ಮನೆಯಲ್ಲಿ ತಯಾರಿಸುವ ಸಸ್ಯಾಹಾರ, ಮಾಂಸಾಹಾರ ಅಡುಗೆ ವೆಚ್ಚದಲ್ಲಿ ಇಳಿಕೆ; ತರಕಾರಿ, ಕೋಳಿ ಬೆಲೆ ಇಳಿಕೆ ಪರಿಣಾಮ
Cost of home-made veg and non-veg food: ಕಳೆದ ವರ್ಷದ ನವೆಂಬರ್ಗೆ ಹೋಲಿಸಿದರೆ ಈ ಬಾರಿ ಭಾರತೀಯ ಮನೆಗಳಲ್ಲಿ ಅಡುಗೆ ತಯಾರಿಸುವ ವೆಚ್ಚ ಶೇ. 13ರಷ್ಟು ಕಡಿಮೆ ಆಗಿದೆ. ಹೋಮ್ಮೇಡ್ ಸಸ್ಯಾಹಾರ ಊಟ ಮತ್ತು ಮಾಂಸಾಹಾರ ಊಟ ತಯಾರಿಸುವ ವೆಚ್ಚ ತಗ್ಗಿದೆ. ತರಕಾರಿಗಳು ಹಾಗೂ ಬ್ರಾಯ್ಲರ್ ಕೋಳಿ ಬೆಲೆ ತಗ್ಗಿರುವುದು ಅಡುಗೆ ವೆಚ್ಚ ಇಳಿಕೆಗೆ ಕಾರಣವಾಗಿದೆ.

ನವದೆಹಲಿ, ಡಿಸೆಂಬರ 9: ಮನೆಯಲ್ಲಿ ಅಡುಗೆ ವೆಚ್ಚ ಕಳೆದ ತಿಂಗಳು ಕಡಿಮೆಗೊಂಡಿದೆ. ಕ್ರಿಸಿಲ್ನ ವರದಿಯೊಂದರ ಪ್ರಕಾರ ನವೆಂಬರ್ನಲ್ಲಿ ಮನೆಯಲ್ಲಿ ಆಹಾರ ತಯಾರಿಸುವ ವೆಚ್ಚ ಶೇ. 13ರಷ್ಟು ಕಡಿಮೆ ಆಗಿದೆ. ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆ ತಯಾರಿಕೆಯ ವೆಚ್ಚ ಬಹುತೇಕ ಸಮಾನವಾಗಿ ಇಳಿಕೆ ಕಂಡಿವೆ. ದೇಶಾದ್ಯಂತ ಹಣದುಬ್ಬರ (Inflation) ಇಳಿಕೆಗೆ ಅನುಗುಣವಾಗಿ ಈ ಅಡುಗೆ ವೆಚ್ಚವೂ ಕಡಿಮೆ ಆಗಿರುವುದು ಗಮನಾರ್ಹ.
ತರಕಾರಿ ಮತ್ತು ಬೇಳೆಕಾಳುಗಳ ಬೆಲೆ ಸಾಕಷ್ಟು ಕಡಿಮೆ ಆಗಿದೆ. ಇದರ ಪರಿಣಾಮವಾಗಿ ಸಸ್ಯಾಹಾರ ಊಟ ತಯಾರಿಸುವ ವೆಚ್ಚವೂ ಕಡಿಮೆಗೊಂಡಿದೆ. ಇನ್ನು, ಬ್ರಾಯ್ಲರ್ ಕೋಳಿಗಳ ಬೆಲೆಯಲ್ಲಿ ಶೇ. 12ರಷ್ಟು ಕಡಿಮೆ ಆಗಿರುವುದರಿಂದ ಮಾಂಸಾಹಾರ ಊಟದ ತಯಾರಿಕೆಯ ವೆಚ್ಚವೂ ಕಡಿಮೆ ಆಗಿದೆ. ಮನೆಗಳಲ್ಲಿ ತಯಾರಾಗುವ ಮಾಂಸಾಹಾರ ಅಡುಗೆಯಲ್ಲಿ ಅರ್ಧದಷ್ಟು ವೆಚ್ಚ ಕೋಳಿ ಮಾಂಸದ್ದಾಗಿರುತ್ತದೆ. ಹೀಗಾಗಿ, ಕೋಳಿಗಳ ಬೆಲೆ ಕಡಿಮೆಗೊಂಡಿರುವುದರಿಂದ ಮಾಂಸಾಹಾರ ಅಡುಗೆಯ ವೆಚ್ಚವೂ ಇಳಿದಿದೆ.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ತಯಾರಕರಲ್ಲಿ ಭಾರತದ ಮೂರು ಕಂಪನಿಗಳು
ಕುತೂಹಲದ ಸಂಗತಿ ಎಂದರೆ, ಹಿಂದಿನ ತಿಂಗಳಿಗೆ ಹೋಲಿಸಿದರೆ, ಅಂದರೆ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಸಸ್ಯಾಹಾರ ಊಟ ತಯಾರಿಸಲು ಆಗುವ ವೆಚ್ಚದಲ್ಲಿ ನವೆಂಬರ್ನಲ್ಲಿ ಶೇ. 2ರಷ್ಟು ಹೆಚ್ಚಳ ಆಗಿದೆ. ಆದರೆ, ಮಾಂಸಾಹಾರ ಅಡುಗೆ ವೆಚ್ಚ ಶೇ. 1ರಷ್ಟು ಕಡಿಮೆ ಆಗಿದೆ.
