AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜರ್ಮನಿ ಅಧ್ಯಕ್ಷ ಫ್ರೆಡರಿಚ್ ಮೆರ್ಜ್ ಮತ್ತು ನರೇಂದ್ರ ಮೋದಿಯಿಂದ ಸಿಇಒಗಳ ಸಭೆ

German Chancellor Merz and PM Modi participate in India German CEOs forum: ಗುಜರಾತ್​ನ ಅಹ್ಮದಾಬಾದ್​ನಲ್ಲಿ ನಡೆದ ಭಾರತ ಜರ್ಮನಿ ಸಿಇಒ ಫೋರಂ ಸಭೆಯಲ್ಲಿ ಜರ್ಮನ್ ಚಾನ್ಸಲರ್ ಫ್ರೆಡರಿಚ್ ಮೆರ್ಜ್ ಮತ್ತು ನರೇಂದ್ರ ಮೋದಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಎರಡೂ ದೇಶಗಳ ಹಲವು ಸಿಇಒಗಳು ಕೂಡ ಪಾಲ್ಗೊಂಡಿದ್ದರು. ಭಾರತ ಮತ್ತು ಜರ್ಮನಿ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ವಿಸ್ತರಿಸುವ ಕುರಿತು ಚರ್ಚೆಗಳಾದವು.

ಜರ್ಮನಿ ಅಧ್ಯಕ್ಷ ಫ್ರೆಡರಿಚ್ ಮೆರ್ಜ್ ಮತ್ತು ನರೇಂದ್ರ ಮೋದಿಯಿಂದ ಸಿಇಒಗಳ ಸಭೆ
ಜರ್ಮನ್ ಚಾನ್ಸಲರ್ ಜತೆ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 12, 2026 | 6:27 PM

Share

ಅಹ್ಮದಾಬಾದ್, ಜನವರಿ 12: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಜರ್ಮನ್ ಚಾನ್ಸಲರ್ ಫ್ರೆಡರಿಚ್ ಮೆರ್ಜ್ (Friedrich Merz) ಅವರು ಎರಡೂ ದೇಶಗಳ ಸಿಇಒಗಳ ಸಭೆಯಲ್ಲಿ ಪಾಲ್ಗೊಂಡರು. ಗುಜರಾತ್​ನ ಅಹ್ಮದಾಬಾದ್​ನಲ್ಲಿ ನಡೆದ ಭಾರತ ಜರ್ಮನಿ ಸಿಇಒ ಫೋರಂನಲ್ಲಿ ಈ ಸಭೆ ನಡೆದಿದೆ. ಭಾರತ ಮತ್ತು ಜರ್ಮನಿ ನಡುವಿವ ದ್ವಿಪಕ್ಷೀಯ ಸಂಬಂಧವನ್ನು ವಿಸ್ತರಿಸುವ ಸಾಧ್ಯತೆಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಗಿರುವುದು ತಿಳಿದುಬಂದಿದೆ.

ಫ್ರೆಡರಿಚ್ ಮೆರ್ಜ್ ಅವರು ಭಾರತಕ್ಕೆ ಎರಡು ದಿನಗಳ ಭೇಟಿ ಮಾಡಿದ್ದಾರೆ. ಮೆರ್ಜ್ ಅವರು ಜರ್ಮನ್ ಚಾನ್ಸಲರ್ ಆಗಿದ್ದು 2025ರ ಮೇ 6ರಂದು. ಚಾನ್ಸಲರ್ ಆಗಿ ಭಾರತಕ್ಕೆ ಮಾತ್ರವಲ್ಲ ಏಷ್ಯಾಗೆ ನೀಡಿರುವ ಮೊದಲ ಭೇಟಿ ಇದು.

ಇದನ್ನೂ ಓದಿ: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ

ಜರ್ಮನಿ ಮತ್ತು ಭಾರತದ ಸ್ನೇಹ ಸಂಬಂಧದ ಬಗ್ಗೆ ಮೋದಿ ಮಾತು

ಭಾರತ ಮತ್ತು ಜರ್ಮನಿ ದೇಶಗಳ ಸಂಬಂಧಕ್ಕೆ ಪ್ಲಾಟಿನಂ ಜೂಬಿಲಿ (70 ವರ್ಷ) ಸಂಭ್ರಮ ಇದೆ. ಎರಡೂ ದೇಶಗಳ ನಡುವಿನ ಕಾರ್ಯತಂತ್ರಾತ್ಮಕ ಸಹಭಾಗಿತ್ವಕ್ಕೆ ಸಿಲ್ವರ್ ಜೂಬಿಲಿ (25 ವರ್ಷ) ಸಂಭ್ರಮ ಇದೆ ಎಂದು ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ನಮ್ಮ ಸಂಬಂಧಕ್ಕೆ ಪ್ಲಾಟಿಯಂನ ಸ್ಥಾಯತ್ವ ಮತ್ತು ಬೆಳ್ಳಿಯ ಹೊಳಪು ಇದೆ ಎಂದಾಯಿತು. ಭಾರತ ಹಾಗೂ ಜರ್ಮನಿ ನಡುವಿನ ಸಹಭಾಗಿತ್ವ ಸುಲಲಿತವಾದುದು. ಪರಸ್ಪರ ನಂಬಿಕೆ ಮತ್ತು ಮೌಲ್ಯಗಳ ತಳಹದಿಯಲ್ಲಿ ನಿರ್ಮಾಣವಾದಂತಹ ಹೊಂದಾಣಿಕೆ ಅದು. ಪ್ರತಿಯೊಂದು ಸೆಕ್ಟರ್​ನಲ್ಲೂ ಪರಸ್ಪರ ಅನುಕೂಲವಾಗುವ ಅವಕಾಶಗಳಿವೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಸಂಶೋಧನೆಗಳಲ್ಲಿ ಜೊತೆಗಾರಿಕೆ ಇದೆ. ಇದರಿಂದ ಹೊಸ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಎಡೆ ಆಗುತ್ತಿದೆ’ ಎಂದು ಇಂಡಿಯಾ ಜರ್ಮನಿ ಸಿಇಒ ಫೋರಂ ಸಭೆಯಲ್ಲಿ ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನವೆಂಬರ್​ನಲ್ಲಿ 0.7 ಪ್ರತಿಶತ ಇದ್ದ ಹಣದುಬ್ಬರ ಡಿಸೆಂಬರ್​ನಲ್ಲಿ ಶೇ. 1.3ಕ್ಕೆ ಏರಿಕೆ

‘ಭಾರತ ಮತ್ತು ಐರೋಪ್ಯ ಒಕ್ಕೂಟ ನಡುವೆ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಅಂತಿಮಗೊಳ್ಳುತ್ತೆ. ನಮ್ಮ ವ್ಯಾಪಾರ, ಹೂಡಿಕೆ ಮತ್ತು ಪಾರ್ಟ್ನರ್​ಶಿಪ್​ಗೆ ಹೊಸ ಅಧ್ಯಾಯ ಆರಂಭವಾಗುತ್ತದೆ. ಇಲ್ಲಿಂದ ನಿಮಗೆ ದಾರಿ ಸ್ಪಷ್ಟವಾಗಿರುತ್ತದೆ. ಜರ್ಮನ್​ನ ಪ್ರಿಸಿಶನ್ ಮತ್ತು ಇನ್ನೋವೇಶನ್​ಗಳೊಂದಿಗೆ ಭಾರತದ ವೇಗ ಮತ್ತು ವ್ಯಾಪಕತೆಯು ಸೇರಬೇಕು. ನೀವು ಭಾರತದಲ್ಲಿ ಉತ್ಪಾದನೆ ಮಾಡಬೇಕು. ಆಂತರಿಕ ಬೇಡಿಕೆಯ ಅನುಕೂಲ ನಿಮಗೆ ಇರುತ್ತದೆ. ತಡೆಯಿಲ್ಲದ ರಫ್ತು ಕೂಡ ಸಾಧ್ಯವಾಗುತ್ತದೆ’ ಎಂದು ಜರ್ಮನ್ ಸಿಇಒಗಳಿಗೆ ಮೋದಿ ಭರವಸೆ ಮತ್ತು ಆಫರ್ ಕೊಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'