Video: ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ ಹಾಗೂ ಪುಟಿನ್, ಕಾರಿನ ವೈಶಿಷ್ಟ್ಯವೇನು?
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಪುಟಿನ್ ಅವರನ್ನು ಸ್ವಾಗತಿಸಲು ಆಗಲೇ ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು.ವಿಮಾನದಿಂದ ಇಳಿದ ನಂತರ, ಇಬ್ಬರು ರಾಷ್ಟ್ರಗಳ ಮುಖ್ಯಸ್ಥರು ಪರಸ್ಪರ ಅಪ್ಪಿಕೊಂಡು ಆತ್ಮೀಯವಾಗಿ ಸ್ವಾಗತಿಸಿದರು. ನಂತರ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ಒಂದೇ ಕಾರಿನಲ್ಲಿ ಒಟ್ಟಿಗೆ ಹೊರಟರು. ಆಗಸ್ಟ್‌ನಲ್ಲಿ ಚೀನಾದಲ್ಲಿ ನಡೆದ ಎಸ್ಸಿಒ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ಒಂದೇ ಕಾರಿನಲ್ಲಿ ಪ್ರಯಾಣಿಸಿದ್ದರು.
ನವದೆಹಲಿ, ಡಿಸೆಂಬರ್ 05: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪುಟಿನ್ ಅವರನ್ನು ಸ್ವಾಗತಿಸಲು ಆಗಲೇ ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ವಿಮಾನದಿಂದ ಇಳಿದ ನಂತರ, ಇಬ್ಬರು ರಾಷ್ಟ್ರಗಳ ಮುಖ್ಯಸ್ಥರು ಪರಸ್ಪರ ಅಪ್ಪಿಕೊಂಡು ಆತ್ಮೀಯವಾಗಿ ಸ್ವಾಗತಿಸಿದರು. ನಂತರ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ಒಂದೇ ಕಾರಿನಲ್ಲಿ ಒಟ್ಟಿಗೆ ಹೊರಟರು. ಆಗಸ್ಟ್‌ನಲ್ಲಿ ಚೀನಾದಲ್ಲಿ ನಡೆದ ಎಸ್ಸಿಒ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ಒಂದೇ ಕಾರಿನಲ್ಲಿ ಪ್ರಯಾಣಿಸಿದ್ದರು.
ಪ್ರಧಾನಿ ಮೋದಿ ಅವರೊಂದಿಗೆ ಬಿಳಿ ಟೊಯೋಟಾ ಫಾರ್ಚೂನರ್ (ನೋಂದಣಿ ಸಂಖ್ಯೆ MH01EN5795) ನಲ್ಲಿ ಹೊರಟರು. ಈ ತನ್ನ ಶಕ್ತಿಶಾಲಿ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. ಬುಲೆಟ್ ಪ್ರೂಫ್ ಕಾರಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಇದರ ಆರಂಭಿಕ ಬೆಲೆ ಸುಮಾರು 38.11 ಲಕ್ಷ ರೂ. ಆಗಿದೆ. ಇದು 7 ಆಸನಗಳ ಆರಾಮದಾಯಕ ಕಾರಿದು.
ಎಸ್ಯುವಿ 4,795 ಮಿಮೀ ಉದ್ದ, 1,855 ಮಿಮೀ ಅಗಲ ಮತ್ತು 1,835 ಮಿಮೀ ಎತ್ತರವಿದೆ ಮತ್ತು 2,745 ಮಿಮೀ ವೀಲ್‌ಬೇಸ್ ಹೊಂದಿದೆ. ಕಾರನ್ನು ಏಪ್ರಿಲ್ 24, 2024 ರಂದು ಮುಂಬೈ (ಕೇಂದ್ರ) RTO ನಲ್ಲಿ ನೋಂದಾಯಿಸಲಾಗಿದೆ. ಈ ಪುಟಿನ್-ಮೋದಿ ‘ಕಾರ್‌ಪೂಲ್’ ಕೇವಲ ಸವಾರಿಯಲ್ಲ, ಇದು ನಂಬಿಕೆಯ ಸೇತುವೆ ಎಂದೇ ಹೇಳಬಹುದು. ಪರ್ವತ ಪ್ರದೇಶಗಳಿಂದ ಹಿಡಿದು ನಗರ ಸಂಚಾರ ದಟ್ಟಣೆವರೆಗೆ ಪ್ರತಿ ಸವಾಲನ್ನು ನಿಭಾಯಿಸಬಲ್ಲ ಕಾರಿದು. ಇಂಧನ ಟ್ಯಾಂಕ್ ಸಾಮರ್ಥ್ಯ 80 ಲೀಟರ್ ಆಗಿರುತ್ತದೆ. ಏಳು ಏರ್‌ಬ್ಯಾಗ್‌ಗಳಿವೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

