Share Market
ಷೇರ್ ಮಾರ್ಕೆಟ್ ಅಥವಾ ಷೇರು ಮಾರುಕಟ್ಟೆ ಸಾರ್ವಜನಿಕವಾಗಿ ಲಿಸ್ಟ್ ಆಗಿರುವ ಷೇರುಗಳ ಮಾರಾಟ ನಡೆಯುವ ಒಂದು ಪ್ಲಾಟ್ಫಾರ್ಮ್ ಅಥವಾ ಷೇರು ವಿನಿಮಯ ಕೇಂದ್ರ. ಭಾರತದಲ್ಲಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಎಂದು ಎರಡು ಷೇರು ವಿನಿಮಯ ಕೇಂದ್ರಗಳಿವೆ. ಸೆಬಿ ಷೇರು ಮಾರುಕಟ್ಟೆಯ ಕಾನೂನು ನಿಯಂತ್ರಕ ಸಂಸ್ಥೆ. ಭಾರತದಲ್ಲಿಯಂತೆ ಎಲ್ಲಾ ದೇಶಗಳಲ್ಲೂ ಅವುಗಳದ್ದೇ ಆದ ಷೇರು ಮಾರುಕಟ್ಟೆಗಳಿವೆ. ಕಂಪನಿಗಳು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸು ಷೇರುಗಳನ್ನು ವಿತರಿಸುತ್ತವೆ. ಇಂಥ ಷೇರುಗಳು ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಲಿಸ್ಟ್ ಆಗುತ್ತವೆ. ಷೇರುಗಳನ್ನು ಹೊಂದಿದವರು ಕಂಪನಿಯ ಪಾಲನ್ನು ಹೊಂದಿದಂತೆ. ಷೇರುದಾರರಿಗೆ ಕಂಪನಿ ತನ್ನ ಲಾಭಾಂಶವನ್ನೂ ಹಂಚಿಕೆ ಮಾಡಬಹುದು. ಇನ್ನು, ಷೇರುಗಳನ್ನು ಲಿಸ್ಟ್ನಿಂದ ತೆಗೆದುಹಾಕುವ ಅಧಿಕಾರ ಆಯಾ ಸ್ಟಾಕ್ ಎಕ್ಸ್ಚೇಂಜ್ಗಳಿಗೆ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹಳ ರಿಸ್ಕಿ ಎನಿಸಿದರೂ ಸರಿಯಾಗಿ ಮಾಹಿತಿ ಪಡೆದು ಇನ್ವೆಸ್ಟ್ ಮಾಡಿದರೆ ಲಾಭ ಮಾಡಲು ಸಾಧ್ಯ.