AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತತವಾಗಿ ಕುಸಿಯುತ್ತಿದ್ದ ಷೇರುಪೇಟೆ ದಿಢೀರನೇ ಚೇತರಿಕೆ; ಮಾರುಕಟ್ಟೆ ತಿರುಗಿ ನಿಲ್ಲಲು ಏನು ಕಾರಣ?

Indian stock market rises on Monday: ಸತತ ಐದು ದಿನ ಕುಸಿತ ಕಂಡಿದ್ದ ಭಾರತದ ಷೇರುಮಾರುಕಟ್ಟೆ ಆ ಸರಮಾಲೆಯನ್ನು ಕಳಚಿಕೊಂಡಿದೆ. ಜನವರಿ 12, ಸೋಮವಾರವಾದ ಇಂದು ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕ್ರಮವಾಗಿ ಶೇ. 0.36 ಮತ್ತು ಶೇ. 0.42 ಗಳಿಸಿವೆ. ದಿನದ ಮೊದಲಾರ್ಧ ಹಿನ್ನಡೆಯಲ್ಲಿದ್ದರೂ ನಂತರ ಚೇತರಿಕೆ ಕಂಡಿದೆ. ಇದಕ್ಕೆ ಏನು ಕಾರಣ ಎಂದು ಇಲ್ಲಿ ವಿಶ್ಲೇಷಿಸಲಾಗಿದೆ.

ಸತತವಾಗಿ ಕುಸಿಯುತ್ತಿದ್ದ ಷೇರುಪೇಟೆ ದಿಢೀರನೇ ಚೇತರಿಕೆ; ಮಾರುಕಟ್ಟೆ ತಿರುಗಿ ನಿಲ್ಲಲು ಏನು ಕಾರಣ?
ಷೇರುಪೇಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 12, 2026 | 4:55 PM

Share

ನವದೆಹಲಿ, ಜನವರಿ 12: ಇವತ್ತು ಬೆಳಗ್ಗೆ ಟ್ರೇಡಿಂಗ್ ಅವಧಿಯಲ್ಲಿ ಷೇರು ಮಾರುಕಟ್ಟೆ (Stock Market) ಕಳೆಗುಂದಿತ್ತು. ಸತತ ಐದು ಸೆಷನ್ಸ್ ಕುಸಿದಿದ್ದ ಮಾರುಕಟ್ಟೆ, ಇವತ್ತು ಆರನೇ ಸೆಷನ್​ನಲ್ಲೂ ಭರ್ಜರಿ ಇಳಿಕೆಯ ಹಾದಿಯಲ್ಲಿತ್ತು. ಮಾಧ್ಯಮಗಳಲ್ಲೂ ಕೂಡ ಸತತ ಆರು ದಿನ ಷೇರು ಮಾರುಕಟ್ಟೆ ಕುಸಿದಿದೆ ಎನ್ನುವಂತಹ ಸುದ್ದಿ ಪ್ರಕಟವಾಯಿತು. ಆದರೆ, ನೋಡನೋಡುತ್ತಿದ್ದಂತೆಯೇ ಮಾರುಕಟ್ಟೆ ಹಸಿರುಬಣ್ಣಕ್ಕೆ ತಿರುಗಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಪಾಸಿಟಿವ್ ಆಗಿವೆ.

ಸೆನ್ಸೆಕ್ಸ್ ಇವತ್ತು ಟ್ರೇಡಿಂಗ್ ಕೊನೆಯಲ್ಲಿ 83,878 ಅಂಕಗಳಲ್ಲಿ ಅಂತ್ಯಗೊಂಡಿತು. 302 ಅಂಕ ಅಥವಾ ಶೇ 0.36ರಷ್ಟು ಹೆಚ್ಚಳ ಆಗಿದೆ. ನಿಫ್ಟಿ50 ಸೂಚ್ಯಂಕವು ಶೇ. 0.42 ಅಥವಾ 107 ಅಂಕ ಗಳಿಕೆಯೊಂದಿಗೆ 25,790.25 ಮಟ್ಟದಲ್ಲಿ ಅಂತ್ಯಗೊಂಡಿದೆ.

ಇದನ್ನೂ ಓದಿ: ಸತತ ಆರನೇ ದಿನ ಷೇರು ಮಾರುಕಟ್ಟೆ ಕುಸಿತ; ಹೂಡಿಕೆದಾರರಿಗೆ 17 ಲಕ್ಷ ಕೋಟಿ ರೂ ನಷ್ಟ

ಸೆನ್ಸೆಕ್ಸ್ ಇವತ್ತು ಒಂದು ಹಂತದಲ್ಲಿ 82,861 ಅಂಕಗಳಿಗೆ ಕುಸಿದಿತ್ತು. ದ್ವಿತೀಯಾರ್ಧದಲ್ಲಿ ಚೇತರಿಸಿಕೊಂಡು 700 ಅಂಕಗಳನ್ನು ಗಳಿಸಿ, ಒಟ್ಟಾರೆ 302 ಅಂಕಗಳ ಮುನ್ನಡೆ ಪಡೆದಿದೆ. ಆದರೆ, ಲಾರ್ಜ್ ಕ್ಯಾಪ್ ಇಂಡೆಕ್ಸ್ ಸಕಾರಾತ್ಮಕ ಸ್ಪಂದನೆ ಪಡೆದಿವೆ. ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಷೇರುಗಳು ಹಿನ್ನಡೆ ಕಂಡಿವೆ.

ಷೇರು ಮಾರುಕಟ್ಟೆ ಸೋಮವಾರ ದ್ವಿತೀಯಾರ್ಧದಲ್ಲಿ ಜಿಗಿದಿದ್ದು ಯಾಕೆ?

ಭಾರತ ಮತ್ತು ಅಮೆರಿಕ ದೇಶಗಳು ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಅವರು ಹೇಳಿಕೆ ನೀಡಿದ್ದು ಮಾರುಕಟ್ಟೆಗೆ ಸಕಾರಾತ್ಮಕ ಭಾವನೆ ತರಲು ಸಹಾಯವಾಗಿದೆ.

ಇದನ್ನೂ ಓದಿ: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ

‘ಅಮೆರಿಕಕ್ಕೆ ಭಾರತದಷ್ಟು ಮುಖ್ಯವಾಗಿರುವ ದೇಶ ಮತ್ತೊಂದಿಲ್ಲ. ಟ್ರೇಡ್ ಡೀಲ್ ಅಂತಿಮಗೊಳಿಸಲು ಎರಡೂ ದೇಶಗಳು ಪ್ರಯತ್ನಿಸುತ್ತಿವೆ. ನಿಜವಾದ ಸ್ನೇಹಿತರು ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ, ಕೊನೆಯಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಯಶಸ್ವಿಯಾಗುತ್ತಾರೆ’ ಎಂದು ಸರ್ಗಿಯೋ ಗೋರ್ ಹೇಳಿದ್ದಾರೆ. ಇವರ ಈ ಭರವಸೆದಾಯಕ ಮಾತುಗಳು ಮಾರುಕಟ್ಟೆಯ ಉತ್ಸಾಹ ಹೆಚ್ಚಲು ಕಾರಣವಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್