AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಭೀರ ಆರೋಪ ಹೊರಿಸಿ ತಂಡ ತೊರೆದ ಶಶಾಂಕ್ ಸಿಂಗ್

Shashank Singh's Big Move: ಐಪಿಎಲ್ ಸ್ಟಾರ್ ಆಲ್‌ರೌಂಡರ್ ಶಶಾಂಕ್ ಸಿಂಗ್ ಛತ್ತೀಸ್‌ಗಢ ತೊರೆದು ಪುದುಚೇರಿ ಸೇರಲು ನಿರ್ಧರಿಸಿದ್ದಾರೆ. ಗಾಯದ ಸಂದರ್ಭದಲ್ಲಿ ಬೆಂಬಲ ಸಿಗದಿರುವುದು ಮತ್ತು ಕ್ರಿಕೆಟ್ ಸಂಘದಿಂದಾದ ನಿರಾಕರಣೆ ಇದಕ್ಕೆ ಪ್ರಮುಖ ಕಾರಣ. 2026-27ರ ಸೀಸನ್‌ನಿಂದ ಪುದುಚೇರಿ ಪರ ಆಡಲಿರುವ ಶಶಾಂಕ್, ವೈಟ್-ಬಾಲ್ ಕ್ರಿಕೆಟ್ ಮತ್ತು ಬೌಲಿಂಗ್ ಸುಧಾರಣೆಯತ್ತ ಗಮನ ಹರಿಸುವುದಾಗಿ ತಿಳಿಸಿದ್ದಾರೆ. ಈ ನಿರ್ಧಾರ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಲಿದೆ.

ಪೃಥ್ವಿಶಂಕರ
|

Updated on: Aug 03, 2026 | 10:18 PM

Share
ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುವ ಸ್ಟಾರ್ ಆಲ್‌ರೌಂಡರ್ ಶಶಾಂಕ್ ಸಿಂಗ್ ದೇಶೀಯ ಕ್ರಿಕೆಟ್‌ನಲ್ಲಿ ತಂಡವನ್ನು ಬದಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇಲ್ಲಿಯವರೆಗೆ ಛತ್ತೀಸ್‌ಗಢ ಪರ ದೇಶಿಯ ಕ್ರಿಕೆಟ್ ಆಡುತ್ತಿದ್ದ ಶಶಾಂಕ್ ಸಿಂಗ್ ಇದೀಗ ಛತ್ತೀಸ್‌ಗಢವನ್ನು ತೊರೆದು 2026-27ರ ಸೀಸನ್​ನಿಂದ ಪುದುಚೇರಿ ಪರ ಆಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಘದಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆದಿರುವುದಾಗಿ ಶಶಾಂಕ್ ಹೇಳಿದ್ದಾರೆ(PC-PTI).

1 / 5
ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಶಶಾಂಕ್, ‘ಹೌದು, ನಾನು ಛತ್ತೀಸ್‌ಗಢ ತೊರೆಯುತ್ತಿದ್ದೇನೆ. ನಾನು ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಘದಿಂದ ಎನ್‌ಒಸಿ ಪಡೆದಿದ್ದೇನೆ ಮತ್ತು 2026-27ರ ಆವೃತ್ತಿಯಿಂದ ಪುದುಚೇರಿ ಪರ ಆಡುತ್ತೇನೆ. ಕಳೆದ ಆವೃತ್ತಿಯಲ್ಲಿ, ನಾನು ಗಂಭೀರ ಭುಜ ಮತ್ತು ಬೆರಳಿನ ಗಾಯಗಳಿಂದ ಬಳಲುತ್ತಿದ್ದೆ, ಆದರೆ ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಘವು ಆ ಕಷ್ಟದ ಸಮಯದಲ್ಲಿ ನನಗೆ ಯಾವುದೇ ಬೆಂಬಲ ನೀಡಲಿಲ್ಲ(PC-PTI).

2 / 5
ಅಲ್ಲದೆ ದೇಶಿಯ ಸೀಸನ್ ಮುಗಿದ ನಂತರ, ಛತ್ತೀಸ್‌ಗಢ ಕ್ರಿಕೆಟ್ ಪ್ರೀಮಿಯರ್ ಲೀಗ್ 2026 ರ ಆಟಗಾರರ ಪಟ್ಟಿಯಲ್ಲಿ ನನ್ನ ಹೆಸರನ್ನು ಸೇರಿಸಲಾಗಿಲ್ಲ. ಇದಲ್ಲದೆ, ಬೆಂಗಳೂರಿನಲ್ಲಿ ನಡೆದ ಪೂರ್ವ-ಸೀಸನ್ ಶಿಬಿರಕ್ಕೆ ಹೋದ ಛತ್ತೀಸ್‌ಗಢ ತಂಡದಲ್ಲಿ ನನ್ನ ಹೆಸರನ್ನು ಸೇರಿಸಲಾಗಿಲ್ಲ. ನನ್ನನ್ನು ಏಕೆ ಆಯ್ಕೆ ಮಾಡಲಿಲ್ಲ ಎಂದು ನಾನು ಕೇಳಿದೆ, ಆದರೆ ಯಾವುದೇ ಉತ್ತರ ಸಿಗಲಿಲ್ಲ(PC-PTI).

3 / 5
ನಾನು ಐಪಿಎಲ್‌ನಲ್ಲಿ ಮಾತ್ರ ಆಡಲು ಬಯಸುವುದಾಗಿಯೂ ಮತ್ತು ನನಗೆ ಛತ್ತೀಸ್‌ಗಢ ಪರ ದೇಶೀಯ ಕ್ರಿಕೆಟ್ ಆಡುವುದಕ್ಕೆ ಆಸಕ್ತಿ ಇಲ್ಲ ಎಂದು ನನ್ನ ಮೇಲೆ ಆರೋಪ ಹೊರಿಸಲಾಯಿತು. ಸತ್ಯವೆಂದರೆ, ಕಳೆದ ವರ್ಷವಷ್ಟೇ, ಬಿಸಿಸಿಐ, 2023-24 ದೇಶೀಯ ಸೀಮಿತ ಓವರ್‌ಗಳ ಸೀಸನ್​ನ ಅತ್ಯುತ್ತಮ ಆಲ್‌ರೌಂಡರ್ ಆಗಿ ಲಾಲಾ ಅಮರನಾಥ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು(PC-PTI).

4 / 5
ಈ ಆವೃತ್ತಿಯಿಂದ ಪುದುಚೇರಿ ಪರ ದೇಶಿಯ ಕ್ರಿಕೆಟ್ ಆಡಲಿರುವ ಶಶಾಂಕ್ ಸಿಂಗ್ ವೈಟ್-ಬಾಲ್ ಕ್ರಿಕೆಟ್‌ನತ್ತ ಹೆಚ್ಚು ಗಮನಹರಿಸುವುದಾಗಿ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಶಶಾಂಕ್ ಈ ಆವೃತ್ತಿಯಲ್ಲಿ ರೆಡ್-ಬಾಲ್ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡು ತಮ್ಮ ಬೌಲಿಂಗ್ ಅನ್ನು ಸುಧಾರಿಸುವುದರ ಮೇಲೆ ಕೆಲಸ ಮಾಡಲಿದ್ದಾರೆ ಎಂದು ವರದಿಯಾಗಿದೆ(PC-PTI).

5 / 5
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ

ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್

‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ

ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’

ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್

ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು

ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್

ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು