AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inflation

Inflation

ಹಣದುಬ್ಬರ ಎಂಬುದು ಬೆಲೆ ಏರಿಕೆಯನ್ನು ಸೂಚಿಸುವ ದರ. ಒಂದು ಆರ್ಥಿಕತೆಯಲ್ಲಿ ನಿಗದಿತ ಅವಧಿಯಲ್ಲಿ ವಿವಿಧ ಸರಕು ಮತ್ತು ಸೇವೆಗಳ ಸರಾಸರಿ ಏರಿಕೆಯೇ ಹಣದುಬ್ಬರ. ಇದನ್ನು ಇಂಗ್ಲೀಷ್​ನಲ್ಲಿ ಇನ್​ಫ್ಲೇಶನ್ ಎನ್ನುತ್ತಾರೆ. ಒಂದು ವೇಳೆ ಹಣದುಬ್ಬರ ದರವು ಸೊನ್ನೆಗಿಂತ ಕೆಳಗೆ ಇಳಿದರೆ, ಅಂದರೆ, ಮೈನಸ್ ಮಟ್ಟಕ್ಕೆ ಕುಸಿದರೆ ಅದಕ್ಕೆ ಡೀಫ್ಲೇಶನ್ ಎನ್ನುತ್ತಾರೆ. ಹಣದುಬ್ಬರವನ್ನು ಗ್ರಾಹಕ ಬೆಲೆ ಅನುಸೂಚಿ, ಸಗಟು ಬೆಲೆ ಅನುಸೂಚಿ ಇತ್ಯಾದಿ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಸಿಪಿಐ ಆಧಾರಿತ ಹಣದುಬ್ಬರವನ್ನು ರೀಟೇಲ್ ಹಣದುಬ್ಬರ ಎನ್ನಲಾಗುವುದು. ಈ ಸಿಪಿಐ ಇಂಡೆಕ್ಸ್​ನಲ್ಲಿ ಬಹಳ ಸಾಮಾನ್ಯವಾಗಿ ಬಳಸಲಾಗುವ ವಸ್ತುಗಳು ಹಾಗೂ ಸೇವೆಗಳನ್ನು ಒಳಗೊಂಡಿರಲಾಗುತ್ತದೆ. ಇವುಗಳ ಬೆಲೆ ಏರಿಳಿತಕ್ಕೆ ಅನುಗುಣವಾಗಿ ಹಣದುಬ್ಬರ ಇರುತ್ತದೆ.

ಇನ್ನೂ ಹೆಚ್ಚು ಓದಿ

RBI MPC Meet: ಬಡ್ಡಿದರ 25 ಮೂಲಾಂಕಗಳಷ್ಟು ಇಳಿಸಿದ ಆರ್​ಬಿಐ; ರಿಪೋ ದರ ಶೇ. 5.25ಕ್ಕೆ ಇಳಿಕೆ

RBI Governor Sanjay Malhotra announces policy decisions of MPC: ತತ್​ಕ್ಷಣವೇ ಜಾರಿಗೆ ಬರುವಂತೆ ಆರ್​ಬಿಐ ತನ್ನ ರಿಪೋ ದರವನ್ನು ಶೇ. 5.5ರಿಂದ ಶೇ. 5.25ಕ್ಕೆ ಇಳಿಸಿದೆ. ಆರ್​ಬಿಐನ ಪಾಲಿಸಿ ಸ್ಟ್ಯಾನ್ಸ್ ಅಥವಾ ನೀತಿ ನಿಲುವನ್ನು ನ್ಯೂಟ್ರಲ್​ಗೆ ಇಡಲಾಗಿದೆ. ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.3ರಷ್ಟು ಹೆಚ್ಚಬಹುದು. ಹಣದುಬ್ಬರ ಶೇ. 2ರಷ್ಟಿರಬಹುದು ಎಂದೂ ಅಂದಾಜಿಸಲಾಗಿದೆ.

