AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಪ್ಟೆಂಬರ್​ನಲ್ಲಿ ಹಣದುಬ್ಬರ ಕೇವಲ ಶೇ 1.54; ಎಂಟು ವರ್ಷದಲ್ಲೇ ಅತ್ಯಂತ ಕಡಿಮೆ ಬೆಲೆ ಏರಿಕೆ ಮಟ್ಟ

Retail Inflation in 2025 September decreases to 1.54%: 2025ರ ಸೆಪ್ಟೆಂಬರ್ ತಿಂಗಳಲ್ಲಿ ಸಿಪಿಐ ಆಧಾರಿತ ರೀಟೇಲ್ ಹಣದುಬ್ಬರ ಶೇ. 1.54 ಇದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ವರದಿಯಲ್ಲಿ ಹೇಳಿದೆ. ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ಶೇ. 2.07 ಇತ್ತು. ಸೆಪ್ಟೆಂಬರ್​ನಲ್ಲಿ 67 ಮೂಲಾಂಕಗಳಷ್ಟು ಕಡಿಮೆ ಆಗಿದೆ. ಆಹಾರವಸ್ತುಗಳ ಬೆಲೆ ಗಣನೀಯವಾಗಿ ಇಳಿಕೆ ಆಗುತ್ತಿರುವುದು ರೀಟೇಲ್ ಇನ್​ಫ್ಲೇಶನ್ ತಗ್ಗಲು ಪ್ರಮುಖ ಕಾರಣವಾಗಿದೆ.

ಸೆಪ್ಟೆಂಬರ್​ನಲ್ಲಿ ಹಣದುಬ್ಬರ ಕೇವಲ ಶೇ 1.54; ಎಂಟು ವರ್ಷದಲ್ಲೇ ಅತ್ಯಂತ ಕಡಿಮೆ ಬೆಲೆ ಏರಿಕೆ ಮಟ್ಟ
ಹಣದುಬ್ಬರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 13, 2025 | 5:10 PM

Share

ನವದೆಹಲಿ, ಅಕ್ಟೋಬರ್ 13: ರೀಟೇಲ್ ಹಣದುಬ್ಬರ (Inflation) ಸೆಪ್ಟೆಂಬರ್​ನಲ್ಲಿ ಶೇ. 1.54 ಎಂದು ದಾಖಲಾಗಿದೆ. ಇದು ಆರ್​ಬಿಐನ ಹಣದುಬ್ಬರ ತಾಳಿಕೆ ಮಿತಿಗಿಂತ ಕೆಳಗೆ ಇದೆ. 2017ರ ಜೂನ್ ನಂತರ ಯಾವುದೇ ತಿಂಗಳಲ್ಲೂ ಇಷ್ಟು ಕಡಿಮೆ ಹಣದುಬ್ಬರ ದಾಖಲಾಗಿರಲಿಲ್ಲ. ಎಂಟು ವರ್ಷಗಳಲ್ಲೇ ಇದು ಅತ್ಯಂತ ಕಡಿಮೆ ಬೆಲೆ ಏರಿಕೆ ಮಟ್ಟವಾಗಿದೆ. ಹಿಂದಿನ ತಿಂಗಳಾದ ಆಗಸ್ಟ್​ಗಿಂತ ಬರೋಬ್ಬರಿ 53 ಬೇಸಿಸ್ ಪಾಯಿಂಟ್​ಗಳಷ್ಟು ಹಣದುಬ್ಬರ ಸೆಪ್ಟೆಂಬರ್​ನಲ್ಲಿ ತಗ್ಗಿದೆ.

ಆಗಸ್ಟ್​ನಲ್ಲಿ ಹಣದುಬ್ಬರ ಶೇ. 2.07 ಇತ್ತು. ಸೆಪ್ಟೆಂಬರ್​ನಲ್ಲಿ ಇನ್​ಫ್ಲೇಶನ್ ಶೇ. 2ರ ಗಡಿಗಿಂತ ಕೆಳಗೆ ಇಳಿಯಬಹುದು ಎಂದು ಹೆಚ್ಚಿನ ಆರ್ಥಿಕ ತಜ್ಞರು ನಿರೀಕ್ಷಿಸಿದ್ದರು. ಆದರೆ, ಅವರ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಹಣದುಬ್ಬರ ತಗ್ಗಿರುವುದು ಗಮನಾರ್ಹ.

