AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ

India is the fastest growing economy, says PM Narendra Modi at Vibrant Gujarat: ವಿವಿಧ ಸುಧಾರಣೆಗಳ ಮೂಲಕ ಭಾರತದ ಆರ್ಥಿಕತೆ ಅತಿವೇಗವಾಗಿ ಬೆಳೆಯುತ್ತಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ರಾಜ್​ಕೋಟ್​ನಲ್ಲಿ ಭಾನುವಾರ ವೈಬ್ರೆಂಟ್ ಗುಜರಾತ್ ಟ್ರೇಡ್ ಶೋ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಗುಜರಾತ್ ಪಾತ್ರ ಮುಖ್ಯವಾಗುತ್ತಿದೆ ಎಂದೂ ಮೋದಿ ತಿಳಿಸಿದ್ದಾರೆ.

ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 11, 2026 | 5:28 PM

Share

ರಾಜಕೋಟ್, ಜನವರಿ 11: ದೊಡ್ಡ ದೊಡ್ಡ ಸುಧಾರಣೆಗಳನ್ನು ತರುವ ಮೂಲಕ ವಿಕಸಿತ ಭಾರತದ ಗುರಿಯತ್ತ ದೇಶ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವೈಬ್ರೆಂಟ್ ಗುಜರಾತ್ (Vibrant Gujarat) ಸಮಾವೇಶದ ಭಾಗವಾಗಿ ರಾಜಕೋಟ್​ನಲ್ಲಿ ಟ್ರೇಡ್ ಶೋ ಉದ್ಘಾಟಿಸಿ ಮಾತನಾಡುತ್ತಿದ್ದ ನರೇಂದ್ರ ಮೋದಿ (Narendra Modi), ಭಾರತ ಬಹಳ ವೇಗವಾಗಿ ಮುಂದುವರಿದ ದೇಶವಾಗಿ ಬೆಳೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಕಳೆದ 11 ವರ್ಷದಲ್ಲಿ ಭಾರತವು ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ಬಳಕೆದಾರ ದೇಶವಾಗಿತ್ತು. ಈಗ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ದೇಶವೆನಿಸಿದೆ’ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಶೇ 4.4ರ ವಿತ್ತೀಯ ಕೊರತೆ ಗುರಿ ಮುಟ್ಟುವುದು ಸರ್ಕಾರಕ್ಕೆ ಸಲೀಸು: ಏಜೆನ್ಸಿ ವರದಿ

‘ಭಾರತ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ಇಕೋಸಿಸ್ಟಂ ಹೊಂದಿದೆ. ಮೂರನೇ ಅತಿದೊಡ್ಡ ವೈಮಾನಿಕ ಮಾರುಕಟ್ಟೆ ಹೊಂದಿದೆ. ವಿಶ್ವದ ಮೂರು ಅತಿದೊಡ್ಡ ಮೆಟ್​ರೋ ರೈಲು ನೆಟ್ವರ್ಕ್​ಗಳಲ್ಲಿ ಒಂದೆನಿಸಿದೆ’ ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್​ನ ಮಾಜಿ ಮುಖ್ಯಮಂತ್ರಿಯೂ ಆದ ನರೇಂದ್ರ ಮೋದಿ ಅವರು ಭಾರತದ ಬೆಳವಣಿಗೆಯಲ್ಲಿ ಗುಜರಾತ್ ಕೊಡುಗೆ ಹೆಚ್ಚುತ್ತಿರುವುದನ್ನು ಗುರುತಿಸಿದ್ದಾರೆ.

‘ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಧಾವಿಸುತ್ತಿದೆ. ಈ ಪ್ರಯಾಣದಲ್ಲಿ ಗುಜರಾತ್ ಪ್ರಮುಖ ಪಾತ್ರ ವಹಿಸಿದೆ. ದೇಶ ವಿದೇಶಗಳ ಹೂಡಿಕೆದಾರರಿಗೆ ಪ್ರಮುಖ ಬೆಳವಣಿಗೆ ಎಂಜಿನ್ ಆಗಿ ಗುಜರಾತ್ ಹೊಮ್ಮಿದೆ. ಎಂಎಸ್​ಎಂಇಗಳಿಂದ ಹಿಡಿದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳವರೆಗೆ ಎಲ್ಲರೂ ಗುಜರಾತ್ ಜೊತೆ ಬೆಳೆಯುತ್ತಿದ್ದಾರೆ’ ಎಂದು ಪಿಎಂ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್, ಮುಗಿಯದ ತೊಡಕು; ದಕ್ಷಿಣ ಅಮೆರಿಕ ಸೇರಿದಂತೆ ಬೇರೆ ಬೇರೆ ಮಾರುಕಟ್ಟೆಗಳ ಮೇಲೆ ಭಾರತದ ಕಣ್ಣು

ಈ ಸಂದರ್ಭದಲ್ಲಿ ಮುಕೇಶ್ ಅಂಬಾನಿ ಮೊದಲಾದ ವಿವಿಧ ಉದ್ಯಮಿಗಳು ಉಪಸ್ಥಿತರಿದ್ದರು. ಪ್ರಧಾನಿ ಮೋದಿ ಅವರ ದೂರದೃಷ್ಟಿಯು ಮುಂದಿನ 50 ವರ್ಷಗಳಿಗೆ ಭಾರತಕ್ಕೆ ದಾರಿ ಹಾಕಿದೆ. ದೇಶದ ಸ್ವಾಭಿಮಾನ ಮರಳಿ ಪಡೆಯುವಂತೆ ಮಾಡಿದೆ. ಭಾರತದ ಇತಿಹಾಸದಲ್ಲಿ ಯಾವತ್ತೂ ಇಷ್ಟು ಆತ್ಮವಿಶ್ವಾಸ, ಭರವಸೆ ಇದ್ದಿದ್ದನ್ನು ನಾವು ಕಂಡಿಲ್ಲ’ ಎಂದು ರಿಲಾಯನ್ಸ್ ಇಂಡಸ್ಟ್ರೀಸ್​ನ ಛೇರ್ಮನ್ ಆದ ಅಂಬಾನಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