ಭಾರತದ ಈ ವರ್ಷದ ಜಿಡಿಪಿ ದರ ಶೇ. 8.8 ಕೂಡ ಮುಟ್ಟಬಲ್ಲುದು: ಎನ್​ಐಪಿಎಫ್​ಪಿ ನಿರೀಕ್ಷೆ

NIPFP projects Indian economy to grow 7.4% in 26fy: ದೇಶದ ಜಿಡಿಪಿ ದರ ಈ ಹಣಕಾಸು ವರ್ಷದಲ್ಲಿ ಶೇ. 7.4ರಷ್ಟು ಹೆಚ್ಚಬಹುದು ಎಂದು ಹಣಕಾಸು ಸಚಿವಾಲಯದ ಅಡಿಯ ಸ್ವಾಯತ್ತ ಸಂಸ್ಥೆಯಾದ ಎನ್​ಐಪಿಎಫ್​ಪಿ ಅಭಿಪ್ರಾಯಪಟ್ಟಿದೆ. ಏಪ್ರಿಲ್​ನಲ್ಲಿ ಇದೇ ಸಂಸ್ಥೆಯು ಭಾರತದ ಜಿಡಿಪಿ ಶೇ. 6.6ರಷ್ಟು ಹೆಚ್ಚಬಹುದು ಎಂದು ಅಂದಾಜು ಮಾಡಿತ್ತು. ಹಾಗೆಯೇ, ಈ ವರ್ಷ ಹಣದುಬ್ಬರ ಶೇ. 1.6ರಷ್ಟು ಮಾತ್ರ ಇರಬಹುದು ಎಂದೂ ಈ ಸಂಸ್ಥೆ ಹೇಳಿದೆ.

Inflation: ಬೆಲೆ ಏರಿಕೆಯಲ್ಲಿ ಭರ್ಜರಿ ಕುಸಿತ; ಅಕ್ಟೋಬರ್​ನಲ್ಲಿ ಹಣದುಬ್ಬರ ದರ ಕೇವಲ ಶೇ. 0.25

Inflation rate falls to 0.25% on October: 2025ರ ಅಕ್ಟೋಬರ್ ತಿಂಗಳಲ್ಲಿ ಶೇ. 0.25 ಹಣದುಬ್ಬರ ದಾಖಲಾಗಿದೆ. ಸಿಪಿಐ ಸರಣಿಯಲ್ಲೇ ಇದು ಕನಿಷ್ಠ ಹಣದುಬ್ಬರ ದರ ಎನಿಸಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 1.44 ಇತ್ತು. ಈ ತಿಂಗಳು ಹಣದುಬ್ಬರ ಕುಸಿತಕ್ಕೆ ಪ್ರಮುಖ ಕಾರಣ ಆಹಾರವಸ್ತುಗಳ ಬೆಲೆ ಇಳಿಕೆ. ಈರುಳ್ಳಿ ಹಾಗೂ ತರಕಾರಿಗಳ ಬೆಲೆ ಸಿಕ್ಕಾಪಟ್ಟೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಹಣದುಬ್ಬರ ಕಡಿಮೆಗೊಂಡಿದೆ.

ಸೆಪ್ಟೆಂಬರ್​ನಲ್ಲಿ ಹಣದುಬ್ಬರ ಕೇವಲ ಶೇ 1.54; ಎಂಟು ವರ್ಷದಲ್ಲೇ ಅತ್ಯಂತ ಕಡಿಮೆ ಬೆಲೆ ಏರಿಕೆ ಮಟ್ಟ

