AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಈ ವರ್ಷದ ಜಿಡಿಪಿ ದರ ಶೇ. 8.8 ಕೂಡ ಮುಟ್ಟಬಲ್ಲುದು: ಎನ್​ಐಪಿಎಫ್​ಪಿ ನಿರೀಕ್ಷೆ

NIPFP projects Indian economy to grow 7.4% in 26fy: ದೇಶದ ಜಿಡಿಪಿ ದರ ಈ ಹಣಕಾಸು ವರ್ಷದಲ್ಲಿ ಶೇ. 7.4ರಷ್ಟು ಹೆಚ್ಚಬಹುದು ಎಂದು ಹಣಕಾಸು ಸಚಿವಾಲಯದ ಅಡಿಯ ಸ್ವಾಯತ್ತ ಸಂಸ್ಥೆಯಾದ ಎನ್​ಐಪಿಎಫ್​ಪಿ ಅಭಿಪ್ರಾಯಪಟ್ಟಿದೆ. ಏಪ್ರಿಲ್​ನಲ್ಲಿ ಇದೇ ಸಂಸ್ಥೆಯು ಭಾರತದ ಜಿಡಿಪಿ ಶೇ. 6.6ರಷ್ಟು ಹೆಚ್ಚಬಹುದು ಎಂದು ಅಂದಾಜು ಮಾಡಿತ್ತು. ಹಾಗೆಯೇ, ಈ ವರ್ಷ ಹಣದುಬ್ಬರ ಶೇ. 1.6ರಷ್ಟು ಮಾತ್ರ ಇರಬಹುದು ಎಂದೂ ಈ ಸಂಸ್ಥೆ ಹೇಳಿದೆ.

ಭಾರತದ ಈ ವರ್ಷದ ಜಿಡಿಪಿ ದರ ಶೇ. 8.8 ಕೂಡ ಮುಟ್ಟಬಲ್ಲುದು: ಎನ್​ಐಪಿಎಫ್​ಪಿ ನಿರೀಕ್ಷೆ
ಆರ್ಥಿಕತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 13, 2025 | 10:07 PM

Share

ನವದೆಹಲಿ, ನವೆಂಬರ್ 13: ಭಾರತದ ಆರ್ಥಿಕತೆ (GDP) ಈ ವರ್ಷ ಉತ್ತಮವಾಗಿ ಬೆಳವಣಿಗೆ ಹೊಂದಬಹುದು ಎಂದು ಹೆಚ್ಚಿನ ಆರ್ಥಿಕ ಸಂಸ್ಥೆಗಳು ಮತ್ತು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ. 2025-26ರಲ್ಲಿ ಭಾರತದ ಜಿಡಿಪಿ ಶೇ. 6.50ರಿಂದ ಶೇ. 6.8ರವರೆಗೂ ಹೆಚ್ಚಬಹುದು ಎಂದು ಅಂದಾಜಿಸಿದ್ದಾರೆ. ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆ (ಎನ್​ಐಪಿಎಫ್​ಪಿ) ಒಂದು ಹೆಜ್ಜೆ ಮುಂದೆ ಹೋಗಿ ಆರ್ಥಿಕತೆ ಶೇ. 7.4ರಷ್ಟು ವೃದ್ಧಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಅನುಕೂಲ ಪರಿಸ್ಥಿತಿ ಬಂದರೆ ಜಿಡಿಪಿ ಶೇ. 8.8ರಷ್ಟು ಬೆಳೆಯಲೂ ಬಹುದು ಎಂದು ಆಶಿಸಿದೆ.

ಇದೇ ಸಂಸ್ಥೆ ಭಾರತದ ಆರ್ಥಿಕತೆ ಈ ವರ್ಷ ಶೇ. 6.6ರಷ್ಟು ಹೆಚ್ಚಬಹುದು ಎಂದು ಹಿಂದೆ ಮಾಡಿದ ಅಂದಾಜಿನಲ್ಲಿ ಹೇಳಿತ್ತು. ಈಗ ಅದು ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ. ಜಿಎಸ್​ಟಿ ಸಿಸ್ಟಂನಲ್ಲಿ ಸುಧಾರಣೆ, ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಅನುಭೋಗ ಹೆಚ್ಚುತ್ತಿರುವುದು ಆಂತರಿಕವಾಗಿ ಆರ್ಥಿಕತೆಗೆ ಚುರುಕು ತಂದಿದೆ. ಹಾಗೆಯೇ, ಭಾರತವನ್ನು ಪ್ರಭಾವಿಸುವ ಬಾಹ್ಯ ಅಂಶಗಳಾದ ಅಮೆರಿಕದ ಆರ್ಥಿಕತೆ ಮೊದಲಾದವು ಕೂಡ ಸಕಾರಾತ್ಮಕವಾಗಿರುವುದು ಭಾರತಕ್ಕೆ ಅನುಕೂಲವಾಗಿದೆ ಎಂಬುದು ಎನ್​ಐಪಿಎಫ್​ಪಿಯ ಅನಿಸಿಕೆ.