ಇದನ್ನೂ ಓದಿ: ದೇಶದ ಆರ್ಥಿಕ ಗಾತ್ರಕ್ಕೆ ಸಮನಾಗಿದೆ ಭಾರತೀಯರ ಬಳಿ ಇರುವ ಚಿನ್ನದ ಮೌಲ್ಯ

2022ರಲ್ಲಿ ಶೇ. 7ಕ್ಕಿಂತಲೂ ಹೆಚ್ಚಿನ ಮಟ್ಟದ ಹಣದುಬ್ಬರ ಸ್ಥಿತಿ ಇತ್ತು. ಆರ್​ಬಿಐನ ರಿಪೋ ದರ ಏರಿಕೆ ಪರಿಣಾಮ, ಅನುಕೂಲಕರ ಹವಾಮಾನ, ಉತ್ತಮ ಕೃಷಿ ಫಸಲು ಇತ್ಯಾದಿ ಕಾರಣಗಳಿಂದ ಹಣದುಬ್ಬರ ಸತತವಾಗಿ ಕಡಿಮೆಗೊಳ್ಳುತ್ತಾ ಬಂದಿದೆ. ಹಣದುಬ್ಬರವನ್ನು ಶೇ. 4ಕ್ಕೆ ಕಟ್ಟಿ ನಿಲ್ಲಿಸಬೇಕೆಂದು ಸರ್ಕಾರವು ಆರ್​ಬಿಐಗೆ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ಆರ್​ಬಿಐ ಬಹುತೇಕ ಯಶಸ್ವಿಯಾಗಿದೆ. ತನ್ನ ಗುರಿ ಈಡೇರಿಕೆಗೆ ಆರ್​ಬಿಐ ಶೇ. 2ರಿಂದ 6 ಅನ್ನು ಹಣದುಬ್ಬರದ ತಾಳಿಕೆ ಮಿತಿಯಾಗಿ ನಿಗದಿ ಮಾಡಿದೆ. ಹಲವು ತಿಂಗಳ ಬಳಿಕ ಮೊದಲ ಬಾರಿಗೆ ಈ ತಾಳಿಕೆ ಶ್ರೇಣಿಯಿಂದ ಹಣದುಬ್ಬರ ಹೊರಗಿದೆ.

ಸೆಪ್ಟೆಂಬರ್​ನಲ್ಲಿ ಹಣದುಬ್ಬರ ಗಣನೀಯವಾಗಿ ಕಡಿಮೆ ಆಗಲು ಪ್ರಮುಖ ಕಾರಣ ಎಂದರೆ ಆಹಾರವಸ್ತುಗಳ ಬೆಲೆ ಇಳಿಕೆ. ರೀಟೇಲ್ ಹಣದುಬ್ಬರದ ಲೆಕ್ಕಾಚಾರದಲ್ಲಿ ಆಹಾರವಸ್ತುಗಳ ಬೆಲೆಗೆ ಅರ್ಧದಷ್ಟು ತೂಕ ಇರುತ್ತದೆ. ಈ ಆಯ್ದ ಆಹಾರವಸ್ತುಗಳ ಸರಾಸರಿ ಬೆಲೆ ಸೆಪ್ಟೆಂಬರ್​ನಲ್ಲಿ ಮೈನಸ್ 2.28 ಇತ್ತು. ಅಂದರೆ, ಹಿಂದಿನ ವರ್ಷದಕ್ಕೆ ಹೋಲಿಸಿದರೆ ಇವುಗಳ ಬೆಲೆ ಕಡಿಮೆ ಆಗಿದೆ.

ಇದನ್ನೂ ಓದಿ: ಜಿಡಿಪಿ ಸಾಲ ಅನುಪಾತ 10 ವರ್ಷದಲ್ಲಿ ಶೇ. 81ರಿಂದ 71ಕ್ಕೆ ಇಳಿಕೆ: ಕೇರ್​ಎಡ್ಜ್ ರೇಟಿಂಗ್ಸ್ ವರದಿ

ಆಹಾರ ವಸ್ತುಗಳ ಪೈಕಿ ತರಕಾರಿ ಬೆಲೆ ಸೆಪ್ಟೆಂಬರ್ ತಿಂಗಳಲ್ಲಿ ಶೇ. 21.38ರಷ್ಟು ಕಡಿಮೆ ಆಗಿದೆ. ಹಿಂದಿನ ತಿಂಗಳಾದ ಆಗಸ್ಟ್​ನಲ್ಲಿ ಇದರ ಬೆಲೆ ಶೇ. 15.92ರಷ್ಟು ತಗ್ಗಿತ್ತು. ಎರಡು ತಿಂಗಳಲ್ಲಿ ಶೇ. 37ರಷ್ಟು ಬೆಲೆ ಕಡಿಮೆ ಆಗಿರುವುದು ಒಟ್ಟಾರೆ ಹಣದುಬ್ಬರ ಕುಸಿತಕ್ಕೆ ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