Retail Inflation in 2025 September decreases to 1.54%: 2025ರ ಸೆಪ್ಟೆಂಬರ್ ತಿಂಗಳಲ್ಲಿ ಸಿಪಿಐ ಆಧಾರಿತ ರೀಟೇಲ್ ಹಣದುಬ್ಬರ ಶೇ. 1.54 ಇದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ವರದಿಯಲ್ಲಿ ಹೇಳಿದೆ. ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ಶೇ. 2.07 ಇತ್ತು. ಸೆಪ್ಟೆಂಬರ್​ನಲ್ಲಿ 67 ಮೂಲಾಂಕಗಳಷ್ಟು ಕಡಿಮೆ ಆಗಿದೆ. ಆಹಾರವಸ್ತುಗಳ ಬೆಲೆ ಗಣನೀಯವಾಗಿ ಇಳಿಕೆ ಆಗುತ್ತಿರುವುದು ರೀಟೇಲ್ ಇನ್​ಫ್ಲೇಶನ್ ತಗ್ಗಲು ಪ್ರಮುಖ ಕಾರಣವಾಗಿದೆ.

ಭಾರತದ ಹಣದುಬ್ಬರ ಆಗಸ್ಟ್​ನಲ್ಲಿ ಶೇ. 2.07ಕ್ಕೆ ಏರಿಕೆ; ತಾಳಿಕೆ ಮಿತಿಗಿಂತ ಬಹಳ ಕಡಿಮೆ

India's retail inflation rate in August 2.07%: ಆಗಸ್ಟ್ ತಿಂಗಳಲ್ಲಿ ಸಿಪಿಐ ಆಧಾರಿತ ರೀಟೇಲ್ ಹಣದುಬ್ಬರ ದರ ಶೇ 2.07ರಷ್ಟಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ. ಜುಲೈ ತಿಂಗಳಲ್ಲಿ ಇನ್​ಫ್ಲೇಶನ್ ಶೇ. 1.55ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಆಗಸ್ಟ್​ನಲ್ಲಿ ಹಣದುಬ್ಬರ ತುಸು ಏರಿದೆ. ಆಹಾರ ವಸ್ತುಗಳ ಬೆಲೆಯಲ್ಲಿ ತುಸು ಏರಿಕೆ ಆಗಿರುವುದು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ.

Inflation: ಎಂಟು ವರ್ಷದಲ್ಲೇ ಕನಿಷ್ಠ ಬೆಲೆ ಏರಿಕೆ ಮಟ್ಟ; ಜುಲೈನಲ್ಲಿ ಶೇ. 1.55ಕ್ಕೆ ಹಣದುಬ್ಬರ ಇಳಿಕೆ

Retail Inflation in 2025 July down to 1.55%: ಜೂನ್​ನಲ್ಲಿ ಶೇ. 2.10ರಷ್ಟಿದ್ದ ಹಣದುಬ್ಬರ ಜುಲೈನಲ್ಲಿ ಶೇ. 1.55 ದಾಖಲಾಗಿದೆ. ಸತತವಾಗಿ ಕುಸಿಯುತ್ತಿರುವ ಹಣದುಬ್ಬರ ದರ ಕಳೆದ ಎಂಟು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಬಂದಿದೆ. 2017ರ ಜೂನ್ ಬಳಿಕ ಇದು ಅತಿ ಕಡಿಮೆ ಬೆಲೆ ಏರಿಕೆ ಮಟ್ಟ ಕಂಡ ತಿಂಗಳಾಗಿದೆ. ಮುಂದಿನ ಆರ್​ಬಿಐ ಎಂಪಿಸಿ ಸಭೆಯಲ್ಲಿ ರಿಪೋ ದರ ಇಳಿಕೆಗೆ ನಿರ್ಧರಿಸುವ ಸಾಧ್ಯತೆ ಇದೆ.

