ಭಾರತದ 3 ರಾಜ್ಯಗಳಲ್ಲಿ ಹೊಸ ಚಿನ್ನದ ಗಣಿಗಳು ಪತ್ತೆ; ದೇಶದ ಸ್ವರ್ಣ ದಾಹಕ್ಕೆ ಇದು ಸಾಕಾಗುತ್ತಾ?
New gold mines found in 3 states: ಒಡಿಶಾ, ಮಧ್ಯಪ್ರದೇಶ ಮತ್ತು ಆಂಧ್ರದ ರಾಜ್ಯಗಳಲ್ಲಿ ಹೊಸ ಚಿನ್ನದ ಗಣಿಗಳು ಪತ್ತೆಯಾಗಿವೆ. ಒಡಿಶಾದ ದೇವಗಡ್, ಕೆಂದುಝರ್ ಮತ್ತು ಮಯೂರಬಂಜ್ ಜಿಲ್ಲೆಗಳು, ಮಧ್ಯಪ್ರದೇಶದ ಜಬಲಪುರ್ ಮತ್ತು ಆಂಧ್ರದ ಕರ್ನೂಲ್ ಜಿಲ್ಲೆಗಳಲ್ಲಿ ಇವು ಸಿಕ್ಕಿವೆ. ಭಾರತಕ್ಕೆ 2024ರಲ್ಲಿ 800 ಟನ್ಗೂ ಅಧಿಕ ಚಿನ್ನಕ್ಕೆ ಬೇಡಿಕೆ ಇತ್ತು. ಶೇ. 86ರಷ್ಟು ಚಿನ್ನವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ.

ನವದೆಹಲಿ, ನವೆಂಬರ್ 11: ಕಳೆದ ಒಂದು ವರ್ಷದಿಂದ ಚಿನ್ನದ ಬೆಲೆ ಎಗ್ಗಿಲ್ಲದೇ ಏರುತ್ತಿರುವ ಸಂದರ್ಭದಲ್ಲೇ ದೇಶದ ಚಿನ್ನದ ದಾಹ ತಣಿಸಲೆಂಬಂತೆ ಹೊಸ ಚಿನ್ನದ ಗಣಿಗಳು ಪತ್ತೆಯಾಗಿವೆ. 2025ರಲ್ಲಿ ಒಡಿಶಾ, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿನ ವಿವಿಧ ಜಿಲ್ಲೆಗಳಲ್ಲಿ ಹೊಸ ಚಿನ್ನದ ನಿಕ್ಷೇಪಗಳು (Gold mines) ಕಂಡುಬಂದಿವೆ. ಎಸ್ಬಿಐ ರಿಸರ್ಚ್ನ (SBI Research) ವರದಿಯೊಂದರಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ.
ಒಡಿಶಾದ ದೇವಗಡ್ (Deogarh), ಕೇಂದುಝರ್ (Keonjhar) ಮತ್ತು ಮಹೂರ್ಭಂಜ್ (Mayurbhanj) ಜಿಲ್ಲೆಗಳಲ್ಲಿ ಒಟ್ಟು ಸುಮಾರು 1,685 ಕಿಲೋ ಚಿನ್ನದ ಅದಿರು ಪತ್ತೆಯಾಗಿದೆ. ಮಧ್ಯಪ್ರದೇಶದ ಜಬಲ್ಪುರ್ನಲ್ಲಿ ಲಕ್ಷಾಂತರ ಟನ್ಗಳಷ್ಟು ಚಿನ್ನ ಸಿಕ್ಕಿದೆ. ಆಂಧ್ರದ ಕರ್ನೂಲ್ ಜಿಲ್ಲೆಯಲ್ಲೂ ಚಿನ್ನದ ಗಣಿ ಇದೆ. ಕರ್ನೂಲ್ನಲ್ಲಿ ಭಾರತದ ಮೊದಲ ಖಾಸಗಿ ಗೋಲ್ಡ್ ಮೈನ್ ಇದ್ದು, ಇಲ್ಲಿ ವರ್ಷಕ್ಕೆ 750 ಕಿಲೋ ಚಿನ್ನ ಉತ್ಪಾದನೆಯಾಗುತ್ತದೆ.
