AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI MPC Meet: ಬಡ್ಡಿದರ 25 ಮೂಲಾಂಕಗಳಷ್ಟು ಇಳಿಸಿದ ಆರ್​ಬಿಐ; ರಿಪೋ ದರ ಶೇ. 5.25ಕ್ಕೆ ಇಳಿಕೆ

RBI Governor Sanjay Malhotra announces policy decisions of MPC: ತತ್​ಕ್ಷಣವೇ ಜಾರಿಗೆ ಬರುವಂತೆ ಆರ್​ಬಿಐ ತನ್ನ ರಿಪೋ ದರವನ್ನು ಶೇ. 5.5ರಿಂದ ಶೇ. 5.25ಕ್ಕೆ ಇಳಿಸಿದೆ. ಆರ್​ಬಿಐನ ಪಾಲಿಸಿ ಸ್ಟ್ಯಾನ್ಸ್ ಅಥವಾ ನೀತಿ ನಿಲುವನ್ನು ನ್ಯೂಟ್ರಲ್​ಗೆ ಇಡಲಾಗಿದೆ. ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.3ರಷ್ಟು ಹೆಚ್ಚಬಹುದು. ಹಣದುಬ್ಬರ ಶೇ. 2ರಷ್ಟಿರಬಹುದು ಎಂದೂ ಅಂದಾಜಿಸಲಾಗಿದೆ.

RBI MPC Meet: ಬಡ್ಡಿದರ 25 ಮೂಲಾಂಕಗಳಷ್ಟು ಇಳಿಸಿದ ಆರ್​ಬಿಐ; ರಿಪೋ ದರ ಶೇ. 5.25ಕ್ಕೆ ಇಳಿಕೆ
ಸಂಜಯ್ ಮಲ್ಹೋತ್ರಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 05, 2025 | 10:43 AM

Share

ನವದೆಹಲಿ, ಡಿಸೆಂಬರ್ 5: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ರಿಪೋ ದರವನ್ನು 25 ಮೂಲಾಂಕಗಳಷ್ಟು ಇಳಿಸಿದೆ. ಈ ಮೂಲಕ ಬಡ್ಡಿದರ ಶೇ. 5.50ರಷ್ಟು ಇದ್ದದ್ದು ಶೇ. 5.25ಕ್ಕೆ ಇಳಿದಿದೆ. ಬುಧವಾರದಿಂದ ನಡೆದ ಎಂಪಿಸಿ ಸಭೆಯ ನಿರ್ಧಾರಗಳನ್ನು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಶುಕ್ರವಾರ ಪ್ರಕಟಿಸಿದ್ದಾರೆ. ಎಂಪಿಸಿಯ ಆರೂ ಸದಸ್ಯರು ಸರ್ವಾನುಮತದಿಂದ ರಿಪೋ ದರವನ್ನು 25 ಮೂಲಾಂಕಗಳಷ್ಟು ಇಳಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಈ ಹೊಸ ದರಗಳು ತತ್​ಕ್ಷಣದಿಂದಲೇ ಜಾರಿಗೆ ಬರುತ್ತವೆ ಎಂದೂ ಹೇಳಿದ್ದಾರೆ.

ಅನಿಶ್ಚಿತ ಬಾಹ್ಯ ಪರಿಸ್ಥಿತಿ ನಡುವೆಯೂ ದೇಶದ ಆರ್ಥಿಕತೆಯ ಶಕ್ತಿ ಉತ್ತಮವಾಗಿದೆ ಎಂದು ಹೇಳಿದ ಆರ್​ಬಿಐ ಗವರ್ನರ್, ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಬೇಡಿಕೆ ಉತ್ತಮವಾಗಿದೆ. ಖಾಸಗಿ ಹೂಡಿಕೆಯೂ ಚೆನ್ನಾಗಿ ಆಗುತ್ತಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಕೇಂದ್ರೀಯ ಅಬಕಾರಿ ತಿದ್ದುಪಡಿ ಮಸೂದೆಗೆ ಸಂಸತ್ ಅಸ್ತು; ರಾಜ್ಯಗಳಿಗೂ ಲಾಭ ಹಂಚಿಕೆ ಎಂದ ನಿರ್ಮಲಾ ಸೀತಾರಾಮನ್

