AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಅತಿದೊಡ್ಡ ಬ್ಯಾಟರಿ ಸ್ಟೋರೇಜ್ ಸಿಸ್ಟಂ ನಿರ್ಮಿಸಲಿರುವ ಅದಾನಿ ಗ್ರೂಪ್; ಇದು ಯಾಕೆ ಮುಖ್ಯ?

Adani Group building India's largest battery energy storage system: ಗೌತಮ್ ಅದಾನಿ ಮಾಲಕತ್ವದ ಅದಾನಿ ಗ್ರೂಪ್ ಸಂಸ್ಥೆಯು ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಕ್ಷೇತ್ರಕ್ಕೆ ಅಡಿ ಇಟ್ಟಿದೆ. ಗುಜರಾತ್​ನ ಖಾವಡ ಬಳಿ 3,530 ಎಂಡಬ್ಲ್ಯುಎಚ್ ಎನರ್ಜಿ ಸ್ಟೋರೇಜ್ ಸಿಸ್ಟಂ ಅನ್ನು ನಿರ್ಮಿಸಲಾಗುತ್ತಿದೆ. ಇದು 2026 ಮಾರ್ಚ್​ಗೆ ಪೂರ್ಣವಾಗಲಿದ್ದು, ಭಾರತದಲ್ಲೇ ಅತಿದೊಡ್ಡ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಎನಿಸಲಿದೆ.

ಭಾರತದ ಅತಿದೊಡ್ಡ ಬ್ಯಾಟರಿ ಸ್ಟೋರೇಜ್ ಸಿಸ್ಟಂ ನಿರ್ಮಿಸಲಿರುವ ಅದಾನಿ ಗ್ರೂಪ್; ಇದು ಯಾಕೆ ಮುಖ್ಯ?
ಅದಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 11, 2025 | 12:08 PM

Share

ನವದೆಹಲಿ, ನವೆಂಬರ್ 11: ಭಾರತಕ್ಕೆ ಅತಿಮುಖ್ಯವಾಗಿರುವ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ (BESS- Battery Energy Storage System) ಕ್ಷೇತ್ರಕ್ಕೆ ಅದಾನಿ ಗ್ರೂಪ್ ಪ್ರವೇಶ ಮಾಡುತ್ತಿದೆ. ಭಾರತದ ಅತಿದೊಡ್ಡ ಬ್ಯಾಟರಿ ಸ್ಟೋರೇಜ್ ಸಿಸ್ಟಂ ಅನ್ನು ಈ ಸಂಸ್ಥೆ ನಿರ್ಮಿಸಲು ಉದ್ದೇಶಿಸಿದೆ. 1,126 ಮೆ.ವ್ಯಾ. ಯೋಜನೆಯನ್ನು ಜಾರಿಗೆ ತರಲಿದ್ದು, ಇದರಿಂದ 3,530 ಎಂಡಬ್ಲ್ಯುಎಚ್ (MWh) ಶಕ್ತಿ ಸಂಗ್ರಹಣೆಯ ಸಾಮರ್ಥ್ಯ ನಿರ್ಮಿಸಲಿದೆ. ಗುಜರಾತ್​ನ ಖಾವಡ ಜಿಲ್ಲೆಯಲ್ಲಿ ಈಗಾಗಲೇ ಈ ಯೋಜನೆ ನಿರ್ಮಾಣ ಹಂತದ ಕೊನೆಯಲ್ಲಿ ಇದೆ ಎನ್ನಲಾಗುತ್ತಿದೆ.

ವರದಿಗಳ ಪ್ರಕಾರ, 2026ರ ಮಾರ್ಚ್ ವೇಳೆಗೆ ಅದಾನಿ ಗ್ರೂಪ್​ನ ಈ ಬ್ಯಾಟರಿ ಸ್ಟೋರೇಜ್ ಸಿಸ್ಟಂ ಪೂರ್ಣಗೊಳ್ಳು ನಿರೀಕ್ಷೆ ಇದೆ. ಲಿಥಿಯಂ ಅಯಾನ್ ಬ್ಯಾಟರಿ ಟೆಕ್ನಾಲಜಿಯನ್ನು ಇದಕ್ಕೆ ಬಳಸಲಾಗುತ್ತಿದೆ. ಇದೇನಾದರೂ ಜಾರಿಯಾದಲ್ಲಿ ಭಾರತದಲ್ಲಿ ಅದು ಅತಿದೊಡ್ಡ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಎನಿಸಲಿದೆ. ವಿಶ್ವದ ಅತಿದೊಡ್ಡ ಸ್ಟೋರೇಜ್ ಸಿಸ್ಟಂಗಳಲ್ಲಿ ಒಂದೆನಿಸಲಿದೆ.