ಹಣದುಬ್ಬರ ಕೇರಳದಲ್ಲಿ ಅತಿಹೆಚ್ಚು; ತೆಲಂಗಾಣದಲ್ಲಿ ಅತಿಕಡಿಮೆ; ಕರ್ನಾಟಕದಲ್ಲಿ ಸರಾಸರಿಗಿಂತ ಹೆಚ್ಚು

State-wise inflation rates in June 2025: ಜೂನ್ ತಿಂಗಳಲ್ಲಿ ಭಾರತದ ಹಣದುಬ್ಬರ ಶೇ. 2.10 ಎಂದು ದಾಖಲಾಗಿದೆ. ಈ ವೇಳೆ ರಾಜ್ಯವಾರು ಹಣದುಬ್ಬರ ದರದ ಅಂಕಿ ಅಂಶ ಪ್ರಕಟವಾಗಿದೆ. ಎರಡು ಅತಿರೇಕಗಳು ದಕ್ಷಿಣ ರಾಜ್ಯಗಳಿಂದಲೇ ಆಗಿವೆ. ಕೇರಳದಲ್ಲಿ ಅತಿಹೆಚ್ಚು ಹಣದುಬ್ಬರವಾದರೆ, ತೆಲಂಗಾಣದ್ದು ಅತಿಕಡಿಮೆ. ಕರ್ನಾಟಕದಲ್ಲಿ ಸರಾಸರಿಗಿಂತ ಹೆಚ್ಚಿನ ಹಣದುಬ್ಬರ ಇದೆ. ರಾಜ್ಯವಾರು ಹಣದುಬ್ಬರ ಪಟ್ಟಿ ಈ ಸುದ್ದಿಯ ಕೆಳಗಿದೆ.

ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 2.10; ಆರು ತಿಂಗಳಲ್ಲೇ ಕನಿಷ್ಠ ಬೆಲೆ ಏರಿಕೆ ದರ

CPI based retail inflation of India for the 2025 Month is 2.10%: ಸಿಪಿಐ ಆಧಾರಿತ ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 2.10 ಎಂದು ದಾಖಲಾಗಿದೆ. ಮೇ ತಿಂಗಳಲ್ಲಿ ರೀಟೇಲ್ ಇನ್​ಫ್ಲೇಶನ್ ಶೇ. 2.82 ಇತ್ತು. ಹಿಂದಿನ ವರ್ಷದ ಇದೇ ತಿಂಗಳಲ್ಲಿ ಶೇ. 5ಕ್ಕಿಂತಲೂ ಹೆಚ್ಚಿತ್ತು. ಈ ಜೂನ್ ತಿಂಗಳಲ್ಲಿ ದಾಖಲಾದ ಹಣದುಬ್ಬರವು 2019ರ ಜನವರಿ ಬಳಿಕ ಅತ್ಯಂತ ಕನಿಷ್ಠ ಮಟ್ಟ ಎನಿಸಿದೆ.

ಹೋಲ್​ಸೇಲ್ ಬೆಲೆ ಉಬ್ಬರ ಮತ್ತಷ್ಟು ಇಳಿಕೆ; ಜೂನ್​ನಲ್ಲಿ ರೀಟೇಲ್ ಹಣದುಬ್ಬರವೂ ಇಳಿಯುವ ಸಾಧ್ಯತೆ

WPI based inflation down to minus 0.13% in June 2025: ಸಗಟು ಮಾರಾಟ ದರ ಹಣದುಬ್ಬರ ಜೂನ್​​ನಲ್ಲಿ ಮೈನಸ್ 0.13 ಪ್ರತಿಶತಕ್ಕೆ ಇಳಿಕೆ ಕಂಡಿದೆ. ಇದು ಕಳೆದ 20 ತಿಂಗಳಲ್ಲೇ ಡಬ್ಲ್ಯುಪಿಐ ಆಧಾರಿತ ಹಣದುಬ್ಬರದ ಕನಿಷ್ಠ ಮಟ್ಟ ಎನಿಸಿದೆ. ರೀಟೇಲ್ ಹಣದುಬ್ಬರವೂ ಜೂನ್ ತಿಂಗಳಲ್ಲಿ ಮತ್ತಷ್ಟು ಇಳಿಯಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ.