Love Horoscope: ವಾರದ ಪ್ರೇಮ ಭವಿಷ್ಯ; ಈ ರಾಶಿಗೆ ಅನಿರೀಕ್ಷಿತ ಸಂದೇಶ, ಪರಿಚಯ ಮನಸ್ಸಿಗೆ ಉತ್ಸಾಹ ತುಂಬಲಿದೆ
ಡಿಸೆಂಬರ್ 7 ರಿಂದ 13 ರ ಈ ವಾರ ಪ್ರೀತಿಯು ಗಂಭೀರ ಸ್ವರೂಪ ಪಡೆಯಲಿದೆ. ಸಂಬಂಧಗಳಲ್ಲಿ ಭಾವನಾತ್ಮಕ ಸವಾಲುಗಳು ಮತ್ತು ಆಳವಾದ ಮಾತುಕತೆಗಳು ಸಂಭವಿಸಬಹುದು. ಆದರೆ, ಸರಿಯಾದ ಸಂವಹನ ಮತ್ತು ತಿಳುವಳಿಕೆಯಿಂದ ಪ್ರೀತಿಯ ಬಂಧಗಳು ಬಲಗೊಳ್ಳುತ್ತವೆ. ಪ್ರತಿಯೊಂದು ರಾಶಿಚಕ್ರದವರು ತಮ್ಮ ಪ್ರೀತಿಯ ಪ್ರಯಾಣದಲ್ಲಿ ಹೊಸ ಸ್ಪಷ್ಟತೆ ಮತ್ತು ನಂಬಿಕೆಯನ್ನು ಕಂಡುಕೊಳ್ಳುವ ಸಮಯವಿದು, ಕೆಲವೊಮ್ಮೆ ಸಣ್ಣ ಅಸಮಾಧಾನಗಳೂ ಪ್ರೀತಿಯಲ್ಲಿ ಹೊಸ ತಿರುವು ನೀಡಬಹುದು.

ಡಿಸೆಂಬರ್ 07 ರಿಂದ ಡಿಸೆಂಬರ್ 13 ವರೆಗೆ ಎರಡನೇ ವಾರವಾಗಿದ್ದು ಪ್ರೀತಿಯು ಗಂಭೀರ ಸ್ವರೂಪಕ್ಕೆ ಬರಲಿದೆ. ಯಾರ ಯಾವ ಮಾತೂ ಘಾಸಿಯನ್ನು ಉಂಟುಮಾಡೀತು. ಆಕರ್ಷಣೆ ಬದಲಾಗುವ ಸಾಧ್ಯತೆ ಇದೆ. ಪ್ರೀತಿಯ ಪ್ರಯಾಣ ಕೆಲವು ಅಸಾಧ್ಯವನ್ನೂ ಸಾಧ್ಯಮಾಡುವುದು. ಪ್ರೇಮಕ್ಕಾಗಿ ಸಿಟ್ಟಾಗುವ ಸಂದರ್ಭ ಬರುವುದು.
ಮೇಷ ರಾಶಿ:
ಎರಡನೇ ವಾರ ನಿಮ್ಮ ಪ್ರೀತಿಯಲ್ಲಿ ಸ್ಪಷ್ಟತೆ ಮತ್ತು ನೈಜತೆಯ ಪರೀಕ್ಷೆಯಾಗುತ್ತದೆ. ಸಂಗಾತಿಯೊಂದಿಗೆ ಹಳೆಯ ಅಸಮಾಧಾನಗಳನ್ನು ನಿವಾರಿಸಿಕೊಳ್ಳುವ ಅವಕಾಶ ಇದೆ. ಮಾತಿನ ಮೃದುತನದಿಂದ ಸಂಬಂಧ ಗಾಢವಾಗುವುದು. ಒಂಟಿಯಾದವರಿಗೆ ಸ್ನೇಹದಿಂದ ಪ್ರೇಮಕ್ಕೆ ಪರಿವರ್ತನೆ ಸಾಧ್ಯ. ಅನಿರೀಕ್ಷಿತ ಸಂದೇಶ, ಪರಿಚಯಗಳು ಮನಸ್ಸಿಗೆ ಉತ್ಸಾಹ ತುಂಬುತ್ತವೆ. ಅಹಂಕಾರ ದೂರವಿರಿಸಿದರೆ ಪ್ರೀತಿ ಸುಂದರವಾಗಿ ಅರಳುತ್ತದೆ.
ವೃಷಭ ರಾಶಿ:
ರಾಶಿ ಚಕ್ರದ ಎರಡನೇ ರಾಶಿಯವರಿಗೆ ಪ್ರೀತಿಯಲ್ಲಿ ನೆಮ್ಮದಿ, ಭದ್ರತೆ ಹೆಚ್ಚಿರುವುದು. ಸಂಗಾತಿಯ ಕಾಳಜಿ ಬೆಂಬಲವಾಗಿ ನಿಮಗೆ ಕಾಣುತ್ತದೆ. ಮನೆಯಲ್ಲಿ ಮೃದುವಾಗಿ ಮಾತನಾಡಿದರೆ ಸಂಬಂಧ ಪ್ರೇಮಕ್ಕೆ ಅವರಿಂದ ಬಲಸಿಗುವುದು. ಏಕಾಂಗಿಯಾಗಿ ಇರುವವರಿಗೆ ಹೊಸ ಪರಿಚಯ ಪ್ರಾಮಾಣಿಕವಾಗಿ ತೋರಬಹುದು. ಅತಿಯಾದ ಅನುಮಾನ ಬಿಡುವುದು ಮುಖ್ಯ. ಮನಸ್ಸು ಸ್ಥಿರವಾಗಿರುವುದರಿಂದ ಪ್ರೀತಿ ನಿಜವಾದ ದಿಕ್ಕಿನಲ್ಲಿ ಸಾಗುತ್ತದೆ.
ಮಿಥುನ ರಾಶಿ:
ಡಿಸೆಂಬರ್ ನ ಎರಡನೇ ವಾರ ಸಂವಹನವೇ ಪ್ರೀತಿಯ ಮುಖ್ಯ ಸೇತುವೆಯಾಗಲಿದೆ. ಮಾತಿಲ್ಲದೇ ಭಾವನೆಗಳು ಸ್ಪಷ್ಟವಾಗಿ ಬದಲಾಗುತ್ತದೆ. ದೂರಸಂಪರ್ಕ ಪ್ರೇಮಿಗಳಿಗೆ ಉತ್ತಮ ಸಮಯ. ದಾಂಪತ್ಯದಲ್ಲಿ ನಡುವೆ ಸಣ್ಣ ಒಡಕುಗಳು ಇದ್ದರೂ ಅರ್ಥೈಸಿಕೊಳ್ಳುವಿಕೆ ಎಲ್ಲವನ್ನೂ ಸರಿಮಾಡುತ್ತದೆ. ಸ್ನೇಹಿತ ವಲಯದಿಂದ ಪ್ರೀತಿಯ ಸಾಧ್ಯತೆ ಇದೆ. ಚುರುಕು ಮನಸ್ಸು ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಸಂಬಂಧದಲ್ಲಿ ಸ್ವತಂತ್ರತೆ, ಸ್ಪಷ್ಟತೆ ಸಮಬಲವಾಗುವುದು.
ಕರ್ಕಾಟಕ ರಾಶಿ:
ನಾಲ್ಕನೇ ಭಾವನೆಗಳು ಆಳವಾಗಿ ಹರಿಯುವ ವಾರ. ಸಂಗಾತಿಯ ಮಮತೆ, ಕಾಳಜಿ ಮನಸ್ಸನ್ನು ತಣಿಸುತ್ತದೆ. ಕುಟುಂಬದ ಒತ್ತಡ ಕಡಿಮೆಯಾದಂತೆ ಸಂಬಂಧ ಗಟ್ಟಿಯಾಗುತ್ತದೆ. ಹಳೆಯ ನೋವುಗಳನ್ನು ಬಿಡುವ ಕಾಲ. ಮೃದುವಾಗಿ ಮಾತನಾಡುವ, ಹೃದಯದ ಭಾವನೆ ಅರ್ಥಮಾಡಿಕೊಳ್ಳುವ ವ್ಯಕ್ತಿಯ ಪರಿಚಯ ಸಾಧ್ಯ. ಅತಿಸೂಕ್ಷ್ಮತೆಯನ್ನು ನಿಯಂತ್ರಿಸಿದರೆ ಪ್ರೀತಿ ಸುಂದರವಾಗಿ ಬೆಳೆಯುತ್ತದೆ. ಒಳಗಿನ ಭಯಗಳನ್ನು ಹೇಳಿಕೊಳ್ಳುವುದು ಪ್ರಯೋಜನಕಾರಿ.
ಸಿಂಹ ರಾಶಿ:
ಐದನೇ ರಾಶಿಯವರಿಗೆ ಪ್ರೀತಿಯಲ್ಲಿ ಆತ್ಮವಿಶ್ವಾಸ ಹೆಚ್ಚಾಗುವ ವಾರ. ಸಂಗಾತಿ ನಿಮ್ಮ ನಾಯಕತ್ವಕ್ಕೆ ಮರುಳಾಗುವರು. ಅಹಂಕಾರದಿಂದ ದೂರವಿರಿಸಿದರೆ ಸಂಬಂಧ ಸಿಹಿಯಾಗುತ್ತದೆ. ದಾಂಪ ಕ್ಷಣ, ಅಚ್ಚರಿ ಉಡುಗೊರೆಗಳು. ಆಕರ್ಷಕ ಪರಿಚಯ, ಪರಸ್ಪರ ಸೆಳೆಯುವಿಕೆ ಜಾಸ್ತಿ. ಪ್ರೀತಿಯಲ್ಲಿ ದೃಢವಸದ ನಿಲುವು, ನಿಷ್ಠೆ ಮುಖ್ಯ. ಮನಸ್ಸು ಸಂತೋಷದಿಂದ ತುಂಬಿ ಉತ್ಸಾಹ ಹೆಚ್ಚಾಗುತ್ತದೆ.
ಕನ್ಯಾ ರಾಶಿ:
ಆರನೇ ರಾಶಿಯವರಿಗೆ ಈ ವಾರ ಸಂಬಂಧದಲ್ಲಿ ನಿರ್ಣಾಯಕ ಸನ್ನಿವೇಶ ಹೆಚ್ಚಾಗುವ ವಾರ. ಅನವಶ್ಯಕ ಚಿಂತನೆಗಳನ್ನು ಬಿಟ್ಟು ಭಾವನೆಗಳನ್ನು ಹೇಳುವ ಪ್ರಯತ್ನ ಮಾಡಿ. ಸಂಗಾತಿಯೊಂದಿಗೆ ಸಮಾಧಾನಕರ ಮಾತುಕತೆ ನಡೆಯುತ್ತದೆ. ದಾಂಪತ್ಯದಲ್ಲಿ ಯೋಜನೆಗಳು ಯಶಸ್ವಿಯಾಗುತ್ತವೆ. ಕೆಲಸ ಹಾಗೂ ಕಲಿಕೆಯ ವಲಯದಲ್ಲಿ ಹೊಸ ಪರಿಚಯ. ಪ್ರೀತಿಯಲ್ಲಿ ಸತ್ಯ, ಸರಳತೆ ನಿಮ್ಮ ಆಕರ್ಷಣೆಯ ಗುಣವಾಗಲಿದೆ. ಹೃದಯ ತೆರೆದಿಟ್ಟು ಬಂಧವನ್ನು ಗಾಢವಾಗಿಸುವಿರಿ.