ಇದನ್ನೂ ಓದಿ: ಒಂದು ಲೀಟರ್ ಶುದ್ಧ ಕೊಬ್ಬರಿ ಎಣ್ಣೆ ತಯಾರಿಸಲು ಎಷ್ಟು ಖರ್ಚಾಗುತ್ತೆ ಗೊತ್ತಾ? ಇಲ್ಲಿದೆ ಉತ್ಪಾದಕರ ಪ್ರಾಮಾಣಿಕ ಅನಿಸಿಕೆ
ಜಾಗತಿಕ ಸ್ವರ್ಣ ಮಾರುಕಟ್ಟೆಯಲ್ಲಿ ಚೀನಾ, ಭಾರತವೇ ಅತಿಹೆಚ್ಚು ಕೊಳ್ಳುಬಾಕರು…
ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಚೀನಾ (China) ಅತಿಹೆಚ್ಚು ಚಿನ್ನದ ಆಮದು ಮಾಡಿಕೊಳ್ಳುತ್ತದೆ. ಚೀನಾ ನಂತರದ ಸ್ಥಾನ ಭಾರತದ್ದು. ಭಾರತದಲ್ಲಿ ಚಿನ್ನಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಇಲ್ಲಿ ಚಿನ್ನದ ಗಣಿ ಇದ್ದು ಅದರ ಉತ್ಪಾದನೆ ನಡೆಯುತ್ತದೆಯಾದರೂ, ಬೇಡಿಕೆ ಪೂರೈಸುವಷ್ಟು ಸಾಕಾಗಲ್ಲ. ಚಿನ್ನದ ಬೇಡಿಕೆಯಲ್ಲಿ ಶೇ. 86ರಷ್ಟು ಆಮದಾಗುತ್ತಿದೆ ಎನ್ನಲಾಗಿದೆ.
ಒಂದು ವರದಿ ಪ್ರಕಾರ, ಭಾರತಕ್ಕೆ ವರ್ಷಕ್ಕೆ ಸುಮಾರು 800 ಟನ್ಗಳಷ್ಟು ಚಿನ್ನಕ್ಕೆ ಬೇಡಿಕೆ ಇದೆ. ಚೀನಾದಲ್ಲಿ ವರ್ಷಕ್ಕೆ 815 ಟನ್ ಚಿನ್ನಕ್ಕೆ ಬೇಡಿಕೆ ಇದೆ. ವಿಶ್ವದಲ್ಲಿ ಮಾರಾಟವಾಗುವ ಶೇ. 50ಕ್ಕಿಂತಲೂ ಅಧಿಕ ಚಿನ್ನವು ಈ ಎರಡು ದೇಶಗಳ ಪಾಲಾಗುತ್ತಿದೆ.
ಇದನ್ನೂ ಓದಿ: ಭಾರತದ ಅತಿದೊಡ್ಡ ಬ್ಯಾಟರಿ ಸ್ಟೋರೇಜ್ ಸಿಸ್ಟಂ ನಿರ್ಮಿಸಲಿರುವ ಅದಾನಿ ಗ್ರೂಪ್; ಇದು ಯಾಕೆ ಮುಖ್ಯ?
ಭಾರತದಲ್ಲಿ ಈ ವರ್ಷ ಪತ್ತೆಯಾಗಿರುವ ಹೊಸ ಚಿನ್ನದ ಗಣಿಗಳು ದೇಶದ ಚಿನ್ನದ ದಾಹ ತಣಿಸಲು ಸಾಕಾಗುವುದಿಲ್ಲ. ಆದರೆ, ಚಿನ್ನದ ಆಮದನ್ನು ಸ್ವಲ್ಪವಾದರೂ ಕಡಿಮೆ ಮಾಡಲು ಸಹಾಯವಾಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




