AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ದಿನಗಳಲ್ಲಿ ಭಾರತದ ಜಿಡಿಪಿ, ಹಣದುಬ್ಬರ, ಬಡ್ಡಿದರ ಟ್ರೆಂಡ್ ಹೀಗಿರುತ್ತೆ: ಯುಬಿಎಸ್ ಅಂದಾಜು

India on way to become 3rd largest economy: ಭಾರತ ಮುಂಬರುವ ಕೆಲ ವರ್ಷ ಭಾರತದ ಆರ್ಥಿಕ ಬೆಳವಣಿಗೆ ದರ ಶೇ 6.5ರಷ್ಟು ಇರಬಹುದು ಎಂದು ಯುಬಿಎಸ್ ರಿಸರ್ಚ್​ನ ವರದಿಯಲ್ಲಿ ಹೇಳಲಾಗಿದೆ. 2028ಕ್ಕೆ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಬಹುದು ಎಂದು ಅದು ಅಂದಾಜಿಸಿದೆ. ಹಣದುಬ್ಬರವು 2026-27ರಲ್ಲಿ ಆರ್​ಬಿಐ ನಿರೀಕ್ಷಿಸುದುದಕ್ಕಿಂತಲೂ ತುಸು ಕಡಿಮೆ ಇರುತ್ತೆ ಎಂದಿದೆ ಈ ವರದಿ.

ಮುಂದಿನ ದಿನಗಳಲ್ಲಿ ಭಾರತದ ಜಿಡಿಪಿ, ಹಣದುಬ್ಬರ, ಬಡ್ಡಿದರ ಟ್ರೆಂಡ್ ಹೀಗಿರುತ್ತೆ: ಯುಬಿಎಸ್ ಅಂದಾಜು
ಭಾರತದ ಆರ್ಥಿಕತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 11, 2025 | 6:30 PM

Share

ನವದೆಹಲಿ, ನವೆಂಬರ್ 11: ಮುಂಬರುವ ವರ್ಷಗಳಲ್ಲೂ ಭಾರತ ಇದೇ ರೀತಿಯ ಆರ್ಥಿಕ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲಿದೆ ಎಂದು ಹಲವರು ನಿರೀಕ್ಷಿಸಿದ್ದಾರೆ. ಯುಬಿಎಸ್ ಗ್ಲೋಬಲ್ ರಿಸರ್ಚ್ (UBS Global Research) ಪ್ರಕಾರ ಭಾರತ 2028ರಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವೆನಿಸಬಹುದು. 2027-28ರಿಂದ 2029-30ರವರೆಗೂ ಭಾರತದ ಆರ್ಥಿಕ ಬೆಳವಣಿಗೆ ದರ (GDP growth) ಶೇ. 6.5ರಷ್ಟು ಇರಬಹುದೆಂದು ಇದು ನಿರೀಕ್ಷಿಸಿದೆ. ಹಾಗೆಯೇ, 2026ರ ವರ್ಷಕ್ಕೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಕನ್ಸೂಮರ್ ಮಾರ್ಕೆಟ್ ಎನಿಸಲಿದೆ ಎಂದು ಯುಬಿಎಸ್ ರಿಸರ್ಚ್ ರಿಪೋರ್ಟ್​ನಲ್ಲಿ ಅಂದಾಜಿಸಲಾಗಿದೆ.

ಭಾರತದ ಜಿಡಿಪಿ ಬೆಳವಣಿಗೆ ದರ 2026-27ರಲ್ಲಿ ಶೇ. 6.4 ಮತ್ತು 2027-28ರಲ್ಲಿ ಶೇ. 6.5ರಷ್ಟು ಆಗಬಹುದು. ಜಾಗತಿಕ ಅನಿಶ್ಚಿತ ಪರಿಸ್ಥಿತಿ ಹೆಚ್ಚು ತೀವ್ರಗೊಳ್ಳುವಂತಿದ್ದರೂ ಭಾರತದ ಸ್ಥೂಲ ಆರ್ಥಿಕತೆಗೆ ಹೆಚ್ಚು ಪ್ರಕ್ಷುಬ್ದತೆ ಆಗದು ಎಂದು ಯುಬಿಎಸ್​ನ ಭಾರತ ವಿಭಾಗದ ಮುಖ್ಯ ಆರ್ಥಿಕ ತಜ್ಞ ತನ್ವೀ ಗುಪ್ತಾ ಜೈನ್ ಅವರು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ಭಾರತದ 3 ರಾಜ್ಯಗಳಲ್ಲಿ ಹೊಸ ಚಿನ್ನದ ಗಣಿಗಳು ಪತ್ತೆ; ದೇಶದ ಸ್ವರ್ಣ ದಾಹಕ್ಕೆ ಇದು ಸಾಕಾಗುತ್ತಾ?