ಇದನ್ನೂ ಓದಿ: ಕೈಯಲ್ಲಿ ಹಣ ನಿಲ್ಲುತ್ತಿಲ್ಲವಾ? ಮೊದಲು ಕೈಬಿಟ್ಟುಹೋಗೋದು ಹಣ ಅಲ್ಲ; ಇದು ತಿಳಿದಿರಿ…

‘ಈ ಐತಿಹಾಸಿಕ ಯೋಜನೆಯೊಂದಿಗೆ ನಾವು ಜಾಗತಿಕ ಮೈಲಿಗಲ್ಲುಗಳನ್ನು ನಿರ್ಮಿಸುತ್ತಿರುವುದು ಮಾತ್ರವಲ್ಲ, ಭಾರತದ ಇಂಧನ ಸ್ವಾತಂತ್ರ್ಯ ಮತ್ತು ಸುಸ್ಥಿರತೆಗೆ ನಮ್ಮ ಬದ್ಧತೆಯನ್ನು ತೋರಿಸುತ್ತಿದ್ದೇವೆ’ ಎಂದು ಅದಾನಿ ಗ್ರೂಪ್ ಸಂಸ್ಥೆಯ ಛೇರ್ಮನ್ ಗೌತಮ್ ಅದಾನಿ ಹೇಳಿದ್ದಾರೆ.

ಮುಂದಿನ 5 ವರ್ಷಕ್ಕೆ ಅದಾನಿ ಗ್ರೂಪ್ ಇನ್ನೂ ದೊಡ್ಡ ಟಾರ್ಗೆಟ್

ಗುಜರಾತ್​ನಲ್ಲಿ ಅದಾನಿ ಗ್ರೂಪ್​ನ ಎನರ್ಜಿ ಸ್ಟೋರೇಜ್ ಸಿಸ್ಟಂ ಅಷ್ಟಕ್ಕೇ ಸೀಮಿತವಾಗಿರಲ್ಲ. 2026ರ ಮಾರ್ಚ್ ನಂತರವೂ ಎನರ್ಜಿ ಸ್ಟೋರೇಜ್ ಸಿಸ್ಟಂನ ಸಾಮರ್ಥ್ಯವನ್ನು ಮತ್ತಷ್ಟು ಏರಿಸುವ ಯೋಜನೆ ಮುಂದುವರಿಯಲಿದೆ. 2027ರ ಮಾರ್ಚ್​ನೊಳಗೆ 15 ಜಿಡಬ್ಲ್ಯುಎಚ್​ನಷ್ಟು ಬ್ಯಾಟರಿ ಸ್ಟೋರೇಜ್ ಸಾಮರ್ಥ್ಯ ಹೆಚ್ಚಿಸಲಿದೆ. ಐದು ವರ್ಷದಲ್ಲಿ ಇದನ್ನು 50 ಜಿಡಬ್ಲ್ಯುಎಚ್​ಗೆ ಹೆಚ್ಚಿಸುವ ದೊಡ್ಡ ಗುರಿ ಇಟ್ಟಿದೆ ಅದಾನಿ ಗ್ರೂಪ್.

ಇದನ್ನೂ ಓದಿ: ಸಕ್ಕರೆ ಉತ್ಪಾದನೆ ಶೇ. 16ರಷ್ಟು ಏರಿಕೆ ಸಾಧ್ಯತೆ; ಮಹಾರಾಷ್ಟ್ರ, ಕರ್ನಾಟಕದಲ್ಲಿ ಹೆಚ್ಚು ಹೆಚ್ಚಳ ನಿರೀಕ್ಷೆ

ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಯಾಕೆ ಮುಖ್ಯ?

ಭಾರತದಲ್ಲಿ ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ. ಇವೆಲ್ಲವೂ ಲೈವ್ ಆಗಿದ್ದು, ಇವುಗಳನ್ನು ಎಲ್ಲೆಡೆ ವಿತರಣೆ ಮಾಡುವುದು ದೊಡ್ಡ ಸವಾಲಿನ ಕೆಲಸ. ವಿದ್ಯುತ್ ಸಂಗ್ರಹ ವ್ಯವಸ್ಥೆ ಇದ್ದರೆ ಬೇಕೆಂದಾಗ, ಬೇಕೆಂದಷ್ಟು ವಿದ್ಯುತ್ ಅನ್ನು ವಿತರಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂಗಳು ಬಹಳ ಮುಖ್ಯ ಎನಿಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!