ತುಲಾ ರಾಶಿ:
ಡಿಸೆಂಬರ್ ತಿಂಗಳ ಎರಡನೆಯ ಈ ವಾರ ಪ್ರೀತಿಯಲ್ಲಿ ಸಮತೋಲನ ಪುನಃ ಮೂಡುತ್ತದೆ. ಸಂಗಾತಿಯ ಜೊತೆ ಮಾಡಿದ ಸಂವಾದ ಹೊಂದಾಣಿಕೆ ಹೆಚ್ಚಿಸುತ್ತದೆ. ಹಳೆಯ ವಾಗ್ವಾದಗಳು ನಿವಾರಣೆಯಾಗುವ ಸೂಚನೆ. ಒಂಟಿಯಾಗಿರುವವರು ಕಲಾತ್ಮಕ ಅಥವಾ ಸುಂದರ ವ್ಯಕ್ತಿಯ ಪರಿಚಯ ಮಾಡಿಕೊಳ್ಳುವರು. ಮೃದುತನ, ಶಾಂತ ಮನಸ್ಸು ಸಂಬಂಧವನ್ನು ಸುಂದರವಾಗಿ ಬೆಳೆಯಿಸುತ್ತದೆ. ನಿಷ್ಠೆ, ಮೈತ್ರಿ ಬಲ ವೃದ್ಧಿಸುತ್ತದೆ.
ವೃಶ್ಚಿಕ ರಾಶಿ:
ಎರಡನೇ ವಾರದಲ್ಲಿ ಪ್ರೀತಿಯಲ್ಲಿ ತೀವ್ರ ಭಾವನೆಗಳು ಈ ವಾರದಲ್ಲಿ ಹೆಚ್ಚಾಗುತ್ತವೆ. ಸಂಗಾತಿಯ ಆಕರ್ಷಣೆ ಗಾಢವಾಗಿ ಅನುಭವವಾಗುತ್ತದೆ. ಆದರೆ ಅತಿಯಾದ ಅನುಮಾನ ಅಥವಾ ಒತ್ತಡ ಹೇರದಿರಿ. ಜೋಡಿಗಳಿಗೆ ಖಾಸಗಿ ಸಮಯ ಶುಭ. ಒಂಟಿಯವರಿಗೆ ಆಕರ್ಷಣೆ ಇರುವ ಪರಿಚಯ ಸಾಧ್ಯ. ಭಾವನೆಯನ್ನು ನಿಭಾಯಿಸುವ ಸಮತೋಲನ ಇದ್ದರೆ ಸಂಬಂಧ ದೀರ್ಘಕಾಲಿಕವಾಗಿ ಬಲವಾಗುತ್ತದೆ, ನಂಬಿಕೆ ಮುಖ್ಯ.
ಧನು ರಾಶಿ:
ಈ ವಾರ ಪ್ರೀತಿಯಲ್ಲಿ ಸ್ವತಂತ್ರತೆ ಮತ್ತು ಹೊಸತನ ಮೆರೆಯುತ್ತದೆ. ದೂರದಲ್ಲಿರುವ ಪ್ರಿಯರು ಹತ್ತಿರವಾಗುವ ಅನುಭವ. ಜೋಡಿಗಳಿಗೆ ಪ್ರವಾಸ, ಸಾಧ್ಯ. ಒಂಟಿಯವರಿಗೆ ವಿದೇಶ ಸಂಸ್ಕೃತಿಯ ವ್ಯಕ್ತಿಯ ಪರಿಚಯ. ಮಾತಿನಲ್ಲಿ ಚುರುಕುತನ ನಿಜಭಾವನೆಗಳು ಸಂಬಂಧವನ್ನು ಬಲಪಡಿಸುತ್ತವೆ. ಆಶಾವಾದದಿಂದ ನಡೆದುಕೊಂಡರೆ ಪ್ರೀತಿ ಸುಖಕರವಾಗಿ ಬೆಳೆಯುತ್ತದೆ.