ತೆರಿಗೆ ಸುಧಾರಣೆ, ನಿಯಮಗಳ ಸರಳೀಕರಣ, ಮೂಲಸೌಕರ್ಯಗಳಿಗೆ ಒತ್ತುಕೊಟ್ಟಿರುವುದು ಸೇರಿದಂತೆ ಇತ್ತೀಚಿನ ಕೆಲ ನೀತಿ ಕ್ರಮಗಳು ಆರ್ಥಿಕತೆಗೆ ಒಳ್ಳೆಯದು ಮಾಡಿವೆ. ಆದರೆ, ಭೂಮಿ, ಬಂಡವಾಳ, ಆರ್ ಅಂಡ್ ಡಿ ಮೊದಲಾದ ಕ್ಷೇತ್ರಗಳಲ್ಲಿ ಇರುವ ನೀತಿಯಲ್ಲಿ ರಚನಾತ್ಮಕವಾದ ಸುಧಾರಣೆಗಳು ಹೆಚ್ಚಬೇಕು. ಹಾಗಿದ್ದಾಗ ಹೊಸ ಆರ್ಥಿಕತೆಯ ಸೆಕ್ಟರ್​ಗಳು ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂಬುದು ಯುಬಿಎಸ್​ನ ಸಲಹೆ.

ಹಣದುಬ್ಬರದ ಬಗ್ಗೆ ಯುಬಿಎಸ್ ಅಂದಾಜು ಏನು?

ಹಣದುಬ್ಬರ ಮುಂದಿನ ಹಣಕಾಸು ವರ್ಷದಲ್ಲಿ ಶೇ. 4.3ಕ್ಕೆ ಏರಬಹುದು ಎಂದು ಯುಬಿಎಸ್ ರಿಸರ್ಚ್ ರಿಪೋರ್ಟ್​​ನಲ್ಲಿ ಅಂದಾಜು ಮಾಡಲಾಗಿದೆ. ಈ ವರದಿ ಪ್ರಕಾರ, ಈ ಹಣಕಾಸು ವರ್ಷದಲ್ಲಿ (2025-26) ಹಣದುಬ್ಬರ ಶೇ. 2.4 ಇರುತ್ತದೆ. 2026-27ರಲ್ಲಿ ಶೇ. 4.3ಕ್ಕೆ ಏರಬಹುದು ಎಂದು ಹೇಳಿದೆ. ಆರ್​ಬಿಐ ಮಾಡಿದ ಅಂದಾಜು ಪ್ರಕಾರ ಆ ವರ್ಷ ಹಣದುಬ್ಬರ ಶೇ. 4.5 ಇರಬಹುದು. ಆರ್​ಬಿಐ ನಿರೀಕ್ಷೆಗಿಂತ ಯುಬಿಎಸ್ ಹೆಚ್ಚು ಸಕಾರಾತ್ಮಕವಾಗಿದೆ.

ಇದನ್ನೂ ಓದಿ: ಒಂದು ಲೀಟರ್ ಶುದ್ಧ ಕೊಬ್ಬರಿ ಎಣ್ಣೆ ತಯಾರಿಸಲು ಎಷ್ಟು ಖರ್ಚಾಗುತ್ತೆ ಗೊತ್ತಾ? ಇಲ್ಲಿದೆ ಉತ್ಪಾದಕರ ಪ್ರಾಮಾಣಿಕ ಅನಿಸಿಕೆ

ಈ ವರ್ಷ ಬಡ್ಡಿದರ ಒಮ್ಮೆ ಕಡಿತ ಸಾಧ್ಯತೆ

ಭಾರತದಲ್ಲಿ ಹಣಕಾಸು ಕೊರತೆ ನಿಧಾನವಾಗಿ ಕಡಿಮೆಗೊಳ್ಳುತ್ತಿದೆ. ಈ ಹಣಕಾಸು ವರ್ಷದ (2026-26) ಮುಂದಿನ ದಿನಗಳಲ್ಲಿ 25 ಮೂಲಾಂಕಗಳಷ್ಟು ದರ ಕಡಿತ ಆಗಬಹುದು. ನಂತರದ ವರ್ಷದಲ್ಲಿ (2026-27) ಬಡ್ಡಿದರದಲ್ಲಿ ಯಾವ ಪರಿಷ್ಕರಣೆ ಆಗದು ಎಂದು ಯುಬಿಎಸ್ ರಿಸರ್ಚ್ ವರದಿಯಲ್ಲಿ ಅಂದಾಜು ಮಾಡಲಾಗಿದೆ.

ಇದೇ ವೇಳೆ, ಭಾರತದ ಮೇಲೆ ಅಮೆರಿಕದ ಶೇ. 50 ಟ್ಯಾರಿಫ್ ಕ್ರಮ ಮುಂದುವರಿದಿದ್ದೇ ಆದಲ್ಲಿ ಜಿಡಿಪಿ ಬೆಳವಣಿಗೆ ದರದಲ್ಲಿ 50 ಮೂಲಾಂಕಗಳಷ್ಟು ಕಡಿಮೆ ಆಗಬಹುದು ಎಂದು ಈ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