ಈ ವರ್ಷ ಶೇ. 7.3 ಜಿಡಿಪಿ ವೃದ್ಧಿ: ಆರ್​ಬಿಐ ಅಂದಾಜು

ಭಾರತದ ಆರ್ಥಿಕತೆ ಈ ವರ್ಷ ಮೊದಲಾರ್ಧ ಶೇ. 8ರಷ್ಟು ಬೆಳೆದಿದೆ ಎಂದು ಹೇಳಿರುವ ಸಂಜಯ್ ಮಲ್ಹೋತ್ರಾ, ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.3ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಿದ್ದಾರೆ. ಈ ಹಿಂದಿನ ಎಂಪಿಸಿ ಸಭೆಯಲ್ಲಿ ಈ ವರ್ಷದ ಜಿಡಿಪಿ ಬೆಳವಣಿಗೆ ಶೇ. 6.3ರಷ್ಟು ಮಾತ್ರ ಇರಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ, ಕಳೆದ ಎರಡು ಕ್ವಾರ್ಟರ್​ಗಳಲ್ಲಿ ನಿರೀಕ್ಷೆಮೀರಿದಷ್ಟು ವೇಗದಲ್ಲಿ ಆರ್ಥಿಕತೆ ಬೆಳೆದಿರುವುದರಿಂದ ಆರ್​ಬಿಐ ತನ್ನ ಅಂದಾಜನ್ನು ಪರಿಷ್ಕರಿಸಿದೆ.

ಆರ್​ಬಿಐ ಗವರ್ನರ್ ಅವರು ಮುಂದಿನ ನಾಲ್ಕು ಕ್ವಾರ್ಟರ್​ಗಳಿಗೂ ಅವರು ಅಂದಾಜು ಮಾಡಿದ್ದಾರೆ. ಮುಂದಿನ ನಾಲ್ಕು ತ್ರೈಮಾಸಿಕಗಳಲ್ಲಿ ಜಿಡಿಪಿ ಶೇ. 7, ಶೇ 6.5, ಶೇ. 6.7 ಮತ್ತು ಶೇ. 6.8ರಷ್ಟು ಬೆಳೆಯಬಹುದು ಎಂದಿದ್ದಾರೆ.

ಹಣದುಬ್ಬರ ನಿರೀಕ್ಷೆಗಿಂತ ಕಡಿಮೆ

ದೇಶದಲ್ಲಿ ಹಣದುಬ್ಬರವು ಆರ್​ಬಿಐ ನಿರೀಕ್ಷಿಸುದದಕ್ಕಿಂತಲೂ ಕಡಿಮೆ ಆಗಿದೆ ಎಂದು ಆರ್​ಬಿಐ ಗವರ್ನರ್ ಹೇಳಿದ್ದಾರೆ ಈ ವರ್ಷ ಹಣದುಬ್ಬರ ಶೇ 2ರಷ್ಟು ಮಾತ್ರವೇ ಇರುತ್ತದೆ ಎಂದು ನಿರೀಕ್ಷಿಸಿದ್ದಾರೆ. ಹಿಂದಿನ ಎಂಪಿಸಿ ಸಭೆಯಲ್ಲಿ ಮಾಡಿದ ಅಂದಾಜಿಗಿಂತಲೂ ಶೇ. 0.6ರಷ್ಟು ಕಡಿಮೆ ಹಣದುಬ್ಬರ ದಾಖಲಾಗಬಹುದು ಎಂದಿದ್ದಾರೆ.

ಇದನ್ನೂ ಓದಿ: ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಸೋಲಾರ್ ಪಿವಿ ಮಾಡ್ಯೂಲ್; ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ 43,000

ಮುಂದಿನ ನಾಲ್ಕು ಕ್ವಾರ್ಟರ್​ಗಳಲ್ಲಿ ಹಣದುಬ್ಬರ ದರ ಕ್ರಮವಾಗಿ ಶೇ. 0.6, ಶೇ. 1, ಶೇ. 3.9 ಮತ್ತು ಶೇ. 4ರಷ್ಟು ಇರಬಹುದು ಎಂದು ಆರ್​​ಬಿಐನ ಎಂಪಿಸಿ ಸಭೆಯಲ್ಲಿ ಅಂದಾಜು ಮಾಡಲಾಗಿದೆ.

ಆರ್​ಬಿಐ ಎಂಪಿಸಿ ಡಿಸೆಂಬರ್ ಸಭೆಯಲ್ಲಿ ಪ್ರಮುಖ ನಿರ್ಧಾರಗಳು

  • ರಿಪೋದರ 25 ಮೂಲಾಂಕಗಳು ಇಳಿಕೆ. ಶೇ. 5.50ರಿಂದ ಶೇ. 5.25ಕ್ಕೆ ಇಳಿಕೆ.
  • ಜಿಡಿಪಿ ದರ 2025-26ರಲ್ಲಿ ಶೇ. 7.3ರಷ್ಟು ಬೆಳೆಯಬಹುದು
  • ಹಣದುಬ್ಬರ 2025-26ರಲ್ಲಿ ಶೇ. 2ಕ್ಕೆ ಸೀಮಿತಗೊಳ್ಳಬಹುದು.
  • ಆರ್​​ಬಿಐ ಪಾಲಿಸಿ ನಿಲುವು ಅಥವಾ ಪಾಲಿಸಿ ಸ್ಟಾನ್ಸ್ ನ್ಯೂಟ್ರಲ್ ಆಗಿರುತ್ತದೆ
  • ಭಾರತದ ಫಾರೆಕ್ಸ್ ರಿಸರ್ವ್ ನಿಧಿ 686 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:12 am, Fri, 5 December 25