AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಟಿನ್ ಭೇಟಿಯಿಂದ ಭಾರತಕ್ಕೇನು ಲಾಭ? ರಷ್ಯಾದೊಂದಿಗೆ ಅಗಾಧ ವ್ಯಾಪಾರ ಅಂತರ ತಗ್ಗಿಸಲು ಭಾರತಕ್ಕೆ ಸಾಧ್ಯವಾ?

Vladimir Putin 2-day visit to India: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 23ನೇ ಭಾರತ-ರಷ್ಯಾ ವಾರ್ಷಿಕ ಸಮಿಟ್​ನಲ್ಲಿ ಪಾಲ್ಗೊಳ್ಳಲು ಬರುತ್ತಿದ್ದಾರೆ. ಅವರ ಜೊತೆ ರಷ್ಯನ್ ಬ್ಯುಸಿನೆಸ್ ಪ್ರತಿನಿಧಿಗಳಿರುವ ದೊಡ್ಡ ನಿಯೋಗವೇ ಇದೆ. ಈ ಸಂದರ್ಭದಲ್ಲಿ ಭಾರತ ಹಾಗೂ ರಷ್ಯಾ ನಡುವೆ ಹಲವು ಎಂಒಯು ಒಪ್ಪಂದಗಳಿಗೆ ಸಹಿ ಬೀಳುವ ಸಾಧ್ಯತೆ ಇದೆ.

ಪುಟಿನ್ ಭೇಟಿಯಿಂದ ಭಾರತಕ್ಕೇನು ಲಾಭ? ರಷ್ಯಾದೊಂದಿಗೆ ಅಗಾಧ ವ್ಯಾಪಾರ ಅಂತರ ತಗ್ಗಿಸಲು ಭಾರತಕ್ಕೆ ಸಾಧ್ಯವಾ?
ನರೇಂದ್ರ ಮೋದಿ ಮತ್ತು ವ್ಲಾದಿಮಿರ್ ಪುಟಿನ್ ಅವರ ಫೈಲ್ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 04, 2025 | 6:55 PM

Share

ನವದೆಹಲಿ, ಡಿಸೆಂಬರ್ 4: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಬರುತ್ತಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ 23ನೇ ಭಾರತ ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ (India Russia Annual Summit) ಪಾಲ್ಗೊಳ್ಳಲೆಂದು ಆಗಮಿಸುತ್ತಿದ್ದಾರೆ. ಪುಟಿನ್ ಅವರ ಎರಡು ದಿನಗಳ ಈ ಭೇಟಿ ಸಂದರ್ಭದಲ್ಲಿ ಭಾರತ ಹಾಗು ರಷ್ಯಾ ಮಧ್ಯೆ ಹಲವು ಒಪ್ಪಂದಗಳು ಏರ್ಪಡುವ ನಿರೀಕ್ಷೆ ಇದೆ. ಪುಟಿನ್ (Vladimir Putin) ಬಹಳ ದೊಡ್ಡ ಸಂಖ್ಯೆಯಲ್ಲಿ ಉದ್ಯಮಿಗಳೊಂದಿಗೆ ಆಗಮಿಸುತ್ತಿದ್ದಾರೆ. ಈ ಹಿಂದೆಯೂ ಪುಟಿನ್ ಅವರು ಭಾರತದಿಂದ ರಷ್ಯಾ ಹೆಚ್ಚು ಆಮದು ಮಾಡಿಕೊಳ್ಳಲು ಸಿದ್ಧ ಇದೆ ಎಂದು ಹೇಳಿದ್ದರು. ಹೀಗಾಗಿ, ಪುಟಿನ್ ಭೇಟಿ ವಿಚಾರದಲ್ಲಿ ಭಾರತಕ್ಕೆ ನಿರೀಕ್ಷೆಗಳು ಬಹಳ ಇವೆ.

ಚೀನಾ ರೀತಿಯಲ್ಲಿ ರಷ್ಯಾ ಜೊತೆಗೂ ಭಾರತದ ವ್ಯಾಪಾರ ಅಂತರ ಅಥವಾ ಟ್ರೇಡ್ ಡೆಫಿಸಿಟ್ ಬಹಳ ಅಗಾಧ ಇದೆ. 2024-25ರಲ್ಲಿ ಭಾರತ ಹಾಗೂ ರಷ್ಯಾ ನಡುವೆ ಒಟ್ಟು ವ್ಯಾಪಾರ ವಹಿವಾಟು 68 ಬಿಲಿಯನ್ ಡಾಲರ್​ಗೂ ಅಧಿಕ ಇತ್ತು. ಇದರಲ್ಲಿ ರಷ್ಯಾಗೆ ಭಾರತ ಮಾಡಿದ ರಫ್ತು ಕೇವಲ 4.9 ಬಿಲಿಯನ್ ಡಾಲರ್. ಆಮದು ಮಾಡಿಕೊಂಡಿದ್ದು ಬರೋಬ್ಬರಿ 63.8 ಬಿಲಿಯನ್ ಡಾಲರ್. ಅಲ್ಲಿಗೆ ಟ್ರೇಡ್ ಡೆಫಿಸಿಟ್ 59 ಬಿಲಿಯನ್ ಡಾಲರ್ ಆಗಿತ್ತು.

ಇದನ್ನೂ ಓದಿ: ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಸೋಲಾರ್ ಪಿವಿ ಮಾಡ್ಯೂಲ್; ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ 43,000

ಇಷ್ಟು ಅಗಾಧ ವ್ಯಾಪಾರ ಕೊರತೆಯನ್ನು ನೀಗಿಸುವುದು ಹೇಗೆ ಎಂಬುದು ಭಾರತದ ಮುಂದಿರುವ ಸವಾಲುಗಳಾಗಿವೆ. ಹಾಗಂತ, ರಷ್ಯಾ ಜೊತೆ ವ್ಯಾಪಾರ ಸಂಬಂಧ ಮೊಟಕುಗೊಳಿಸಲು ಆಗುವುದಿಲ್ಲ. ಟ್ರೇಡ್ ಡೆಫಿಸಿಟ್ ಅನ್ನು ಕಡಿಮೆಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕಿದೆ. ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರು ಇಂದು ನಡೆದ ಭಾರತ ರಷ್ಯಾ ಬ್ಯುಸಿನೆಸ್ ಫೋರಂ ಸಭೆಯಲ್ಲೂ ಈ ವಿಚಾರ ಪ್ರಸ್ತಾಪಿಸಿ ಮಾತನಾಡಿದ್ದಾರೆ.

ರಷ್ಯಾಗೆ ರಫ್ತು ಮಾಡಬಲ್ಲ ವಲಯಗಳಿವು…

ಕನ್ಸೂಮರ್ ಗೂಡ್ಸ್ ಅಥವಾ ಗ್ರಾಹಕ ಸರಕುಗಳು, ಆಹಾರ ವಸ್ತುಗಳು, ವಾಹನ, ವಾಹನ ಬಿಡಿಭಾಗಗಳು, ಟ್ರಾಕ್ಟರ್, ಟ್ರಕ್, ಸ್ಮಾರ್ಟ್​ಫೋನ್, ಕೈಗಾರಿಕಾ ಬಿಡಿಭಾಗಗಳು, ಜವಳಿ ಉತ್ಪನ್ನಗಳು ಮುಂತಾದವನ್ನು ರಷ್ಯಾಗೆ ಹೆಚ್ಚು ರಫ್ತು ಮಾಡಲು ಅವಕಾಶ ಇದೆ.

ಇದನ್ನೂ ಓದಿ: ಟ್ಯಾರಿಫ್​ನಿಂದ ರುಪಾಯಿ ಮೌಲ್ಯ ಕುಸಿದಿದೆ, ಆದರೆ, ಕರೆನ್ಸಿ ದುರ್ಬಲಗೊಂಡಿಲ್ಲ: ಎಸ್​ಬಿಐ ರಿಸರ್ಚ್

ಅತ್ತ, ರಷ್ಯಾ ಕೂಡ ತನ್ನದೇ ಅಜೆಂಡಾ ಇಟ್ಟುಕೊಂಡಿರುತ್ತದೆ. ಭಾರತಕ್ಕೆ ಇಂಧನ, ಡಿಫೆನ್ಸ್ ಉತ್ಪನ್ನಗಳ ಪೂರೈಕೆಯನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗುವುದು ರಷ್ಯಾಗಿರುವ ಆದ್ಯತೆ ಆಗಿದೆ. ಅಮೆರಿಕ ಹಾಗೂ ಪಶ್ಚಿಮ ರಾಷ್ಟ್ರಗಳು ಹಾಕಿರುವ ಆರ್ಥಿಕ ನಿಷೇಧಗಳ ನಡುವೆ ತನ್ನ ಆರ್ಥಿಕತೆಯನ್ನು ಮುಂದುವರಿಸಿಕೊಂಡು ಹೋಗಲು ರಷ್ಯಾಗೆ ಇರುವ ಪ್ರಮುಖ ಆಧಾರ ಭಾರತ, ರಷ್ಯಾ ಮತ್ತಿತರ ದೇಶಗಳಾಗಿವೆ. ಹೀಗಾಗಿ, ಭಾರತಕ್ಕೆ ವ್ಯಾಪಾರ ಒಪ್ಪಂದಗಳಲ್ಲಿ ರಷ್ಯಾ ಹೆಚ್ಚು ವಿನಾಯಿತಿಗಳನ್ನು ನೀಡಲು ಒಪ್ಪಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​