ಇದನ್ನೂ ಓದಿ: ವಾರದ ಉದ್ಯೋಗ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ವೃತ್ತಿಜೀವನ ಹೇಗಿರಲಿದೆ ತಿಳಿಯಿರಿ
ಮಕರ ರಾಶಿ:
ಈ ರಾಶಿಯವರಿಗೆ ಈ ವಾರ ಸಂಬಂಧದಲ್ಲಿ ಸ್ಥಿರತೆ, ಜವಾಬ್ದಾರಿ ಹೆಚ್ಚಾಗುತ್ತದೆ. ಭವಿಷ್ಯದ ಬಗ್ಗೆ ಚರ್ಚೆ ಅನುಕೂಲಕರ. ಮೃದುವಾಗಿ ಮಾತನಾಡಿದರೆ ಒಡಕುಗಳು ಕರಗುತ್ತವೆ. ಒಂಟಿಯಾದ ಅನುಭವವದಿಂದ ಕುಟುಂಬ ಅಥವಾ ಹಿರಿಯರ ಮೂಲಕ ವಿಶ್ವಾಸ ದೊರಕಬಹುದು. ಕೆಲಸದ ಒತ್ತಡ ಇದ್ದರೂ ಪ್ರೀತಿಗೆ ಸಮಯ ಮೀಸಲಿಟ್ಟರೆ ಬಂಧ ಚೆನ್ನ. ಈ ವಾರ ನಂಬಿಕೆ, ಧೀರತೆ ನಿಮ್ಮ ಬಲ.
ಕುಂಭ ರಾಶಿ:
ಡಿಸೆಂಬರ್ ನ ಎರಡನೇ ವಾರ ಮೈತ್ರಿ ಮತ್ತು ಪ್ರೀತಿ ಒಂದಾಗುವ ವಾರ. ಸಂಗಾತಿಯೊಂದಿಗೆ ಬೌದ್ಧಿಕ ಮಾತುಕತೆ ಹತ್ತಿರತೆಯನ್ನು ನೀಡುತ್ತದೆ. ಜೋಡಿಗಳಿಗೆ ಪರಸ್ಪರ ಗೌರವ ಹೆಚ್ಚಾಗುತ್ತದೆ. ಸ್ನೇಹಿತರ ಮೂಲಕ ಹೊಸ ಪರಿಚಯ. ಸಂಬಂಧದಲ್ಲಿ ಸ್ವಾತಂತ್ರ್ಯ ಬೇಕಾದರೂ ಭಾವನೆ ಹೇಳಿಕೊಳ್ಳಬೇಕು. ಸಣ್ಣ ಒಡಕುಗಳು ಬೇಗ ಸರಿಹೋಗುತ್ತವೆ. ಮನಸ್ಸಿನ ಪಾರದರ್ಶಕತೆ ಸಂಬಂಧಕ್ಕೆ ಬೆಳಕು.
ಮೀನ ರಾಶಿ:
ಈ ವಾರ ಪ್ರೀತಿ ಮೃದು, ಭಾವಪೂರ್ಣ. ಸಂಗಾತಿಯ ಆರೈಕೆ ಹೃದಯ ತುಂಬಿಸುತ್ತದೆ. ಹಳೆಯ ನೋವುಗಳ ಚಿಹ್ನೆಗಳು ಕರಗುವ ಕಾಲ. ಏಕಾಂಗಗೆ ಕಲಾ, ಸಂಗೀತ, ಭಕ್ತಿ ವಲಯದಲ್ಲಿ ಪರಿಚಯ ಸಾಧ್ಯ. ಅತಿಯಾದ ಸಂವೇದನಾಶೀಲತೆ ಕಡಿಮೆ ಮಾಡುವುದು ಉತ್ತಮ. ಕನಸು, ಭಾವನೆ, ನಂಬಿಕೆ ಸೇರಿಕೊಂಡರೆ ಸಂಬಂಧ ದೈವಿಕವೇ ನಂಬುವಷ್ಟು ಗಾಢವಾಗುತ್ತದೆ.
– ಲೋಹಿತ ಹೆಬ್ಬಾರ್ – 8762924271 (what’s app only)




