಿರತೆ ಇರಲಿದೆ. ಮೊದಲು‌ ಮಾಡಿದ ತಪ್ಪನ್ನೇ ಪುನಃ ಮಾಡಲು ಹೋಗುವಿರಿ.‌ ನಿಮ್ಮ ವಸ್ತುಗಳನ್ನು ಯಾರಾದರೂ ಕಳ್ಳತನ ಮಾಡಬಹುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ಹಾಗೆಯೇ ಉಳಿಯದು.

ಕನ್ಯಾ ರಾಶಿ:

ಅಡತಡೆಗಳಿಲ್ಲದೇ ಬೇಗಬೇಗನೆ ಕೆಲಸಗಳು ಪೂರ್ಣಗೊಳ್ಳುತ್ತವೆ. ವ್ಯಾಪಾರದಲ್ಲಿ ಹಣದ ಹರಿವು ತಾನಾಗಿಯೇ ಸರಿಯಾಗುವುದು. ಶತ್ರುಗಳಿಂದ ದೂರವಿರುವುದು ಒಳ್ಳೆಯದು. ಕುಟುಂಬದಲ್ಲಿ ಬರುವ ಕಲಹಕ್ಕೆ ವಿರಾಮದ ಅಗತ್ಯವಿದೆ. ಭೂಮಿಯ ಖರೀದಿಯಲ್ಲಿ ಗೊಂದಲವು ಹೆಚ್ಚಿರಬಹುದು. ನಿಮ್ಮ ಭಾವನೆಗಳನ್ನು ನೀವೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವಿರಿ. ಹಳೆಯ ನೋವುಗಳು ಮತ್ತೆ ಕಾಣಿಸಿಕೊಳ್ಳುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವ ಇಚ್ಛೆ ಇರುವುದು. ಇಂದಿನ ನಿಮ್ಮ ಕಾರ್ಯದಿಂದ ಮೆಚ್ಚುಗೆ ಸಿಗುವುದು. ಸಾಕಷ್ಟು ಕಿರಿಕಿರಿ ಇದ್ದರೂ ಅದನ್ನು ಲೆಕ್ಕಿಸದೇ ನಿಮ್ಮ ಕರ್ತವ್ಯದಲ್ಲಿ ನೀವು ನಿರತರಾಗುವಿರಿ. ಪ್ರಭಾವೀ ವ್ಯಕ್ತಿಗಳ ಸಹಕಾರದಿಂದ ನಿಮಗೆ ಜೀವನದ ಉತ್ತಮ‌ ಮಾರ್ಗವು ಕಾಣಿಸುವುದು. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮನೆಯವರು ನಿಮ್ಮ ಮಾತಿಗೆ ಬೆಲೆ ಕೊಡುತ್ತಾರೆ. ಆಧ್ಯಾತ್ಮಿಕ ಚಿಂತನೆ ನಿಮಗೆ ಅಧಿಕ ಸಂತೋಷವನ್ನು ಕೊಡುವುದು. ನಿರ್ಧಾರಗಳಲ್ಲಿ ಇರುವ ಸ್ಪಷ್ಟತೆಯನ್ನು ಅಧಿಕೃತಗೊಳಿಸಿಕೊಳ್ಳಿ. ಭವಿಷ್ಯದ ಕನಸು ಕಾಣುವಿರಿ. ಭೋಗವಸ್ತುಗಳ ಮಾರಾಟದಿಂದ ನಿಮಗೆ ಲಾಭವಾಗುವುದು. ಮಕ್ಕಳ ತೀರ್ಮಾನಕ್ಕೆ ನೀವು ಬದ್ಧರಾಗಬೇಕಾಗುವುದು.

ತುಲಾ ರಾಶಿ:

