AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಯಾರಾಗಲಿದ್ದಾರೆ SRH ತಂಡದ ಹೊಸ ನಾಯಕ?

IPL 2026 SRH Captain: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2026) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್​ರೈಸರ್ಸ್ ಹೈದರಾಬಾದ್ (SRH) ಮುಖಾಮುಖಿಯಾಗಲಿದೆ. ಆರ್​ಸಿಬಿ-ಎಸ್​ಆರ್​ಹೆಚ್ ನಡುವಣ ಈ ಹೈವೋಲ್ಟೇಜ್ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪಡೆಯ ನಾಯಕನೇ ಅಲಭ್ಯರಾಗಲಿದ್ದಾರೆ.

ಝಾಹಿರ್ ಯೂಸುಫ್
|

Updated on: Mar 17, 2026 | 2:40 PM

Share
IPL 2026: ಐಪಿಎಲ್​ 2026ರ ಆರಂಭಿಕ ಪಂದ್ಯಗಳಲ್ಲಿ ಸನ್​ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಖಚಿತವಾಗಿದೆ. ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಅವರು ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

1 / 6
ಹೀಗಾಗಿ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಆರಂಭಿಕ ನಾಲ್ಕು ಪಂದ್ಯಗಳಿಗೆ ಹೊಸ ನಾಯಕನನ್ನು ಆಯ್ಕೆ ಮಾಡಲಿದೆ. ಇತ್ತ ನಾಯಕತ್ವದ ರೇಸ್​ನಲ್ಲಿ ಯುವ ದಾಂಡಿಗರಿಬ್ಬರು ಮುಂಚೂಣಿಯಲ್ಲಿರುವುದು ವಿಶೇಷ. ಅವರೆಂದರೆ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ.

2 / 6
ಇಶಾನ್ ಕಿಶನ್ ಈ ಹಿಂದೆ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಜಾರ್ಖಂಡ್ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ 2026 ರಲ್ಲಿ ಇಶಾನ್ ಕಿಶನ್ ನಾಯಕತ್ವದಲ್ಲಿ ಜಾರ್ಖಂಡ್ ತಂಡವು ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಅಷ್ಟೇ ಅಲ್ಲದೆ 2016 ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಫೈನಲ್‌ವರೆಗೆ ಮುನ್ನಡೆಸಿದ್ದ ಅನುಭವ ಕೂಡ ಇಶಾನ್ ಬೆನ್ನಿಗಿದೆ.

3 / 6
ಇತ್ತ ಅಭಿಷೇಕ್ ಶರ್ಮಾ ಕೂಡ ಈ ಹಿಂದೆ ನಾಯಕನಾಗಿ ಕಾಣಿಸಿಕೊಂಡಿದ್ದರು. 2016 ರಲ್ಲಿ ಅಭಿಷೇಕ್ ಮುಂದಾಳತ್ವದಲ್ಲಿ ಭಾರತ ತಂಡ ಯೂತ್ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಇನ್ನು ವಿಜಯ್ ಹಝಾರೆ ಮತ್ತು ಇತರ ದೇಶೀಯ ಪಂದ್ಯಗಳಲ್ಲಿ ಪಂಜಾಬ್ ತಂಡದ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. 

Abhi (81)

4 / 6
ಹೀಗಾಗಿ ಇವರಿಬ್ಬರಲ್ಲಿ ಒಬ್ಬರಿಗೆ ಕ್ಯಾಪ್ಟನ್ ಪಟ್ಟ ನೀಡಲು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಚಿಂತಿಸಿದೆ. ಒಂದು ವೇಳೆ ಇಶಾನ್ ಕಿಶನ್ ಅವರನ್ನು ಹಂಗಾಮಿ ನಾಯಕನನ್ನಾಗಿ ಆಯ್ಕೆ ಮಾಡಿದರೆ, ಅಭಿಷೇಕ್ ಶರ್ಮಾ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇವರಿಬ್ಬರೂ ನಾಯಕತ್ವದಿಂದ ಹಿಂದೆ ಸರಿದರೆ ಮಾತ್ರ ಟ್ರಾವಿಸ್ ಹೆಡ್​ಗೆ ಕ್ಯಾಪ್ಟನ್ ಪಟ್ಟ ಸಿಗಬಹುದು.

5 / 6
ಏಕೆಂದರೆ ಟ್ರಾವಿಸ್ ಹೆಡ್ ಈ ಹಿಂದೆ ಆಸ್ಟ್ರೇಲಿಯಾ ತಂಡದ ನಾಯಕನಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಉಪನಾಯಕತ್ವದ ಜವಾಬ್ದಾರಿಯನ್ನು ಸಹ ನಿರ್ವಹಿಸಿದ್ದಾರೆ. ಹೀಗಾಗಿ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ ನಾಯಕತ್ವದ ರೇಸ್​ನಿಂದ ಹಿಂದೆ ಸರಿದರೆ ಮಾತ್ರ ಹೆಡ್​ಗೆ ಕ್ಯಾಪ್ಟನ್ ಪಟ್ಟ ನೀಡುವ ಸಾಧ್ಯತೆಯಿದೆ.

6 / 6
Follow Us
ರೀಲ್ಸ್​​​​ಗಾಗಿ ಎದೆಗೆ ರಿವಾಲ್ವರ್ ಇಟ್ಟು ವಿಡಿಯೋ ಮಾಡುವಾಗ ಮಿಸ್‌ಫೈರ್

ಮಗನ ಆಸ್ಪತ್ರೆಗೆ ಕರೆದೊಯ್ದಿದ್ದ ಮಹಿಳೆಯ ಬಲಿ ಪಡೆದ ಬಿಎಂಟಿಸಿ ಬಸ್​​

ಚಿಕ್ಕಪ್ಪ ಇದ್ದಾಗಿನ ಹುಟ್ಟುಹಬ್ಬ ಹೇಗಿತ್ತು? ನೆನಪಿಸಿಕೊಂಡ ವಿನಯ್-ಯುವ

ಗೃಹ ಸಚಿವರಿಗೇ 50 ಲಕ್ಷ ಲಂಚ ಕೊಟ್ಟಿದ್ರಾ ಇನ್ಸ್‌ಪೆಕ್ಟರ್? ಸಂತ್ರಸ್ತೆ ಆರೋಪ

ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಮುಂಬಡ್ತಿ ಪರೀಕ್ಷೆ ಮುಂದೂಡಿಕೆ

ಪುನೀತ್ ಸಮಾಧಿಗೆ ಪೂಜೆ ಮಾಡಿದ ಕುಟುಂಬಸ್ಥರು; ಅಪ್ಪುನ ನೆನಪಿಸಿಕೊಂಡ ಕುಟುಂಬ

ಲೈಂಗಿಕ ಕಿರುಕುಳ ಆರೋಪ: ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಹೇಳಿದ್ದಿಷ್ಟು

ಕನ್ನಡದಲ್ಲಿ ರೇಲ್ವೆ ಇಲಾಖೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ

ಅಡುಗೆ ಮನೆಯಲ್ಲಿ ಹೆಡೆ ಎತ್ತಿ ಕುಳಿತಿದ್ದ ನಾಗಪ್ಪ!

ಎಲ್​ಪಿಜಿ ಸಿಲಿಂಡರ್ ಸಮಸ್ಯೆ ಇದ್ರೂ ಇವರಿಗೆ ನೋ ಟೆನ್ಶನ್! ಯಾಕೆ ಗೊತ್ತೇ?