ಸಸ್ಯಾಹಾರ ಅಡುಗೆ ವೆಚ್ಚ ತುಸು ಏರಿಕೆ ಆಗಲು ಪ್ರಮುಖ ಕಾರಣವಾಗಿದ್ದ ಆಲೂಗಡ್ಡೆ ಮತ್ತು ಟೊಮೆಟೋ ಬೆಲೆಗಳು ಅಕ್ಟೋಬರ್ಗಿಂತ ನವೆಂಬರ್ನಲ್ಲಿ ಹೆಚ್ಚು ಇದ್ದದ್ದು. ಬ್ರಾಯ್ಲರ್ ಕೋಳಿಗಳ ಬೆಲೆ ಅಕ್ಟೋಬರ್ಗಿಂತ ನವೆಂಬರ್ನಲ್ಲಿ ಶೇ. 5ರಷ್ಟು ಇಳಿಕೆ ಆಗಿದೆ. ಹೋಮ್ ಮೇಡ್ ನಾನ್-ವೆಜ್ ಥಾಲಿ ವೆಚ್ಚ ಕಡಿಮೆ ಆಗಿದೆ.
ಇದನ್ನೂ ಓದಿ: ಬೆಲೆ ಏರಿಕೆಯಲ್ಲಿ ಭರ್ಜರಿ ಕುಸಿತ; ಅಕ್ಟೋಬರ್ನಲ್ಲಿ ಹಣದುಬ್ಬರ ದರ ಕೇವಲ ಶೇ. 0.25
ಟೊಮೆಟೋ ಮತ್ತು ಆಲೂಗಡ್ಡೆ ಬೆಲೆಗಳು ಅಕ್ಟೋಬರ್ಗೆ ಹೋಲಿಸಿದರೆ ನವೆಂಬರ್ನಲ್ಲಿ ಏರಿಕೆ ಆಗಿವೆಯಾದರೂ, ಹಿಂದಿನ ವರ್ಷದ ನವೆಂಬರ್ಗೆ ಹೋಲಿಸಿದರೆ ಸಾಕಷ್ಟು ಕಡಿಮೆ ಆಗಿದೆ. ಟೊಮೆಟೋ ಬೆಲೆ ಶೇ. 17 ಮತ್ತು ಆಲೂ ಬೆಲೆ ಶೇ. 29ರಷ್ಟು ಕಡಿಮೆ ಆಗಿದೆ. ಈರುಳ್ಳಿ ಬೆಲೆಯೂ ಶೇ. 53ರಷ್ಟು ಕಡಿಎ ಆಗಿದೆ. ಭಾರತೀಯರ ಅಡುಗೆಗಳಲ್ಲಿ ಈ ಮೂರೂ ಸರಕುಗಳ ಬಳಕೆ ಅತಿಹೆಚ್ಚು ಇರುತ್ತದೆ. ಹೀಗಾಗಿ, ಇವುಗಳ ಬೆಲೆಯು ಅಡುಗೆ ವೆಚ್ಚದ ಮೇಲೆ ಪ್ರಭಾವ ಬೀರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