ಹಣಕಾಸು ವ್ಯವಹಾರಗಳಲ್ಲಿ ದೃಢತೆ. ಸ್ನೇಹಿತರ ಬೆಂಬಲ ದೊರೆಯುವದು. ಕುಟುಂಬ ವಿಷಯಗಳಲ್ಲಿ ಸಂತೋಷ. ಸಣ್ಣ ಪ್ರಯಾಣವು ಹೊಸ ದಿಕ್ಕಿಗೆ ಸಾರಿ. ಮನಸ್ಸಿನಲ್ಲಿ ಹೊಸ ಚೈತನ್ಯ. ನಿಮ್ಮ ಖರ್ಚಿನ ಅಂದಾಜು ಮೀರಿದಂತೆ ನಿಮಗೆ ಕಾಣಿಸಬಹುದು. ಎಲ್ಲ ಚರಾಸ್ತಿಯನ್ನೂ ನೀವೇ ಪಡೆಯುವ ಹುನ್ನಾರ ನಡೆಸಬಹುದು. ಧಾರ್ಮಿಕ ಆಚರಣೆಯನ್ನು ವಿವೇಚನಾರಹಿತವಾಗಿ ಮಾಡುವಿರಿ. ನಿಮ್ಮ ಆದಾಯವನ್ನು ಎಲ್ಲಿಯಾದರೂ ಹೇಳಿಕೊಳ್ಳುವಿರಿ. ಬೇಕೆಂದೇ ಕಲಹವನ್ನು ತಂದುಕೊಳ್ಳುವಿರಿ. ಜೀವನದ ಬಗ್ಗೆ ಒಂಟಿಯಾಗಿ ಕುಳಿತು ಗಂಭೀರ ಚಿಂತನೆಯನ್ನು ಮಾಡುವಿರಿ. ಕಛೇರಿಯಲ್ಲಿ ಆದ ತಪ್ಪಿನಿಂದ ಮೇಲಧಿಕಾರಿಗಳು ಎಚ್ಚರಿಕೆ ಕೊಡುವರು. ಸರ್ಕಾರಿ ಕಾರ್ಯವು ವಿಳಂಬವಾಗಬಹುದು. ‌ಮಾತಿನಲ್ಲಿ ಮಧುರತೆ ಕೈಗೂಡುತ್ತದೆ. ಉದ್ಯೋಗದಲ್ಲಿ ನಿರೀಕ್ಷೆಯ ಪ್ರಗತಿ. ಬೇಡವೆಂದು ಬಿಟ್ಟರೂ ಕೆಲಸವು ಮಾತ್ರ ನಿಮ್ಮನ್ನು ಬಿಡದು. ಪ್ರೀತಿಯನ್ನು ಗೌಪ್ಯವಾಗಿ ಇಡುವಿರಿ. ಆಲಸ್ಯದಿಂದ ಹಿರಿಯರು ನಿಮ್ಮ ಬಗ್ಗೆ ಹೇಳಿಯಾರು. ವಿವಾದವನ್ನು ಮಾಡಿಕೊಳ್ಳಲು ಮನಸ್ಸಾಗದು.

ವೃಶ್ಚಿಕ ರಾಶಿ:

ಹಣಕಾಸಿನಲ್ಲಿ ಬೆಳವಣಿಗೆ ಸ್ಥಿರ. ಮನೆಯಲ್ಲಿ ಸಂತೋಷ, ಹಳೆಯ ಬೇಸರಗಳು ದೂರವಾಗುವ ಸೂಚನೆ. ಅಧ್ಯಯನ, ಸಂಶೋಧನೆಗೆ ಉತ್ತಮ ದಿನ. ನಿಮ್ಮನ್ನು ಅನಾದರ ಮಾಡಿದಂತೆ ಕಂಡುಬಂದೀತು. ಸುಮ್ಮನೇ ವಾದಕ್ಕೆ ಇಳಿಯುವುದು ಬೇಡ. ಕಲಾವಿದರು ಹೆಚ್ಚಿನ ಅವಕಾಶಕ್ಕೆ ಪ್ರಯತ್ನ ಮಾಡುವರು. ನಿಮ್ಮ ವೃತ್ತಿ ಸ್ಥಳವು ಬದಲಾಗಬಹುದು. ಸಾಕಷ್ಟು ಪ್ರಯತ್ನದ ಫಲವಾಗಿ ಉದ್ಯಮದ ದಾರಿಯು ಸುಗಮವಾಗಲಿದೆ. ಪ್ರೇಮವಿವಾಹವು ತೀರ್ಮಾನವಾಗುವುದು. ಹೊಸ ಮನೆಯ ಖರೀದಿಯ ಯೋಚನೆ ಮಾಡುವಿರಿ. ಸಹೋದ್ಯೋಗಿಗಳ ಜೊತೆ ನಿಮ್ಮ ವರ್ತನೆಯು ದಿನದಂತೆ ಇರದು. ನಿಮ್ಮದಾದ ಕಾರ್ಯದಲ್ಲಿ ನೀವು ಮಗ್ನರಾಗುವುದು ಉತ್ತಮ. ಯಾರ ಬಗ್ಗೆಯೂ ಸುಮ್ಮನೇ ಮಾತನಾಡುವುದು ಬೇಡ. ಹೊಸ ವಸ್ತುವಿನ ಬಳಕೆಯಿಂದ ನಿಮಗೆ ಸಂತೋಷವು ಸಿಗುವುದು. ಕೆಲಸಗಳಲ್ಲಿ ವಿಳಂಬ ಕಡಿಮೆ. ಬುದ್ಧಿವಂತ ನಿರ್ಧಾರಗಳು ಕೈಗೂಡುತ್ತವೆ. ನಿಮಗೆ ಹೂಡಿಕೆಯ ಬಗ್ಗೆ ಹೇಳಿ ಆಪ್ತರು ನಿಮ್ಮ ತಲೆಯನ್ನು ಕೆಡಿಸಬಹುದು. ಮರಣದ ಭೀತಿಯು ನಿಮ್ಮನ್ನು ಕಾಡುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ಕೆಲವು ಅನುಭವಗಳು ನಿಮಗೆ ಪಾಠವಾಗಬಹುದು.