ಇದನ್ನೂ ಓದಿ: ಬೆಲೆ ಏರಿಕೆಯಲ್ಲಿ ಭರ್ಜರಿ ಕುಸಿತ; ಅಕ್ಟೋಬರ್​ನಲ್ಲಿ ಹಣದುಬ್ಬರ ದರ ಕೇವಲ ಶೇ. 0.25

ಭಾರತದ ಬೆಳವಣಿಗೆ ಮೇಲೆ ಅಮೆರಿಕದ ಆರ್ಥಿಕತೆ ಪರಿಣಾಮ ಎಷ್ಟು?

ಭಾರತದ ಬೆಳವಣಿಗೆಯನ್ನು ಪ್ರಭಾವಿಸುವ ಬಾಹ್ಯ ಅಂಶದ ಬಗ್ಗೆ ಎನ್​ಐಪಿಎಫ್​ಪಿ ಎರಡು ಸ್ಥಿತಿಗಳನ್ನು ಕಾಣುತ್ತಿದೆ. ಅಮೆರಿಕದ ಆರ್ಥಿಕತೆ ಶೇ. 1ರಷ್ಟು ಅಧಿಕ ಬೆಳವಣಿಗೆ ಕಂಡಲ್ಲಿ ಭಾರತದ ಜಿಡಿಪಿ ಈ ವರ್ಷ ಶೇ. 8.8ರಷ್ಟು ಹೆಚ್ಚಬಹುದು. ಅಕಸ್ಮಾತ್, ಅಮೆರಿಕದ ಜಿಡಿಪಿ ನಿರೀಕ್ಷೆಗಿಂತ ಶೇ. 1 ಕುಸಿತ ಕಂಡರೆ, ಭಾರತದ ಬೆಳವಣಿಗೆ ಶೇ. 6ಕ್ಕೆ ಸೀಮಿತಗೊಳ್ಳಬಹುದು ಎಂದಿದೆ.

ಹಣಕಾಸು ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿರುವ ಎಫ್​ಐಪಿಎಫ್​ಪಿ ದೇಶದ ಹಣದುಬ್ಬರ ಮುಂದಿನ ದಾರಿ ಬಗ್ಗೆಯೂ ಅಂದಾಜು ಮಾಡಿದೆ. ಈ ಹಣಕಾಸು ವರ್ಷದಲ್ಲಿ ರೀಟೇಲ್ ಹಣದುಬ್ಬರ ಶೇ. 1.6 ಇರಬಹುದು ಎಂದು ಹೇಳಿದೆ. ಆರ್​ಬಿಐ ಅಂದಾಜು ಮಾಡಿದ್ದ ಶೇ. 2.6ಕ್ಕಿಂತ ಬಹಳ ಕಡಿಮೆ ಹಣದುಬ್ಬರ ಸಾಧ್ಯತೆಯನ್ನು ಇದು ವ್ಯಕ್ತಪಡಿಸಿದೆ.

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಭಾರತದ ಜಿಡಿಪಿ, ಹಣದುಬ್ಬರ, ಬಡ್ಡಿದರ ಟ್ರೆಂಡ್ ಹೀಗಿರುತ್ತೆ: ಯುಬಿಎಸ್ ಅಂದಾಜು

ಅಕ್ಟೋಬರ್ ತಿಂಗಳಲ್ಲಿ ಭಾರತದ ಹಣದುಬ್ಬರ ಶೇ 0.25ಕ್ಕೆ ಇಳಿದಿರುವುದು ಗಮನಾರ್ಹ. ಸಿಪಿಐ ಆಧಾರಿತವಾಗಿ ಹಣದುಬ್ಬರ ಲೆಕ್ಕಾಚಾರ ಆರಂಭಗೊಂಡಾಗಿನಿಂದ ಈ ಬೆಲೆ ಏರಿಕೆ ಮಟ್ಟ ಕನಿಷ್ಠಕ್ಕೆ ಇಳಿದಿರುವುದು ಇದೇ ಮೊದಲು. ಆಹಾರವಸ್ತುಗಳ ಬೆಲೆ ಗಣನೀಯವಾಗಿ ಕುಸಿದಿರುವುದು ಹಣದುಬ್ಬರ ಇಳಿಕೆಗೆ ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:07 pm, Thu, 13 November 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