ಧನು ರಾಶಿ:

ಹಣಕಾಸಿನಲ್ಲಿ ನಿಗಾ ಇಡಲು ಸಾಧ್ಯವಾಗದು. ಕುಟುಂಬದ ವಿಚಾರಗಳಲ್ಲಿ ಮೃದುವಾಗಿ ನಡೆದುಕೊಂಡರೆ ಸಮನ್ವಯ. ಧೈರ್ಯ, ಭಾಗ್ಯ ಎರಡೂ ಈ ದಿನ ಉತ್ತಮವಾಗಿದೆ. ಕಾನೂನಿಗೆ ಸಮ್ಮತವಾದ ಕಾರ್ಯವನ್ನು ಮಾಡುವಿರಿ. ಮೋಹದಲ್ಲಿ ನೀವು ಬೀಳುವಿರಿ. ಖರ್ಚಿನಿಂದ ನೀವು ಆತಂಕಗೊಳ್ಳುವಿರಿ. ನಿಮ್ಮ ಸಮಯವನ್ನು ಸಹೋದ್ಯೋಗಿಗಳು ಹಾಳು ಮಾಡುವರು. ಮನಸ್ಸಿನ ಚಾಂಚಲ್ಯದಿಂದ ನಿಮ್ಮ ಸಂಪತ್ತನ್ನು ಕಳೆದುಕೊಳ್ಳುವಿರಿ. ಕೋಪವನ್ನು ಕಡಿಮೆ ಮಾಡಿಕೊಳ್ಳಲು ತಂತ್ರವನ್ನು ಕಂಡುಕೊಳ್ಳಿ. ನಿಮ್ಮ ಬಗ್ಗೆ ನಿಮ್ಮೆದುರೇ ಆಡಿಕೊಳ್ಳುವರು. ಸಿಟ್ಟು ಬಂದರೂ ನಿಯಂತ್ರಣ ಮಾಡಿಕೊಳ್ಳುವಿರಿ. ಶ್ರಮಕ್ಕೆ ಯೋಗ್ಯವಾದ ಫಲವನ್ನೇ ನಿರೀಕ್ಷಿಸಿ. ನಾಯಕತ್ವ ಗುಣ ಹೊರಹೊಮ್ಮುತ್ತದೆ. ಹೊಸ ಸಂಬಂಧಗಳು ಲಾಭಕರ. ಉದ್ಯೋಗದಲ್ಲಿ ಅಧಿಕಾರಿಗಳು ಮೆಚ್ಚುವ ಸಾಧ್ಯತೆ. ಸಹೋದರನಿಂದ ಅರ್ಥಿಕ ಸಹಾಯವನ್ನು ಪಡೆಯುವಿರಿ. ತಂದೆಯ ಆರೋಗ್ಯದ ಬಗ್ಗೆ ಗಮನವಿರಲಿ. ನಿಜವನ್ನು ಹೇಳಲು ಕಷ್ಟವಾಗಬಹುದು. ಅನಪೇಕ್ಷಿತ ಖರ್ಚನ್ನು ನಿಯಂತ್ರಣಕ್ಕೆ ತರಬೇಕು. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ.

ಮಕರ ರಾಶಿ:

ಹೊಸ ಯೋಜನೆಗಳು ಮನಸ್ಸಿನಲ್ಲಿ ಮೂಡಬಹುದು. ವ್ಯಾಪಾರದಲ್ಲಿ ಅನುಕೂಲಕರ ಬೆಳವಣಿಗೆ. ಸಹೋದ್ಯೋಗಿಗಳಿಂದ ಬೆಂಬಲ. ಇಂದು ನೀವು ಬೇರೆಯವರ ಕಷ್ಟಕ್ಕೆ ಸ್ಪಂದಿಸಬೇಕಾಗಬಹುದು. ಬಂಧುಗಳು ನಿಮ್ಮ ಬಗ್ಗೆ ಔದಾರ್ಯ ತೋರಿಸುವರು. ಸಹಾಯವೂ ಸಿಗಬಹುದು. ನಿಮ್ಮ ಸರಳತೆಯನ್ನು ಆಡಿಕೊಳ್ಳುವರು. ಯಾರನ್ನೂ ದೂಷಿಸುತ್ತ ಇರಬೇಡಿ.‌ ನಿಮ್ಮ ತಪ್ಪನ್ನು ತಿದ್ದಿಕೊಳ್ಳುವ ಸ್ವಭಾವವು ಉತ್ತಮವಾದುದು. ಲಾಭಕ್ಕಾಗಿ ದೇಹವನ್ನು ದಂಡಿಸಬೇಕಾದೀತು. ಪಾಲುದಾರಿಕೆಯಲ್ಲಿ ನಿಮ್ಮ ಮಾತೇ ಅಂತಿಮವಾಗುವುದು. ಇನ್ನೊಬ್ಬರಿಗೆ ಹಣವನ್ನು ಕೊಡುವಾಗ ವ್ಯಕ್ತಿತ್ವದ‌ ಬಗ್ಗೆ ಗಮನವಿರಲಿ. ಎಲ್ಲವೂ ನಿಮ್ಮ ಮೂಗಿನ‌ ನೇರಕ್ಕೆ ನಡೆಯದು. ಕುಟುಂಬದಲ್ಲಿ ಸುಸ್ಥಿರತೆ, ಒಳ್ಳೆಯ ಸಂಭಾಷಣೆ ಅಗತ್ಯ. ಆರೋಗ್ಯ ಸ್ವಲ್ಪ ಜಾಗರೂಕತೆ ಬೇಡಿಕೆ. ಮಾತಿನಲ್ಲಿ ಮಿತಭಾಷಣ ಮಾಡಿದರೆ ಎಲ್ಲವೂ ಸುಗಮ. ಒತ್ತಡದ ನಡುವೆಯೂ ನಿಮ್ಮ ಕೆಲಸವನ್ನು ಸರಳ ಮಾಡಿಕೊಳ್ಳುವಿರಿ. ನಿಮ್ಮ ಸಾಮರ್ಥ್ಯಕ್ಕೆ ಸರಿಯಾದ ಕೆಲಸವನ್ನು ಮಾಡಿ. ಪಾಲುದಾರಿಕೆಯಲ್ಲಿ ಅನವಶ್ಯಕ ವಾದವನ್ನು ಮಾಡಬೇಕಾಗುವುದು.

ಕುಂಭ ರಾಶಿ:

ಮನೆಯಿಂದ ಶುಭ ವಾರ್ತೆಯ ನಿರೀಕ್ಷೆ. ಕೆಲಸದಲ್ಲಿ ಸ್ಥಿರತೆ, ಹಿರಿಯರ ಮೆಚ್ಚುಗೆ. ಮನೋಬಲ ಹೆಚ್ಚಿಸುವ ಸಂದರ್ಭ. ವೃತ್ತಿಯಲ್ಲಿ ಹೊಸ ದಿಕ್ಕಿನ ಸೂಚನೆ. ಮನಶ್ಚಾಂಚಲ್ಯದಿಂದ ಕೆಲಸದಲ್ಲಿ ತೊಂದರೆ ಆಗುವುದು. ಸಾವಧಾನತೆಯನ್ನು ನೀವು ರೂಢಿಸಿಕೊಳ್ಳಬೇಕಾದೀತು. ನಿಮ್ಮ ನಾಟಕೀಯ ಮನೋಭಾವವು ಇತರರಿಗೆ ಗೊತ್ತಾದೀತು. ಮಗಳಿಗೆ ತಂದೆಯಿಂದ ಬೇಕಾದ ಸಹಾಯವು ಸಿಗಬಹುದು. ಆರ್ಥಿಕ ಬೆಳವಣಿಗೆಗೆ ಹೆಚ್ಚು ಸಮಯವನ್ನು ಕೊಡುವಿರಿ. ಅನಾರೋಗ್ಯದಿಂದ ನೀವು ಗುಣಮುಖರಾದರೂ ಪೂರ್ಣ ಹೊರ ಬರಲು ಆಗದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಇಂದಿನ ಪ್ರಯಾಣವನ್ನು ಅನಿವಾರ್ಯವಾದರೆ ಮಾತ್ರ ಮಾಡಿ.‌ ಆರ್ಥಿಕವಾಗಿ ಚಿಕ್ಕ ಲಾಭ, ದೊಡ್ಡ ನಿರ್ಧಾರಗಳನ್ನು ಮುಂದೂಡುವುದು ಚೆನ್ನ. ಸಂಯಮದಿಂದ ನಡೆದುಕೊಂಡರೆ ಯಶಸ್ಸು. ಅನಾರೋಗ್ಯವನ್ನು ಮನೆಮದ್ಸಿನಿಂದ ಕಡಿಮೆ ಮಾಡಿಕೊಳ್ಳಿ. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು.

ಮೀನ ರಾಶಿ:

ಹಣಕಾಸು ವಿಷಯಗಳಲ್ಲಿ ಜಾಗರೂಕತೆಯಿಂದ ಲಾಭ. ಕಾರ್ಯಕ್ಷೇತ್ರದಲ್ಲಿ ಶ್ರಮ ಗುರುತಾಗುವ ಸಾಧ್ಯತೆ. ಮನೆಯಲ್ಲಿ ಸಂತೋಷದ ವಾತಾವರಣ. ಆರೋಗ್ಯದಲ್ಲಿ ಚೈತನ್ಯ ಹೆಚ್ಚಾಗುವುದು. ಇಂದು ನಿಮ್ಮ ಉದ್ಯೋಗದಲ್ಲಿ ಉತ್ತಮ ಪ್ರಗತಿಯು ಇರುವುದು. ಹೊಸದಾಗಿ ಉದ್ಯೋಗವನ್ನು ಮಾಡುವವರಿಗೆ ಆಯ್ಕೆಯಲ್ಲಿ ಗೊಂದಲವು ಕಾಣಿಸಿಕೊಂಡೀತು. ಮಕ್ಕಳ ಬಗ್ಗೆ ಕಾಳಜಿ ಇರಲಿದೆ. ತಂದೆಯ ಸೇವೆಯನ್ನು ಮಾಡುವಿರಿ. ಕೆಲವು ವಿಚಾರದಲ್ಲಿ ನೀವು ನಿಯಂತ್ರಣವನ್ನು ತಪ್ಪಬಹುದು. ಆಪ್ತರ ಮಾತು ನಿಮ್ಮ ಮನಸ್ಸಿಗೆ ಬಾರದು. ಸರ್ಕಾರದ ಉದ್ಯೋಗದಲ್ಲಿ ನಿಮಗೆ ಅಸಮಾಧಾನ ಉಂಟಾಗಬಹುದು. ತಮ್ಮ ಮಾತಿಗೆ ಬೆಲೆ ಸಿಗುವ ಸಮಯ. ಪ್ರಯಾಣ ಯೋಜನೆಗಳಿಗೆ ಅನುಕೂಲ. ದೈರ್ಯದಿಂದ ಮುಂದುವರಿದರೆ ಯಶಸ್ಸು. ಅಲ್ಪ ವಸ್ತುಗಳಿಂದ ಸಂತೋಷವಾಗಿ ಇರಲು ಬಯಸುವಿರಿ. ಹಳೆಯ ವಸ್ತುಗಳನ್ನು ಯಾರಿಗಾದರೂ ಕೊಡುವಿರಿ. ಸ್ತ್ರೀಯರ ಜೊತೆ ಹೆಚ್ಚು ಸಮಯ ಇರುವಿರಿ. ಕೃಷಿಯಲ್ಲಿ ಆಸಕ್ತಿಯು ಹೆಚ್ಚಾಗಬಹುದು.

05 ಡಿಸೆಂಬರ್​​ 2025ರ ಶುಕ್ರವಾರದ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಜ್ಯೇಷ್ಠಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಪ್ರತಿಪತ್ ನಿತ್ಯನಕ್ಷತ್ರ : ರೋಹಿಣೀ, ಯೋಗ : ಪರಿಘ, ಕರಣ : ಭದ್ರ, ಸೂರ್ಯೋದಯ – 06 – 29 am, ಸೂರ್ಯಾಸ್ತ – 05 – 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:45 – 12:10, ಯಮಗಂಡ ಕಾಲ 15:01 – 16:26, ಗುಳಿಕ ಕಾಲ 07:55 – 09:20

-ಲೋಹಿತ ಹೆಬ್ಬಾರ್ – 8762924271 (what’s app only)

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